Author: editor.udayarashmi@gmail.com

ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಿಂದ ಪ್ರಯಾಣಿಕರ ಅನುಕೂಲಕ್ಕಾಗಿರುವ ಸುಸಜ್ಜಿತವಾದ ಬಸ್ ನಿಲ್ದಾಣಗಳಲ್ಲಿ ಸಾರ್ವಜನಿಕರು-ಪ್ರಯಾಣಿಕರು ಎಲ್ಲೆಂದರಲ್ಲಿ ಕಸ ಒಗೆಯುವುದು, ಮೂತ್ರ ವಿಸರ್ಜನೆ, ಉಗುಳುವುದು ಮಾಡದೇ ನಿಲ್ದಾಣಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.ಸಾರ್ವಜನಿಕರು, ಪ್ರಯಾಣಿಕರು ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಒಂದು ವೇಳೆ ಬಸ್ ನಿಲ್ದಾಣಗಳಲ್ಲಿ ಎಲ್ಲೆಂದರಲ್ಲಿ ಉಗುಳುವುದು, ಮೂತ್ರ ವಿಸರ್ಜನೆ, ಕಸ ಚೆಲ್ಲುವುದು ಕಂಡು ಬಂದಲ್ಲಿ ಅಂತಹ ಪ್ರಯಾಣಿಕರ ಮೇಲೆ ದಂಡ ವಿಧಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಕರ್ನಾಟಕದ ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಆ.೨೨ರಂದು ಬೆಳಿಗ್ಗೆ ೧೦ ರಿಮದ ೧-೩೦ರವರೆಗೆ ಹಾಗೂ ಮಧ್ಯಾಹ್ನ ೨-೩೦ರಿಂದ ೫ ಗಂಟೆಯವರೆಗೆ ನಗರದ ಸ್ಟೇಶನ್ ರಸ್ತೆಯ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ ವಿಚಾರಣೆ ನಡೆಸಲಿದ್ದು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ತಮ್ಮ ಸಮಸ್ಯೆ-ಅಹವಾಲುಗಳಿಗೆ ಪರಿಹಾರ ಪಡೆದುಕೊಳ್ಳುವಂತೆ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಕೋರಿದ್ದಾರೆ.ಸರ್ಕಾರಿ ಅಧಿಕಾರಿ-ನೌಕರರು ಕಾನೂನು ರಿತ್ಯ ಕಾರ್ಯ ಮಾಡಲು ವಿಳಂಬವಾಗುತ್ತಿದ್ದಲ್ಲಿ, ಅಥವಾ ಅಧಿಕಾರಿ-ನೌಕರರು ನ್ಯಾಯಯುತವಾಗಿ ಮಾಡಿಕೊಡಬೇಕಾದ ಕೆಲಸಗಳಲ್ಲಿ ವೃಥಾ ತೊಂದರೆ ಕೊಡುವುದು ಅಥವಾ ಇನ್ನಾವುದೇ ತರಹದ ದುರಾಡಳಿತದಲ್ಲಿ ತೊಡಗಿದ್ದಲ್ಲಿ ತೊಂದರೆಗೊಳಗಾದ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಲಿಖಿತ ರೂಪದಲ್ಲಿ ದಾಖಲೆ, ಸಾಕ್ಷಾಧಾರಗಳೊಂದಿಗೆ ಸಲ್ಲಿಸಿ ಬಗೆಹರಿಸಿಕೊಳ್ಳಬಹುದಾಗಿದೆ.ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ ತನಿಖೆ-ವಿಚಾರಣೆಗೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರುದಾರರು ಹಾಗೂ ಎದುರುದಾರರ ಸಮ್ಮುಖದಲ್ಲಿ ಕಾನೂನು ರಿತ್ಯ ಆ.೨೩ರಂದು ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೧-೩೦ರವರೆಗೆ ಮತ್ತು ಮಧ್ಯಾಹ್ನ ೨-೩೦ರಿಂದ ೫ ಗಂಟೆಯವರೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಿಚಾರಣೆ ನಡೆಸಲಿದ್ದಾರೆ.…

