Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ರಾಜ್ಯಮಟ್ಟದ ಜೀವನಾಡಿ ಕನ್ನಡ ಸಾಹಿತ್ಯ ಸ್ಪರ್ಧೆ-2026

ಬಿ.ವಿ.ಹಿರೇಮಠ ಗೆ ‘ಸಿಂದಗಿ ಸಿರಿ’ ಆದರ್ಶ ಶಿಕ್ಷಕ ಪ್ರಶಸ್ತಿ

ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 22, 2026

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಎಲ್ಲ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಮುಖ್ಯ :ಅಲ್ಲಾಪೂರ
(ರಾಜ್ಯ ) ಜಿಲ್ಲೆ

ಎಲ್ಲ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಮುಖ್ಯ :ಅಲ್ಲಾಪೂರ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಸಿಂದಗಿ: ಇಂದಿನ ಆಧುನಿಕ ಜಗತ್ತಿನಲ್ಲಿ ನಮ್ಮ ಉತ್ತಮ ಆರೋಗ್ಯಕ್ಕೆ ಯೋಗ ಮತ್ತು ಧ್ಯಾನ ಅತ್ಯಂತ ಮುಖ್ಯವಾಗಿವೆ. ಎಲ್ಲ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಬಹಳ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಸಿಂದಗಿಯ ಯೋಗೋತ್ಸವ ಸಮಿತಿ ಪಟ್ಟಣದ ಎಚ್.ಜಿ.ಪ್ರೌಢಶಾಲಾ ಆವರಣದಲ್ಲಿ ಆ.೧೬ ರಿಂದ ಸ.೫ರ ವರೆಗೆ ಸುಮಾರು ೨೧ ದಿನಗಳ ಕಾಲ ಉಚಿತ ಯೋಗ ಮತ್ತು ಆಧ್ಯಾತ್ಮಿಕ ಪ್ರವಚನವನ್ನು ಏರ್ಪಡಿಸಿದ್ದಾರೆ. ಸಿಂದಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನತೆ ಅದರಲ್ಲಿ ಪ್ರಮುಖವಾಗಿ ಇಂದಿನ ಯುವ ಜನಾಂಗ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಯೋಗೋತ್ಸವ ಸಮಿತಿ ಸದಸ್ಯ ಅಶೋಕ ಅಲ್ಲಾಪೂರ ಹೇಳಿದರು.
ಪಟ್ಟಣದ ಸಿ.ಎಂ.ಮನಗೂಳಿ ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡ ಪತ್ರಿಕಾ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಹಿಮಾಲಯದಲ್ಲಿ ಸುಮಾರು ೬ ವರ್ಷಗಳ ಕಾಲ ಯೋಗಭ್ಯಾಸ ಮಾಡಿದ ನಿರಂಜನಶ್ರೀಗಳಿಂದ ಈ ಕಾರ್ಯಕ್ರಮ ಜರುಗುವುದು. ಪ್ರತಿ ದಿನ ಬೆಳಗ್ಗೆ ೫.೩೦ ಗಂಟೆಯಿಂದ ೬.೩೦ಗಂಟೆಯ ವರೆಗೆ ಯೋಗ ಶಿಬಿರ ಮತ್ತು ಪ್ರತಿ ದಿನ ಸಂಜೆ ೭.೦೦ ಗಂಟೆಯಿಂದ ೮.೦೦ರ ವರೆಗೆ ಆಧ್ಯಾತ್ಮಿಕ ಪ್ರವಚನ, ಭಜನೆ ನಡೆಯುವದು. ಯೋಗ ಶಿಬಿರಕ್ಕೆ ಬರುವ ಜನತೆಗೆ ನೆಲಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಕುಡಿಯಲು ಶುದ್ದ ನೀರು, ಉತ್ತಮ ಬೆಳಕಿನ ವ್ಯವಸ್ಥೆ, ವಾಹನಗಳ ನಿಲುಗಡೆ ವ್ಯವಸ್ಥೆ, ಉತ್ತಮ ಧ್ವನಿ ವರ್ಧಕ ವ್ಯವಸ್ಥೆ ಸೇರಿದಂತೆ ಅನೇಕ ವ್ಯವಸ್ಥೆಗಳ ಕಾರ್ಯ ಭರದಿಂದ ಸಾಗಿವೆ.
