Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಇಂಡಿ: ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸೇವಾ ನಿರತ ಪದವೀಧರ ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯ ಕುರಿತು ಶಿಕ್ಷಕರು ಪ್ರತಿಭಟನೆ ನಡೆಸಿದರು.ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ನಡೆದ ಪ್ರತಿಭಟನೆ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಾಯ್.ಟಿ.ಪಾಟೀಲ, ಎಂ.ಎಂ.ವಾಲಿಕಾರ, ಆನಂದ ವಾಲಿಕಾರ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಡಿ.ಪಾಟಿಲ, ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಆರ್.ಪಾಟೀಲ ಮಾತನಾಡಿ ಅಗಸ್ಟ ೧೨ ರಂದು ಶಿಕ್ಷಕರಿಗೆ ಆಗಿರುವ ಅನ್ಯಾಕ್ಕೆ ನ್ಯಾಯ ದೊರಕಿಸುವಂತೆ ಆಗ್ರಹಿಸಿ ಫ್ರೀಡಂ ಪಾರ್ಕನಲ್ಲಿ ಬೃಹತ್ ಪ್ರತಿಭಟನೆಯಲ್ಲಿ ರಾಜ್ಯದ ಸಮಸ್ತ ಶಿಕ್ಷಕರು ಭಾಗವಹಿಸುವಂತೆ ಕೇಳಿಕೊಂಡರು.ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸೇವಾ ನಿರತ ಪದವೀಧರ ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯ ಕುರಿತು ತಾಲೂಕು, ಜಿಲ್ಲೆ,ರಾಜ್ಯ ಹಂತದಲ್ಲಿ ಸಂಬಂಧಿತ ಎಲ್ಲರಿಗೂ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದರೂ ಸ್ಪಂದಿಸದೇ ಇರುವದರಿಂದ ಬೀದಿಗೆ ಇಳಿಯುವದು ಅನಿವಾರ್ಯವಾಗಿದೆ ಎಂದರು.ಪಟ್ಟಣದ ಮಿನಿ ವಿಧಾನಸೌಧದಲ್ಲಿ ನಡೆದ ಪ್ರತಿಭಟನೆಯಲ್ಲಿ ಅಲ್ಲಾಬಕ್ಷ ವಾಲಿಕಾರ, ಜಯರಾಮ ಚವ್ಹಾಣ, ಆನಂದ ಕೆಂಬಾವಿ, ಪಿ.ಜಿ.ಕಲ್ಮನಿ ಮಾತನಾಡಿ ಅ.೭ ರಂದು ರಾಜ್ಯದ ಎಲ್ಲ ಜಿಲ್ಲಾ ಕಾರ್ಯಕಾರಿ ಸಮಿತಿ…
ಇಂಡಿ: ತಾಲೂಕಿನಲ್ಲಿ ಹರಿಯುವ ಭೀಮಾ ನದಿಗೆ ಮಹಾರಾಷ್ಟ್ರದ ಉಜನಿ ಮತ್ತು ವೀರ ಭಟಕರ ಜಲಾಶಯದಿಂದ ಒಂದು ಲಕ್ಷ ೬೦ ಸಾವಿರ ಕ್ಯುಸೆಕ್ ನೀರು ಹರಿಯ ಬಿಡಲಾಗಿದೆ ಎಂದು ಕಂದಾಯ ಉಪವಿಬಾಗಾಧಿಕಾರಿ ಅಬೀದ್ ಗದ್ಯಾಳ ತಿಳಿಸಿದ್ದಾರೆ.ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಒಂದು ಲಕ್ಷ ೨೫ ಸಾವಿರ ಮತ್ತು ವೀರ ಭಟಕರ ಜಲಾಶಯದಿಂದ ೩೫ ಸಾವಿರ ಕ್ಯೂಸೆಕ್ ನೀರು ಹರಿಯ ಬಿಡಲಾಗಿದೆ.ಮಹಾರಾಷ್ಟ್ರದ ಭೀಮಾ ನದಿ ಪಾತ್ರದಲ್ಲಿ ಮಳೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನೀರು ಮಹಾರಾಷ್ಟ್ರ ಸರಕಾರದಿಂದ ನೀರಾವರಿ ಇಲಾಖೆಯಿಂದ ಬಿಡಲಾಗುತ್ತಿದೆ ಎಂದು ಎಸಿ ಗದ್ಯಾಳ ತಿಳಿಸಿದ್ದಾರೆ.
