ಚಡಚಣ: ಜಗದ ಹೊಟ್ಟೆಗೆ ಹಿಟ್ಟು ನೀಡಿದವ ರೈತನಾದರೆ, ಮಾನವನ ಮಾನ ರಕ್ಷಣೆಗೆ ಬಟ್ಟೆ ನೀಡಿದವ ನೇಕಾರ. ನೇಕಾರರ ಬದುಕು ಹಸನಾಗಲೂ ಸರಕಾರ ಆರ್ಥಿಕ ಪ್ರೋತ್ಸಾಹ ಅಗತ್ಯ ಎಂದು ಸಮಾಜದ ಮುಖಂಡ ಮಹಾದೇವ ಯಂಕಂಚಿ ಹೇಳಿದರು.
ಪಟ್ಟಣದ ಸರಕಾರಿ ಆಸ್ಪತ್ರೆಯ ಮುಂಭಾಗದಲ್ಲಿರುವ ದೇವರ ದಾಸಿಮಯ್ಯ ವೃತ್ತದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಕೈ ಮಗ್ಗ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಕೈಮಗ್ಗ ನೇಕಾರಿಕೆಯೇ ನಶಿಸಿ ಹೋಗುತ್ತಿದ್ದು ಅದಕ್ಕೆ ಸರಕಾರ ಹೆಚ್ಚಿನ ಪ್ರೋತ್ಸಾಹ ನೀಡಿ ಕೈಮಗ್ಗ ನೇಕಾರಿಕೆಯನ್ನು ಉಳಿಸಿ ಬೆಳೆಸಬೇಕಿದೆ ಎಂದರು.
ನಿವೃತ್ತ ಶಿಕ್ಷಕ ಮಾಚನ್ನ ಮೇತ್ರಿ ಮಾತನಾಡಿ, ಕೈಮಗ್ಗ ನೇಕಾರಿಕೆ ಇತ್ತೀಚಿನ ದಿನಗಳಲ್ಲಿ ಕ್ಷೀಣಿಸುತ್ತಿದ್ದು, ಮೂಲ ನೇಕಾರರಿಗೇ ಸರಕಾರಿ ಸೌಲಭ್ಯಗಳು ದೊರೆಯದಂತಾಗಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಹಿಟ್ನಳ್ಳಿ, ಬಸವರಾಜ ಭಂಡರಕವಟೆ, ರಾಜು ಕೋಟಿ, ದಯಾನಂದ ಕಟಗೇರಿ, ಚಿದಾನಂದ ಮಾಲಾಪುರ, ಗುರು ಅರಳಿಕಟ್ಟಿ, ಮಹೇಶ ಕಟಗೇರಿ, ರಾಜಶೇಖರ ಸದ್ದಲಗಿ, ಸಂತೋಷ ದಟ್ಟಿ, ಸೇರಿದಂತೆ ಸಮುದಾಯದ ಮುಖಂಡರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