Read More

ವಿಜಯಪುರ: ಜಿಲ್ಲಾ ಉದ್ಯೊಗ ವಿನಿಮಯ ಕೇಂದ್ರ ವಿಜಯಪುರ ಹಾಗೂ ಮುದ್ದೇಬಿಹಾಳದ ಎಂಜಿವಿಸಿ ಪದವಿ ಕಾಲೇಜ್ ಮತ್ತು ಧಾರವಾಡದ ಲಾಜಿಕ್ ಕಂಪ್ಯೂಟರ್ ಸೆಂಟರ್ ಇವರ ಸಹಯೋಗದಲ್ಲಿ ಮುದ್ದೇಬಿಹಾಳದ ಎಂಜಿವಿಸಿ ಪದವಿ ಕಾಲೇಜ್ ಆವರಣದಲ್ಲಿ ಇದೇ ಆ.೧೪ರಂದು ಬೆಳಿಗ್ಗೆ ೧೦ ಗಂಟೆಗೆ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ.ಖಾಸಗಿ ಕಂಪನಿಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ನೇಮಕಾತಿಗೆ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಎಸ್.ಎಸ್.ಎಲ್.ಸಿ., ಪಿಯುಸಿ, ಐಟಿಐ, ಡಿಪ್ಲೋಮಾ, ಬಿಇಡಿ, ಡಿಇಡಿ ಹಾಗೂ ಯಾವುದೇ ಪದವಿ ಪಾಸಾದಂತಹ ೩೫ ವರ್ಷದೊಳಗಿನ ಅರ್ಹ ಆಸಕ್ತರು ತಮ್ಮ ಶಾಲಾ ದಾಖಲಾತಿಗಳು, ಬಯೋಡಾಟಾ, ಆಧಾರ್ ಕಾರ್ಡ ೨ಸೆಟ್ ಝರಾಕ್ಸನೊಂದಿಗೆ ಭಾಗವಹಿಸಿಬಹುದಾಗಿದೆ.ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ : ೭೮೨೯೫೨೯೦೪೩, ೯೭೪೧೪೨೮೨೫೫ ಸಂಖ್ಯೆಗೆ ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ವಿಕಲಚೇತನರ ಮತ್ತು ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ವತಿಯಿಂದ ವಿವಿಧ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ ನಾಗರಿಕರು ಹಾಗೂ ಸ್ವಯಂ ಸೇವಾ ಸಂಸ್ಥೆಗಳಿಗೆ ನೀಡುವ ರಾಜ್ಯ ಪ್ರಶಸ್ತಿಗೆ ಅರ್ಹ ನಾಗರಿಕರಿಂದ ಅರ್ಜಿ ಆಹ್ವಾನಿಸಲಾಗಿದೆ.ಅಕ್ಟೋಬರ್ ೦೧ ರಂದು ಆಚರಿಸುವ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಪ್ರಯುಕ್ತ ಪ್ರಶಸ್ತಿ ನೀಡಲಾಗುತ್ತದೆ. ಶಿಕ್ಷಣ, ಸಾಹಿತ್ಯ, ಕಲೆ, ಕಾನೂನು, ಪ್ರತಿಭೆ, ಕ್ರೀಡೆ ಮತ್ತು ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಿರಿಯ ನಾಗರಿಕರು ಹಾಗೂ ಸ್ವಯಂ ಸೇವಾ ಸಂಸ್ಥೆಯವರು ದ್ವಿ-ಪ್ರತಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಆಗಸ್ಟ್ ೩೧ ಕೊನೆಯ ದಿನವಾಗಿದೆ.ಈ ಕುರಿತಂತೆ ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಯನ್ನು ವೆಬ್ಸೈಟ್ www.dwdsc.karnataka.gov.in ಅಥವಾ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಚೇರಿ, ಹೊಸ ಜಿಲ್ಲಾ ಪಂಚಾಯತ ಆವರಣ,ಕನಕದಾಸ ಬಡಾವಣೆ ವಿಜಯಪುರ ಹಾಗೂ ದೂರವಾಣಿ ಸಂಖ್ಯೆ ೦೮೩೫೨೭೯೬೦೬೦ ಸಂಪರ್ಕಿಸುವಂತೆ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಜಿಲ್ಲೆಯ ೧೪ ಪರೀಕ್ಷಾ ಕೇಂದ್ರಗಳಲ್ಲಿ ಆ.೧೨ ರಿಂದ ೧೭ ರವರೆಗೆ ಅಖಿಲ ಭಾರತ ವೃತ್ತಿ ಪರೀಕ್ಷೆಗಳು ಪ್ರಾಯೋಗಿಕ ಹಾಗೂ ಆ.೨೨ ರಿಂದ ಸೆ.೯ರವರೆಗೆ ಜರುಗುವ ಸಿ.ಬಿ.ಟಿ ವಿಷಯಗಳ ಪರೀಕ್ಷೆಗಳ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪರೀಕ್ಷಾ ಕೇಂದ್ರದ ಸುತ್ತಲಿನ ೨೦೦ ಮೀ.ವ್ಯಾಪ್ತಿಯ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಆದೇಶ ಹೊರಡಿಸಿದ್ದಾರೆ.ಪರೀಕ್ಷೆ ನಡೆಯುವ ದಿನಗಳಂದು ಬೆಳಿಗ್ಗೆ ೮ ಗಂಟೆಯಿಂದ ಪರೀಕ್ಷೆ ಮುಗಿಯುವರೆಗೆ ನಿಷೇಧಿತ ಪ್ರದೇಶವೆಂದು ಘೋಷಿಸಿದ್ದು, ಪರೀಕ್ಷಾ ಕೇಂದ್ರಗಳ ಸಮೀಪದಲ್ಲಿರುವ ಝರಾಕ್ಸ್ ಅಂಗಡಿಗಳು, ಕಂಪ್ಯೂಟರ್ ಸೆಂಟರ್‌ಗಳು, ಸೈಬರ್ ಕೆಫೆಗಳು, ಕೋಚಿಂಗ್ ಕೇಂದ್ರಗಳನ್ನು ಪರೀಕ್ಷೆ ನಡೆಯುವ ಅವಧಿಯಲ್ಲಿ ತೆರೆಯದಂತೆ ಆದೇಶಿಸಲಾಗಿದೆ.