ವಿಜಯಪುರ: ಶಿಕ್ಷಕರ ಹಲವು ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವಿಜಯಪುರ ಗ್ರಾಮೀಣ ಹಾಗೂ ತಿಕೋಟಾ ತಾಲೂಕಾ ಘಟಕದಿಂದ ಇಂದು ವಿಜಯಪುರ ಹಾಗೂ ತಿಕೋಟಾ ತಹಶೀಲ್ದಾರ ಅವರಿಗೆ ಸಲ್ಲಿಸಲಾಯಿತು.ಶಿಕ್ಷಕರ ಬಹುದಿನಗಳ ಬೇಡಿಕೆ ಈಡೇರಿಸುವ ಮೂಲಕ ಅನ್ಯಾಯ ಸರಿಪಡಿಸುವ ಕುರಿತಂತೆ ರಾಜ್ಯ ಮಟ್ಟದ ಹೋರಾಟದ ರೂಪರೇಷೆಗಳ ತಹಶೀಲ್ದಾರಗಳ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದ್ದು, ಮನವಿಯಲ್ಲಿ ೨೦೧೭ರವರೆಗೆ ನೇಮಕವಾದ ಶಿಕ್ಷಕರನ್ನು ೧ರಿಂದ ೭ಕ್ಕೆ ನೇಮಕವಾದ ಶಿಕ್ಷಕರೆಂದು ಪರಿಗಣಿಸಬೇಕು. ಹೊಸ ವೃಂದ ಮತ್ತು ನೇಮಕಾತಿ ನಿಯಮಗಳು, ೨೦೧೭ರ ನಂತರ ನೇಮಕವಾದ ಶಿಕ್ಷಕರಿಗೆ ಅನ್ವಯಿಸಬೇಕು. ಯಾವುದೇ ಕಾರಣಕ್ಕೂ ೨೦೧೬ಕ್ಕಿಂತ ಮೊದಲು ನೇಮಕವಾದವರಿಗೆ ಪೂರ್ವಾನ್ವಯಗೊಳಿಸಬಾರದು ಹಾಗೂ ಪದವಿ ಪೂರೈಸಿದ ಎಲ್ಲರಿಗೂ ಸೇವಾ ಜೇಷ್ಠತೆಯೊಂದಿಗೆ ಪದವೀಧರ ಶಿಕ್ಷಕರೆಂದು ಪದನಾಮಿಕರಿಸಬೇಕು. ೨೦೧೭ರ ವೃಂದ ಮತ್ತು ನೇಮಕಾತಿ ನಿಯಮಗಳು ೨೦೧೬ಕ್ಕಿಂತ ಮುಂಚೆ ನೇಮಕಾತಿ ಹೊಂದಿದ ಶಿಕ್ಷಕರಿಗೆ ಅನ್ವಯವಾಗುವುದಿಲ್ಲ ಎಂದು ಕಾರ್ಯಾದೇಶ ಹೊರಡಿಸಿ ಮೂಲತ: ೧-೭/೮ಕ್ಕೆ ನೇಮಕ ಹೊಂದಿದವರನ್ನು ಪಿಎಸ್‌ಟಿ ಎಂದು ಪದನಾಮ ಮಾಡಿ ೧-೫ಕ್ಕೆ ಸೀಮಿತಗೊಳಿಸಿರುವುದನ್ನು ಹಿಂಪಡೆಯುವಂತೆ ಒತ್ತಾಯಿಸಲಾಗಿದೆ.ಅರ್ಹ…
ತಿಕೋಟಾ: ತಾಲ್ಲೂಕಿನ ಕೊಟ್ಯಾಳ ಗ್ರಾಮದ ಶ್ರೀ ಮುಕ್ತಂಕಾರ ಮಠದಲ್ಲಿ ಆ.5 ಸೋಮವಾರದಿಂದ ಅಥಣಿಯ ಜಂಗಮ ಜ್ಯೋತಿಮುರಘೇಂದ್ರ ಶಿವಯೋಗಿಗಳ ಪುರಾಣವನ್ನು ಹೊನವಾಡದ ಖ್ಯಾತ ಪ್ರವಚನಕಾರ ಬಾಬುರಾವ ಮಹಾರಾಜ ಅವರಿಂದ ಪ್ರತಿದಿನ ಸಂಜೆ 8 ಗಂಟೆಗೆ ಜರುಗುತ್ತಿದೆ.