Author: editor.udayarashmi@gmail.com

ಸಿಂದಗಿ: ಪಟ್ಟಣದ ಪುರಸಭೆ ಕಚೇರಿಯಲ್ಲಿ ನಡೆಯುತ್ತಿರುವ ಅವ್ಯವಹಾರ, ಸಿಬ್ಬಂದಿಗಳ ಬೇಜವಾಬ್ದಾರಿ ಮತ್ತು ಕಾನೂನುಬಾಹಿರ ಚಟುವಟಿಕೆ ಕೆಲಸಗಳು ಜರುಗುತ್ತಿವೆ ಎಂದು ಜಹೀದಾ ಮುಸ್ತಾಕ ತಾಂಬೋಳಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.ನನ್ನ ತಂದೆಯವರಾದ ದಿ.ಅಬ್ದುಲಗಪೂರ ನಬಿಲಾಲ ಮಸಳಿ ಎಂಬುವವರ ಹೆಸರಿನ ಆಸ್ತಿ ನಂ.೯೪೭/೭/ಕ/೧೭, ವಾರ್ಡ್ ೧೭ರಲ್ಲಿರುವ ಜಾಗೆಯನ್ನು ಪುರಸಭೆಯ ಕಾರ್ಯಾಲಯದ ರಿಜಿಸ್ಟ್ರ್‌ನಲ್ಲಿ ಶ್ರೀದೇವಿ ಯಲ್ಲಪ್ಪ ಭಂಡಾರಿ ಎನ್ನುವವರ ಹೆಸರಿಗೆ ಕಾನೂನು ಬಾಹಿರವಾಗಿ ಸೇರ್ಪಡೆ ಮಾಡಿ ಉತಾರಿ ಸೃಷ್ಟಿಸಿದ್ದಾರೆ ಎಂದು ಆರೋಪಿಸಿರುವ ಅವರು ಆಸ್ತಿ ದಾಖಲೆಯೊಂದಿಗೆ ಲಿಖಿತ ಹೇಳಿಕೆ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ನಗರದ ಡಾ.ಅಮೀತ ವಾರದ ಅವರಿಗೆ ಸಂಬಂಧಿಸಿದ ೧೯ ಪ್ಲಾಟ್‌ಗಳನ್ನು ಬೇರೆಯವರ ಹೆಸರಿಗೆ ಮಾಡಿರುವುದಿದೆ. ಇದೀಗ ೧೯ಪ್ಲಾಟ್‌ಗಳ ಕೇಸ್ ಕೋರ್ಟ್ನಲ್ಲಿರುವುದುನ್ನು ನೆನಪು ಮಾಡಿಕೊಡುವೆ ಎಂದಿದ್ದಾರೆ.ಹಣದ ಆಸೆಗಾಗಿ ಸಿಂದಗಿ ಪುರಸಭೆಯ ಸಿಬ್ಬಂದಿಗಳು ಒಬ್ಬರ ಆಸ್ತಿಯನ್ನು ಇನ್ನೊಬ್ಬರ ಹೆಸರಿಗೆ ಮಾಡುವುದು ಸಲಿಸಾಗಿ ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇಂತಹ ಕಾನೂನುಬಾಹಿರ ಚಟಿವಟಿಕೆ ತೊಡಗಿಕೊಂಡ ಸಿಬ್ಬಂದಿಗಳನ್ನು ಮೇಲಾಧಿಕಾರಿಗಳು ಕೂಡಲೇ ಅಮಾನತ್ತು ಮಾಡಬೇಕು. ತಪ್ಪತಸ್ಥ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಕಾನೂನು…

