Author: editor.udayarashmi@gmail.com

ಸಿಂದಗಿ: ಕೃಷಿ ಇಲಾಖೆಯ ವತಿಯಿಂದ ಆ.೧೩ರಂದು ಬೆಳಿಗ್ಗೆ ೧೦ಗಂಟೆಗೆ ತಾಲೂಕಿನ ರಾಂಪುರ ಪಿಎ ಗ್ರಾಮದ ಶ್ರೀ ಆರೂಡಸಂಗನ ಬಸವೇಶ್ವರ ಮಠದಲ್ಲಿ ಕೃಷಿ ವಿಜ್ಞಾನಿಗಳಿಂದ ಕಬ್ಬು, ಹತ್ತಿ, ಹಾಗೂ ತೊಗರಿ ಬೆಳೆಗಳ ಬಗ್ಗೆ ನೂತನ ತಾಂತ್ರಿಕತೆಗಳ ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ.ಕಾರ್ಯಕ್ರಮದ ಸಾನಿಧ್ಯವನ್ನು ಆರೂಢಮಠದ ನಿತ್ಯಾನಂದ ಮಹಾರಾಜರು ವಹಿಸಿಕೊಂಡು ಉದ್ಘಾಟನೆ ಮಾಡಲಿದ್ದಾರೆ. ಶಾಸಕ ಅಶೋಕ ಮನಗೂಳಿ ಅಧ್ಯಕ್ಷತೆ ವಹಿಸಿಕೊಳ್ಳುವರು. ವಿಜಯಪುರ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ರಾಜಶೇಖರ ವಿಲಿಯಂ, ವಿಜ್ಞಾನಿಗಳಾದ ಸಂಜಯ ಪಾಟೀಲ, ವಿಜಯಪುರದ ಆರ್.ಬಿ.ಬೆಳ್ಳಿ, ಬಿ.ಟಿ.ನಾಡಗೌಡ, ಇಂಡಿಯ ಶಿವಶಂಕರಮೂರ್ತಿ, ಮಹಾಲಿಂಗಪುರದ ಎಂ.ವೈ.ಕಟ್ಟಿ ಉಪನ್ಯಾಸ ನೀಡಲಿದ್ದಾರೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಚ್.ವಾಯ್.ಸಿಂಗೆಗೋಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಸಿಂದಗಿ: ಆರ್.ಡಿ.ಪಾಟೀಲ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಕ ಕೆ.ಎಚ್.ಸೋಮಾಪೂರ ಅವರನ್ನು ಅಂತರಾಷ್ಟ್ರೀಯ ಲಾಯಿನ್ಸ್ ಕ್ಲಬ್ ಗೋವಾ ಮತ್ತು ಕರ್ನಾಟಕ ೩೧೭ಬಿಯ ರೀಜನ್ ೬ರ ಜೋನ್ ಎರಡರ ವಿಭಾಗೀಯ ಚೇರ್‌ಮನ್‌ರಾಗಿ ಆಯ್ಕೆಯಾಗಿದ್ದಾರೆ.ಅವರಿಗೆ ಸಿಂದಗಿಯ ಲಾಯಿನ್ಸ್ ಕ್ಲಬ್‌ನ ಅಧ್ಯಕ್ಷ ಮಾಧು ಲೋಣಿ, ಖಜಾಂಚಿ ನಿವೃತ್ತ ಪ್ರಾಚಾರ್ಯ ಬಿ.ಪಿ.ಕರ್ಜಗಿ, ಕಾರ್ಯದರ್ಶಿ ಆಯ್.ಬಿ.ಬಿರಾದಾರ, ಪದವಿ ಕಾಲೇಜಿನ ಪ್ರಾಚಾರ್ಯ ಜಿ.ಎಸ್.ಕಡಣಿ, ಪಪೂ ಪ್ರಾಚಾರ್ಯ ಆರ್.ಬಿ.ಗೋಡಕರ, ಆರ್.ಡಿ.ಪಾಟೀಲ ಕಾಲೇಜಿನ ಪ್ರಾಚಾರ್ಯ ಬಿ.ಎಸ್.ಸಿಂಗನಳ್ಳಿ, ಡಾ.ಅಂಬರೀಷ್ ಬಿರಾದಾರ, ಪಿ.ಎಮ್.ಮಡಿವಾಳರ, ಎಸ್.ವಾಯ್.ಬೀಳಗಿ, ಎಂ.ಸಿ.ಹೊಸಮನಿ, ಜಿ.ಎಸ್. ಮಿರಗಿ ಹಾಗೂ ಕೆ.ಪಿ.ಬಿರಾದಾರ ಅಭಿನಂದಿಸಿ ಹರ್ಷವ್ಯಕ್ತಪಡಿಸಿದ್ದಾರೆ.

