Author: editor.udayarashmi@gmail.com

ವಿಜಯಪುರ: ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ಧಿ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಬಂಜಾರಾ ಪ್ರೌಢ ಶಾಲೆಯ ಮುಖ್ಯ ಗುರು ಇ.ಡಿ.ಲಮಾಣಿ ಹೇಳಿದರು.ಶುಕ್ರವಾರದಂದು ಶಾಲಾ ಆರಂಭೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ಶಿಕ್ಷಣ ಎಂದರೆ ಕೇವಲ ಪಠ್ಯಕ್ರಮದ ಅಧ್ಯಯನ ಪರೀಕ್ಷೆ, ಫಲಿತಾಂಶ ಮಾತ್ರವಲ್ಲ ಅದು ವಿದ್ಯಾರ್ಥಿಯ ಪರಿಪೂರ್ಣ ವ್ಯಕ್ತಿತ್ವದ ವಿಕಾಸ. ಅವನಲ್ಲಿ ಸುಪ್ತವಾಗಿರುವ ಅನನ್ಯ ಪ್ರತಿಭೆಯ ಅನಾವರಣ. ಹಾಗಾದಾಗ ಮಾತ್ರ ಶಿಕ್ಷಣಕ್ಕೆ ಒಂದು ಅರ್ಥಪೂರ್ಣತೆ ಬರುತ್ತದೆ ಎಂದು ಹೇಳಿದರು.ಈ ವೇಳೆಯಲ್ಲಿ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಎಂ.ಬಿ.ಪೂಜಾರಿಯವರು ಮಾತನಾಡುತ್ತ. ವಿದ್ಯೆ ಎಂಬುದು ಯಾರೂ ದೋಚಲಾಗದ, ಬಳಸದಷ್ಟು ಸಮೃದ್ಧವಾಗಿ ಬೆಳೆಯುವ, ಎಲ್ಲ ಸಂಪತ್ತಿಗಿಂತ ಮಿಗಿಲಾದದ್ದು. ಅದಕ್ಕಾಗಿ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ. ಸಂಸ್ಕಾರ ನೀಡಿ ಮಕ್ಕಳ ಜ್ಞಾನ ಭಂಡಾರದ ಶ್ರೀಮಂತಿಕೆ ಹೆಚ್ಚಿಸಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಎಸ್.ವ್ಹಿ.ದೇಶಪಾಂಡೆ, ಎ.ಎಂ.ನಾಗೊಂಡ, ಆರ್.ಎನ್.ಬಕಾಟೆ, ಜೆ.ಕೆ.ರಾಠೋಡ, ಎಸ್.ಡಿ.ಚವ್ಹಾಣ್, ಎಸ್.ಬಿ.ಒಡೆಯರ, ಎಸ್.ಕೆ.ಶಿಂಧೆ, ಎಸ್.ಪಿ.ಧಡೇಕರ, ಎಸ್.ಎಂ.ಮಾಳಿ, ಆರ್.ಎಸ್.ಹಿರೇಮಠ, ಪಿ.ಎಸ್.ಕೌಲಗಿ, ಆರ್.ಕೆ.ರಜಪೂತ, ಎಂ.ಎಲ್.ಚವ್ಹಾಣ್, ಡಿ.ಬಿ.ದೊಡಮನಿ, ಎಚ್.ಎಂ.ಬೋರಾವತ ಹಾಗೂ ಎಲ್ಲ ಶಿಕ್ಷಕ ಸಿಬ್ಬಂದಿ…