Read More

ಚರಂಡಿಯ ನಾಲೆಯಲ್ಲಿ ಬಿದ್ದು ಪ್ರಾಣಾಪಾಯದಿಂದ ಪಾರಾದ 6 ವರ್ಷದ ಬಾಲಕ! ಇಂಡಿ: ಚರಂಡಿ ನಾಲೆಯಲ್ಲಿ 6 ವರ್ಷದ ಮಗು ಆಯತಪ್ಪಿ ಬಿದ್ದು ಪ್ರಾಣಾಪಾಯದಿಂದ ಪಾರಾದ ಘಟನೆ ಪಟ್ಟಣದಲ್ಲಿ ಗುರುವಾರ ನಡೆದಿದೆ.ಪಟ್ಟಣದ 16 ಮತ್ತು 17 ನೇ ನಂಬರ ವಾರ್ಡಲ್ಲಿ ಚರಂಡಿಯ ನಾಲೆಗಳು ಮೃತ್ಯುಕೂಪವಾಗಿ ನಿಂತಿವೆ. ವಾರ್ಡಿನ ಪ್ರಮುಖ ರಸ್ತೆಯ ಭಾಗವಾನ ಗಲ್ಲಿಯಲ್ಲಿರುವ ರಸ್ತೆಯ ಮದ್ಯದಲ್ಲಿ ಮೃತ್ಯುಕೂಪವಾಗಿವೆ. ಗುರುವಾರ ಸಾಯಂಕಾಲ ಸುಮಾರು ೬ ವರ್ಷದ ಬಾಲಕ ಬಿಲಾಲ ಡಾಂಗೆ ಎಂಬ‌ ಮುಗ್ಧ ಮಗು ಆಳವಾದ ತೆರೆದ ಚರಂಡಿಯಲ್ಲಿ ಬಿದ್ದು ಮಗು ಜೀವನ್ಮರಣದ ಸ್ಥಿತಿಯಲ್ಲಿದ್ದಾಗ ದಾರಿ ಹೋಗುವ ವ್ಯಕ್ತಿ ಮಗುವನ್ನು ರಕ್ಷಣೆ ಮಾಡುವ ಕಾರ್ಯ ಮಾಡಿದ್ದು, ಆ ಮಗು ಈಗ ಸದ್ಯ ಸುರಕ್ಷಿತವಾಗಿದೆ.ಈ ಸಂದರ್ಭದಲ್ಲಿ ಆ ಮಗುವಿನ ತಂದೆ ಇಸ್ಮಾಯಿಲ್ ಡಾಂಗೆ‌ ಮಾತನಾಡಿದ್ದು, “ಸುಮಾರು ದಿನಗಳ ಹಿಂದೆ ಕಾಮಗಾರಿ ಮಾಡಿದ್ದು, ಅದು ವೈಜ್ಞಾನಿಕ ರೂಪದಲ್ಲಿ ನಡೆದಿಲ್ಲ. ಅದರಲ್ಲಿ ಚರಂಡಿಯ ನಾಲೆಗಳು ಸುಮಾರು 6 ರಿಂದ 8 ಅಡಿ ಆಳವಿದ್ದು ಅವುಗಳ ಬಗ್ಗೆ ಪರ್ಯಾಯ ಮಾರ್ಗ…