ಸಾನಿಧ್ಯ ಶಿವಯ್ಯಾ ಗೋಶಿರಯ್ಯ ಹಿರೇಮಠ ವಹಿಸುವರು. ಕಾಶಿನಾಥ ಕುಂಬಾರ, ಬೆಬಕ್ಕ ಕುಂಬಾರ, ಸರದಾರ ಜಂಬಗಿ, ರಾಮಗೊಂಡ ರಾಮತೀರ್ಥ, ರಾಜಕುಮಾರ ಗದ್ಯಾಳ ಇರುವರು ಎಂದು ಕಮೀಟಿ ತಿಳಿಸಿದೆ.
ವಿಜಯಪುರ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ನಾಗರ ಅಮಾವಾಸ್ಯೆಯಂದು ಗೂಳಪ್ಪ ಮುತ್ಯಾ ಜಾತ್ರೆ ಅಪಾರ ಭಕ್ತ ಸಮೂಹದೊಂದಿಗೆ ನಾಗಠಾಣ ಗ್ರಾಮದಲ್ಲಿ ಜರುಗಿತು. ರವಿವಾರದಂದು ನಸುಕಿನ ಜಾವ 4 ಗಂಟೆಗೆ ಗೂಳಪ್ಪ ಮುತ್ಯಾನ ಪಲ್ಲಕ್ಕಿಯು ಗ್ರಾಮದ ಭೀರದೇವರ ಪಲ್ಲಕ್ಕಿ, ಕಗ್ಗೋಡ ತಿಪರಾಯ ಮತ್ತು ಲಕ್ಷ್ಮೀ ದೇವರ, ತಿಡಗುಂದಿ ಭೀರದೇವರ ಪಲ್ಲಕ್ಕಿಯೊಂದಿಗೆ ತಳೇವಾಡ,ಗೂಗದಡ್ಡಿ, ಸಾರವಾಡ ಗ್ರಾಮದ ಡೊಳ್ಳಿನ ವಾಲಗ ಹಾಗೂ ಗೊಂಬೆ ಕುಣಿತದೊಂದಿಗೆ, ಸಕಲ ವಾದ್ಯ ಮೇಳದೊಂದಿಗೆ ಮೆರವಣಿಗೆ ಮಾಡುತ್ತ, ಹಾಲ ಹಳ್ಳಕ್ಕೆ ಹೋಗಿ ಅಲ್ಲಿ ಗಂಗೆ ಸೀತಾಳ ಮಾಡಿಕೊಂಡು ಬೆಳಿಗ್ಗೆ ಬಜಾರದಲ್ಲಿರುವ ದೇವರ ಕಟ್ಟೆಗೆ ಆಗಮನವಾಯಿತು. ಅಲ್ಲಿ ಮಹಿಳೆಯರಾದಿಯಾಗಿ ಎಲ್ಲ ಭಕ್ತರು ದರ್ಶನ ಪಡೆದು, ಆರತಿ ಬೆಳಗಿ, ಕಾಯಿ ಕರ್ಪೂರ ನೈವೈದ್ಯ ಅರ್ಪಿಸಿದರು. ನಂತರ ಭವ್ಯ ಮೆರವಣಿಗೆ ಮೂಲಕ ಮೂಲ ದೇವಸ್ಥಾನಕ್ಕೆ ಬಂದು ತಲುಪುವ ಮಾರ್ಗದಲ್ಲಿ ಭಕ್ತ ಸಮೂಹ ಭಂಡಾರ, ಬರ್ಫಿ, ಉಣ್ಣೆ ಎಸೆಯುವ ದೃಶ್ಯ ಮನಮೋಹಕವಾಗಿತ್ತು.ಜಾತ್ರೆಯ ನಿಮಿತ್ತ ಭಾರ ಎತ್ತುವ ಸ್ಪರ್ಧೆ ಜರುಗಿತು.ಇದರಲ್ಲಿ ಚೀಲ ಹಾಗೂ ಗುಂಡು ಎತ್ತುವ ಸ್ಪರ್ಧೆಯಂತೂ…