Read More

ದೇವರಹಿಪ್ಪರಗಿ: ಪ್ರೌಢಶಾಲಾ ಹಂತದ ಮಕ್ಕಳಿಗೆ ಕೌಶಲ್ಯ ಆಧಾರಿತ ಶಿಕ್ಷಣ ನೀಡುವುದು ಅತ್ಯಂತ ಅಗತ್ಯವಾಗಿದೆ ಎಂದು ಸರ್ಕಾರಿ ಉರ್ದುಶಾಲೆಯ ಸಿಆರ್‌ಪಿ ಎಫ್.ಎನ್.ನದಾಫ್ ಹೇಳಿದರು.ಪಟ್ಟಣದ ಜೆಎಮ್‌ಜೆ ಪ್ರೌಢಶಾಲೆಯಲ್ಲಿ ಗುರುವಾರ ಜರುಗಿದ ವಿಜ್ಞಾನ ಶಿಕ್ಷಕರ ವೃತ್ತಿ ಜೀವನ ಮಾರ್ಗದರ್ಶಿ ತರಬೇತಿಗೆ ಚಾಲನೆ ನೀಡಿ ಮಾತನಾಡಿದರು. ಗ್ರಾಮೀಣ ಭಾಗದ ಮಕ್ಕಳ ಕಲಿಕಾ ಮಟ್ಟವನ್ನು ಹೆಚ್ಚಿಸುವಲ್ಲಿ ಉಜ್ವಲ ಸಂಸ್ಥೆ ಗಮನಾರ್ಹ ಕಾರ್ಯ ಮಾಡುತ್ತಿದೆ. ಅಂಗನವಾಡಿಯಿಂದ ಕಾಲೇಜು ಶಿಕ್ಷಣದವರೆಗೆ ಅಗತ್ಯವಾದ ತರಬೇತಿಯನ್ನು ಶಿಕ್ಷಕರಿಗೆ ನೀಡಿ ಅವರ ಮೂಲಕ ಮಕ್ಕಳಿಗೆ ವಿಶೇಷವಾಗಿ ಪ್ರೌಢಶಾಲಾ ಹಂತದ ಮಕ್ಕಳಿಗೆ ವೃತ್ತಿ ಜೀವನದ ಮಾರ್ಗದರ್ಶಿ ತರಬೇತಿಯನ್ನು ಕೊಟ್ಟು ಪ್ರಮುಖ ಪಾತ್ರ ವಹಿಸುತ್ತಿದೆ. ಅವರ ಈ ಸೇವಾ ಕಾರ್ಯಕ್ಕೆ ನಮ್ಮೇಲ್ಲರ ಸಹಕಾರ ಇರಲಿ ಎಂದರು.ಉಜ್ವಲ ಸಂಸ್ಥೆಯ ನಿರ್ದೇಶಕಿ ಸುನಂದಾ ತೋಳಬಂದಿ ಮಾತನಾಡಿ, ಇಂದಿನ ಮಕ್ಕಳೇ ಇಂದಿನ ಪ್ರಜೆಗಳು. ಇಂದು ಗ್ರಾಮೀಣ ಭಾಗದಲ್ಲಿ ಮಕ್ಕಳು, ಮಹಿಳೆಯರು ಅನುಭವಿಸುತ್ತಿರುವ ಸಮಸ್ಯೆಗಳು ಹಾಗೂ ಅದಕ್ಕಿರುವ ಕಾನೂನಿನ ಸಲಹೆಗಳ ಕುರಿತು ವಿವರಿಸಿ, ಮಕ್ಕಳ ಮತ್ತು ಮಹಿಳೆಯರ ರಕ್ಷಣೆ, ಇದು ನಮ್ಮೆಲ್ಲರ ಹೊಣೆ. ಬಾಲ್ಯವಿವಾಹ,…

Read More

ದೇವರಹಿಪ್ಪರಗಿ: ತೊಗರಿಬೆಳೆಯ ಹೆಚ್ಚಿನ ಇಳುವರಿಗೆ ಕುಡಿ ಚಿವುಟುವುದು ಅತ್ಯವಶ್ಯಕವಾಗಿದೆ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸೋಮನಗೌಡ ಬಿರಾದಾರ ಹೇಳಿದರು.ಪಟ್ಟಣದ ರೈತ ನಬಿಲಾಲ ಚಾಂದಕವಟಗಿ ಸೇರಿದಂತೆ ಹಲವು ರೈತರ ಜಮೀನುಗಳಿಗೆ ಮಂಗಳವಾರ ಭೇಟಿ ನೀಡಿ ತೊಗರಿಯಲ್ಲಿ ಕುಡಿ ಚೂಟುವ ಪ್ರಾತ್ಯಕ್ಷಿಕೆ ಕೈಗೊಂಡು ಮಾತನಾಡಿದರು. ನಮ್ಮ ತಾಲ್ಲೂಕು ವ್ಯಾಪ್ತಿಯಲ್ಲಿ ಈ ಬಾರಿ ತೊಗರಿ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗಿದೆ, ಹಾಗೂ ಬಹುತೇಕ ರೈತರು ನೆಟೆ ನಿರೋಧಕ ಹಾಗೂ ದೀರ್ಘಾವಧಿ ತಳಿಗಳನ್ನು ಬಿತ್ತನೆಗೆ ಬಳಸಿದ್ದಾರೆ. ಆದ್ದರಿಂದ ತೊಗರಿ ಬೆಳೆ ೫೦ ರಿಂದ ೬೦ ದಿನವಿದ್ದಾಗ ಕುಡಿ ಚುಟುವ ತಾಂತ್ರಿಕತೆ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಕವಲೊಡೆಯುತ್ತವೆ. ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಹೂವು, ಕಾಯಿ ಬಿಡುವಂತಾಗಿ ಇಳುವರಿ ಗಣನೀಯವಾಗಿ ಶೇ ೧೫ ರಿಂದ ೨೦ ರವೆರೆಗೆ ಹೆಚ್ಚಳವಾಗಲು ಸಾಧ್ಯವಾಗುತ್ತದೆ. ಈ ತಾಂತ್ರಿಕತೆಗೆ ಅನುಕೂಲವಾಗುವಂತೆ ಮಾರುಕಟ್ಟೆಯಲ್ಲಿ ಬ್ಯಾಟರಿ ಚಾಲಿತ ಕುಡಿ ಚೂಟುವ ಯಂತ್ರಗಳು ಲಭ್ಯವಿದ್ದು ಇವುಗಳನ್ನು ಬಳಸಿಕೊಂಡು ಕುಡಿ ಚೂಟಬಹುದು ಎಂದು ತಿಳಿಸಿದರು.ಕೃಷಿ ಅಧಿಕಾರಿ…