Read More

ಬಸವನಬಾಗೇವಾಡಿ: ಪಟ್ಟಣದಲ್ಲಿ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಅಡಿಯಲ್ಲಿ ನಡೆಯುತ್ತಿರುವ ಬಸವೇಶ್ವರ ದೇವಾಲಯ ಆಂಗ್ಲ ಮಾಧ್ಯಮ ಶಾಲೆಗೆ ಅಗತ್ಯವಿರುವ ಎರಡು ಬಸ್ಗಳನ್ನು ಕೂಡಲಸಂಗಮ ಅಭಿವೃದ್ಧಿ ಮಂಡಳಿ ನೀಡಿದೆ. ಈ ಶಾಲೆಗೆ ಸುತ್ತಮುತ್ತಲಿಂದ ಬರುವ ವಿದ್ಯಾರ್ಥಿಗಳಿಗೆ ಈ ಬಸ್ಗಳು ನೆರವಾಗುತ್ತವೆ ಎಂದು ಕೂಡಲಸಂಗಮ ಅಭಿವೃದ್ಧಿ ಮಂಡಳಿ ಆಯುಕ್ತ, ಹುನಗುಂದ ತಹಸೀಲ್ದಾರ ನಿಂಗಪ್ಪ ಬಿರಾದಾರ ಹೇಳಿದರು.ಪಟ್ಟಣದ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಅಡಿಯಲ್ಲಿರುವ ಬಸವೇಶ್ವರ ದೇವಾಲಯ ಅಂತರಾಷ್ಟ್ರೀಯ ಶಾಲೆಗೆ ನೂತನವಾಗಿ ಬಂದಿರುವ ಎರಡು ಬಸ್ಗಳ ಪೂಜೆ ನೆರವೇರಿದ ನಂತರ ಚಾಲನೆ ನೀಡಿ ಮಾತನಾಡಿದ ಅವರು, ಈ ಭಾಗದ ಮಕ್ಕಳಿಗೆ ಉತ್ತಮ ಆಂಗ್ಲ ಮಾಧ್ಯಮ ಶಾಲೆ ಇರದೇ ಇರುವದನ್ನು ಗಮನಿಸಿದ ಆಗಿನ ಮಂಡಳಿ ವಿಶೇಷಾಽಕಾರಿ, ನಿವೃತ್ತ ಐಎಎಸ್ ಅಧಿಕಾರಿ ಡಾ.ಎಸ್.ಎಂ.ಜಾಮದಾರ ಅವರು ಈ ಶಾಲೆಯನ್ನು ಆರಂಭಿಸುವ ಮೂಲಕ ಈ ಭಾಗದ ಮಕ್ಕಳಿಗೆ ಉತ್ತಮ ಆಂಗ್ಲ ಮಾಧ್ಯಮ ಶಾಲೆ ನೀಡಿದ್ದಾರೆ. ಈ ಶಾಲೆಯು ಪ್ರಗತಿಯತ್ತ ನಡೆಯುತ್ತಿದೆ. ಇದೀಗ ಮಂಡಳಿಯು ಈ ಶಾಲೆಗೆ ಬರುವ ಸುತ್ತಮುತ್ತಲಿನ ಮಕ್ಕಳಿಗೆ ನೆರವಾಗುವ ಉದ್ದೇಶದಿಂದ ಎರಡು…

Read More

ಬಸವನಬಾಗೇವಾಡಿ: ಜಾತ್ರಾಮಹೋತ್ಸವ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಹಮ್ಮಿಕೊಳ್ಳುವ ನಾಟಕ ಪ್ರದರ್ಶನಗಳಿಂದ ಸಮಾಜ ಪರಿವರ್ತನೆಯಾಗಲು ಸಹಕಾರಿಯಾಗುತ್ತದೆ ಎಂದು ಪುರಸಭೆ ಮಾಜಿ ಅಧ್ಯಕ್ಷ, ಜೆಡಿಎಸ್ ತಾಲೂಕಾಧ್ಯಕ್ಷ ಜಗದೀಶ ಕೊಟ್ರಶೆಟ್ಟಿ ಹೇಳಿದರು.ಪಟ್ಟಣದ ಬಸವನಗರದಲ್ಲಿರುವ ರೇಣುಕಾ ಯಲ್ಲಮ್ಮದೇವಿ ಜಾತ್ರಾಮಹೋತ್ಸವದಂಗವಾಗಿ ಗುರುವಾರ ರಾತ್ರಿ ಹಮ್ಮಿಕೊಂಡಿದ್ದ ರಾಯಭಾಗ ತಾಲೂಕಿನ ಅಲಖನೂರಿನ ಮಲ್ಲಿಕಾರ್ಜುನ ನಾಟ್ಯ ಸಂಘದ ಮಗ ಹೋದರು ಮಾಂಗಲ್ಯ ಬೇಕು ಎಂಬ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಮೊದಲು ಗ್ರಾಮಾಂತರ ಪ್ರದೇಶಗಳಲ್ಲಿ ನಾಟಕಗಳ ಪ್ರದರ್ಶನ ಹೆಚ್ಚಾಗಿ ನಡೆಯುತ್ತಿದ್ದವು. ಈಚೆಗೆ ಜಾತ್ರಾಮಹೋತ್ಸವದಂತಹ ಕಾರ್ಯಕ್ರಮಗಳಲ್ಲಿ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗುತ್ತಿದೆ. ನಾಟಕಗಳು ಸಮಾಜದ ಪ್ರತಿಬಿಂಬವಿದ್ದಂತೆ. ಇತ್ತೀಚಿನ ದಿನಗಳಲ್ಲಿ ನಾಟಕ ನೋಡುವ ಹವ್ಯಾಸ ಕಡಿಮೆಯಾಗುತ್ತಿರುವುದು ನಿಜಕ್ಕೂ ಆತಂಕಕಾರಿ ಸಂಗತಿ. ನಾಟಕ ಹೆಚ್ಚೆಚ್ಚು ನೋಡುವುದರ ಮೂಲಕ ನಾಟಕ ಕಲೆ ಉಳಿಸಿ ಬೆಳೆಸಿಕೊಂಡು ಹೋಗಬೇಕಾಗಿದೆ ಎಂದ ಅವರು, ಬಸವನಗರದ ಎಲ್ಲ ಹಿರಿಯರು-ಕಿರಿಯರು ಸೇರಿಕೊಂಡು ರೇಣುಕಾ ಯಲ್ಲಮ್ಮದೇವಿ ಜಾತ್ರಾಮಹೋತ್ಸವದಂಗವಾಗಿ ಪ್ರತಿವರ್ಷ ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿರುವುದು ಶ್ಲಾಘನೀಯ. ಬಸವನಗರದ ಎಲ್ಲ ಸಮಾಜ ಬಾಂಧವರು ಕೂಡಿಕೊಂಡು ಉತ್ತಮ ಜಾತ್ರಾಮಹೋತ್ಸವ ಮಾಡುತ್ತಿರುವುದು…