Read More

ಮುದ್ದೇಬಿಹಾಳ: ಸೆ.೧ ರಂದು ಪಟ್ಟಣದ ಹೇಮರಡ್ಡಿ ಮಲ್ಲಮ್ಮ ಮಂಗಲ ಕಾರ್ಯಾಲಯದಲ್ಲಿ ತಾಲೂಕ ರಡ್ಡಿ ನೌಕರ ಸಂಘದ ವತಿಯಿಂದ ೨೦೨೨-೨೩ ಮತ್ತು ೨೦೨೩-೨೪ ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.೯೫ ಕ್ಕಿಂತ ಹೆಚ್ಚಿನ ಅಂಕ ಗಳಿಸಿದ ಮುದ್ದೇಬಿಹಾಳ ತಾಲೂಕು ವ್ಯಾಪ್ತಿಯ ರಡ್ಡಿ ಸಮಾಜದ ವಿದ್ಯಾರ್ಥಿಗಳು ಮತ್ತು ೨೦೨೨-೨೩ನೇ ಸಾಲಿನಿಂದ ಅ.೩೧ ರವರೆಗೆ ನಿವೃತ್ತಿ ಹೊಂದಿದ ಮತ್ತು ಹೊಂದಲಿರುವ ತಾಲೂಕು ವ್ಯಾಪ್ತಿಯ ರಡ್ಡಿ ಸಮಾಜದ ಸರಕಾರಿ ನೌಕರರಿಗೆ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಂಡಿದ್ದು ಆಸಕ್ತ ವಿದ್ಯಾರ್ಥಿಗಳು ಮತ್ತು ನಿವೃತ್ತ ನೌಕರರು ಅ.೨೨ ರ ಒಳಗಾಗಿ ಈ ನಂಬರ್ ಗಳನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ. ೯೩೭೯೫೯೪೦೮೦, ೭೨೫೯೨೭೦೫೦೪, ೯೭೪೧೦೩೬೦೮೬, ೯೯೦೨೬೧೪೭೬೪.