Read More

ವಿಜಯಪುರ: ದೇಶಕ್ಕೆ ಮಾರಕವಾದ ವಕ್ಫ್ ಕಾಯ್ದೆ ತಿದ್ದುಪಡಿ ಮಸೂದೆ ಮಂಡನೆಗೆ ಆಕ್ಷೇಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಅಂಕಿ-ಅಂಶಗಳು ಮತ್ತು ವಿವರಣೆಯೊಂದಿಗೆ ಎಕ್ಸ್ ನಲ್ಲಿ ಟ್ವಿಟ್ ಮೂಲಕ ಟಾಂಗ್ ನೀಡಿದ್ದಾರೆ.ಕಾನೂನು ತಜ್ಞರು ಹಾಗೂ ಸಂವಿಧಾನ ತಜ್ಞರಾದ ಶ್ರೀಯುತ ಸಿದ್ದರಾಮಯ್ಯನವರೇ ನಿಮಗೆ ಗೊತ್ತೇ ?ವಕ್ಫ್ ಬೋರ್ಡ್ ಬಳಿ ಸುಮಾರು 8.66 ಲಕ್ಷ ಆಸ್ತಿಗಳಿವೆ, 8.02 ಲಕ್ಷ ಎಕರೆ ಒಡೆತನದ ಆಸ್ತಿ ವಕ್ಫ್ ಬಳಿ ಇದೆ (ಅಂದರೆ 30 ಚಂಡೀಗಢ ದಷ್ಟು)ವಕ್ಫ್ ಟ್ರಿಬ್ಯೂನಲ್ ನಲ್ಲಿ ನೀಡಿದ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯದಲ್ಲೂ ಪ್ರಶ್ನಿಸುವಂತಿಲ್ಲ. ಮುಸಲ್ಮಾನ ಬಹುಸಂಖ್ಯಾತ ರಾಷ್ಟ್ರಗಳಲ್ಲೇ ವಕ್ಫ್ ಎಂಬ ಪರಿಕಲ್ಪನೆ ಇಲ್ಲ.ರಕ್ಷಣಾ ಇಲಾಖೆ ಹಾಗೂ ಭಾರತೀಯ ರೈಲ್ವೆ ಬಿಟ್ಟರೆ ಭಾರತದಲ್ಲಿ ಅತಿ ಹೆಚ್ಚು ಭೂಮಿಯ ಒಡೆತನ ಇರುವುದು ವಕ್ಫ್ ನಲ್ಲಿ. ಈ ಕಾಯ್ದೆಯಿಂದ ಅತಿ ಹೆಚ್ಚು ಅನ್ಯಾಯಕ್ಕೆ ಒಳಪಟ್ಟಿರುವುದು ಹಿಂದೂಗಳು.ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯ, ತಿರುಚೆಂಥುರೈ ಹಳ್ಳಿಯಲ್ಲಿರುವ 1,500 ವರ್ಷಗಳ ಇತಿಹಾಸವಿರುವ ಸುಂದರೇಶ್ವರ ಸ್ವಾಮಿ ದೇವಸ್ಥಾನದ ಮೇಲೂ ವಕ್ಫ್…