Read More

ಬಸವನಬಾಗೇವಾಡಿ: ಜೀವನದಲ್ಲಿ ಪುರಾಣ-ಪ್ರವಚನ ಕೇಳುವದರಿಂದ ಮನಸ್ಸು ಹಸನಾಗುತ್ತದೆ ಎಂದು ಮನಗೂಳಿ ಸಂಸ್ಥಾನ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಮನಗೂಳಿ ಪಟ್ಟಣದ ಸಂಸ್ಥಾನ ಹಿರೇಮಠದಲ್ಲಿ ಗುರುವಾರ ಶತಾಯುಷಿ ಲಿಂ.ಸಂಗನಬಸವ ಶಿವಾಚಾರ್ಯ ಸ್ವಾಮೀಜಿಯವರ ೪೧ ನೇ ಪುಣ್ಯಸ್ಮರಣೋತ್ಸವ ಹಾಗೂ ೨೦೦೮ ಜಗದ್ಗುರು ಲಿಂ.ಡಾ.ಮಹಾಂತ ಶಿವಾಚಾರ್ಯ ಸ್ವಾಮೀಜಿಯವರ ಜಾತ್ರಾಮಹೋತ್ಸವದಂಗವಾಗಿ ೧೧ ದಿನಗಳ ಕಾಲ ಹಮ್ಮಿಕೊಂಡಿರುವ ಶಿವಶರಣೆ ಹೇಮರಡ್ಡಿ ಮಲ್ಲಮ್ಮಳ ಪುರಾಣ ಉದ್ಘಾಟನೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪುರಾಣ-ಪ್ರವಚನ ಕೇಳುವದರಿಂದ ಮನುಷ್ಯನಿಗೆ ಸಂಸ್ಕಾರ ತಿಳಿಯುತ್ತದೆ. ಸಂಸಾರದ ಜಂಜಾಟದಲ್ಲಿ ಪ್ರತಿನಿತ್ಯ ಚಿಂತೆ ಮಾಡುವದನ್ನು ಬಿಟ್ಟು ಪುರಾಣ-ಪ್ರವಚನಗಳು ನಡೆಯುವ ಸ್ಥಳಕ್ಕೆ ಹೋಗಿ ಅಲ್ಲಿನ ನಾಲ್ಕು ಹಿತ-ನುಡಿಗಳನ್ನು ಆಲಿಸುವದರಿಂದ ಜೀವನ ಹಸನಾಗುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ವ್ಹಿಡಿಸಿಸಿ ಬ್ಯಾಂಕಿನ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ ಮಾತನಾಡಿ, ಮನಗೂಳಿಯ ಸಂಸ್ಥಾನ ಹಿರೇಮಠವು ಜಿಲ್ಲೆಯಲ್ಲಿಯೇ ಅದರದೇ ಆದ ಸಾಮಾಜಿಕ ಕಾರ್ಯಗಳ ಮೂಲಕ ಗಮನ ಸೆಳೆಯುತ್ತಿದೆ. ಶ್ರೀಮಠದ ಲಿಂಗೈಕ್ಯ ಪೂಜ್ಯರ ಸಂಕಲ್ಪಗಳನ್ನು ಪ್ರಸ್ತುತ ಶ್ರೀಗಳು ಈಡೇರಿಸುತ್ತಿದ್ದಾರೆ. ಈ ಮೂಲಕ ಶ್ರೀಮಠದ…