Read More

ಚಡಚಣ: ಶಿಕ್ಷಣವೆಂದರೆ ಕೇವಲ ಅಕ್ಷರ ಜ್ಞಾನದ ಗಳಿಕೆ, ಪಠ್ಯದ ಓದು ಮಾತ್ರವಲ್ಲ, ಅದು ಮಕ್ಕಳ ಸರ್ವತೋಮುಖ ಬೆಳವಣಿಗೆಯ ಮಹತ್ವದ ಕಾಲಘಟ್ಟ. ಶಾಲೆಗಳ ಅಭಿವೃದ್ಧಿ ಹೊಂದಿದರೆ, ಭಾರತದ ಭವಿಷ್ಯ ಇನ್ನಷ್ಟು ಭದ್ರವಾಗುತ್ತದೆ ಎಂದು ರೇವತಗಾಂವ ಗ್ರಾಮದ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರು ಆರ್.ಎನ್.ಹತ್ತಳ್ಳಿಯವರು ಹೇಳಿದರು.ರಾಜ್ಯಾದ್ಯಂತ ಶುಕ್ರವಾರದಿಂದ ಶಾಲಾ ಪ್ರಾರಂಭೋತ್ಸವಕ್ಕೆ ಸರ್ಕಾರ ವಿದ್ಯುಕ್ತವಾಗಿ ಚಾಲನೆ ದೊರೆತ್ತಿದ್ದು, ಇತ್ತ ರೇವತಗಾಂವ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಗುಲಾಬಿ ಹೂವುಗಳನ್ನು ನೀಡಿವ ಮೂಲಕ ಸ್ವಾಗತ ಕೋರಿ ಮಾತನಾಡಿದ ಅವರು. ೨೦೨೪-೨೫ನೇ ಶೈಕ್ಷಣಿಕ ವರ್ಷವನ್ನು ‘ಶೈಕ್ಷಣಿಕ ಬಲವರ್ಧನೆ ವರ್ಷ’ ಎಂದು ಸಂಕಲ್ಪ ಮಾಡಲಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಬದಲಾಗುತ್ತಿರುವ ಶೈಕ್ಷಣಿಕ ಅವಶ್ಯಕತೆಗಳು ಮತ್ತು ತಂತ್ರಜ್ಞಾನ ಆಧಾರಿತ ಕಲಿಕೆ ಹೊಂದಾಣಿಕೆ ಮಾಡಿಕೊಂಡು ಮಗುವಿನ ಕಲಿಕಾ ಬಲವರ್ಧನೆ ಆಗಬೇಕಾಗುತ್ತದೆ. ಅಲ್ಲದೇ ಮಕ್ಕಳನ್ನು ಇಂಗ್ಲಿಷ್ ಭಾಷೆಯ ಪರಿಣತರನ್ನಾಗಿಸುವ ನಿಟ್ಟಿನಲ್ಲಿ ‘ಸ್ಪೋಕನ್ ಇಂಗ್ಲಿಷ್’ ತರಗತಿಗಳನ್ನು ನಡೆಸಲಾಗುತ್ತದೆ ಎಂದು ಹೇಳಿದರು.ಈ ವೇಳೆ ಪಾಲಕ ಪ್ರತಿನಿಧಿ ಅಶೋಕ ಬಿಜ್ಜರಗಿಯವರು…

Read More

ವಿಜಯಪುರ: ಇತ್ತಿಚಿಗೆ ಮುಂಗಾರು ಹಂಗಾಮಿನ ಕುರಿತು ಕೇಂದ್ರ ಹಾಗೂ ರಾಜ್ಯ ಸರಕಾರ ನೀಡಿರುವ ಪರಿಹಾರದ ಮೊತ್ತದ ಬಗ್ಗೆ ಸಾಕಷ್ಟು ಗೊಂದಲಗಳಿದ್ದು ಅದರ ಬಗ್ಗೆ ಸ್ಪಷ್ಟತೆ ನೀಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ ಅವರಿಗೆ ಮನವಿ ಸಲ್ಲಿಸಿ ಇದಕ್ಕೆ ಉತ್ತರ ನೀಡುವಂತೆ ಆಗ್ರಹಿಸಿದರುಈ ವೇಳೆ ರೈತಸಂಘದ ಜಿಲ್ಲಾಧ್ಯಕ್ಷ ಸಂಗಮೆಶ ಸಗರ ಮಾತನಾಡುತ್ತ, ಎನ್.ಡಿ.ಆರ್.ಎಫ್ ಹಾಗೂ ಎಸ್.ಡಿ.ಆರ್.ಎಫ್ ಮಾರ್ಗಸೂಚಿಯಂತೆ ಕೇಂದ್ರ ಸರಕಾರ ನೀಡಿರುವ ಬರ ಪರಿಹಾರದ ಮೊತ್ತದ ಸಮನಾಗಿ ರಾಜ್ಯ ಸರಕಾರ ಕೂಡಾ ಕೊಡಬೇಕು ಎಂಬ ನಿಯಮಾವಳಿ ಇದೆ, ಅಂದರೆ ಕೇಂದ್ರ ಸರಕಾರ ಒಂದು ಹೆಕ್ಟರ್‌ಗೆ ೮೫೦೦ ರೂ ಗರಿಷ್ಟ ೨ ಹೆಕ್ಷೆರ್ ಅಂದರೆ ೧೭೦೦೦ ಹಣ ಕೊಡಬಹುದು, ಅದಕ್ಕೆ ಸರಿಸಮನಾಗಿ ರಾಜ್ಯ ಸರಕಾರ ಕೂಡಾ ೮೫೦೦ ಒಂದು ಹೆಕ್ಟೆರಗೆ ಗರಿಷ್ಟ ೨ ಹೆಕ್ಟೆರ್ ಅಂದರೆ ಅವರು ಕೂಡಾ ೧೭೦೦೦ ಸೇರಿಸಿ ಒಟ್ಟಾರೆಯಾಗಿ ೨ ಹೆಕ್ಟೆರ ಇರುವ ರೈತರಿಗೆ ೩೪೦೦೦ ಪರಿಹಾರ ನೀಡಬೇಕೆಂಬುದು…

