ವಿಜಯಪುರ: ಚಂದ್ರಯಾನ-೩ ರ ಚಂದ್ರನ ದಕ್ಷಿಣ ಧ್ರುವದ ಅನ್ವೇಷಣೆಯು ಭಾರತದ ಬಾಹ್ಯಾಕಾಶ ಪ್ರಯತ್ನಗಳಲ್ಲಿ ಹೊಸ ಯುಗವನ್ನು ಸೂಚಿಸುತ್ತದೆ. ಚಂದ್ರನ ದಕ್ಷಿಣ ಧ್ರುವದ ಬಳಿ ಭಾರತದ ಯಶಸ್ವಿ ಸಾಪ್ಟ್ ಲ್ಯಾಂಡಿಂಗ್ ರಾಷ್ಟ್ರೀಯ ಹೆಮ್ಮೆಯ ಕ್ಷಣವಾಗಿದೆ. ಇದರಿಂದ ಬಾಹ್ಯಾಕಾಶ ನಾಯಕತ್ವಕ್ಕಾಗಿ ಭಾರತದ ದಿಟ್ಟ ಹೆಜ್ಜೆಯಾಗಿದೆ ಎಂದು ಬಂಜಾರಾ ಪ್ರೌಢ ಶಾಲೆಯ ವಿಜ್ಞಾನ ಶಿಕ್ಷಕರಾದ ಆರ್.ಎನ್.ಬಕಾಟೆಯವರು ಹೇಳಿದರು.
ಮಂಗಳವಾರದಂದು ಬಂಜಾರಾ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ “ಚಂದ್ರಯಾನ ಮಿಷನ್-೩”ರ ವಿದ್ಯಾರ್ಥಿಗಳ ಭಾಷಣ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಧೇಶಿಸಿ ಮಾತನಾಡಿದ ಅವರು. ಚಂದ್ರನ ದಕ್ಷಿಣ ಧ್ರುವದ ಮೇಲ್ಮೆಯಲ್ಲಿ ಲ್ಯಾಂಡಿಂಗ್ ಮಾಡಿದ ನೌಕೆಯನ್ನು ಇಳಿಸುವ ಈ ಗಮನಾರ್ಹ ಸಾಧನೆಯನ್ನು ಸಾಧಿಸಿದ ಮೊದಲ ದೇಶವಾಗಿದೆ. ಚಂದ್ರನ ದಕ್ಷಿಣ ಧ್ರುವಕ್ಕೆ ಅಂತಹ ಸಾಮೀಪ್ಯ. ಈ ಸಾಧನೆಯು ಭಾರತಕ್ಕೆ ಮಾನವೀಯತೆ ಮತ್ತು ಬಾಹ್ಯಾಕಾಶದ ನಡುವಿನ ಸಂಬಂಧವನ್ನು ಪರಿವರ್ತಿಸುವಲ್ಲಿ ಮನ್ನಡೆಸಲು ಅವಕಾಶವನ್ನು ಒದಗಿಸುತ್ತದೆ ಎಂದರು.
ಈ ವೇಳೆಯಲ್ಲಿ ಶಾಲೆಯ ಮುಖ್ಯ ಗುರುಗಳಾದ ಇ.ಡಿ.ಲಮಾಣಿ ಮಾತನಾಡುತ್ತ. ಬಾಹ್ಯಾಕಾಶ ಪರಿಶೋಧನೆಯ ಪ್ರಯೋಜನಗಳ ಬಗ್ಗೆ ಸಾರ್ವಜನಿಕ ಜಾಗೃತಿಯನ್ನು ಹೆಚ್ಚಿಸುವುದು ಮತ್ತು ವಿದ್ಯಾರ್ಥಿಗಳಲ್ಲಿ ಬಾಹ್ಯಾಕಾಶ ವಿಜ್ಞಾನದಲ್ಲಿ ಆಸಕ್ತಿಯನ್ನು ಬೆಳೆಸುವುದು ಕ್ಷೇತ್ರದಲ್ಲಿ ಭವಿಷ್ಯದ ಪ್ರಗತಿಗೆ ಬಲವಾದ ಅಡಿಪಾಯವನ್ನು ನಿರ್ಮಿಸಲು ಅವಶ್ಯಕವಾಗಿದೆ ಎಂದು ಹೇಳಿದರು.
ಈ ವೇಳೆಯಲ್ಲಿ ಶಾಲಾ ವಿದ್ಯಾರ್ಥಿಗಳು ‘ಚಂದ್ರಯಾನ ಮಿಷನ್-೩’ರ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿ ಚಂದ್ರಯಾನ-೩ರ ಉಡಾವಣೆ, ಚಂದ್ರನ ಮೇಲೆ ಲ್ಯಾಂಡಿಂಗ್, ಅದರ ಮಹತ್ವ, ಗುರಿ-ಉದ್ಧೇಶಗಳ ಬಗ್ಗೆ ಮಾತನಾಡಿದರು. ಈ ಸ್ಪರ್ಧೆಯಲ್ಲಿ ಶಾಲಿನಿ ಸಿಂದಗಿ ಪ್ರಥಮ ಸ್ಥಾನವನ್ನು ಪಡೆದುಕೊಂಡಳು.
ಈ ವೇಳೆ ಶಾಲಾ ಶಿಕ್ಷಕರುಗಳು, ಸಿಬ್ಬಂದಿ ವರ್ಗ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಚಂದ್ರಯಾನ-೩ ಬಾಹ್ಯಾಕಾಶ ನಾಯಕತ್ವಕ್ಕಾಗಿ ಭಾರತದ ದಿಟ್ಟ ಹೆಜ್ಜೆ :ಬಕಾಟೆ
Related Posts
Add A Comment