Read More

ಮುದ್ದೇಬಿಹಾಳ: ಈ ವರ್ಷ ಉತ್ತಮ ಮಳೆಯಾಗುವ ಮುನ್ಸೂಚನೆ ಇದ್ದು ಜಿಲ್ಲಾ ಪಂಚಾಯತ ಯೋಜನೆಯಡಿಯಲ್ಲಿ ೩೯೦೦ ಹಾಗೂ ರಾಜ್ಯ ಯೋಜನೆಯ ಅಡಿಯಲ್ಲಿ ೪೨೦೦ ಗಿಡಗಳನ್ನು ನೆಡಲಾಗುತ್ತದೆ ಎಂದು ತಾಲ್ಲೂಕು ಸಾಮಾಜಿಕ ವಲಯ ಅರಣ್ಯಾಧಿಕಾರಿ ಎಸ್.ಜಿ.ಸಂಗಾಲಕ ಹೇಳಿದರು.ಶುಕ್ರವಾರ ತಾಲ್ಲೂಕಿನ ಬಿದರಕುಂದಿ ಗ್ರಾಮದ ಆರ್‌ಎಂಎಸ್‌ಎ ಶಾಲೆ ಬಳಿ ಗುಡಿಹಾಳ ಗ್ರಾಮಕ್ಕೆ ಕೂಡುವ ರಸ್ತೆಯಲ್ಲಿ ೯೪೫ ಗಿಡಗಳನ್ನು ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಪ್ರತಿ ವರ್ಷದಂತೆ ರೈತರಿಗೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ರಿಯಾಯಿತಿ ದರದಲ್ಲಿ ಶ್ರೀಗಂಧ, ರಕ್ತ ಚಂದನ, ಸಾಗವಾನಿ, ಮಹಾಗಣಿ, ಹೆಬ್ಬೇವು, ಸೀತಾಫಲ, ಕರಿಬೇವು, ಲಿಂಬೆ, ಪೇರಲ ಸೇರಿದಂತೆ ೩೨ ವಿಧದ ಗಿಡಗಳನ್ನು ಮಾರಲಾಗುತ್ತಿದೆ. ರೈತರು ತಮ್ಮ ಆಧಾರ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಹಾಗೂ ಹೊಲದ ಉತಾರೆಯ ಜರಾಕ್ಸ ಪ್ರತಿಗಳನ್ನು ನೀಡಿ ಗಿಡಗಳನ್ನು ಕೇಸಾಪೂರ ಸಮೀಪದ ಸಸ್ಯ ಪಾಲನಾಲಯದಲ್ಲಿ ಪಡೆದುಕೊಳ್ಳಬಹುದು ಎಂದರು.ಕಾರ್ಯಕ್ರಮದಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ಬಸನಗೌಡ ಬಿರಾರಾರ, ಹಸಿರು ತೋರಣ ಗೆಳೆಯರ ಬಳಗದ ಅಧ್ಯಕ್ಷ ಡಾ.ವೀರೇಶ ಇಟಗಿ,…