Read More

ಚಡಚಣ: ಊರಿಗೊಂದು ಮಠ, ಮಠಕ್ಕೊಬ್ಬ ಉತ್ತಮ ಗುರು ಬೇಕೆನ್ನುವಂತೆ ಇಲ್ಲಿಯ ವಿರಕ್ತಮಠವು ಇತಿಹಾಸದ ಪರಂಪರೆ ಸಾರುವಂತಿದೆ. ಈಗಿನ ವಿರಕ್ತಮಠದ ಷಡಕ್ಷರದೇವರು ಕಳೆದ ಹತ್ತು ವರ್ಷಗಳಿಂದ ಚಡಚಣ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜರುಗುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿದ್ದು ಮಾರ್ಗದರ್ಶಕರಾಗಿದ್ದಾರೆ. ಇವರಿಂದ ಧಾರ್ಮಿಕ ಕಾರ್ಯಕ್ರಮಗಳು ನಿರಂತರ ಸಾಗುತ್ತಿವೆ ಎಂದು ನಿವೃತ್ತ ಪ್ರಾಚಾರ್ಯ ಆರ್. ಪಿ. ಬಗಲಿ ಹೇಳಿದರು.ಪಟ್ಟಣದ ವಿರಕ್ತಮಠದ ಲಿಂ. ಶಿವಾನಂದ ಮಹಾಸ್ವಾಮಿಗಳ 28 ನೇ ಪುಣ್ಯಸ್ಮರಣೆಯ ನಿಮಿತ್ತ ಲೋಕಾಪೂರದ ಮಹಾಂತಸ್ವಾಮಿಗಳು ಹಿರೇಮಠ ಇವರಿಂದ ಪ್ರವಚನ ಕಾರ್ಯಕ್ರಮದ ಉದ್ಘಾಟನೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತ, ಮಠ ಮಾನ್ಯಗಳಿಂದ ಸಮಾಜದ ಉದ್ದಾರ. ಮಠಗಳು ಧಾರ್ಮಿಕ ರಕ್ಷಣೆಯ ಶಿಕ್ಷಣದ ಕೇಂದ್ರಗಳು. ಪುಣ್ಯಾರಾಧನೆ ಅದ್ದೂರಿಯಾಗಿ ಜರುಗಲಿ. ಎಲ್ಲರೂ ಭಾಗಿಯಾಗಿ ಧನ್ಯರಾಗಿರಿ ಎಂದು ಬಗಲಿ ಅವರು ಹೇಳಿದರು.ಸಾನ್ನಿಧ್ಯ ವಹಿಸಿದ್ದ ವಿರಕ್ತಮಠದ ಷಡಕ್ಷರದೇವರು ಮಾತನಾಡಿ, ಪಟ್ಟಣದ ಎಲ್ಲ ಭಕ್ತಾದಿಗಳು ಪ್ರವಚನ ಆಲಿಸಿ. ಸುಂದರ ಬದುಕಿಗೆ ಪ್ರವಚನ ಸಹಾಯಕಾರಿ. ಮಹಾಂತ ಸ್ವಾಮಿಗಳು ಉತ್ತಮ ಪ್ರವಚನ ಪಟುಗಳಾಗಿದ್ದಾರೆ ಎಂದರು.ಜಿ. ಡಿ. ಪಾವಲೆ ಮಾತನಾಡಿ, ಪ್ರತಿವರ್ಷವೂ ಪುಣ್ಯಾರಾಧನೆ…

