ಮುದ್ದೇಬಿಹಾಳ: ಮನೆಯ ಮಹಡಿಯ ಮೇಲೆ ಸಿಕ್ಕಿಹಾಕಿಕೊಂಡಿದ್ದ ಸಾಕು ನಾಯಿಯೊಂದನ್ನು ರಕ್ಷಿಸುವಲ್ಲಿ ಇಲ್ಲಿನ ಅಗ್ನಿಶಾಮಕ ಸಿಬ್ಬಂದಿಗಳು ಸಫಲರಾಗಿದ್ದಾರೆ.
ಪಟ್ಟಣದ ಮಹಾಂತೇಶ ನಗರದ ನಿವಾಸಿ ಮುರುಗೇಶ ಪಾಟೀಲರು ತಮ್ಮ ಜರ್ಮನ್ ಶಫರ್ಡ ಸಾಕು ನಾಯಿಯನ್ನು ಮನೆಯ ಮೇಲೆ ಕಟ್ಟಿದ್ದರು. ಕಟ್ಟಿದ ಹಗ್ಗವನ್ನು ಬಿಚ್ಚಿಕೊಂಡು ಬೇರೆ ಮನೆಯ ಮಾಳಿಗೆ ಹತ್ತಿ ಸಿಂಟೆಕ್ಸ್ ನಲ್ಲಿ ಬಿದ್ದು ಮೇಲೆ ಬರಲು ಸಾಧ್ಯವಾಗದೇ ಸಿಲುಕಿ ಒದ್ದಾಡುತ್ತಿತ್ತು. ಅದರ ಚೀರಾಟ ಜಾಸ್ತಿಯಾಗುತ್ತಿದ್ದಂತೆ ಗಮನಿಸಿದ ನಿವಾಸಿಗಳು ತಕ್ಷಣ ಅಗ್ನಿಶಾಮಕ ಇಲಾಖೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಸಿಂಟೆಕ್ಸ್ ನಲ್ಲಿನ ನೀರನ್ನು ಖಾಲಿ ಮಾಡಿ ಸಾಕು ನಾಯಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿಗಳಾದ ನಾಗೇಂದ್ರ ರಾಠೋಡ, ಬಿ.ಬಿ.ನಾಟಿಕಾರ, ವಿ.ಎಲ್.ಪೂಜಾರಿ, ಕೆ.ಎಸ್.ಅಜಮನಿ, ಎನ್.ಬಿ.ಬಿರಾದಾರ, ಎಸ್.ಎಚ್.ಅವಟಿ, ಚಂದ್ರಶೇಖರ ಮಾದರ, ಜಾವೇದ ಜಮಖಂಡಿ, ವಾಯ್ ಎಸ್ ಗೌಡರ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