Read More

ಸಿಂದಗಿ: ಗ್ರಂಥಾಲಯ ಎಂದರೆ ಜ್ಞಾನದ ಸಾಗರ, ಪುರಾಣ, ಇತಿಹಾಸ ಕಾಲದಿಂದಲೂ ಇಂದಿನ ಡಿಜಿಟಲ್ ಯುಗದವರೆಗೂ ಅನೇಕ ಪಂಡಿತರು, ಸಂಶೋಧಕರು, ಅನುಭಾವಿಗಳು ತಮ್ಮ ಶ್ರಮ, ಸಮಯ, ಜ್ಞಾನ ಉಪಯೋಗಿಸಿ ಮುಂದಿನ ಪೀಳಿಗೆಗೆ ಗ್ರಂಥಸ್ಥವಾಗಿ ಬರೆದು ಇಟ್ಟಿದ್ದಾರೆ ಎಂದು ನಿವೃತ್ತ ಗ್ರಂಥಪಾಲಕ ಸಿದ್ದಬಸು ಕುಂಬಾರ ಹೇಳಿದರು.ಸೋಮವಾರದಂದು ಪಟ್ಟಣದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಸಿ.ಎಂ.ಮನಗೂಳಿ ಕಲಾ ಮಹಾವಿದ್ಯಾಲಯದ ಗ್ರಂಥಾಲಯದಲ್ಲಿ ಸೋಮವಾರ ಹಮ್ಮಿಕೊಂಡ ರಾಷ್ಟ್ರೀಯ ಗ್ರಂಥಪಾಲಕರ ದಿನಾಚಾರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂತಹ ಜ್ಞಾನ ದೇಗುಲವೇ ಗ್ರಂಥಾಲಯ. ಉತ್ತಮ ಹಾಗೂ ಸುಸಜ್ಜಿತ ಗ್ರಂಥಾಲಯ ಓದಿನ ಕಡೆಗೆ ನಮ್ಮನ್ನು ಸೇಳೆದುಕೊಳ್ಳುತ್ತದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವ ಜನಾಂಗ ಓದಿಗೆ ಹೆಚ್ಚು ಪ್ರಾಮುಖ್ಯತೆ ನೀಡಲೇಬೇಕು. ಓದಿನಿಂದಲೇ ನಮ್ಮ ಬದುಕು ಉಜ್ವಲವಾಗುತ್ತದೆ ಎಂಬ ಪರಿಕಲ್ಪನೆ ಹೊಂದಬೇಕು. ಶಾಲೆ ಕಾಲೇಜುಗಳ ಮತ್ತು ನಗರದ ಅನೇಕ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳು ತಮ್ಮ ಬಿಡುವಿನ ಸಮಯವನ್ನು ಓದಿಗಾಗಿ ಉಪಯೋಗ ಮಾಡಿಕೊಳ್ಳಬೇಕು. ಇಂದು ಜಗತ್ತು ಅತ್ಯಂತ ವೇಗವಾಗಿ ಬೆಳವಣಿಗೆಯಾಗುತ್ತಿದೆ. ಜಗತ್ತಿನ ಜ್ಞಾನವನ್ನು ನಾವೇಲ್ಲ ಹೆಚ್ಚು ಹೆಚ್ಚು ಪಡೆದುಕೊಳ್ಳಬೇಕು…

Read More

ಇಂಡಿ: ತಾಲೂಕಿನ ಭೀಮಾನದಿ ಪಾತ್ರದ ಗ್ರಾಮಗಳಿಗೆ ಶಾಸಕ ಯಶವಂತ್ರಾಯಗೌಡ ಪಾಟೀಲ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಅಧಿಕಾರಿಗಳಿಗೆ ಸೂಚಿಸಿದರು.ಈ ಸಂದರ್ಭದಲ್ಲಿ ಅಲ್ಲಿನ ಹಲವು ರೈತರು ಮಹಾರಾಷ್ಟ್ರದಿಂದ ನೀರು ಹರಿಬಿಟ್ಟ ಕಾರಣ ನದಿ ಪಾತ್ರದ ಜಮೀನಿನಲ್ಲಿ ನೀರು ನುಗ್ಗಿದ್ದು ಬೆಳೆ ನೀರಿನಲ್ಲಿ ಮುಳುಗಿ ಹಾನಿಯಾಗಿದೆ ಎಂದು ಶಾಸಕರ ಗಮನಕ್ಕೆ ತರುತ್ತಿದ್ದಂತೆ ಸ್ಥಳದಲ್ಲೇ ಇದ್ದ ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ್ ಹಾಗೂ ತಹಸೀಲ್ದಾರ ಬಿ ಎಸ್ ಕಡಕಭಾವಿ ಅವರಿಗೆ ಈ ಕುರಿತು ಕೂಡಲೇ ತೋಟಗಾರಿಕೆ, ಕೃಷಿ ಇಲಾಖೆಯ ಸಹಯೋಗದಲ್ಲಿ ಸರ್ವೇ ನಡೆಸಿ ಯಾವ ರೈತರ ಎಷ್ಟು ಮೌಲ್ಯದ ಬೆಳೆ ಹಾನಿಯಾಗಿದೆ ಎಂಬುದರ ಕುರಿತು ಪರಿಶೀಲಿಸಿ ವರದಿ ನೀಡುವಂತೆ ತಿಳಿಸಿದರು.ಪ್ರವಾಹ ಬಂದರೆ ಜನರಿಗೆ ತೊಂದರೆಯಾಗದಂತೆ ಏನು ಕ್ರಮ ಕೈಗೊಂಡಿದ್ದೀರಿ.ಜನರಿಗೆ ಈ ಕುರಿತು ಎಚ್ಚರಿಕೆಯಿಂದ ಇರಲು ತಿಳಿಸಿದ್ದೀರಿಯೇ ಎಂದು ಪ್ರಶ್ನಿಸಲಾಗಿ, ಇದಕ್ಕೆ ಉತ್ತರಿಸಿದ ಅಧಿಕಾರಿಗಳು ನದಿ ಪಾತ್ರದ ಗ್ರಾಮಗಳಿಗೆ ಎಚ್ಚರದಿಂದಿರಲು ಡಂಗುರ ಸಾರಲಾಗಿದೆ. ಗ್ರಾಮಲೆಕ್ಕಾಧಿಕಾರಿಗಳು, ಪಿಡಿಓ ಗಳು ಸೇರಿದಂತೆ ವಿವಿಧ…