Read More

ಚಡಚಣ: ಪಟ್ಟಣದ ಶ್ರೀ ಸಂಗಮೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ಪ್ರಾರಂಭೋತ್ಸವ ಹಾಗೂ ದಾಖಲಾತಿ ಅಂದೋಲನ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು.ಶ್ರೀ ಸಂಗಮೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಗುರು ಅಮರೇಶ ಅಳಗುಂಡಗಿ ಅವರು ಮಾತನಾಡಿ, ಎರಡು ತಿಂಗಳಿಗೂ ಹೆಚ್ಚು ಕಾಲ ಬೇಸಿಗೆಯ ಅವಧಿಯಲ್ಲಿ ಮಕ್ಕಳು ಮಾನಸಿಕ ಹಾಗೂ ದೈಹಿಕವಾಗಿ ಶಾಲೆಯಿಂದ ದೂರವಿದ್ದು ಅನ್ಯ ಕೆಲಸ ಕಾರ್ಯದಲ್ಲಿ ತೊಡಗಿ ಶಾಲೆಯತ್ತ ಗಮನ ಹರಿಸದಿರುವುದು ಸಹಜ, ಆದರೆ ಮರಳಿ ಶೈಕ್ಷ ಣಿಕ ವರ್ಷದ ಅವಧಿಗಳು ಪ್ರಾರಂಭವಾಗುತ್ತಿದ್ದು ಮಕ್ಕಳ ಬರುವಿಕೆಗೆ ಸಹಕರಿಸುವುದು ತುಂಬಾ ಅಗತ್ಯವಿದೆ ಎಂದರು.ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಅಧಿಕಾರಿಗಳಾದ ವರ್ಷಾ ಮುತ್ತಿನ ಮಾತನಾಡಿ, ಸಾರ್ವಜನಿಕ ಶಿಕ್ಷ ಣ ಇಲಾಖೆಯು ಈ ವರ್ಷವೂ ಕೂಡ ಜಾಗೃತೆಯಿಂದ ಕಾರ್ಯನಿರ್ವಹಿಸಲು ಮುಂದಾಗಿದೆ. ದಾಖಲಾತಿ ಹೊಂದಿದ ಎಲ್ಲಾ ಮಕ್ಕಳು ನಿತ್ಯ ತಪ್ಪದೆ ಶಾಲೆಗೆ ಆಗಮಿಸಿ ಹಾಜರಾತಿಯನ್ನು ಹೆಚ್ಚಿಸುವುದು ಕೂಡ ಮಹತ್ವದ್ದಾಗಿದೆ. ಆದ್ದರಿಂದ ಪಾಲಕ ಪೋಷಕರು ವಿಶೇಷವಾದ ಕಾಳಜಿವಹಿಸಿ ಮಕ್ಕಳನ್ನು ಶಾಲೆಗೆ ಕಳುಹಿಸಿ ದೇಶದ ಸತ್ಪ್ರಜೆಯನ್ನಾಗಿ ರೂಪಿಸಿ ಎಂದು…

