ಸಿಂದಗಿ: ಗ್ರಂಥಾಲಯ ಎಂದರೆ ಜ್ಞಾನದ ಸಾಗರ, ಪುರಾಣ, ಇತಿಹಾಸ ಕಾಲದಿಂದಲೂ ಇಂದಿನ ಡಿಜಿಟಲ್ ಯುಗದವರೆಗೂ ಅನೇಕ ಪಂಡಿತರು, ಸಂಶೋಧಕರು, ಅನುಭಾವಿಗಳು ತಮ್ಮ ಶ್ರಮ, ಸಮಯ, ಜ್ಞಾನ ಉಪಯೋಗಿಸಿ ಮುಂದಿನ ಪೀಳಿಗೆಗೆ ಗ್ರಂಥಸ್ಥವಾಗಿ ಬರೆದು ಇಟ್ಟಿದ್ದಾರೆ ಎಂದು ನಿವೃತ್ತ ಗ್ರಂಥಪಾಲಕ ಸಿದ್ದಬಸು ಕುಂಬಾರ ಹೇಳಿದರು.
ಸೋಮವಾರದಂದು ಪಟ್ಟಣದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಸಿ.ಎಂ.ಮನಗೂಳಿ ಕಲಾ ಮಹಾವಿದ್ಯಾಲಯದ ಗ್ರಂಥಾಲಯದಲ್ಲಿ ಸೋಮವಾರ ಹಮ್ಮಿಕೊಂಡ ರಾಷ್ಟ್ರೀಯ ಗ್ರಂಥಪಾಲಕರ ದಿನಾಚಾರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂತಹ ಜ್ಞಾನ ದೇಗುಲವೇ ಗ್ರಂಥಾಲಯ. ಉತ್ತಮ ಹಾಗೂ ಸುಸಜ್ಜಿತ ಗ್ರಂಥಾಲಯ ಓದಿನ ಕಡೆಗೆ ನಮ್ಮನ್ನು ಸೇಳೆದುಕೊಳ್ಳುತ್ತದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯುವ ಜನಾಂಗ ಓದಿಗೆ ಹೆಚ್ಚು ಪ್ರಾಮುಖ್ಯತೆ ನೀಡಲೇಬೇಕು. ಓದಿನಿಂದಲೇ ನಮ್ಮ ಬದುಕು ಉಜ್ವಲವಾಗುತ್ತದೆ ಎಂಬ ಪರಿಕಲ್ಪನೆ ಹೊಂದಬೇಕು. ಶಾಲೆ ಕಾಲೇಜುಗಳ ಮತ್ತು ನಗರದ ಅನೇಕ ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳು ತಮ್ಮ ಬಿಡುವಿನ ಸಮಯವನ್ನು ಓದಿಗಾಗಿ ಉಪಯೋಗ ಮಾಡಿಕೊಳ್ಳಬೇಕು. ಇಂದು ಜಗತ್ತು ಅತ್ಯಂತ ವೇಗವಾಗಿ ಬೆಳವಣಿಗೆಯಾಗುತ್ತಿದೆ. ಜಗತ್ತಿನ ಜ್ಞಾನವನ್ನು ನಾವೇಲ್ಲ ಹೆಚ್ಚು ಹೆಚ್ಚು ಪಡೆದುಕೊಳ್ಳಬೇಕು ಎಮದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪ್ರಾಚಾರ್ಯ ಡಾ. ಬಿ.ಜಿ.ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಂಥಾಲಯಕ್ಕೆ ಜ್ಞಾನದ ಕಣಜ ಎಂದು ಕರೆಯಲಾಗುತ್ತದೆ. ಇದರಲ್ಲಿ ಗ್ರಂಥ ಪಾಲಕರ ಶ್ರಮ ಬಹಳಷ್ಟಿದೆ. ಓದುವ ವ್ಯಕ್ತಿಗೆ ಜ್ಞಾನದ ಊಟವನ್ನು ಉಣಬಡಿಸಲು ಸದಾ ಸಿದ್ದನಾಗಿತ್ತಾರೆ. ಇಂತಹ ಮಹತ್ವದ ಕಾರ್ಯಕ್ರಮವನ್ನು ಪ್ರತಿಯೊಬ್ಬ ಗ್ರಂಥಪಾಲಕರು ಮಾಡುತ್ತಾರೆ. ಇಂದಿನ ಡಿಜಿಟಲ್ ಯುಗದಲ್ಲಿಯೂ ವಿಜ್ಞಾನದ ಪಿತಾಮಹ ಡಾ.ಎಸ್.ಆರ್.ರಂಗನಾಥನ್ ಅವರನ್ನು ನಾವು ಸ್ಮರಿಸಲೇಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಡಾ.ಅರವಿಂದ ಮನಗೂಳಿ, ಗ್ರಂಥಪಾಲಕ ಸತೀಶ ಬಿರಾದಾರ, ದೈಹಿಕ ನಿರ್ದೇಶಕ ಡಾ.ಅಂಬರೀಶ ಬಿರಾದಾರ, ಪ್ರೊ.ಎಸ್.ಎಮ್.ಬಿರಾದಾರ, ಪ್ರೋ.ಎಸ್.ಕೆ.ಹೂಗಾರ, ಡಾ.ಆರತಿ ಅರಳಗುಂಡಗಿ, ಪ್ರೋ.ಜ್ಯೋತಿ ಹಿಟ್ನಳ್ಳಿ, ಪ್ರೊ ಸುಧಾ ಮಹಿಶಾಳೆ, ಪ್ರೊ ಗೀತಾ ಮುರಗಾನೂರ, ಪ್ರೊ. ಜಿ.ಎಸ್.ಬಡಿಗೇರ, ಪ್ರೊ.ಜೆ.ಎಸ್.ಹಿಟ್ನಳ್ಳಿ, ಪ್ರೊ ಮಹಾಂತೇಶ ಸುಂಗಠಾಣ, ರಮೇಶ ಯಂಕಂಚಿಕರ, ವ್ಹಿ.ಬಿ.ಪಾಟೀಲ, ಎಸ್.ವಾಯ್.ನಾಯ್ಕೋಡಿ, ಎಸ್.ಗುರಲಿಂಗಪ್ಪ, ಎಸ್.ಎಮ್.ಅರ್ಜುಣಗಿ, ಎಸ್.ಎಮ್.ಇಂಗಳೆ ಸೇರಿದಂತೆ ಅನೇಕರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