Read More

ಸಿಂದಗಿ: ಇಂದಿನ ಆಧುನಿಕ ಜಗತ್ತಿನಲ್ಲಿ ನಮ್ಮ ಉತ್ತಮ ಆರೋಗ್ಯಕ್ಕೆ ಯೋಗ ಮತ್ತು ಧ್ಯಾನ ಅತ್ಯಂತ ಮುಖ್ಯವಾಗಿವೆ. ಎಲ್ಲ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಬಹಳ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಸಿಂದಗಿಯ ಯೋಗೋತ್ಸವ ಸಮಿತಿ ಪಟ್ಟಣದ ಎಚ್.ಜಿ.ಪ್ರೌಢಶಾಲಾ ಆವರಣದಲ್ಲಿ ಆ.೧೬ ರಿಂದ ಸ.೫ರ ವರೆಗೆ ಸುಮಾರು ೨೧ ದಿನಗಳ ಕಾಲ ಉಚಿತ ಯೋಗ ಮತ್ತು ಆಧ್ಯಾತ್ಮಿಕ ಪ್ರವಚನವನ್ನು ಏರ್ಪಡಿಸಿದ್ದಾರೆ. ಸಿಂದಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನತೆ ಅದರಲ್ಲಿ ಪ್ರಮುಖವಾಗಿ ಇಂದಿನ ಯುವ ಜನಾಂಗ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಯೋಗೋತ್ಸವ ಸಮಿತಿ ಸದಸ್ಯ ಅಶೋಕ ಅಲ್ಲಾಪೂರ ಹೇಳಿದರು.ಪಟ್ಟಣದ ಸಿ.ಎಂ.ಮನಗೂಳಿ ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.ಹಿಮಾಲಯದಲ್ಲಿ ಸುಮಾರು ೬ ವರ್ಷಗಳ ಕಾಲ ಯೋಗಭ್ಯಾಸ ಮಾಡಿದ ನಿರಂಜನಶ್ರೀಗಳಿಂದ ಈ ಕಾರ್ಯಕ್ರಮ ಜರುಗುವುದು. ಪ್ರತಿ ದಿನ ಬೆಳಗ್ಗೆ ೫.೩೦ ಗಂಟೆಯಿಂದ ೬.೩೦ಗಂಟೆಯ ವರೆಗೆ ಯೋಗ ಶಿಬಿರ ಮತ್ತು ಪ್ರತಿ ದಿನ ಸಂಜೆ ೭.೦೦ ಗಂಟೆಯಿಂದ ೮.೦೦ರ ವರೆಗೆ ಆಧ್ಯಾತ್ಮಿಕ ಪ್ರವಚನ, ಭಜನೆ ನಡೆಯುವದು.…