Read More

ಚಿಮ್ಮಡ: ಗ್ರಾಮದ ಸರಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ತಂಡ ಬುಧವಾರದಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.ಇಲ್ಲಿನ ಉರ್ದು ಶಾಲೆಯ ದುಸ್ಥಿತಿಯ ಕುರಿತು ಬುಧವಾರ ’ಉದಯರಶ್ಮಿ’ ಪತ್ರಿಕೆಯಲ್ಲಿ ಪ್ರಕಟವಾದ “ಶಿಥಿಲ ಕೊಠಡಿಯಲ್ಲಿ ಮಕ್ಕಳಿಗೆ ವಿದ್ಯಾರ್ಜನೆ” ಎಂಬ ತಲೆಬರಹದ ವಿಶೇಷ ವರದಿ ಪ್ರಕಟಿಸಿದ ದಿನವೇ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಪಂಚಾಕ್ಷರಿ ನಂದೇಶ್ವರ, ಪ್ರಭಾರಿ ಕ್ಷೇತ್ರ ಸಮನ್ವಯಾಧಿಕಾರಿ ಆರ್.ಎಸ್. ಅವಟಿ, ಉರ್ದುವಿಭಾಗದ ಶಿಕ್ಷಣ ಸಂಯೋಜಕಿ ಶ್ರೀಮತಿ ಸಮೀನಾ ಕೌಸರ, ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಎ.ಐ. ಬಾಗೇವಾಡಿಯವರು ಶಾಲೆಗೆ ಭೇಟಿನೀಡಿ ಪರಿಶೀಲನೆ ನಡೆಸಿ ಶಾಲಾ ಮುಖ್ಯೋಪಾದ್ಯಾಯ ಝೆಡ್.ಎಚ್. ಇಂಡಿಕರ ಅವರಿಂದ ಮಾಹಿತಿ ಪಡೆದರು.ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ. ಬಸನ್ನವರ ಪತ್ರಿಕೆಯೊಂದಿಗೆ ಮಾತನಾಡಿ, ಶಿಥಿಲ ಕೊಠಡಿಗಳನ್ನು ತರಗತಿ ನಡೆಸಲು ಹಾಗೂ ಬಿಸಿಯೂಟದ ಅಡುಗೆ ತಯಾರಿಸಲು ಬಳಸಬಾರದೆಂದು ಮುಖ್ಯ ಗುರುಗಳಿಗೆ ಸೂಚಿಸಲಾಗಿದ್ದು ಕೆರೆ ದಂಡೆಮೇಲೆ ನಿರ್ಮಿಸಲಾಗಿರುವ ಸುಸಜ್ಜಿತ ಕೊಠಡಿಗಳನ್ನು ದುರಸ್ಥಿ ಹಾಗೂ ಸ್ವಚ್ಛ ಗೊಳಿಸಿ ಕಛೇರಿಗಾಗಿ ಬಳಕೆ ಮಾಡಬೇಕೆಂದು ಸೂಚಿಸಲಾಗಿದ್ದು ಆದಷ್ಟು ಬೇಗ ಶಾಲೆಗೆ…

Read More

ದೇವರಹಿಪ್ಪರಗಿ: ಪ್ರತಿಭಾವಂತ ಕ್ರೀಡಾಳುಗಳನ್ನು ಗುರುತಿಸಿ ಬೆಳೆಸುವುದರ ಮೂಲಕ ಕಾಲೇಜು ಸೇರಿದಂತೆ ಪಟ್ಟಣದಲ್ಲಿ ಕ್ರೀಡಾ ಮೌಲ್ಯವನ್ನು ಹೆಚ್ಚಿಸಿದ ಹಿರಿಮೆ ದೈಹಿಕ ಶಿಕ್ಷಣ ನಿರ್ದೇಶಕ ಅಶೋಕಕುಮಾರ ಜಾಧವ ಅವರದ್ದಾಗಿದೆ ಎಂದು ಪ್ರಾಂಶುಪಾಲ ಅಶೋಕ ಹೆಗಡೆ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎ.ಆರ್.ಜಾಧವ ಶುಕ್ರವಾರ ಸೇವಾನಿವೃತ್ತಿ ಹೊಂದಿದ ನಿಮಿತ್ಯ ಬಿಳ್ಕೋಡುವ ಸಮಾರಂಭದ ಅಧ್ಯಕ್ಷತೆ ವಹಿಸಿ, ಸನ್ಮಾನಿಸಿ ಮಾತನಾಡಿದರು. ಶೈಕ್ಷಣಿಕ ಸಂಸ್ಥೆಯ ವಿದ್ಯಾರ್ಥಿಗಳನ್ನು ತಮ್ಮ ಕ್ರೀಡಾ ಚಟುವಟಿಕೆಗಳ ಮೂಲಕ ವಿಶ್ವವಿದ್ಯಾಲಯಕ್ಕೆ ಪರಿಚಯಿಸಿ ಕ್ರೀಡಾ ಸೇವೆ ಸಲ್ಲಿಸಿದ ನಿರ್ದೇಶಕರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು.ಅಧಿಕ್ಷಕ ಜಗನ್ನಾಥ ಸಜ್ಜನ, ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಶಿವಪುತ್ರ ಜಾಲವಾದಿ, ಅತಿಥಿ ಉಪನ್ಯಾಸಕ ಭೀಮನಗೌಡ ಬಿರಾದಾರ ಮಾತನಾಡಿ, ಕ್ರೀಡಾಕ್ಷೇತ್ರಕ್ಕೆ ದೈಹಿಕ ಶಿಕ್ಷಣ ನಿರ್ದೇಶಕರು ನೀಡಿದ ಕೊಡುಗೆಯನ್ನು ಸ್ಮರಿಸಿ ಭಾವುಕರಾದರು.ಸನ್ಮಾನಿತ ಎ.ಆರ್.ಜಾಧವ ಮಾತನಾಡಿ, ಸಾಧನೆ ಮಾಡಲೇಬೇಕು ಎಂಬ ಛಲದಿಂದ ಬಂದು ಇಲ್ಲಿ ಸಾಧನೆ ಮಾಡಿದ್ದೇನೆ. ಇದು ನನಗೆ ಅತ್ಯಂತ ತೃಪ್ತಿನೀಡಿದೆ. ಈವರೆಗಿನ ಕಾಲೇಜಿನ ಎಲ್ಲಾ ಕ್ರೀಡಾ ಚಟುವಟಿಕೆಗಳಿಗೆ…

