Author: editor.udayarashmi@gmail.com

ಮೋರಟಗಿ:ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣ ಎಂಬುದು ಉಡುಗೊರೆಯಾಗಿ ದೊರೆತು ಯಶಸ್ಸಿನ ಜೀವನಕ್ಕೆ ಆಸರೆಯಾಗುತ್ತದೆ ಎಂದು ಜೇವರ್ಗಿ ಸರಕಾರಿ ಪ್ರಥಮದರ್ಜೆ ಕಾಲೇಜು ಪ್ರಾಧ್ಯಾಪಕ ಪ್ರೋ.ಗಿರೀಶ ಹೇಳಿದರು.ಅವರು ಮೋರಟಗಿಯ ಕಲ್ಪವೃಕ್ಷ ಪದವಿ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಶುಭಕೋರುವ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡಿದರು.ವಿದ್ಯಾರ್ಥಿಗಳು ನಿರಂತರ ಪರಿಶ್ರಮ ಪಟ್ಟರೆ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ.ಸಾಧನೆಗೆ ಮುಂದಾದಾಗ ಸಾವಿರ ಸಮಸ್ಯೆಗಳು ಅಡ್ಡಗಾಲು ಹಾಕುತ್ತವೆ. ಅವುಗಳನ್ನೆಲ್ಲ ಮೆಟ್ಟಿ ನಿಂತು ನಿಮ್ಮ ಪಾಲಕರು ಕಂಡ ಕನಸು ನನಸು ಮಾಡಿದಾಗ ಮಾತ್ರ ನಿಮ್ಮ ತಾಯಿ ತಂದೆಗೆ ಮರು ಜನ್ಮ ಕೊಟ್ಟಂತೆ ಎಂದರು.ಅಧ್ಯಕ್ಷತೆ ವಹಿಸಿದ ಸಂಸ್ಥಾಪಕ ಶಿವಶರಣಗೌಡ ಬಿರಾದಾರ ಮಾತನಾಡಿ,ವಿದ್ಯಾರ್ಥಿ ಜೀವನದಲ್ಲಿ ಮನಸ್ಸು ಕೇಂದ್ರಿಕೃತವಾದಾಗ ಮಾತ್ರ ಬಹುದೊಡ್ಡ ಸಾಧನೆಯ ಹಾದಿ ಸುಗಮವಾಗುತ್ತದೆ. ಮಕ್ಕಳ ಭವಿಷ್ಯ ಉಜ್ವಲವಾಗಲಿ,ನನ್ನ ಮಗು ಉನ್ನತ ಹುದ್ದೆಗೆರಲಿ ಎಂದು ತಮ್ಮ ಪಾಲಕರು ಹಗಲಿರುಳು ದುಡಿದು ಹಗಲು ಕನಸು ಕಾಣುತ್ತಾ ಹತ್ತಾರು ದೇವರಿಗೆ ಹರಕೆ ಹೊತ್ತು ಕಷ್ಟ ಪಡುತ್ತಾರೆ.ಪಾಲಕರ ಕನಸು ನನಸಾಗಿಸುವ ಕರ್ತವ್ಯ ತಮ್ಮದಾಗಿದೆ.ದುಶ್ಚಟಗಳಿಗೆ ಅಂಟಿಕೊಳ್ಳದೆ ಬೋಧಕರು ಹಾಕಿ ಕೊಟ್ಟ…