ಚಿಮ್ಮಡ: ಗ್ರಾಮದ ಕನಕದಾಸ ವೃತ್ತದಿಂದ ಬಸ್ ನಿಲ್ದಾಣಕ್ಕೆ ತೆರಳುವ ಎಲ್ಲಮ್ಮದೇವಿ ದೇವಸ್ಥಾನದ ಹಿಂದಿನ ಬೈಪಾಸ್ ರಸ್ತೆಯನ್ನು ಕೂಡಲೆ ದುರಸ್ತಿಗೊಳಿಸಬೇಕೆಂದು ಈ ಭಾಗದ ಸಂಚಾರಿಗಳು ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ, ಬಸ್ ನಿಲ್ದಾಣಕ್ಕೆ ತೆರಳಲು ಹಾಗೂ ವಾರದ ಸಂತೆಗಾಗಿ ಅತೀ ಹೆಚ್ಚು ಜನ ಸಂಚರಿಸುವ ಈ ರಸ್ತೆಯು ಸತತ ಮಳೆಯಿಂದಾಗಿ ರಸ್ತೆ ತುಂಬ ಗುಂಡಿಗಳಿಂದ ತುಂಬಿದ್ದು ಕಾಲಿಡಲು ಕೂಡ ಸ್ಥಳವಿಲ್ಲದಷ್ಟು ಗಲೀಜಾಗಿದೆ, ಎಲ್ಲಮ್ಮದೇವಿ ದೇವಸ್ಥಾನ ಹಾಗೂ ಸಾರ್ವಜನಿಕ ಶೌಚಾಲಯಗಳ ನಡುವೆ ಇಕ್ಕಟ್ಟಾಗಿರುವ ಈ ರಸ್ತೆಯಲ್ಲಿ ಸಂಚರಿಸಲು ಸಾರ್ವಜನಿಕರು ಪರದಾಡುವಂತಾಗಿದೆ,ಅಲ್ಲದೇ ಖಾಸಗೀ ವಾಹನಗಳು ಹೆಚ್ಚಾಗಿ ಈ ಮಾರ್ಗವಾಗಿಯೇ ಸಂಚರಿಸುವುದರಿಂದ ಪಾದಚಾರಿಗಳಿಗೆ ನಿತ್ಯ ಕೆಸರಿನ ಸಿಂಚನವಾಗಿ ಅವರ ಪಾಡು ಹೇಳತೀರದಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಕುರಿತು ಗಮನಹರಿಸಿ ಕೂಡಲೆ ಈ ರಸ್ತೆಯನ್ನು ದುರಸ್ತಿಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮುದ್ದೇಬಿಹಾಳ: ಕಳೆದ ಮೂರು ವರ್ಷಗಳಿಂದ ಮುದ್ದೇಬಿಹಾಳದಿಂದ ಬಸವೇಶ್ವರರ ಐಕ್ಯ ಭೂಮಿ ಕೂಡಲ ಸಂಗಮಕ್ಕೆ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದ್ದು, ಪಾದಯಾತ್ರೆಯನ್ನು ಆ.೮ ರ ಬೆಳಿಗ್ಗೆ ೧೧ಕ್ಕೆ ಪಟ್ಟಣದ ಬಜಾರನಲ್ಲಿರುವ ಶ್ರೀ ದ್ಯಾಮವ್ವ ದೇವಿ ದೇವಸ್ತಾನದಿಂದ ಆರಂಭಿಸಲಾಗುತ್ತಿದೆ. ಸಂಗಮದಲ್ಲಿ ರವಿವಾರ ರಾತ್ರಿ ಉಳಿದುಕೊಳ್ಳಲು ಮಹಿಳೆಯರಿಗೂ ಸೇರಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪಾದಯಾತ್ರೆಯ ನೇತೃತ್ವ ವಹಿಸಿರುವ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ ತಿಳಿಸಿದರು.