ದೇವರಹಿಪ್ಪರಗಿ: ಪ್ರೌಢಶಾಲಾ ಹಂತದ ಮಕ್ಕಳಿಗೆ ಕೌಶಲ್ಯ ಆಧಾರಿತ ಶಿಕ್ಷಣ ನೀಡುವುದು ಅತ್ಯಂತ ಅಗತ್ಯವಾಗಿದೆ ಎಂದು ಸರ್ಕಾರಿ ಉರ್ದುಶಾಲೆಯ ಸಿಆರ್‌ಪಿ ಎಫ್.ಎನ್.ನದಾಫ್ ಹೇಳಿದರು.
ಪಟ್ಟಣದ ಜೆಎಮ್‌ಜೆ ಪ್ರೌಢಶಾಲೆಯಲ್ಲಿ ಗುರುವಾರ ಜರುಗಿದ ವಿಜ್ಞಾನ ಶಿಕ್ಷಕರ ವೃತ್ತಿ ಜೀವನ ಮಾರ್ಗದರ್ಶಿ ತರಬೇತಿಗೆ ಚಾಲನೆ ನೀಡಿ ಮಾತನಾಡಿದರು. ಗ್ರಾಮೀಣ ಭಾಗದ ಮಕ್ಕಳ ಕಲಿಕಾ ಮಟ್ಟವನ್ನು ಹೆಚ್ಚಿಸುವಲ್ಲಿ ಉಜ್ವಲ ಸಂಸ್ಥೆ ಗಮನಾರ್ಹ ಕಾರ್ಯ ಮಾಡುತ್ತಿದೆ. ಅಂಗನವಾಡಿಯಿಂದ ಕಾಲೇಜು ಶಿಕ್ಷಣದವರೆಗೆ ಅಗತ್ಯವಾದ ತರಬೇತಿಯನ್ನು ಶಿಕ್ಷಕರಿಗೆ ನೀಡಿ ಅವರ ಮೂಲಕ ಮಕ್ಕಳಿಗೆ ವಿಶೇಷವಾಗಿ ಪ್ರೌಢಶಾಲಾ ಹಂತದ ಮಕ್ಕಳಿಗೆ ವೃತ್ತಿ ಜೀವನದ ಮಾರ್ಗದರ್ಶಿ ತರಬೇತಿಯನ್ನು ಕೊಟ್ಟು ಪ್ರಮುಖ ಪಾತ್ರ ವಹಿಸುತ್ತಿದೆ. ಅವರ ಈ ಸೇವಾ ಕಾರ್ಯಕ್ಕೆ ನಮ್ಮೇಲ್ಲರ ಸಹಕಾರ ಇರಲಿ ಎಂದರು.
ಉಜ್ವಲ ಸಂಸ್ಥೆಯ ನಿರ್ದೇಶಕಿ ಸುನಂದಾ ತೋಳಬಂದಿ ಮಾತನಾಡಿ, ಇಂದಿನ ಮಕ್ಕಳೇ ಇಂದಿನ ಪ್ರಜೆಗಳು. ಇಂದು ಗ್ರಾಮೀಣ ಭಾಗದಲ್ಲಿ ಮಕ್ಕಳು, ಮಹಿಳೆಯರು ಅನುಭವಿಸುತ್ತಿರುವ ಸಮಸ್ಯೆಗಳು ಹಾಗೂ ಅದಕ್ಕಿರುವ ಕಾನೂನಿನ ಸಲಹೆಗಳ ಕುರಿತು ವಿವರಿಸಿ, ಮಕ್ಕಳ ಮತ್ತು ಮಹಿಳೆಯರ ರಕ್ಷಣೆ, ಇದು ನಮ್ಮೆಲ್ಲರ ಹೊಣೆ. ಬಾಲ್ಯವಿವಾಹ, ಬಾಲಕಾರ್ಮಿಕತೆ ಇವು ಕಾನೂನುಬಾಹಿರವಾಗಿವೆ ಎಂದರು.
ಜೆಎಮ್‌ಜೆ ಸಂಸ್ಥೆಯ ಪಿ.ಪಾಪುಲಮ್ಮ ಹಾಗೂ ಯೋಜನೆಯ ಸಂಯೋಜಕ ಸಾಗರ ಘಾಟಗೆ ಮಾತನಾಡಿದರು.
ಯೋಜನೆಯ ಸಿಬ್ಬಂದಿ ಕೇಶವ ತೋಳಬಂದಿ, ಶಶಿಕಾಂತ ಸುಂಗಠಾಣ, ಭೀಮಬಾಯಿ ಹೇರೂರ, ಶ್ರೀಶೈಲ ಜೋಗುರ, ಭಾಗಣ್ಣ ಹಾಳಕಿ, ಮಲ್ಲಮ್ಮ ಹೊನ್ನಳ್ಳಿ, ಗೌಡಪ್ಪ ಬಿರಾದಾರ ಸೇರಿದಂತೆ ತಾಲ್ಲೂಕಿನ ೨೬ ಪ್ರೌಢಶಾಲೆಗಳ ಶಿಕ್ಷಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

