ಮುದ್ದೇಬಿಹಾಳ: ಪಟ್ಟಣದ ಹೆಸ್ಕಾಂ ಉಪವಿಭಾಗದ ವಿವಿಧ ಶಾಖೆಗಳಲ್ಲಿ ಸಹಾಯಕ ಅಭಿಯಂತರರಾಗಿ ಸುಮಾರು ೨೨ ವರ್ಷಗಳ ಕಾಲ ಸೇವೆ ಸಲ್ಲಿಸಿ ವಿಜಯಪುರದ ಬೃಹತ್ ಕಾಮಗಾರಿ ಘಟಕಕ್ಕೆ ವರ್ಗಾವಣೆಗೊಂಡಿರುವ ಎಸ್ ಎಸ್ ಪಾಟೀಲ ಅವರನ್ನು ಇಲಾಖೆಯ ಸಿಬ್ಬಂದಿ, ವಿದ್ಯುತ್ ಗುತ್ತಿಗೆದಾರರ ಸಂಘ, ಹೊರಗುತ್ತಿಗೆ ನೌಕರರು ಇಲ್ಲಿನ ಹೆಸ್ಕಾಂ ಕಚೇರಿಯಲ್ಲಿ ಸನ್ಮಾನಿಸಿ ಗೌರವಿಸಿ ಬೀಳ್ಕೊಟ್ಟರು.
ಈ ವೇಳೆ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ಆರ್ ಎನ್ ಹಾದಿಮನಿ,ಲೆಕ್ಕಾಧಿಕಾರಿ ಬಿ.ಎ.ಮಡಿವಾಳರ, ಶಾಖಾಧಿಕಾರಿಗಳಾದ ಎಂ.ಎಸ್.ತೆಗ್ಗಿನಮಠ, ಆರ್.ಬಿ.ಹಿರೇಮಠ ಮತ್ತು ಸಂತೋಷ ನಡಿಗೇರಿ, ಮೇಲ್ವಿಚಾರಕರಾದ ಎಸ್.ಎಂ.ಹಾಲ್ಯಾಳ ಮತ್ತು ಚಂದ್ರಶೇಖರ ಬೇಲಿಹಾಳ, ಆರ್.ಎನ್.ನಾಯಕಮಕ್ಕಳ, ಸೋಮು ಗಸ್ತಿಗಾರ, ರಾಹುಲ ಪಾದಗಟ್ಟಿ, ಬಿ.ಸಿ.ಹಿರೇಮಠ, ಸಿ.ಬಿ.ನಾಗರಬೆಟ್ಟ, ಗುತ್ತಿಗೆದಾರರ ಸಂಘದ ವೀರೇಶ ಗುರುಮಠ, ಮಲ್ಲಣ್ಣ ಮಡಿಕೇಶ್ವರ, ಸಂತೋಷ ಶಿವಯೋಗಿಮಠ ಹೊರಗುತ್ತಿಗೆ ನೌಕರರಾದ ಅಣ್ಣಯ್ಯ ಸರಗಣಾಚಾರಿ, ಮಂಜುನಾಥ ಜಾಲವಾದಿ, ಲೋಕೇಶ ಚಲವಾದಿ, ಸುಶೀಲ ಪಾದಗಟ್ಟಿ, ಪ್ರಶಾಂತ ಹಿರೇಮಠ, ಬಸವರಾಜ ದಳವಾಯಿ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