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾತ್ರೆಗೆ ಬರುವವರು, ಹೊದಿಕೆ ಮತ್ತು ನಿತ್ಯೋಪಯೋಗಿ ವಸ್ತುಗಳನ್ನು ತರಬೇಕು. ಮಾರ್ಗದಲ್ಲಿ ಉಪಹಾರ, ಊಟದ ವ್ಯವಸ್ಥೆ ಇರುತ್ತದೆ. ಸಂಗಮದಲ್ಲಿಯೂ ರಾತ್ರಿ ಊಟ, ಮರುದಿನ ಬೆಳಿಗ್ಗೆ ಉಪಹಾರ ವ್ಯವಸ್ಥೆ, ಸೋಮವಾರ ಸಂಗಮನಾಥನಿಗೆ ರುದ್ರಾಭಿಷೇಕ ನೆರವೇರಿಸಿ ಮರಳಿ ಬರಲು ಮುದ್ದೇಬಿಹಾಳ ಘಟಕದಿಂದ ಬಸ್ ವ್ಯವಸ್ಥೆ ಇರಲಿದೆ. ಲಗೇಜ ಹೊತ್ತೊಯ್ಯಲು ಗೂಡ್ಸ್ ವಾಹನದ ವ್ಯವಸ್ಥೆಯನ್ನು ವಿಜಯ ಬೆಲ್ಲದ ಕಲ್ಪಿಸಿದ್ದು, ಸಂಗಮದಲ್ಲಿ ರಾತ್ರಿ ವಸತಿ ಸೇವೆಯನ್ನು ಅರವಿಂದ ಜಮಖಂಡಿ, ಮಾರ್ಗದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಸಂತೋಷ ಪಾಟೀಲ ಮತ್ತು ಕುಂಟೋಜಿಯ…
ಬಸವನಬಾಗೇವಾಡಿ: ತಾಲೂಕಿನ ವರದಿಗಾರ ಬಸವರಾಜ. ಎಸ್. ನಂದಿಹಾಳ ಅವರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಸಕ್ತ ವರ್ಷದ ವಾರ್ಷಿಕ ಪ್ರಶಸ್ತಿಗೆ ಭಾಜನರಾದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಸ್ಥಳೀಯ ಬಸವೇಶ್ವರ ಸೇವಾ ಸಮಿತಿಯಿಂದ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಬಸವೇಶ್ವರ ಸೇವಾ ಸಮಿತಿಯ ಸದಸ್ಯ, ನಿವೃತ್ತ ಶಿಕ್ಷಕ ಎಂ.ಜಿ.ಆದಿಗೊಂಡ ಮಾತನಾಡಿ, ಕಳೆದ ೧೮ ವರ್ಷಗಳಿಂದ ಕನ್ನಡಪ್ರಭ ದಿನಪತ್ರಿಕೆಯ ತಾಲೂಕು ವರದಿಗಾರರಾಗಿ ಕಾರ್ಯನಿರ್ವಹಿಸುವ ಮೂಲಕ ಪತ್ರಿಕಾರಂಗಕ್ಕೆ ಸೇವೆ ಸಲ್ಲಿಸುತ್ತಿರುವ ಬಸವರಾಜ ನಂದಿಹಾಳ ಅವರ ಕಾರ್ಯ ಅನುಪಮ. ಇವರು ಪತ್ರಿಕಾ ರಂಗಕ್ಕೆ ಸೇವೆ ಸಲ್ಲಿಸಿರುವದನ್ನು ಗುರುತಿಸಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಶ್ಲಾಘನೀಯ. ಇವರು ಸಾಹಿತಿಕವಾದ ಚಟುವಟಿಕೆಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಶಿಕ್ಷಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸೇವೆ ಇನ್ನಷ್ಟು ಸಮಾಜಕ್ಕೆ ಸಿಗುವಂತಾಗಲಿ ಎಂದು ಶುಭಹಾರೈಸಿದರು.ಈ ಸಂದರ್ಭದಲ್ಲಿ ಬಸವೇಶ್ವರ ಸೇವಾ ಸಮಿತಿ ಅಧ್ಯಕ್ಷ, ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಬಸವೇಶ್ವರ ಸೇವಾ ಸಮಿತಿಯ ಸದಸ್ಯರಾದ ಬಸವರಾಜ ಗೊಳಸಂಗಿ, ಸಂಗಣ್ಣ ಕಲ್ಲೂರ, ಚಂದ್ರಶೇಖರಗೌಡ…
ಇಂಡಿ: ಮತ್ತೊಂದು ಹೋರಾಟಕ್ಕೆ ಸಿದ್ದಗೊಳ್ಳಬೇಕಾಗಿದೆ. ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರು ಬಡ್ತಿಯಲ್ಲಿನ ಅನ್ಯಾಯದ ವಿರುದ್ಧ ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಅಗಸ್ಟ್ 12 ರಂದು ಬೃಹತ್ ಪ್ರತಿಭಟನೆ ನಡೆಯಲಿದೆ. ಆ ಕಾರಣದಿಂದ ತಾಲ್ಲೂಕಿನ ಶಿಕ್ಷಕರು ಪಾಲ್ಗೊಳ್ಳಲು ಪ್ರಾ.ಶಾ.ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ವಾಯ್ ಟಿ ಪಾಟೀಲ ಕರೆ ನೀಡಿದರು.ಬುಧವಾರ ಪಟ್ಟಣದ ಗುರುಭವನದಲ್ಲಿ ಪಿ ಎಸ್ ಟಿ ಶಿಕ್ಷಕರಿಗೆ ಆದ ಅನ್ಯಾಯದ ವಿರುದ್ಧ ಪ್ರತಿಭಟನೆ ರೂಪುರೇಷೆಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ಈ ಸಂದರ್ಭದಲ್ಲಿ ಪ್ರಾ.ಶಾ.ಶಿಕ್ಷಕರ ಸಂಘದ ತಾಲೂಕು ಮಾಜಿ ಅಧ್ಯಕ್ಷ ಎಸ್ ವಿ ಹರಳಯ್ಯ, ಅಲ್ತಾಪ್ ಬೋರಾಮಣಿ, ಎಂ ಎಂ ನೇದಲಗಿ, ಬಿ ಎಂ ವಠಾರ, ಪಿ ಜಿ ಕಲ್ಮನಿ, ಆನಂದ ಕೆಂಭಾವಿ, ಆನಂದ ವಾಲಿಕಾರ ಮಾತನಾಡಿ ಹೋರಾಟದ ಕುರಿತು ತಮ್ಮ ಸಲಹೆ ಸೂಚನೆ ನೀಡಿದರು.