Read More

ಆಲಮೇಲ: ಪಟ್ಟಣದ ಬಣಜಿಗ ಸಮಾಜದ ಹಿರಿಯರು, ಹಿರಿಯ ಬಂಡಾಯ ಸಾಹಿತಿ ಸಿದ್ದರಾಮ ಉಪ್ಪಿನ ಅವರ ಸಹೋದರರಾದ ಬಸವರಾಜ್ ಉಪ್ಪಿನ(70) ಅವರು ಬುಧವಾರ ನಿಧನರಾದರು.ಮೃತರು ಓರ್ವ ಪುತ್ರ, ಓರ್ವ ಪುತ್ರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರು ಪತ್ರಕರ್ತ ಸುನೀಲ ಉಪ್ಪಿನ ಅವರ ತಂದೆ. ಹಿರಿಯ ಪತ್ರಕರ್ತ ಶಿವಕುಮಾರ ಉಪ್ಪಿನ, ಚಿತ್ರನಟ ಸಂತೋಷ ಉಪ್ಪಿನ ಅವರ ಚಿಕ್ಕಪ್ಪನವರು.ಸಂತಾಪ: ಸಿಂದಗಿ ಶಾಸಕ ಅಶೋಕ ಮನಗೂಳಿ, ಮಾಜಿ ಶಾಸಕ ರಮೇಶ ಭೂಸನೂರ, ಮಾಜಿ ಶಾಸಕ ಅಶೋಕ ಶಾಬಾದಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಇಂದುಶೇಖರ ಮಣೂರ ಹಾಗೂ ಆಲಮೇಲ ಪತ್ರಿಕಾ ಬಳಗದವರು ಸಂತಾಪ ವ್ಯಕ್ತಪಡಿಸಿದ್ದಾರೆ.

