ಇಂಡಿ: ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸೇವಾ ನಿರತ ಪದವೀಧರ ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯ ಕುರಿತು ಶಿಕ್ಷಕರು ಪ್ರತಿಭಟನೆ ನಡೆಸಿದರು.
ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ನಡೆದ ಪ್ರತಿಭಟನೆ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಾಯ್.ಟಿ.ಪಾಟೀಲ, ಎಂ.ಎಂ.ವಾಲಿಕಾರ, ಆನಂದ ವಾಲಿಕಾರ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಎಸ್.ಡಿ.ಪಾಟಿಲ, ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಆರ್.ಪಾಟೀಲ ಮಾತನಾಡಿ ಅಗಸ್ಟ ೧೨ ರಂದು ಶಿಕ್ಷಕರಿಗೆ ಆಗಿರುವ ಅನ್ಯಾಕ್ಕೆ ನ್ಯಾಯ ದೊರಕಿಸುವಂತೆ ಆಗ್ರಹಿಸಿ ಫ್ರೀಡಂ ಪಾರ್ಕನಲ್ಲಿ ಬೃಹತ್ ಪ್ರತಿಭಟನೆಯಲ್ಲಿ ರಾಜ್ಯದ ಸಮಸ್ತ ಶಿಕ್ಷಕರು ಭಾಗವಹಿಸುವಂತೆ ಕೇಳಿಕೊಂಡರು.
ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸೇವಾ ನಿರತ ಪದವೀಧರ ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯ ಕುರಿತು ತಾಲೂಕು, ಜಿಲ್ಲೆ,ರಾಜ್ಯ ಹಂತದಲ್ಲಿ ಸಂಬಂಧಿತ ಎಲ್ಲರಿಗೂ ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದರೂ ಸ್ಪಂದಿಸದೇ ಇರುವದರಿಂದ ಬೀದಿಗೆ ಇಳಿಯುವದು ಅನಿವಾರ್ಯವಾಗಿದೆ ಎಂದರು.
ಪಟ್ಟಣದ ಮಿನಿ ವಿಧಾನಸೌಧದಲ್ಲಿ ನಡೆದ ಪ್ರತಿಭಟನೆಯಲ್ಲಿ ಅಲ್ಲಾಬಕ್ಷ ವಾಲಿಕಾರ, ಜಯರಾಮ ಚವ್ಹಾಣ, ಆನಂದ ಕೆಂಬಾವಿ, ಪಿ.ಜಿ.ಕಲ್ಮನಿ ಮಾತನಾಡಿ ಅ.೭ ರಂದು ರಾಜ್ಯದ ಎಲ್ಲ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು ಶಿಕ್ಷಕರಿಗೆ ಆಗಿರುವ ಅನ್ಯಾಯದ ಕುರಿತು ಎಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರೊಂದಿಗೆ ರಾಜ್ಯ ಮಟ್ಟದ ಹೋರಾಟದ ಬಗ್ಗೆ ಉಸ್ತುವಾರಿ ಸಚಿವರಿಗೆ,ಡಿಸಿ, ಸಿಇಒ ಹಾಗೂ ಡಿಡಿಪಿಐ ಇವರಿಗೆ ಚಳುವಳಿ ಕುರಿತು ಮಾಹಿತಿ ನೀಡುವದು, ಅ.೧೨ ರಂದು ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಬೃಹತ್ ಪ್ರತಿಭಟನೆ ಕುರಿತು ಮಾತನಾಡಿದರು.
ಪ್ರತಿಭಟನೆಯಲ್ಲಿ ಅಲ್ತಾಪ ಬೋರಾಮಣಿ, ಎಸ್.ವಿ.ಹರಳಯ್ಯ, ಬಿ.ಜಿ.ಕಲ್ಮನಿ, ಬಿ.ಎಂ.ವಠಾರ, ಆನಂದ ಕೆಂಬಾವಿ, ಕಾಂತು ಇಂಡಿ, ಆರ್.ವಿ.ಪಾಟೀಲ, ಎ.ಸಿ.ಬಡಿಗೇರ, ಬಿ.ಎಸ್.ಚಾಂದಕವಟೆ, ಸರೋಜಿನಿ ಮಾವಿನಮರದ, ಮಲ್ಲಮ್ಮ ಗಿರಣಿ ವಡ್ಡರ, ಬಿ.ಸಿ.ಭಗವಂತಗೌಡರ, ಶ್ರೀಮತಿ ಎಸ್.ಸಿ.ಮಕಾನದಾರ, ಎಸ್.ಸಿ.ಗಿರಣಿ, ಜಯಶ್ರೀ ಕಟಕದೊಂಡ, ಅನಿತಾ ರಾಠೋಡ, ಆರ್.ಎಸ್. ನಾರಾಯಣಕರ, ಜಯಶ್ರೀ ತೆಲಗ, ವಿಜಯಲಕ್ಷ್ಮಿ ಡಿಸ್ಲೆ, ವಿಕಲಚೇತನ ಸಂಘದ ಅಧ್ಯಕ್ಷ ವಿ.ಪಿ.ಅರವತ್ತು, ಬಸೀರ ಇನಾಮದಾರ, ರಫೀಕ ಇಂಡಿಕರ, ಉಮರ ಶೇಖ, ಜಯರಾಮ ಚವ್ಹಾಣ, ಕೆ.ಎಸ್.ಕಾಂಬಳೆ, ಸಿ.ಎಸ್.ಝಳಕಿ, ಎ.ಎಸ್.ಬಡಿಗೇರ, ಬಾಬು ತಳಕೇರಿ, ಆನಂದ ವಾಲಿಕಾರ, ಸುರೇಶ ಚವ್ಹಾಣ ಮತ್ತಿತರಿದ್ದರು.
ತಹಸೀಲ್ದಾರ ಬಿ.ಎಸ್.ಕಡಕಬಾವಿ ಇವರಿಗೆ ಮನವಿ ಸಲ್ಲಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

