ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ನ್ಯಾಯಾಧೀಶ ನಾಗೇಶ ಮೊಗೇರ ಕಿವಿಮಾತು
ಸಿಂದಗಿ: ಆರ್ಥಿಕ ಲಾಭದ ಜೊತೆಗೆ ಹಲವಾರು ದೃಷ್ಠಿಯನ್ನುಟ್ಟುಕೊಂಡು ಮಾನವ ಸಾಗಾಣಿಕೆ ನಡೆಯುತ್ತದೆ. ವಿಶೇಷವಾಗಿ ಹೆಣ್ಣು ಮಕ್ಕಳು ಜಾಗೃತರಾಗಿರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ನಾಗೇಶ ಮೊಗೇರ ಹೇಳಿದರು.
ಮಂಗಳವಾರದಂದು ಪಟ್ಟಣದ ಶ್ರೀ ಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯದ ಸಭಾಭವನದಲ್ಲಿ ಸಿಂದಗಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಅಭಿವೃದ್ಧಿ ಇಲಾಖೆ ಹಾಗೂ ಶ್ರೀಪದ್ಮರಾಜ ಮಹಿಳಾ ಪದವಿ ಮಹಾವಿದ್ಯಾಲಯದ ಸಹಯೋಗದೊಂದಿಗೆ ಹಮ್ಮಿಕೊಂಡ ಮಾನವ ಕಳ್ಳ ಸಾಗಾಣಿಕೆ ವಿರೋಧಿ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಮತ್ತು ಮಹಿಳೆಯರನ್ನು ಅಪಹರಿಸಿ ಕಾನೂನುಬಾಹಿರ ಮತ್ತು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸುತ್ತಿರುವುದು ಬೇಸರದ ಸಂಗತಿ. ಅಪರಿಚಿತ ವ್ಯಕ್ತಿಗಳು ಕಂಡು ಬಂದರೆ ತಕ್ಷಣದಲ್ಲಿ ಪೊಲೀಸರ್ ಗಮನಕ್ಕೆ ತರಬೇಕು. ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು. ಅನಗತ್ಯ ವಿಚಾರಗಳನ್ನು ಯಾರೂ ಮಾಡಬಾರದು ಎಂದು ಸಲಹೆ ನೀಡಿದರು.
ಈ ವೇಳೆ ಎಸಿಡಿಪಿಒ ಎಸ್.ಎನ್.ಕೋರವಾರ ಮಾತನಾಡಿ, ಮಾನವ ಕಳ್ಳ ಸಾಗಾಣಿಎ ಎಂಬುದು ಒಂದು ಸಮಾಜಿಕ ಪಿಡುಗು. ಇದ್ಕಕೆ ಸಣ್ಣ ಮಕ್ಕಳು, ಮಹಿಳೆಯರು ಬಲಿಪಶುಗಳಾಗುತ್ತಿದ್ದಾರೆ. ದೇಶದಲ್ಲಿ ಮಹಿಳೆಯರಿಗೆ ಅನೇಕ ಕಾಯ್ದೆ ಕಾನೂನುಗಳಿವೆ. ಅವುಗಳ ಬಗ್ಗೆ ಅರಿವು ಮೂಡಿಸುವುದು ನಮ್ಮ ನಿಮ್ಮೇಲ್ಲರ ಕರ್ತವ್ಯ. ಮಾನವ ಕಳ್ಳ ಸಾಗಾಣಿಕೆ ಬಗ್ಗೆ ಮಹಿಳೆಯರು ಅರಿತುಕೊಂಡಿರಬೇಕು. ಮಹಿಳಾ ಸಹಾಯವಾಣಿ ಮೂಲಕ ಮಕ್ಕಳನ್ನು ಮತ್ತು ಮಹಿಳೆಯರನ್ನು ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಮಕ್ಕಳ ಮೇಲಾಗುವ ದೌರ್ಜನ್ಯ, ಬಾಲ್ಯ ವಿವಾಹ, ಭಿಕ್ಷಾಟನೆದಂತಹ ಹಲವಾರು ಅಹಿತರಕ ಘಟನೆಗಳನ್ನು ಎಲ್ಲರೂ ಸೇರಿಕೊಂಡು ತಡೆಗಟ್ಟೋಣ ಎಂದು ಹೇಳಿ ಪ್ರತಿಜ್ಞಾ ವಿಧಿ ಬೋಧಿಸಿದರು.
ಇದೇ ಸಂದರ್ಭದಲ್ಲಿ ವಕೀಲರ ಸಂಘದ ತಾಲೂಕಾಧ್ಯಕ್ಷ ಎಸ್.ಬಿ.ಪಾಟೀಲ, ಅಪರ ಸರಕಾರಿ ವಕೀಲ ಭೀ.ಜಿ.ನೆಲ್ಲಗಿ, ಪಪೂ ಕಾಲೇಜಿನ ಪ್ರಾಚಾರ್ಯ ಎಮ್.ಎಸ್.ಹೈಯಾಳಕರ ಮಾತನಾಡಿ, ಹಿಂದಿನ ದಿನಮಾನಗಳಲ್ಲಿ ಸರಕು ಸಮಾನುಗಳ ಸಾಗಾಣಿಕೆ, ಪ್ರಾಣಿ ಸಾಗಾಣಿಕೆ ಹೆಚ್ಚಿದ್ದವು. ಆದರೆ ಇದೀಗ ಮಾನವ ಸಾಗಾಣಿಕೆ ನಮ್ಮ ಸಮಾಜದಲ್ಲಿ ಬೃಹತ್ ಸಮಸ್ಯೆಯಾಗಿ ಬೆಳದಿದೆ. ಇದರ ಬಗ್ಗೆ ನಾವು ನೀವು ಅರಿತುಕೊಳ್ಳಬೇಕಾಗಿರುವುದು ಅತ್ಯಗತ್ಯ ಎಂದು ಹೇಳಿದರು.
ಈ ವೇಳೆ ಪ್ರಾಚಾರ್ಯ ಎಸ್.ಎಂ.ಪೂಜಾರಿ ಅಧ್ಯಕ್ಷೀಯ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಜಿ.ಎಸ್.ಕುಲಕರ್ಣಿ, ಎಸ್.ಸಿ.ದುದ್ದಗಿ, ಎ.ಆರ್.ರಜಪೂತ, ಯು.ಸಿ.ಪೂಜೇರಿ, ಡಿ.ಎಂ.ಪಾಟೀಲ, ಹೇಮಾ ಹಿರೇಮಠ, ಜಿ.ವ್ಹಿ.ಪಾಟೀಲ, ಶೃತಿ ಹೂಗಾರ, ಪ್ರಿಯಾಂಕ ಬ್ಯಾಕೋಡ, ಎಂ.ಕೆ.ಬಿರಾದಾರ, ನೀಲಮ್ಮ ಬಿರಾದಾರ, ಮಂಗಳಾ ಈಳಗೇರ, ಮಮತಾ ಹರನಾಳ, ಶಂಕರ ಕುಂಬಾರ ಸೇರಿದಂತೆ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಇದ್ದರು. ಹೇಮಾ ಹಿರಮೇಠ ಸ್ವಾಗತಿಸಿದರು. ವಿದ್ಯಾರ್ಥಿ ಪೂಜಾ ಸಾರಂಗಮಠ ನಿರೂಪಿಸಿದರು. ಮಹಾಂತೇಶ ನೂಲಾನವರ ವಂದಿಸಿದರು.