Read More

ದೇವರಹಿಪ್ಪರಗಿ: ಆಲಮಟ್ಟಿ ಆಣೆಕಟ್ಟಿನಲ್ಲಿ ಸಾಕಷ್ಟು ನೀರು ಸಂಗ್ರಹವಾಗಿದ್ದು ತಕ್ಷಣವೇ ಚಿಮ್ಮಲಗಿ ಮುಖ್ಯ ಕಾಲುವೆಯ ನಾಗಠಾಣ ಉಪಕಾಲುವೆಗೆ ನೀರು ಹರಿಸಬೇಕೆಂದು ಆಗ್ರಹಿಸಿ ಹಿಟ್ಟಿನಹಳ್ಳಿ ಗ್ರಾಮದ ತಾಂಡಾ, ಸಂಜಯನಗರ, ಕಡಕಿತಾಂಡಾದ ಜನತೆ ಗ್ರೇಡ್-೨ ತಹಶೀಲ್ದಾರ್ ಎಸ್ ಎಚ್ ರಾಠೋಡ ಅವರಿಗೆ ಮನವಿ ಸಲ್ಲಿಸಿದರು.ಪಟ್ಟಣದ ತಹಶೀಲ್ದಾರ್ ಕಚೇರಿಗೆ ಸೋಮವಾರ ಆಗಮಿಸಿದ ಹಿಟ್ಟಿನಹಳ್ಳಿ ಸಹಿತ ವಿವಿಧ ತಾಂಡಾದ ಜನತೆ ಕಾಲುವೆಗೆ ನೀರು ಹರಿಸಲು ಆಗ್ರಹಿಸಿ, ತಾಲ್ಲೂಕು ಸೇರಿದಂತೆ ಮತಕ್ಷೇತ್ರದಲ್ಲಿ ವಾಡಿಕೆಯಂತೆ ಮುಂಗಾರಿನ ಬಹುತೇಕ ಮಳೆಗಳು ರೈತ ಸಮುದಾಯದ ನಿರೀಕ್ಷೆಯಂತೆ ಆಗದೇ ಇದ್ದು, ಇದೇ ಸಂದರ್ಭದಲ್ಲಿ ಕಾಲುವೆಗಳಿಗೆ ನೀರು ಪೂರೈಸುವ ಆಲಮಟ್ಟಿ ಆಣೆಕಟ್ಟಿನಲ್ಲಿ ದಿನದಿಂದ ದಿನಕ್ಕೆ ನೀರು ಸಂಗ್ರಹವಾಗುತ್ತಿದೆ. ಜೊತೆಗೆ ಈಗ ಮಹಾರಾಷ್ಟ್ರ ಸೇರಿದಂತೆ ಕೃಷ್ಣಾ ನದಿ ತೀರದ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದ್ದು, ಆಲಮಟ್ಟಿ ಆಣೆಕಟ್ಟಿನಲ್ಲಿ ಹೆಚ್ಚಿನ ನೀರು ಸಂಗ್ರಹವಾಗಿದೆ. ಈ ನೀರನ್ನು ಕಾಲುವೆಗಳಿಗೆ ಹರಿಸಲು ಯಾವುದೇ ತೊಂದರೆಯಿಲ್ಲ. ಅದಕ್ಕಾಗಿ ತಕ್ಷಣವೇ ಕಾಲುವೆಗಳ ಮುಖಾಂತರ ನಿರಂತರ ನೀರು ಹರಿಸಿ ತಾಂಡಾಗಳಿಗೆ ಅನುಕೂಲ ಮಾಡಿಕೊಡಬೇಕು.ದೇವರಹಿಪ್ಪರಗಿ ಭಾಗದ ಚಿಮ್ಮಲಗಿ ಮುಖ್ಯ ಕಾಲುವೆ…

