ವಿಜಯಪುರ: ನೀರು ಅತ್ಯಮೂಲ್ಯ ಸಂಪತ್ತು. ಅದರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ. ನದಿ, ಕೆರೆ, ಬಾವಿಯ ನೀರನ್ನು ಸಂರಕ್ಷಿಸುವ ಜತೆಗೆ ಮಳೆ ನೀರು ಕೊಯ್ಲು ಮೂಲಕ ಮಳೆ ನೀರನ್ನು ಸಂಗ್ರಹಿಸುವ ಪ್ರಯತ್ನ ಮಾಡಬೇಕು ಎಂದು ಬಂಜಾರಾ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಇ.ಡಿ.ಲಮಾಣಿಯವರು ಹೇಳಿದರು.
ಶನಿವಾರದಂದು ಬಂಜಾರಾ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಜಲಧೂತ ಜಾಗೃತಿ ಅಭಿಯಾನ’ದ ಜಾಥಾಕ್ಕೆ ಜಾಲನೆ ನೀಡಿ ಮಾತನಾಡಿದ ಅವರು, ಜಲ ಮರುಪೂರಣ ವ್ಯವಸ್ಥೆ, ಬಾವಿ, ಕೆರೆ, ಕಟ್ಟೆಗಳ ಹೂಳೆತ್ತುವುದು, ಬಾಂದಾರಾ, ಇಂಗು ಗುಂಡಿಗಳ ನಿರ್ಮಾಣದಂತಹ ಕ್ರಮಗಳಿಂದ ಅಮೂಲ್ಯ ಸಂಪತ್ತಾದ ನೀರನ್ನು ಸಂರಕ್ಷಿಸಬೇಕು ಮತ್ತು ಅದರ ಸದ್ಬಳಕೆ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಪ್ರಾಥಮಿಕ ಶಾಲೆಯ ಮುಖ್ಯ ಗುರು ಎಂ.ಬಿ.ಪೂಜಾರಿಯವರು ಮಾತನಾಡುತ್ತ. ನೀರಿನ ನಾಳೆಯ ಅಭಾವ ತಪ್ಪಿಸಲು ಅತ್ಯಮೂಲ್ಯವಾದ ನೀರನ್ನು ಅಗತ್ಯಕ್ಕೆ ತಕ್ಕಂತೆ ಮಿತವಾಗಿ ಬಳಸಿ, ಮುಂಬರುವ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯತತ್ಪರರಾಗಬೇಕಿದೆ. ಮಾನವ ವೈಜ್ಞಾನಿಕವಾಗಿ ಬೆಳೆದರೂ ಸಹಿತ ನೀರನ್ನು ಸೃಷ್ಟಿಸುವ ತಂತ್ರಜ್ಞಾನದ ಅವಿಷ್ಕಾರ ಮಾಡಿಲ್ಲ. ನೀರಿನ ಮಿತ ಬಳಕೆ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಕೆಲಸಗಳು ನಿರಂತರವಾಗಿರಬೇಕು ಎಂದರು.
ಈ ವೇಳೆಯಲ್ಲಿ ಶಿಕ್ಷಕರುಗಳಾದ ಎಸ್.ವಿ.ದೇಶಪಾಂಡೆ, ಎ.ಎಂ.ನಾಗೊಂಡ, ಆರ್.ವಿ.ಭುಜಂಗನವರ, ಆರ್.ಎನ್.ಬಕಾಟೆ, ಎಸ್.ಬಿ.ಒಡೆಯರ, ಜೆ.ಕೆ.ರಾಠೋಡ, ಎಸ್.ಡಿ.ಚವ್ಹಾಣ್, ಎಸ್.ಎಲ್.ದೊಡಮನಿ, ಎಸ್.ಕೆ.ಶಿಂಧೆ, ಬಿ.ಎಸ್.ದ್ಯಾಬೇರಿ, ಎಸ್.ಎಂ.ಮಾಳಿ, ಪಿ.ಎಂ.ಕೌಲಗಿ, ರೇಖಾ ರಜಪೂತ, ಎಸ್.ಪಿ.ಧಡೇಕರ, ದೈಹಿಕ ಪ್ರಶಿಕ್ಷಣಾರ್ಥಿಗಳು, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಸಿಬ್ಬಂದಿ ವರ್ಗ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

