ಢವಳಗಿ: ಗ್ರಾಮದ ಸನಾತನ ವಿದ್ಯಾವರ್ಧಕ ಸಂಘದ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರದಂದು ಈ ವರ್ಷದ ಶೈಕ್ಷಣಿಕ ಸಾಲಿನ ಸಂಸತ್ತಿನ ಚುನಾವಣೆಯನ್ನು ಮಹಾವಿದ್ಯಾನಿಲಯದಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್ ಆಶ್ರಯದಲ್ಲಿ ಚುನಾವಣೆಯನ್ನು ನಡೆಸಲಾಯಿತು.ಕಾಲೇಜಿನ ಎಲ್ಲಾ ವಿಧ್ಯಾರ್ಥಿಗಳು ತಮ್ಮ ಶಾಲಾ ಗುರುತಿನ ಚೀಟಿಯನ್ನು ಪ್ರದರ್ಶಿಸುವ ಮೂಲಕ ಮತದಾನದಲ್ಲಿ ಪಾಲ್ಗೊಂಡು ಮತದಾನ ಮಾಡುವ ಎಲ್ಲ ವಿಧಾನಗಳನ್ನು ಪ್ರಾಂಶುಪಾಲ ಎನ್ ಎ ಬಿರಾಜದಾರ ಅವರು ತಮ್ಮ ವಿಧ್ಯಾರ್ಥಿಗಳಿಗೆ ತಿಳಿಸಿ ಮತದಾನ ಮಾಡಿಸಿ ವಿದ್ಯಾರ್ಥಿಗಳಿಗೆ ಚುನಾವಣೆಯ ಬಗ್ಗೆ ಜಾಗೃತಿ, ಮತ್ತು ಅರಿವು ಮೂಡಿಸಿದರು.
ಈ ಚುನಾವಣೆ ಕಾರ್ಯದ ಮುಖ್ಯ ಚುನಾವಣೆ ಅಧಿಕಾರಿಯಾಗಿ ಎಂ ಜಿ ಎಮ್ ಕೆ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಎಸ್ ಐ ಕೋರಿ, ಪ್ರಥಮ ಪೋಲಿಂಗ್ ಆಫೀಸರ್ ಆಗಿ ಉಪನ್ಯಾಸಕ ಜಿ ಎಸ್ ವಾಲಿ, ಎರಡನೇ ಪೋಲಿಂಗ್ ಅಧಿಕಾರಿಯಾಗಿ ಉಪನ್ಯಾಸಕ ಎಂ ಎಚ್ ಚೌವ್ಹಾನ ಕಾರ್ಯ ನಿರ್ವಹಿಸಿದರು.
ಉಪನ್ಯಾಸಕ ವಿ ಕೆ ಮಾಲಗತ್ತಿ ಮತ್ತು ಪ್ರಾಂಶುಪಾಲ ಎನ್ ಎ ಬಿರಾಜದಾರ ಅವರ ಮಾರ್ಗದರ್ಶನದಲ್ಲಿ ಚುನಾವಣಾ ಕಾರ್ಯದ ಸಂಪೂರ್ಣ ಜವಾಬ್ದಾರಿ ಮತ್ತು ಮತದಾನ ಮಾಡುವುದರ ಕುರಿತು ಕಾಲೇಜಿನ ವಿಧ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಕಾಲೇಜಿನ ಎಲ್ಲ ಉಪನ್ಯಾಸಕರು ಮತ್ತು ಸಿಬ್ಬಂದಿ ಚುನಾವಣೆಯ ಪ್ರಕ್ರಿಯೆಯನ್ನು ವೀಕ್ಷಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

