ಸಿಂದಗಿ: ಕೃಷಿ ಇಲಾಖೆಯ ವತಿಯಿಂದ ಆ.೧೩ರಂದು ಬೆಳಿಗ್ಗೆ ೧೦ಗಂಟೆಗೆ ತಾಲೂಕಿನ ರಾಂಪುರ ಪಿಎ ಗ್ರಾಮದ ಶ್ರೀ ಆರೂಡಸಂಗನ ಬಸವೇಶ್ವರ ಮಠದಲ್ಲಿ ಕೃಷಿ ವಿಜ್ಞಾನಿಗಳಿಂದ ಕಬ್ಬು, ಹತ್ತಿ, ಹಾಗೂ ತೊಗರಿ ಬೆಳೆಗಳ ಬಗ್ಗೆ ನೂತನ ತಾಂತ್ರಿಕತೆಗಳ ಕುರಿತು ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಸಾನಿಧ್ಯವನ್ನು ಆರೂಢಮಠದ ನಿತ್ಯಾನಂದ ಮಹಾರಾಜರು ವಹಿಸಿಕೊಂಡು ಉದ್ಘಾಟನೆ ಮಾಡಲಿದ್ದಾರೆ. ಶಾಸಕ ಅಶೋಕ ಮನಗೂಳಿ ಅಧ್ಯಕ್ಷತೆ ವಹಿಸಿಕೊಳ್ಳುವರು. ವಿಜಯಪುರ ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ರಾಜಶೇಖರ ವಿಲಿಯಂ, ವಿಜ್ಞಾನಿಗಳಾದ ಸಂಜಯ ಪಾಟೀಲ, ವಿಜಯಪುರದ ಆರ್.ಬಿ.ಬೆಳ್ಳಿ, ಬಿ.ಟಿ.ನಾಡಗೌಡ, ಇಂಡಿಯ ಶಿವಶಂಕರಮೂರ್ತಿ, ಮಹಾಲಿಂಗಪುರದ ಎಂ.ವೈ.ಕಟ್ಟಿ ಉಪನ್ಯಾಸ ನೀಡಲಿದ್ದಾರೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಚ್.ವಾಯ್.ಸಿಂಗೆಗೋಳ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