Read More

ಮುದ್ದೇಬಿಹಾಳ: ಮನೆಯ ಮಹಡಿಯ ಮೇಲೆ ಸಿಕ್ಕಿಹಾಕಿಕೊಂಡಿದ್ದ ಸಾಕು ನಾಯಿಯೊಂದನ್ನು ರಕ್ಷಿಸುವಲ್ಲಿ ಇಲ್ಲಿನ ಅಗ್ನಿಶಾಮಕ ಸಿಬ್ಬಂದಿಗಳು ಸಫಲರಾಗಿದ್ದಾರೆ.ಪಟ್ಟಣದ ಮಹಾಂತೇಶ ನಗರದ ನಿವಾಸಿ ಮುರುಗೇಶ ಪಾಟೀಲರು ತಮ್ಮ ಜರ್ಮನ್ ಶಫರ್ಡ ಸಾಕು ನಾಯಿಯನ್ನು ಮನೆಯ ಮೇಲೆ ಕಟ್ಟಿದ್ದರು. ಕಟ್ಟಿದ ಹಗ್ಗವನ್ನು ಬಿಚ್ಚಿಕೊಂಡು ಬೇರೆ ಮನೆಯ ಮಾಳಿಗೆ ಹತ್ತಿ ಸಿಂಟೆಕ್ಸ್ ನಲ್ಲಿ ಬಿದ್ದು ಮೇಲೆ ಬರಲು ಸಾಧ್ಯವಾಗದೇ ಸಿಲುಕಿ ಒದ್ದಾಡುತ್ತಿತ್ತು. ಅದರ ಚೀರಾಟ ಜಾಸ್ತಿಯಾಗುತ್ತಿದ್ದಂತೆ ಗಮನಿಸಿದ ನಿವಾಸಿಗಳು ತಕ್ಷಣ ಅಗ್ನಿಶಾಮಕ ಇಲಾಖೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸಿಂಟೆಕ್ಸ್ ನಲ್ಲಿನ ನೀರನ್ನು ಖಾಲಿ ಮಾಡಿ ಸಾಕು ನಾಯಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಗಳಾದ ನಾಗೇಂದ್ರ ರಾಠೋಡ, ಬಿ.ಬಿ.ನಾಟಿಕಾರ, ವಿ.ಎಲ್.ಪೂಜಾರಿ, ಕೆ.ಎಸ್.ಅಜಮನಿ, ಎನ್.ಬಿ.ಬಿರಾದಾರ, ಎಸ್.ಎಚ್.ಅವಟಿ, ಚಂದ್ರಶೇಖರ ಮಾದರ, ಜಾವೇದ ಜಮಖಂಡಿ, ವಾಯ್ ಎಸ್ ಗೌಡರ ಇದ್ದರು.

Read More

ಮುದ್ದೇಬಿಹಾಳ: ಪಟ್ಟಣದ ಹೆಸ್ಕಾಂ ಉಪವಿಭಾಗದ ವಿವಿಧ ಶಾಖೆಗಳಲ್ಲಿ ಸಹಾಯಕ ಅಭಿಯಂತರರಾಗಿ ಸುಮಾರು ೨೨ ವರ್ಷಗಳ ಕಾಲ ಸೇವೆ ಸಲ್ಲಿಸಿ ವಿಜಯಪುರದ ಬೃಹತ್ ಕಾಮಗಾರಿ ಘಟಕಕ್ಕೆ ವರ್ಗಾವಣೆಗೊಂಡಿರುವ ಎಸ್ ಎಸ್ ಪಾಟೀಲ ಅವರನ್ನು ಇಲಾಖೆಯ ಸಿಬ್ಬಂದಿ, ವಿದ್ಯುತ್ ಗುತ್ತಿಗೆದಾರರ ಸಂಘ, ಹೊರಗುತ್ತಿಗೆ ನೌಕರರು ಇಲ್ಲಿನ ಹೆಸ್ಕಾಂ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಿ ಬೀಳ್ಕೊಟ್ಟರು.ಈ ವೇಳೆ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಆರ್ ಎನ್ ಹಾದಿಮನಿ,ಲೆಕ್ಕಾಧಿಕಾರಿ ಬಿ.ಎ.ಮಡಿವಾಳರ, ಶಾಖಾಧಿಕಾರಿಗಳಾದ ಎಂ.ಎಸ್.ತೆಗ್ಗಿನಮಠ, ಆರ್.ಬಿ.ಹಿರೇಮಠ ಮತ್ತು ಸಂತೋಷ ನಡಿಗೇರಿ, ಮೇಲ್ವಿಚಾರಕರಾದ ಎಸ್.ಎಂ.ಹಾಲ್ಯಾಳ ಮತ್ತು ಚಂದ್ರಶೇಖರ ಬೇಲಿಹಾಳ, ಆರ್.ಎನ್.ನಾಯಕಮಕ್ಕಳ, ಸೋಮು ಗಸ್ತಿಗಾರ, ರಾಹುಲ ಪಾದಗಟ್ಟಿ, ಬಿ.ಸಿ.ಹಿರೇಮಠ, ಸಿ.ಬಿ.ನಾಗರಬೆಟ್ಟ, ಗುತ್ತಿಗೆದಾರರ ಸಂಘದ ವೀರೇಶ ಗುರುಮಠ, ಮಲ್ಲಣ್ಣ ಮಡಿಕೇಶ್ವರ, ಸಂತೋಷ ಶಿವಯೋಗಿಮಠ ಹೊರಗುತ್ತಿಗೆ ನೌಕರರಾದ ಅಣ್ಣಯ್ಯ ಸರಗಣಾಚಾರಿ, ಮಂಜುನಾಥ ಜಾಲವಾದಿ, ಲೋಕೇಶ ಚಲವಾದಿ, ಸುಶೀಲ ಪಾದಗಟ್ಟಿ, ಪ್ರಶಾಂತ ಹಿರೇಮಠ, ಬಸವರಾಜ ದಳವಾಯಿ ಸೇರಿದಂತೆ ಮತ್ತೀತರರು ಇದ್ದರು.