ಅಂದು ಬೆಳಗ್ಗೆ ಸಿಂದಗಿಯ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರ ಸಾನಿಧ್ಯದಲ್ಲಿ ಯೋಗ ಗುರು ಶ್ರೀನಿರಂಜನ ಶ್ರೀಗಳ ಸಮ್ಮುಖದಲ್ಲಿ ಹಾಗೂ ಶಾಸಕ ಅಶೋಕ ಮನಗೂಳಿ ಮತ್ತು ಸಮಿತಿಯ ಅಧ್ಯಕ್ಷ ಮಹಾಂತೇಶ ಪಟ್ಟಣಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಯೋಗ ಶಿಬಿರ ಉದ್ಘಾಟನೆ ನೆರವೇರುವುದು. ಅಂದು ಸಂಜೆ ೭.೦೦ ಗಂಟೆಗೆ ಸ್ಥಳೀಯ ಊರಿನ ಹಿರಿಯ ಮಠದ ಶ್ರೀ ಶಿವಾನಂದ ಸ್ವಾಮಿಗಳ ಸಾನಿಧ್ಯದಲ್ಲಿ ಹಾಗೂ ಭೀಮಾಶಂಕರ ಮಠದ ಶ್ರೀ ದತ್ತಯೋಗೀಶ ಶ್ರೀಗಳು, ರಾಂಪೂರ ಪಿಎ ಗ್ರಾಮದ ಆರೂಡಮಠದ ಶ್ರೀ ನಿತ್ಯಾಂದ ಮಹಾರಾಜರು, ಆದಿಶೇಷ ಸಂಸ್ಥಾನ ಮಠದ ಶ್ರೀ ನಾಗರತ್ನ ರಾಜಯೋಗಿ ವೀರರಾಜೇಂದ್ರ ಶ್ರೀಗಳು, ಗುರುದೇವಾಶ್ರಮದ ಶ್ರೀ ಶಾಂತಗಂಗಾಧರ ಶ್ರೀಗಳ ಸಮ್ಮುಖದಲ್ಲಿ ಪ್ರವಚನ ಕಾರ್ಯಕ್ರಮ ಉದ್ಘಾಟನೆ ನಡೆಯಲಿದೆ ಎಂದು ಯೋಗೋತ್ಸವ ಸಮಿತಿ ತಿಳಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಯೋಗೋತ್ಸವ ಸಮಿತಿಯ ಅಧ್ಯಕ್ಷ ಮಹಾಂತೇಶ ಪಟ್ಟಣಶೆಟ್ಟಿ, ಡಾ.ಅರವಿಂದ ಮನಗೂಳಿ, ಬಸವರಾಜ ಕಕ್ಕಳಮೇಲಿ, ಸುರೇಶ ಪೂಜಾರಿ, ಎಂ.ಎಂ.ಹಂಗರಗಿ, ಎಂ.ಎಂ.ಮುಂಡೇವಾಡಗಿ, ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ಡಾ.ಮಹಾಂತೇಶ ಹಿರೇಮಠ, ಶಿವಕುಮಾರ ಶಿವಶಿಂಪೀಗೇರ, ಪ್ರಾಚಾರ್ಯ ಎ.ಆರ್.ಹೆಗ್ಗನದೊಡ್ಡಿ, ಬಸವರಾಜ ತಾಳಿಕೋಟಿ, ಸಂಗು ಬಿರಾದಾರ, ಎಂ.ಎ.ಖತೀಬ, ಆನಂದ ಶಾಬಾದಿ, ಭೀಮನಗೌಡ ಬಿರಾದಾರ, ಮುತ್ತು ಪಟ್ಟಣಶೆಟ್ಟಿ, ಮಹಾನಂದಾ ಬಮ್ಮಣ್ಣಿ, ಡಾ.ಸೀಮಾ ವಾರದ, ಪ್ರತಿಭಾ ಚಳ್ಳಗಿ, ರಾಜು ನರಗೋದಿ, ಸಿದ್ದಲಿಂಗ ಕಿಣಗಿ, ಸುಭಾಸ ಪಾಟೀಲ, ಮಹಾಂತೇಶ ನೂಲಾನವರ, ಶಿವಾನಂದ ಆಲಮೇಲ, ಡಾ.ಅಂಬರೀಶ ಬಿರಾದಾರ, ಪಂಡೀತ ಯಂಪುರೆ, ಸೇರಿದಂತೆ ಅನೇಕರು ಇದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ರಾಜ್ಯಮಟ್ಟದ ಜೀವನಾಡಿ ಕನ್ನಡ ಸಾಹಿತ್ಯ ಸ್ಪರ್ಧೆ-2026

