ದೇವರಹಿಪ್ಪರಗಿ: ತೊಗರಿಬೆಳೆಯ ಹೆಚ್ಚಿನ ಇಳುವರಿಗೆ ಕುಡಿ ಚಿವುಟುವುದು ಅತ್ಯವಶ್ಯಕವಾಗಿದೆ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸೋಮನಗೌಡ ಬಿರಾದಾರ ಹೇಳಿದರು.
ಪಟ್ಟಣದ ರೈತ ನಬಿಲಾಲ ಚಾಂದಕವಟಗಿ ಸೇರಿದಂತೆ ಹಲವು ರೈತರ ಜಮೀನುಗಳಿಗೆ ಮಂಗಳವಾರ ಭೇಟಿ ನೀಡಿ ತೊಗರಿಯಲ್ಲಿ ಕುಡಿ ಚೂಟುವ ಪ್ರಾತ್ಯಕ್ಷಿಕೆ ಕೈಗೊಂಡು ಮಾತನಾಡಿದರು. ನಮ್ಮ ತಾಲ್ಲೂಕು ವ್ಯಾಪ್ತಿಯಲ್ಲಿ ಈ ಬಾರಿ ತೊಗರಿ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆಯಾಗಿದೆ, ಹಾಗೂ ಬಹುತೇಕ ರೈತರು ನೆಟೆ ನಿರೋಧಕ ಹಾಗೂ ದೀರ್ಘಾವಧಿ ತಳಿಗಳನ್ನು ಬಿತ್ತನೆಗೆ ಬಳಸಿದ್ದಾರೆ. ಆದ್ದರಿಂದ ತೊಗರಿ ಬೆಳೆ ೫೦ ರಿಂದ ೬೦ ದಿನವಿದ್ದಾಗ ಕುಡಿ ಚುಟುವ ತಾಂತ್ರಿಕತೆ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಕವಲೊಡೆಯುತ್ತವೆ. ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಹೂವು, ಕಾಯಿ ಬಿಡುವಂತಾಗಿ ಇಳುವರಿ ಗಣನೀಯವಾಗಿ ಶೇ ೧೫ ರಿಂದ ೨೦ ರವೆರೆಗೆ ಹೆಚ್ಚಳವಾಗಲು ಸಾಧ್ಯವಾಗುತ್ತದೆ. ಈ ತಾಂತ್ರಿಕತೆಗೆ ಅನುಕೂಲವಾಗುವಂತೆ ಮಾರುಕಟ್ಟೆಯಲ್ಲಿ ಬ್ಯಾಟರಿ ಚಾಲಿತ ಕುಡಿ ಚೂಟುವ ಯಂತ್ರಗಳು ಲಭ್ಯವಿದ್ದು ಇವುಗಳನ್ನು ಬಳಸಿಕೊಂಡು ಕುಡಿ ಚೂಟಬಹುದು ಎಂದು ತಿಳಿಸಿದರು.
ಕೃಷಿ ಅಧಿಕಾರಿ ಎಚ್.ಕೆ.ಪಾಟೀಲ, ಆತ್ಮ ಸಿಬ್ಬಂದಿ ಸುಧಾಕರ ಇರಸೂರ್, ಸಂಜೀವಿನಿ ತಾಂತ್ರಿಕ ಶಿವರಾಜ್ ಬೊಮ್ಮನಳ್ಳಿ, ರೈತರಾದ ನಬಿಲಾಲ ಚಾಂದಕವಟಗಿ, ಪಾಂಡಪ್ಪಗೌಡ ಪಾಟೀಲ, ಅನೀಲಕುಮಾರ ಭಂಟನೂರ, ಸಂಗಮೇಶ ಮಂಗಳೂರ, ರಾಜಕುಮಾರ ಭಂಟನೂರ, ಬಸವರಾಜ ಭಂಟನೂರ, ಸಂಗಪ್ಪ ಭಂಟನೂರ(ನಿವಾಳಖೇಡ) ಇದ್ದರು.
Subscribe to Updates
Get the latest creative news from FooBar about art, design and business.
ತೊಗರಿಬೆಳೆ ಹೆಚ್ಚಿನ ಇಳುವರಿಗೆ ಕುಡಿ ಚಿವುಟುವುದು ಅವಶ್ಯ :ಬಿರಾದಾರ
Related Posts
Add A Comment