Read More

ಇಂಡಿ: ತಾಲೂಕಿನ ಗುತ್ತಿ ಬಸವಣ್ಣ ಮತ್ತು ತಿಡಗುಂದಿ ಶಾಖಾ ಕಾಲುವೆ ಕೊನೆಯ ಭಾಗದ ಕೆರೆಕಟ್ಟೆಗಳಿಗೆ ಹಾಗೂ ಕಾಲುವೆಗಳಿಗೆ ನೀರು ಹರಿಸದ ಕಾರಣ ಶುಕ್ರವಾರ ತಡವಲಗಾ ಗ್ರಾಮದ ಜೋಡಗುಡಿ ಹತ್ತಿರ ರೈತರು ರಸ್ತೆ ತಡೆದು ಪ್ರತಿಭಟನೆ ನಡೆಸಲು ಮುಂದಾದರು. ಆದರೆ ಪೊಲೀಸರು ರಸ್ತೆ ತಡೆಯಲು ಅವಕಾಶ ಮಾಡಿಕೊಡದ ಹಿನ್ನೆಲೆ ಜೋಡಗುಡಿಯ ಆವರಣದಲ್ಲಿ ರೈತರು ಧರಣಿ ನಡೆಸಿ ಪ್ರತಿಭಟಿಸಿದರು.ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬಂದು ನಮ್ಮ ಸಮಸ್ಯೆ ಆಲಿಸಿ ಸಮಸ್ಯೆಗೆ ಪರಿಹಾರ ಸೂಚಿಸುವವರೆಗೆ ನಾವು ಧರಣಿ ನಡೆಸುತ್ತೇವೆ ಎಂದು ರೈತ ಮುಖಂಡರು ತಮ್ಮ ಆಕ್ರೋಶ ಹೊರಹಾಕಿದರು.ಅನೇಕ ಬಾರಿ ಲಿಖಿತ ಹಾಗೂ ಮೌಖಿಕವಾಗಿ ಜಿಲ್ಲಾಧಿಕಾರಿಗಳಿಗೆ, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ತಡವಲಗಾ, ಅರ್ಥಗಾ, ಕೊಟ್ನಾಳ, ನಿಂಬಾಳ, ಸೇರಿದಂತೆ ಇನ್ನಿತರ ಕೆರೆಗಳಿಗೆ ಹಾಗೂ ಗುತ್ತಿ ಬಸವಣ್ಣ ಕಾಲುವೆಯ ಕೊನೆಯ ಭಾಗದ ರೈತರಿಗೆ ರೂಗಿ, ಹಂಜಗಿ, ಚಿಕ್ಕಬೇವನೂರ, ಬೋಳೆಗಾಂವ, ಗಣವಲಗಾ, ತೆನ್ನೆಳ್ಳ್ಳಿ ಗ್ರಾಮಗಳ ರೈತರಿಗೆ ಹಾಗೂ ಜಾನುವಾರುಗಳಿಗೆ ನೀರಿಲ್ಲದೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ ಈಗ ಕೆರೆಗಳನ್ನು ತುಂಬಿದರೆ ಆಯಾ ಗ್ರಾಮಗಳ…