ಬಿ.ವಿ.ಹಿರೇಮಠ ಗೆ ‘ಸಿಂದಗಿ ಸಿರಿ’ ಆದರ್ಶ ಶಿಕ್ಷಕ ಪ್ರಶಸ್ತಿ

ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 22, 2026

ಡಾ.ಸುರೇಖಾ ರಾಠೋಡ ಗೆ “ಸಾಹಿತ್ಯ ರತ್ನ” ಪ್ರಶಸ್ತಿ ಪ್ರದಾನ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ರಾಜ್ಯಮಟ್ಟದ ಜೀವನಾಡಿ ಕನ್ನಡ ಸಾಹಿತ್ಯ ಸ್ಪರ್ಧೆ-2026
    In (ರಾಜ್ಯ ) ಜಿಲ್ಲೆ
  • ಬಿ.ವಿ.ಹಿರೇಮಠ ಗೆ ‘ಸಿಂದಗಿ ಸಿರಿ’ ಆದರ್ಶ ಶಿಕ್ಷಕ ಪ್ರಶಸ್ತಿ
    In (ರಾಜ್ಯ ) ಜಿಲ್ಲೆ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜುಲೈ 22, 2026
    In ದಿನಪತ್ರಿಕೆ
  • ಡಾ.ಸುರೇಖಾ ರಾಠೋಡ ಗೆ “ಸಾಹಿತ್ಯ ರತ್ನ” ಪ್ರಶಸ್ತಿ ಪ್ರದಾನ
    In (ರಾಜ್ಯ ) ಜಿಲ್ಲೆ
  • ಯುಕೆಪಿ ಎಂ.ಡಿ. ಕಚೇರಿಯ ಕಂಪ್ಯೂಟರ್ ಜಪ್ತಿ!
    In (ರಾಜ್ಯ ) ಜಿಲ್ಲೆ
  • ದೋಷರಹಿತ ಮತದಾರರ ಪಟ್ಟಿಗೆ ರಾಜಕೀಯಪಕ್ಷಗಳ ಸಹಕಾರ ಅಗತ್ಯ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿ ಉದ್ಯಾನಗಳಿಗೆ ಶಾಲಾ ಮಕ್ಕಳಿಗೆ ಉಚಿತ ಪ್ರವೇಶಕ್ಕೆ ಮನವಿ
    In (ರಾಜ್ಯ ) ಜಿಲ್ಲೆ
  • ಆಲಮಟ್ಟಿ ಎತ್ತರ ಹೆಚ್ಚಳ ೩ ವರ್ಷದಲ್ಲಿ ಪೂರ್ಣಗೊಳಿಸಲು ಬದ್ಧ
    In (ರಾಜ್ಯ ) ಜಿಲ್ಲೆ
  • ೧ ರಿಂದ ೫ ವರೆಗೆ ಶಿಕ್ಷಣ ಕಡ್ಡಾಯವಾಗಿ ಮಾತೃಭಾಷೆಯಲ್ಲಿರಲಿ
    In (ರಾಜ್ಯ ) ಜಿಲ್ಲೆ
  • 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಹ.ಮ.ಪೂಜಾರ
    In ವಿಶೇಷ ಲೇಖನ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.