Read More

ಬಬಲೇಶ್ವರ: ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಿಸಿ ಮಕ್ಕಳಿಗೆ ಸೀಗುವ ಸರ್ಕಾರಿ ಸೌಲಭ್ಯಗಳನ್ನು ಪಡೆಯಬೇಕು ಎಂದು ವಿಜಯಪುರ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ಹೇಳಿದರು.ಬಬಲೇಶ್ವರ ಪಟ್ಟಣದ ಸರ್ಕಾರಿ ಎಂಪಿಎಸ್ ಶಾಲೆಯಲ್ಲಿ ಶುಕ್ರವಾರ ನಡೆದ ಶಾಲಾ ಪ್ರಾರಂಭೋತ್ಸವನ್ನು ಡೋಲು ಬಡೆಯುವ ಮೂಲಕ ಚಾಲನೆ ನೀಡಿ ಮಾತನಾಡಿದ‌ ಅವರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ದೇಶ ಅಭಿವೃದ್ಧಿ ಹೊಂದಲಿ, ಮಕ್ಕಳ‌ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.ಸಾಂಕೇತಿಕವಾಗಿ ಎಲ್ಲ ಮಕ್ಕಳಿಗೆ ಫಲ ಪುಷ್ಪ, ಪಠ್ಯ ಪುಸ್ತಕ, ಸಮವಸ್ತ್ರಗಳನ್ನು ನೀಡಿದರು.ಈ ಸಂದರ್ಭದಲ್ಲಿ ‌ಗ್ರಾಮೀಣವಲಯದ ಬಿಇಓ ಪ್ರಮೋಧಿನಿ ಬಳೋಲಮಟ್ಟಿ, ಎಸ್ಡಿಎಂಸಿ ಅಧ್ಯಕ್ಷ ಶ್ರೀಶೈಲ ಮಂಗಳವೆಡೆ, ಮುಖ್ಯೋಪಾಧ್ಯಾಯ ಎಚ್.ವಿ.ಮಾಲಗಾರ, ಅಶೋಕ ಬೂದಿಹಾಳ, ಇಸಿಓ ಪ್ರಭು ಬಿರಾದಾರ, ಬಿಆರ್ಪಿ ಕುಲಕರ್ಣಿ, ವಿಜಯಲಕ್ಷ್ಮಿ ಪಾಟೀಲ ಇದ್ದರು.ಸಿಹಿ ತಿನ್ನಿಸಿ ಮಕ್ಕಳಿಗೆ ಸ್ವಾಗತ: ತಿಕೋಟಾ ಪಟ್ಟಣದ ಸರ್ಕಾರಿ ಕನ್ನಡ ಗಂಡು ಹಾಗೂ ಹೆಣ್ಣು ಮಕ್ಕಳ ಶಾಲೆಯಲ್ಲಿ ಮಕ್ಕಳಿಗೆ ಸಿಹಿ ತಿನ್ನಿಸುವ ಮೂಲಕ ಶಿಕ್ಷಣ ಸಂಯೋಜಕ ರವೀಂದ್ರ ಚಿಕ್ಕಮಠ ಹಾಗೂ ಜಿ.ಟಿ.ಕಾಗವಾಡ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿ…

Read More

೨೦೨೪-೨೫ ನೇ ಸಾಲಿನ ದಾಖಲಾತಿ ಆಂದೋಲನ ಹಾಗೂ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ವಿಜಯಪುರ: ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿದರೆ ನಮ್ಮ ಬದುಕು ಅಭಿವೃದ್ಧಿಯಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಹೇಳಿದರು.ಜಿಲ್ಲಾ ಪಂಚಾಯತ ವಿಜಯಪುರ, ಶಾಲಾ ಶಿಕ್ಷಣ ಇಲಾಖೆ ವಿಜಯಪುರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ನಗರ ವಲಯ ವಿಜಯಪುರ ಹಾಗೂ ಕೆ. ಪಿ. ಎಸ್. ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು(ಪ್ರೌಢ ಶಾಲಾ ವಿಭಾಗ) ಗಾಂಧಿ ವೃತ್ತ ವಿಜಯಪುರ ಇವರ ಸಹಯೋಗದಲ್ಲಿ ಗಾಂಧಿ ಚೌಕ್‌ನ ಕೆ. ಪಿ. ಎಸ್. ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು(ಪ್ರೌಢ ಶಾಲಾ ವಿಭಾಗ)ನಲ್ಲಿ ಶುಕ್ರವಾರ ನಡೆದ ೨೦೨೪-೨೫ ನೇ ಸಾಲಿನ ದಾಖಲಾತಿ ಆಂಧೋಲನ ಹಾಗೂ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಎಲ್ಲ ವಿದ್ಯಾರ್ಥಿಗಳು ಪ್ರತಿ ವಿಷಯದಲ್ಲಿಯೂ ಆಸಕ್ತಿ ವಹಿಸಿ ಅಭ್ಯಾಸ ಮಾಡಬೇಕು. ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಉಚಿತವಾಗಿ ಪುಸ್ತಕಗಳು, ಸಮವಸ್ತ್ರಗಳನ್ನು ವಿತರಿಸಲಾಗುತ್ತದೆ. ಅದನ್ನು ಉಪಯೋಗಿಸಿಕೊಂಡು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು.…

Read More