ಅಗಸ್ಟ್ 1 ರಿಂದ 3 ರ ವರೆಗೆ, ಶಿಕ್ಷಕರ 6 ತಂಡಗಳು ರಚಿಸಿ, ಪಿ ಎಸ್ ಟಿ ಶಿಕ್ಷಕರಿಗೆ ಆದ ಅನ್ಯಾಯದ ಕುರಿತು ತಾಲ್ಲೂಕಿನ ಎಲ್ಲಾ ಶಾಲೆಗಳಿಗೆ ಮನವರಿಕೆ…
ಢವಳಗಿ: ಗ್ರಾಮದ ಸನಾತನ ವಿದ್ಯಾವರ್ಧಕ ಸಂಘದ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರದಂದು ಈ ವರ್ಷದ ಶೈಕ್ಷಣಿಕ ಸಾಲಿನ ಸಂಸತ್ತಿನ ಚುನಾವಣೆಯನ್ನು ಮಹಾವಿದ್ಯಾನಿಲಯದಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ ಆಶ್ರಯದಲ್ಲಿ ಚುನಾವಣೆಯನ್ನು ನಡೆಸಲಾಯಿತು.ಕಾಲೇಜಿನ ಎಲ್ಲಾ ವಿಧ್ಯಾರ್ಥಿಗಳು ತಮ್ಮ ಶಾಲಾ ಗುರುತಿನ ಚೀಟಿಯನ್ನು ಪ್ರದರ್ಶಿಸುವ ಮೂಲಕ ಮತದಾನದಲ್ಲಿ ಪಾಲ್ಗೊಂಡು ಮತದಾನ ಮಾಡುವ ಎಲ್ಲ ವಿಧಾನಗಳನ್ನು ಪ್ರಾಂಶುಪಾಲ ಎನ್ ಎ ಬಿರಾಜದಾರ ಅವರು ತಮ್ಮ ವಿಧ್ಯಾರ್ಥಿಗಳಿಗೆ ತಿಳಿಸಿ ಮತದಾನ ಮಾಡಿಸಿ ವಿದ್ಯಾರ್ಥಿಗಳಿಗೆ ಚುನಾವಣೆಯ ಬಗ್ಗೆ ಜಾಗೃತಿ, ಮತ್ತು ಅರಿವು ಮೂಡಿಸಿದರು.ಈ ಚುನಾವಣೆ ಕಾರ್ಯದ ಮುಖ್ಯ ಚುನಾವಣೆ ಅಧಿಕಾರಿಯಾಗಿ ಎಂ ಜಿ ಎಮ್ ಕೆ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಎಸ್ ಐ ಕೋರಿ, ಪ್ರಥಮ ಪೋಲಿಂಗ್ ಆಫೀಸರ್ ಆಗಿ ಉಪನ್ಯಾಸಕ ಜಿ ಎಸ್ ವಾಲಿ, ಎರಡನೇ ಪೋಲಿಂಗ್ ಅಧಿಕಾರಿಯಾಗಿ ಉಪನ್ಯಾಸಕ ಎಂ ಎಚ್ ಚೌವ್ಹಾನ ಕಾರ್ಯ ನಿರ್ವಹಿಸಿದರು.ಉಪನ್ಯಾಸಕ ವಿ ಕೆ ಮಾಲಗತ್ತಿ ಮತ್ತು ಪ್ರಾಂಶುಪಾಲ ಎನ್ ಎ ಬಿರಾಜದಾರ ಅವರ ಮಾರ್ಗದರ್ಶನದಲ್ಲಿ ಚುನಾವಣಾ ಕಾರ್ಯದ ಸಂಪೂರ್ಣ ಜವಾಬ್ದಾರಿ ಮತ್ತು…