Read More

ಕೊಲ್ಹಾರ: ಚುನಾಯಿತ ಪ್ರತಿನಿಧಿಗಳಾಗಿ ಎರಡೂವರೆ ವರ್ಷದ ನಂತರ ಬಹುನಿರೀಕ್ಷಿತ ಕೊಲ್ಹಾರ ಪಟ್ಟಣ ಪಂಚಾಯತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ, ಚುನಾವಣೆ ಆಯೋಗ ಮೀಸಲಾತಿಯನ್ನು ಪ್ರಕಟಿಸಿ ಚುನಾವಣೆ ನಡೆಸುವ ಸಿದ್ಧತೆಯಲ್ಲಿ ತೊಡಗಿದೆ.ಪಟ್ಟಣ ಪಂಚಾಯತಿಯಲ್ಲಿ ಒಟ್ಟು ೧೭ ಸ್ಥಾನಗಳಿದ್ದು ೧೧ಜನ ಸದಸ್ಯರು ಕಾಂಗ್ರೆಸ್ ಪಕ್ಷದ ಬಿ-ಫಾರ್ಮ್ ಪಡೆದ ಚುನಾಯಿತ ಸದಸ್ಯರಿದ್ದು, ಇಬ್ಬರು ಎಐಎಮ್‌ಐಎಮ್ ಸದಸ್ಯರು, ಒಬ್ಬ ಪಕ್ಷೇತರ ಅಭ್ಯರ್ಥಿ ಆಯ್ಕೆಯಾಗಿರುತ್ತಾರೆ. ಇವರೆಲ್ಲರೂ ಈಗಾಗಲೇ ಸಚಿವ, ಕ್ಷೇತ್ರದ ಶಾಸಕ ಶಿವಾನಂದ ಪಾಟೀಲರಿಗೆ ಬೆಂಬಲ ಸೂಚಿಸಿರುವುದನ್ನು ನೋಡಿದರೆ ಕಾಂಗ್ರೆಸ್ ಪಕ್ಷವು ಅಧಿಕಾರ ಚುಕ್ಕಾಣಿ ಹಿಡಿಯುವುದರಲ್ಲಿ ಯಾವುದೇ ಅನುಮಾನವಿಲ್ಲ, ಮೂವರು ಸದಸ್ಯರನ್ನು ಹೊಂದಿದ ಬಿಜೆಪಿ ಪಕ್ಷವು ಅದರ ನಾಯಕರು ಮನಸ್ಸು ಮಾಡಿದರೆ ಏನು ಬೇಕಾದರೂ ಆಗುವ ಸಾಧ್ಯತೆ ಅಧಿಕವಾಗಿದೆ.ಮೀಸಲಾತಿ ಪಟ್ಟಿ ಪ್ರಕಟಗೊಳ್ಳಲು ಅಪಾರ ಸಮಯ ಕಳೆದು ಹೋಗಿರುವುದರಿಂದ ಅಧಿಕಾರದ ಅವಧಿ ಎಷ್ಟು ವರ್ಷದಾಗಿರುವದು ಎನ್ನುವದು ಚುನಾಯಿತ ಸದಸ್ಯರಲ್ಲಿ ಆತಂಕ ಮೂಡಿಸಿದರೆ, ಕಾನೂನು ಯಾವ ರೀತಿ ಹೇಳುತ್ತದೆ ಎನ್ನುವುದು ಕಾನೂನು ಅನುಭವದ ಪರಿಪಾಲಕರನ್ನು ವಿಚಾರಿಸಿದಾಗ ತಿಳಿಯುತ್ತದೆ.ಕ್ಷೇತ್ರದ ಶಾಸಕರು ಸಚಿವರು ಆಗಿರುವ…