Read More

ಯಡ್ರಾಮಿ-ಜೇವರ್ಗಿ ತಾಲೂಕು ಗಾಣಿಗ ಸಮಾಜದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಯಡ್ರಾಮಿ: ಸಮಾಜದಲ್ಲಿನ ಯುವಕರಿಗೆ ಶಿಕ್ಷಣ ಹಾಗೂ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಸಂಘಟನೆಯ ಬೆಳವಣಿಗೆಗೆ ಮುಂದಾಗಬೇಕು. ಆದರೆ ಸಂಘಟನೆ ಇನ್ನುಳಿದ ಜಾತಿ ಅಥವಾ ಸಮಾಜದ ವಿರುದ್ದವಾಗಿರದೆ ಕಷ್ಟಕ್ಕೆ ಸ್ಪಂದಿಸುವಂತಾಗಬೇಕು ಎಂದು ಗಾಣಿಗ ಗುರು ಪೀಠ, ವಿಜಯಪುರದ ವನಶ್ರೀ ಸಂಸ್ಥಾನ ಮಠದ ಶ್ರೀ ಗುರುಬಸವಕುಮಾರ ಮಹಾಸ್ವಾಮಿಗಳು ಹೇಳಿದರು.ಯಡ್ರಾಮಿಯಲ್ಲಿ ರವಿವಾರ ಯಡ್ರಾಮಿ-ಜೇವರ್ಗಿ ತಾಲೂಕು ಗಾಣಿಗ ಸಮಾಜ ಯುವ ಘಟಕದಿಂದ ಯಡ್ರಾಮಿ ಯುವ ಘಟಕ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಆಯಸ್ಸು ಮುಗಿದ ಮೇಲೆ ಎಲ್ಲವೂ ಶೂನ್ಯ. ಇರುವಾಗಲೇ ಒಳ್ಳೆಯ ಕಾರ್ಯ ಮಾಡುವ ನಿಜ ಬದುಕು ನಿಮ್ಮದಾಗಿರಲಿ. ದ್ವೇಷ, ಅಸೂಯೆ ಬಿಟ್ಟು ಸಮಾಜದ ಬೆಳವಣಿಗೆಗೆ ಮುಂದಾಗಬೇಕು. ಹಿರಿಯರ ಮಾರ್ಗದರ್ಶನ ಹಾಗೂ ಕಿರಿಯರ ಸಲಹೆಯೊಂದಿಗೆ ಸಮಾಜದ ಅಭಿವೃದ್ಧಿಗೆ ಪ್ರತಿಯೊಬ್ಬರು ಶ್ರಮಿಸಬೇಕು ಎಂದರು.ಇದಕ್ಕೂ ಪೂರ್ವದಲ್ಲಿ ಹಿರಿಯ ಮುಖಂಡ ಮಲ್ಲಿನಾಥಗೌಡ ಪಾಟೀಲ ಯಲಗೋಡ ಮಾತನಾಡಿ, ಇಂದಿನ ರಾಜಕೀಯ ಮೊದಲಿನಂತಿಲ್ಲ. ಆದ್ದರಿಂದ ಯುವಕರು ರಾಜಕೀಯದ ಸಹವಾಸಕ್ಕೆ ಹೋಗದೆ…

