ಚಿಮ್ಮಡ: ಗ್ರಾಮದ ಕನಕದಾಸ ವೃತ್ತದಿಂದ ಬಸ್ ನಿಲ್ದಾಣಕ್ಕೆ ತೆರಳುವ ಎಲ್ಲಮ್ಮದೇವಿ ದೇವಸ್ಥಾನದ ಹಿಂದಿನ ಬೈಪಾಸ್ ರಸ್ತೆಯನ್ನು ಕೂಡಲೆ ದುರಸ್ತಿಗೊಳಿಸಬೇಕೆಂದು ಈ ಭಾಗದ ಸಂಚಾರಿಗಳು ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ, ಬಸ್ ನಿಲ್ದಾಣಕ್ಕೆ ತೆರಳಲು ಹಾಗೂ ವಾರದ ಸಂತೆಗಾಗಿ ಅತೀ ಹೆಚ್ಚು ಜನ ಸಂಚರಿಸುವ ಈ ರಸ್ತೆಯು ಸತತ ಮಳೆಯಿಂದಾಗಿ ರಸ್ತೆ ತುಂಬ ಗುಂಡಿಗಳಿಂದ ತುಂಬಿದ್ದು ಕಾಲಿಡಲು ಕೂಡ ಸ್ಥಳವಿಲ್ಲದಷ್ಟು ಗಲೀಜಾಗಿದೆ, ಎಲ್ಲಮ್ಮದೇವಿ ದೇವಸ್ಥಾನ ಹಾಗೂ ಸಾರ್ವಜನಿಕ ಶೌಚಾಲಯಗಳ ನಡುವೆ ಇಕ್ಕಟ್ಟಾಗಿರುವ ಈ ರಸ್ತೆಯಲ್ಲಿ ಸಂಚರಿಸಲು ಸಾರ್ವಜನಿಕರು ಪರದಾಡುವಂತಾಗಿದೆ,
ಅಲ್ಲದೇ ಖಾಸಗೀ ವಾಹನಗಳು ಹೆಚ್ಚಾಗಿ ಈ ಮಾರ್ಗವಾಗಿಯೇ ಸಂಚರಿಸುವುದರಿಂದ ಪಾದಚಾರಿಗಳಿಗೆ ನಿತ್ಯ ಕೆಸರಿನ ಸಿಂಚನವಾಗಿ ಅವರ ಪಾಡು ಹೇಳತೀರದಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಕುರಿತು ಗಮನಹರಿಸಿ ಕೂಡಲೆ ಈ ರಸ್ತೆಯನ್ನು ದುರಸ್ತಿಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

