ಯಡ್ರಾಮಿ-ಜೇವರ್ಗಿ ತಾಲೂಕು ಗಾಣಿಗ ಸಮಾಜದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಯಡ್ರಾಮಿ: ಸಮಾಜದಲ್ಲಿನ ಯುವಕರಿಗೆ ಶಿಕ್ಷಣ ಹಾಗೂ ಉದ್ಯೋಗ ದೊರಕಿಸುವ ನಿಟ್ಟಿನಲ್ಲಿ ಸಂಘಟನೆಯ ಬೆಳವಣಿಗೆಗೆ ಮುಂದಾಗಬೇಕು. ಆದರೆ ಸಂಘಟನೆ ಇನ್ನುಳಿದ ಜಾತಿ ಅಥವಾ ಸಮಾಜದ ವಿರುದ್ದವಾಗಿರದೆ ಕಷ್ಟಕ್ಕೆ ಸ್ಪಂದಿಸುವಂತಾಗಬೇಕು ಎಂದು ಗಾಣಿಗ ಗುರು ಪೀಠ, ವಿಜಯಪುರದ ವನಶ್ರೀ ಸಂಸ್ಥಾನ ಮಠದ ಶ್ರೀ ಗುರುಬಸವಕುಮಾರ ಮಹಾಸ್ವಾಮಿಗಳು ಹೇಳಿದರು.
ಯಡ್ರಾಮಿಯಲ್ಲಿ ರವಿವಾರ ಯಡ್ರಾಮಿ-ಜೇವರ್ಗಿ ತಾಲೂಕು ಗಾಣಿಗ ಸಮಾಜ ಯುವ ಘಟಕದಿಂದ ಯಡ್ರಾಮಿ ಯುವ ಘಟಕ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಆಯಸ್ಸು ಮುಗಿದ ಮೇಲೆ ಎಲ್ಲವೂ ಶೂನ್ಯ. ಇರುವಾಗಲೇ ಒಳ್ಳೆಯ ಕಾರ್ಯ ಮಾಡುವ ನಿಜ ಬದುಕು ನಿಮ್ಮದಾಗಿರಲಿ. ದ್ವೇಷ, ಅಸೂಯೆ ಬಿಟ್ಟು ಸಮಾಜದ ಬೆಳವಣಿಗೆಗೆ ಮುಂದಾಗಬೇಕು. ಹಿರಿಯರ ಮಾರ್ಗದರ್ಶನ ಹಾಗೂ ಕಿರಿಯರ ಸಲಹೆಯೊಂದಿಗೆ ಸಮಾಜದ ಅಭಿವೃದ್ಧಿಗೆ ಪ್ರತಿಯೊಬ್ಬರು ಶ್ರಮಿಸಬೇಕು ಎಂದರು.
ಇದಕ್ಕೂ ಪೂರ್ವದಲ್ಲಿ ಹಿರಿಯ ಮುಖಂಡ ಮಲ್ಲಿನಾಥಗೌಡ ಪಾಟೀಲ ಯಲಗೋಡ ಮಾತನಾಡಿ, ಇಂದಿನ ರಾಜಕೀಯ ಮೊದಲಿನಂತಿಲ್ಲ. ಆದ್ದರಿಂದ ಯುವಕರು ರಾಜಕೀಯದ ಸಹವಾಸಕ್ಕೆ ಹೋಗದೆ ಕೆಲಸದ ಕಡೆಗೆ ಗಮನಹರಿಸಿ. ಎಲ್ಲ ಪಕ್ಷದ ಮುಖಂಡರು ಒಬ್ಬರಿಗೊಬ್ಬರು ಉತ್ತಮ ಭಾಂದವ್ಯ ಹೊಂದಿರುತ್ತಾರೆ. ಸಮಾಜದ ಯುವಕರು ಅದನ್ನು ಸೂಕ್ಷö್ಮವಾಗಿ ಗಮನಿಸಿ ಮುಂದುವರೆಯಬೇಕು. ರಾಜಕೀಯದಿಂದ ವೈಯಕ್ತಿಕ ಸಂಬಂಧಗಳನ್ನು ಕೆಡಿಸಿಕೊಳ್ಳದಿರಿ ಎಂದು ಸಲಹೆ ನೀಡಿದರು.
ನಂತರ ಎಸ್.ಎಸ್.ಎಲ್.ಸಿ, ಪಿಯೂಸಿ ಟಾಪರ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು.
ಈ ವೇಳೆ ಮಾಜಿ ಶಾಸಕ ರಮೇಶ ಭೂಸನೂರ, ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ ಪ್ರಮುಖರಾದ ಶಿವಲಾಲ್‌ಸಿಂಗ್, ಮಡಿವಾಳಪ್ಪಗೌಡ ಪಾಟೀಲ ಮಾಗಣಗೇರಿ, ಮಲ್ಲಿನಾಥಗೌಡ ಪಾಟೀಲ ಯಲಗೋಡ, ಶಿವಾನಂದ ದ್ಯಾಮಗೊಂಡ, ಮಲ್ಲಿಕಾರ್ಜುನ ಲೋಣಿ, ಸುರೇಶ ಸಜ್ಜನ, ಗುರಣ್ಣಗೌಡ ಪಾಟೀಲ ನಾಗಾವಿ, ರವೀಂದ್ರ ಸಜ್ಜನಶೆಟ್ಟಿ, ಯಶವಂತ್ರಾಯಗೌಡ ರೂಗಿ, ಮಲ್ಲಣ್ಣ ಮನಗೂಳಿ, ಶರಣಕುಮಾರ ಬಿಲ್ಲಾಡ, ಭೀಮರಾವ ಗುಜಗುಂಡ, ಸಂಗಣ್ಣಗೌಡ ಪಾಟೀಲ ಕಲ್ಲೂರ, ಡಾ.ಕೇಶವರಾಯ ಕಾಭಾ, ದೇವಿಂದ್ರ ಬಿರಾದಾರ, ಶಿವರಾಜ ಖಾನಗೌಡರ, ಮಲ್ಲಣ್ಣ ಬಂಗಾರಿ, ಶ್ರೀಶೈಲಗೌಡ ಬಿರಾದಾರ, ವಿಶ್ವನಾಥ ಪಾಟೀಲ, ಸಿದ್ದನಗೌಡ ಪಾಟೀಲ ಮಾಗಣಗೇರಿ, ಸುರೇಶ ಪಾಟೀಲ ನೇದಲಗಿ, ಆನಂದ ಯತ್ನಾಳ, ಶಂಕ್ರಗೌಡ ಸುಂಬಡ ಇದ್ದರು.