Read More

ದೇವರಹಿಪ್ಪರಗಿ: ಪಟ್ಟಣದ ಎರೆಜಮೀನುಗಳಿಗೆ ಹಾಗೂ ಕನ್ನೋಳ್ಳಿ, ಯರನಾಳ, ಇಂಗಳಗಿ, ಹರನಾಳ ಬಮ್ಮನಳ್ಳಿ, ಮುಳಸಾವಳಗಿ, ಮಾರ್ಕಬ್ಬಿನಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಎತ್ತಿನಗಾಡಿ(ಚಕ್ಕಡಿ) ರಸ್ತೆಗಳನ್ನು ಜಾಲಿಗಿಡಗಂಟಿಗಳಿಂದ ಮುಕ್ತಗೊಳಿಸುವುದು ಹಾಗೂ ಮಳೆಯಿಂದ ಬಿದ್ದ ಕೊರೆಗಳನ್ನು ಸರಿಪಡಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ರೈತರು ಆಗ್ರಹಿಸಿ ಗ್ರೇಡ್-2 ತಹಶೀಲ್ದಾರ ಎಸ್.ಎಚ್. ರಾಠೋಡ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ತಹಶೀಲ್ದಾರ ಕಚೇರಿಗೆ ಸೋಮವಾರ ಆಗಮಿಸಿದ ರೈತರು ರಸ್ತೆಯಲ್ಲಿನ ಕೊರೆಗಳು ಹಾಗೂ ಮುಳ್ಳಿನ ಗಿಡಗಂಟಿಗಳ ತೆರವುಗೊಳಿಸಲು ಆಗ್ರಹಿಸಿದರು.ಈ ಸಂದರ್ಭದಲ್ಲಿ ರೈತಪ್ರತಿನಿಧಿ ಅಜೀಜ್ ಯಲಗಾರ ಮಾತನಾಡಿ, ಎರೆ ಜಮೀನುಗಳು ಹಾಗೂ ವಿವಿಧ ಗ್ರಾಮಗಳಿಗೆ ತೆರಳುವ ಎತ್ತಿನಗಾಡಿ (ಚಕ್ಕಡಿ)ರಸ್ತೆ ಉತ್ತಮವಾಗಿದ್ದು, ಆದರೆ ರಸ್ತೆಯ ಎಡ ಬಲಗಳಲ್ಲಿ ಜಾಲಿಗಿಡಗಳು ಬೃಹದಾಕಾರವಾಗಿ ಬೆಳೆದ ರಸ್ತೆಯನ್ನು ಕಿರಿದಾಗಿಸಿವೆ.ರಸ್ತೆಯ ಮೂಲಕ ಚಕ್ಕಡಿ ಹಾಗೂ ಬೈಕ್ಗಳಲ್ಲಿ ತೆರಳಬೇಕೆಂದರು ಪ್ರಯಾಣದಲ್ಲಿ ಮುಳ್ಳು ಚುಚ್ಚಿ ಗಾಯಗಳಾಗುತ್ತಿವೆ. ಇನ್ನೂ ಜಾಲಿಗಿಡಗಳ ಟೊಂಗೆಗಳು ಉದ್ದಾಗಿ ಬೆಳೆದು ರಸ್ತೆಯನ್ನು ಅತೀಕ್ರಮಿಸಿ ಅಪಘಾತಗಳಿಗೆ ಕಾರಣವಾಗುತ್ತಿವೆ. ಜೊತೆಗೆ ಮಳೆಯಿಂದ ರಸ್ತೆಗಳಲ್ಲಿ ಕೊರೆಗಳು ಬಿದ್ದಿದ್ದು ಎತ್ತಿನಗಾಡಿ ಬೀಳುವ ಸಂಭವ ಇರುತ್ತದೆ. ಈ ನಿಟ್ಟಿನಲ್ಲಿ…

Read More