Read More

ವಿಜಯಪುರ: ನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ (ಓಅಗಿಖಿ) ಸಂಯೋಜನೆ ಹೊಂದಿದ ೧೨ ವಿವಿಧ ವೃತ್ತಿಗಳಲ್ಲಿ ಪ್ರವೇಶಗಳು ಪ್ರಾರಂಭವಾಗಿವೆ. ಸಂಸ್ಥೆಯು ಸುಸಜ್ಜಿತ ಕಾರ್ಯಾಗಾರವನ್ನು ಹೊಂದಿದ್ದು, ಆಧುನಿಕ iಟಿಜusಣಡಿಥಿ ೪.೦ ಅಡಿಯಲ್ಲಿ ಖಿಚಿಣಚಿ ಖಿeಛಿhಟಿoಟogies ಐಣಜ, ಇವರ ಸಹಯೋಗದೊಂದಿಗೆ ಉತ್ತಮ ದರ್ಜೆ ತರಬೇತಿ ನೀಡಲಾಗುವುದು, ಹಾಗೂ ತರಬೇತಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಉದ್ಯೋಗ ಭರವಸೆ ನೀಡಲಾಗುವುದು. ಪ್ರವೇಶಕ್ಕೆ ವಾರ್ಷಿಕವಾಗಿ ೧,೨೦೦ ರೂ ಶುಲ್ಕವನ್ನು ಪಡೆದುಕೊಳ್ಳಲಾಗುವುದು. ಎಸ್‌ಎಸ್‌ಎಲ್‌ಸಿ ಹಾಗೂ ೮ನೇ ತರಗತಿ ಪಾಸಾದ ಅಭ್ಯರ್ಥಿಗಳು ಪ್ರವೇಶ ಹೊಂದಲು ಅರ್ಹರಿದ್ದು, www.cite.karnataka.gov.in ಇಲಾಖೆ ಜಾಲತಾಣದ ಮೂಲಕ ಮೇ ೨೦ ರಿಂದ ಜೂನ್ ೩ರವರೆಗೆ ಆನ್ ಲೈನ್ ಅರ್ಜಿ ಸಲ್ಲಿಸಬಹುದು ಒಟ್ಟು ೪೭೦ ಸ್ಥಾನಗಳಿಗೆ ಪ್ರವೇಶ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ೯೯೭೨೬೮೨೧೮೪, ೯೪೪೮೯೮೬೩೮೧, ೯೮೮೬೪೩೭೫೧೭ ಮತ್ತು ೦೮೩೫೨೨೬೦೩೬೦ ಗೆ ಸಂಪರ್ಕಿಸಿಬಹುದು ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಭಾರತ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ೨೦೨೪-೨೫ನೇ ಸಾಲಿನ ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟಿ ಜಾತಿ ಅಭ್ಯರ್ಥಿಗಳಿಂದ ರಾಷ್ಟೀಯ ಸಾಗರೋತ್ತರ ವಿದ್ಯಾರ್ಥಿ ವೇತನ ಯೋಜನೆ (ಓಔS)ಗೆ ಆನ್ ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಪದವಿ. ಪಿಎಚ್‌ಡಿ ಉನ್ನತ ವ್ಯಾಸಂಗಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ https://overseas.tribal.gov.inವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಮೇ ೩೧ ರಂದು ಕೊನೆ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ೮೩೫೨೨೭೬೧೨೪ ಗೆ ಸಂಪರ್ಕಿಸಬಹುದಾಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಜಿಲ್ಲಾಡಳಿತ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಭೂತನಾಳ ಕೆರೆ ಸುತ್ತ ಮುತ್ತ ಹಾಗೂ ಬಿ ಡಿ ಎ ಗಾರ್ಡನ್ ಮೂರು ಹೆಕ್ಟೇರ್ ಪ್ರದೇಶದಲ್ಲಿ ಡಿಸ್ಟ್ರಿಕ್ಟ್ ಮೀನಿರಲ್ ಫಂಡ್(ಡಿಎಮ್‌ಎಫ್) ಯೋಜನೆಯಲ್ಲಿ ೯೦೦ ಎತ್ತರದ ಸಸಿಗಳನ್ನು ನೆಡುವ ಯೋಜನೆಗೆ ಜಿಲ್ಲಾಧಿಕಾರಿ ಟಿ. ಭೂ ಬಾಲನ್ ಅವರು ಶುಕ್ರವಾರ ಚಾಲನೆ ನೀಡಿದರು.ಡಿ ಎಫ್ ಒ ಶಿವಶರಣ ಹಿರೇಮಠ ಹಾಗೂ ಅರಣ್ಯ ಇಲಾಖೆ ಇತರೆ ಅಧಿಕಾರಿ ಮತ್ತು ಸಿಬ್ಬಂದಿ ಇದ್ದರು.

Read More