ಯಾದಗಿರಿ ಶಾಸಕ ಚನ್ನಾರಡ್ಡಿ ಹಾಗೂ ಆತನ ಮಗನನ್ನು ಕೂಡಲೇ ಬಂಧಿಸಲು ಆಗ್ರಹ
ವಿಜಯಪುರ: ನಗರದಲ್ಲಿ ದಲಿತ ಸಂಘಟನೆಗಳ ಒಕ್ಕೂಟ ವಿಜಯಪುರ ಸಂಚಾಲಕ ಪರಶುರಾಮ ಲಂಬು ಅವರ ನೇತೃತ್ವದಲ್ಲಿ ಯಾದಗಿರಿ ನಗರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗಲೇ ಅನುಮಾನಾಸ್ಪದ ಸಾವಿಗೀಡಾದ ಪಿಎಸ್ ಆಯ್ ಪರಶುರಾಮ ಚಲವಾದಿ ಇವರ ಸಾವು ಖಂಡಿಸಿ ಬುಧವಾರ ಡಾ ಬಿ ಆರ್ ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತದ ಮೂಲಕ ರ್ಯಾಲಿ ಹೊರಟು ಜಿಲ್ಲಾಧಿಕಾರಿಕಾರಿಗಳ ಮುಖಾಂತರ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಪರಶುರಾಮ ಸಾವಿನ ತನಿಖೆಯನ್ನಿ CID ಯಿಂದ CBI ಗೆ ವಹಿಸಬೇಕು ಹಾಗೂ ಯಾದಗಿರಿಯ ಶಾಸಕ ಚನ್ನಾರಡ್ಡಿ ಹಾಗೂ ಆತನ ಮಗ ಹಂಪನಗೌಡ ಇವರನ್ನುಕೂಡಲೇ ಬಂದಿಸಬೇಕು ಎಂದು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಪರಶುರಾಮ ಲಂಬು, ರಮೇಶ ಕೌಲಗಿ, ಮತೀನ ದೆವಧರ, ಪರಶುರಾಮ ಚಲವಾದಿ, ಅಜಯ ಬೋರಗಿ, ವಿರೇಶ ವಾಲಿಕಾರ, ಮಾರುತಿ ಬುದಿಹಾಳ, ಶಾಸ್ತ್ರಿ ಹೊಸಮನಿ, ಹಣಮಂತ ನಾಟಿಕಾರ, ಚನ್ನು ಕಟ್ಟಿಮನಿ, ಯಮನಪ್ಪ ಸಿದರಡ್ಡಿ ಹಾಗೂ ಇತರ ದಲಿತ ಮುಖಂಡರು ಭಾಗವಹಿಸಿದ್ದರು.