Read More

ಕೊಲ್ಹಾರ: ಅವಳಿ ಜಿಲ್ಲೆಯ ಜನರ ಋಣ ವಿಶೇಷವಾಗಿ ಕೊಲ್ಹಾರ ಜನತೆಯ ಪ್ರೀತಿ, ವಿಶ್ವಾಸ ನನ್ನ ಮೇಲೆ ಅಪಾರವಾಗಿದ್ದು ನನ್ನ ಜೀವಿತ ಅವಧಿಯ ಕೊನೆಯವರೆಗೂ ತೀರಿಸಲಾರದಷ್ಟು ಹೊರೆ ಎನಿಸುತ್ತಿದೆ ಎಂದು ಮಾಜಿ ಸಚಿವ ಎಸ್ ಆರ್ ಪಾಟೀಲ ಹೇಳಿದರು.ಪಟ್ಟಣದ ಡಾ, ಎಪಿಜೆ ಅಬ್ದುಲ್ ಕಲಾಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಉಸ್ಮಾನಸಾಬ್ ಪಟೇಲ್ ಏರ್ಪಡಿಸಿದ ಸನ್ಮಾನವನ್ನು ಸ್ವೀಕರಿಸಿ ಮಾತನಾಡುತ್ತಿದ್ದರು. ಬಾಡಗಂಡಿಯಲ್ಲಿ ಪ್ರಾರಂಭಿಸಿರುವ ಎಸ್.ಆರ್.ಪಾಟೀಲ್ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ, ಹಾಗೂ ಸಂಶೋಧನ ಕೇಂದ್ರವು ಜನೆತೆಗೆ ಉತ್ತಮ ಆರೋಗ್ಯವನ್ನು ಒದಗಿಸುವ, ಪ್ರಾಣವನ್ನು ಕಾಪಾಡುವ ಸೇವಾ ಕೇಂದ್ರವಾಗಲಿ ಎನ್ನುವ ಸದುದ್ದೇಶದಿಂದ ಅವಳಿ ಜಿಲ್ಲೆಯ ಮದ್ಯವರ್ತಿ ಸ್ಥಳವಾದ ನನ್ನ ಹುಟ್ಟೂರು ಬಾಡಗಂಡಿಯಲ್ಲಿ ಪ್ರಾರಂಭಿಸಲಾಗಿದ್ದು, ಇದರ ಸದುಪಯೋಗವನ್ನು ನಾಡಿನ ಜನತೆ ಪಡೆದುಕೊಳ್ಳಬೇಕೆಂದು ಹೇಳಿದರು.ಹೃದಯ ಸಂಬಂದಿ, ರಕ್ತ ಸುದ್ದಿಕರಣ (ಡಯಲಿಸಿಸ್), ಮೆದುಳು ರೋಗ ನಿಯಂತ್ರಣ ಮತ್ತು ಕ್ಯಾನ್ಸರ್ ತರಹದ ನೂರಾರು ಮಾರಕ ರೋಗಗಳನ್ನು ನಿಯಂತ್ರಿಸುವ ಅನುಭವಿ ವೈದ್ಯರನ್ನು ನೇಮಕ ಮಾಡಿ, ಕೇಂದ್ರಗಳನ್ನು ಪ್ರಾರಂಭಿಸಬೇಕೆನ್ನುವ ಮಹತ್ವಕಾಂಕ್ಷೆ ಹೊಂದಿದ್ದೇನೆ. ಮಣಿಪಾಲ ಆಸ್ಪತ್ರೆಯ ಮಾದರಿಯ ಉತ್ತಮ ಆರೋಗ್ಯ…

Read More