ಸಿಂದಗಿ: ವರಕವಿ ಡಾ.ಬೇಂದ್ರೆಯವರು ಗಾರುಡಿಗರಾಗಿ, ಸಾಹಿತಿಯಾಗಿ, ಚಿಂತಕರಾಗಿ, ದಾರ್ಶನಿಕರಾಗಿ ಜನ ಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಎಲ್ಲಾ ಕಾಲಕ್ಕೂ ಬಾಳುವಂತಹ ಕವನಗಳನ್ನು ರಚಿಸಿದ್ದಾರೆ ಎಂದು ಧಾರವಾಡದ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಿ.ಎಂ.ಹಿರೇಮಠ ಹೇಳಿದರು.
ಪಟ್ಟಣದ ಸಾತವೀರೇಶ್ವರ ಸಭಾಭವನದಲ್ಲಿ ಶ್ರೀ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಅಂಗ ಸಂಸ್ಥೆಯಾದ ಆರ್.ಡಿ.ಪಾಟೀಲ, ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಪಠ್ಯಪೂರಕ ಚಟುವಟಿಕೆ, ರೋವರ್ ಮತ್ತು ರೇಂಜರ್, ಭಾರತ ಸೇವಾದಳ, ಎನ್.ಎಸ್.ಎಸ್. ಘಟಕಗಳ ಉದ್ಘಾಟನೆ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರಿಕ್ಷೇಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾರಂಗಮಠವು ಸಮಾಜ, ಸಂಸ್ಕೃತಿ, ಸಾಹಿತ್ಯ ಅಪೂರ್ವವಾಗುವ ರೀತಿಯಲ್ಲಿ ಬೆಳೆಸಿಕೊಂಡು ಬಂದಿದ್ದು ಅನನ್ಯ. ಸಿಂದಗಿ ಒಂದು ಪುಣ್ಯ ಭೂಮಿ ಮತ್ತು ಸುಕ್ಷೇತ್ರ ಎಂದು ಹೇಳಲು ನನಗೆ ಅತೀವ ಸಂತೋಷ ಎನಿಸುತ್ತದೆ. ಅಜ್ಞಾನದಿಂದ ಜ್ಞಾನದೆಡೆಗೆ ತೆಗೆದುಕೊಂಡು ಹೋಗಲು ಕಾಯಕಯೋಗಿ ಲಿಂ.ಶ್ರೀಚನ್ನವೀರ ಮಹಾಸ್ವಾಮೀಜಿಗಳ ಕಾರ್ಯ ಅಮೋಘವಾಗಿದೆ. ಇಂದು ಈ ಸಂಸ್ಥೆಯಲ್ಲಿ ೫ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿರುವುದು ಹೆಮ್ಮೆಯಾಗಿದೆ. ನಮ್ಮ ಭಾರತೀಯ ಸಂಸ್ಕೃತಿ ಸಂಸ್ಕಾರ ಬೆಳೆಸಬೇಕು ಎಂಬ ನಿಟ್ಟಿನಲ್ಲಿ ಸಾರಂಗಮಠದ ಕಾರ್ಯ ಅದ್ಬುತವಾಗಿದೆ. ಈ ಸಂಸ್ಥೆಯನ್ನು ಬಾನೆತ್ತರಕ್ಕೆ ತೆಗೆದುಕೊಂಡು ಹೋಗುವಲ್ಲಿ ಇಂದಿನ ಶ್ರೀಗಳ ಪಾತ್ರ ಬಹು ದೊಡ್ಡದಾಗಿದೆ ಎಂದರು.
ಈ ವೇಳೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಧಾರವಾಡದ ಚಲನಚಿತ್ರ ಮತ್ತು ಕಿರುತೆರೆ ಕಲಾವಿದರು ಅನಂತ ದೇಶಪಾಂಡೆ ಮಾತನಾಡಿ, ಮಾನವ ಕಲಿಯಬೇಕು. ಆಮೇಲೆ ಹೊಟ್ಟೆ ತುಂಬಿಸಿಕೊಳ್ಳಬೇಕು. ದುಡಿಯುತನಕ ಅನ್ನ ಸಿಗುವುದಿಲ್ಲ. ಹಾಗಾಗಿ ನಾವು ದುಡಿಯಬೇಕು. ಸಿಹಿ ಯಾವಗ ತಿಂದರೂ ಅದು ಹೇಗೆ ಸಿಹಿಯಾಗಿಯೇ ಇರುತ್ತದೆಯೋ ಹಾಗೆ ನಾವು ಎಲ್ಲರೂ ಯಾವಾಗಲೂ ಒಳ್ಳೆಯ ಕಾರ್ಯಗಳನ್ನು ಮಾಡುತ್ತಲೇ ಇರಬೇಕು. ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ ಎಂದು ಸೌಹಾರ್ದತೆಯ ಸಂದೇಶವನ್ನು ವರಕವಿ ಡಾ.ದ.ರಾ.ಬೇಂದ್ರೆಯವರು ಸಾರಿದ್ದಾರೆ ಎಂದು ಹೇಳಿದರು.
ಈ ವೇಳೆ ನಿವೃತ್ತರಾದ ನಿವೃತ್ತ ಪ್ರಾಚಾರ್ಯ ವ್ಹಿ.ಡಿ.ಪಾಟೀಲ, ನಿವೃತ್ತ ಪ್ರಯೋಗಾಲಯ ಸಹಾಯಕ ಆಯ್.ಎಸ್.ಶಿವಸಿಂಪಗೇರ ದಂಪತಿಗಳಿಗೆ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರಿಕ್ಷೇಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಆಶೀವರ್ಚನ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಹಕಾರ್ಯದರ್ಶಿ ಅಶೋಕ ವಾರದ, ನಿರ್ದೇಶಕ ಎಚ್.ಎಂ.ಪೂಜಾರ, ಪ್ರಾಚಾರ್ಯ ಬಿ.ಎಂಸಿಂಗನಳ್ಳಿ, ಎಸ್.ಜಿ.ಮಾರ್ಸನಳ್ಳಿ, ಎನ್.ಬಿ.ಪೂಜಾರಿ, ಶಿವರಾಜ ಕುಂದಗೋಳ, ಶಿವಶರಣ ಬೂದಿಹಾಳ, ಬಸವರಾಜ ಜಮಾದಾರ, ಸುನೀಲ ಪಾಟೀಲ, ಡಾ.ಶರಣಬಸವ ಜೋಗುರ, ಪ್ರಸನಕುಮಾರ ಜೋಗೂರ, ಸಂಗಮೇಶ ಚಾವರ, ಡಾ.ವಿಶ್ವನಾಥ ನಂದಿಕೋಲ, ನವೀನ ಶೆಳ್ಳಗಿ, ರೋಹಿತ್ ಸುಲ್ಪಿ, ರಾಹುಲ ಕುನ್ನಾಳ, ರೇಖಾ ಕ್ನನೂರ, ಜೆ.ಎಂ.ಗಾಣಗೇರ, ಗವಿಸಿದ್ದಪ್ಪ ಆನೆಗುಂದಿ ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