Read More

ದೇವರಹಿಪ್ಪರಗಿ:ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಡಿ.ಜಿ.ಸಾಗರ ಬಣ) ತಾಲ್ಲೂಕು ಶಾಖೆಯಡಿ ಜರುಗಿದ ಸಭೆಯಲ್ಲಿ ೨೫ ನೂತನ ಗ್ರಾಮ ಶಾಖೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಸನ್ಮಾನಿಸಲಾಯಿತು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಜರುಗಿದ ಸಭೆಯಲ್ಲಿ ಜಿಲ್ಲಾ ಸಂಚಾಲಕ ಸಿದ್ದು ರಾಯಣ್ಣವರ ಅಧ್ಯಕ್ಷತೆ ವಹಿಸಿದ್ದರು. ಡಿಎಸ್‌ಎಫ್ ಜಿಲ್ಲಾ ಸಂಚಾಲಕ ವೈ.ಸಿ.ಮಯೂರ, ಜಿಲ್ಲಾ ಸಂಘಟನಾ ಸಂಚಾಲಕ ರಮೇಶ ಧರಣಾಕರ, ವಕೀಲ ಮಲ್ಲು ಬನಸೋಡೆ, ಮಹಾಂತೇಶ ಸಾಸಾಬಾಳ, ಪ್ರಥಮ ದರ್ಜೆ ಗುತ್ತಿಗೆದಾರ ಯಶವಂತರಾವ, ನಿವೃತ್ತ ಪೊಲೀಸ್ ಅಧಿಕಾರಿ ಪರಶುರಾಮ ಮಲ್ಲಾರಿ, ತಾಲ್ಲೂಕುಗಳ ಸಂಚಾಲಕರಾದ ಶರಣು ಚಲವಾದಿ(ಸಿಂದಗಿ), ರಮೇಶ ನಿಂಬಾಳ್ಕರ್(ಇಂಡಿ) ದೇವೇಂದ್ರ ಭಾವಿಮನಿ(ಬಬಲೇಶ್ವರ), ಜಾನು ಗುಡಿಮನಿ(ದೇ.ಹಿಪ್ಪರಗಿ) ನೇತೃತ್ವದಲ್ಲಿ ತಾಲ್ಲೂಕಿನ ೨೫ ಗ್ರಾಮಗಳ ಸಂಚಾಲಕರು ಹಾಗೂ ಸಂಘಟನಾ ಸಂಚಾಲಕರನ್ನಾಗಿ ನೇಮಕಗೊಳಿಸಲಾಯಿತು.ದೇವರಹಿಪ್ಪರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಶೀರ್‌ಅಹ್ಮದ್ ಬೇಪಾರಿ, ಅಲ್ಪಸಂಖ್ಯಾತರ ತಾಲ್ಲೂಕು ಘಟಕದ ಸಂಚಾಲಕ ಜಬ್ಬರ್ ಚೌಧರಿ, ರಾಘವೇಂದ್ರ ಗುಡಿಮನಿ, ಅಬ್ದುಲ್ಲಾ ಚೌಧರಿ, ಕಮಲಸಾಬ ಕಾಟಮನಹಳ್ಳಿ, ಶಿಕ್ಷಕ ಅರುಣ ಕೋರವಾರ, ವಿಲಾಸ ಕೊಟಗಿ, ದೇವೇಂದ್ರ ಬನಸೋಡೆ, ಮಹಾಂತೇಶ ಕೂಟನೂರ,…

Read More

ತಾಳಿಕೋಟೆ: ರಾಷ್ಟ್ರಧ್ವಜ ನೀತಿಸಂಹಿತೆ, ನಿಯಮಗಳ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವಿರಬೇಕು. ರಾಷ್ಟ್ರೀಯ ಕಾಯ೯ಕ್ರಮಗಳಲ್ಲಿ ರಾಷ್ಟ್ರಧ್ವಜಾರೋಹಣ ಸಮಯದಲ್ಲಿ ಸಾಕಷ್ಟು ತಪ್ಪುಗಳು ನಡೆಯುತ್ತವೆ, ಆ ನಿಟ್ಟಿನಲ್ಲಿ ಎಲ್ಲರೂ ಜಾಗೃತರಾಗಬೇಕು. ಎಲ್ಲರೂ ರಾಷ್ಟ್ರಧ್ವಜದ ಗೌರವವನ್ನು ಕಾಪಾಡಬೇಕು ಎಂದು ಭಾರತ ಸೇವಾದಳದ ವಲಯ ಸಂಘಟಕ ನಾಗೇಶ ಡೋಣೂರ ಹೇಳಿದರು.ಭಾರತ ಸೇವಾದಳ ಜಿಲ್ಲಾ ಸಮಿತಿ ವಿಜಯಪುರ, ತಾಲೂಕ ಸಮಿತಿ ಮುದ್ದೇಬಿಹಾಳ, ಶಾಲಾ ಶಿಕ್ಷಣ ಇಲಾಖೆ ವಿಜಯಪುರ ಹಾಗೂ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾ ವಿದ್ಯಾಲಯ ತಾಳಿಕೋಟೆ ಇವರ ಸಹಯೋಗದಲ್ಲಿ ಎನ್. ಎಸ್ ಎಸ್ ಘಟಕದ ಅಡಿಯಲ್ಲಿ ಆಯೋಜಿಸಿರುವ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶ್ರೀ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಕುರಿತಾದ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಧ್ವಜ ನೀತಿಸಂಹಿತೆ ಪ್ರಕಾರ ಧ್ವಜಾರೋಹಣವನ್ನು ಎಷ್ಟು ಶಿಸ್ತು ಬದ್ಧವಾಗಿ ಮಾಡುತ್ತೇವೆ ಅಷ್ಟೇ ಶಿಸ್ತು ಬದ್ದವಾಗಿ ಧ್ವಜ ಅವರೋಹಣವನ್ನು ಮಾಡಬೇಕು, ಹಾಗೇ ಧ್ವಜಾರೋಹಣದ ಸಮಯ ಬೆಳಿಗ್ಗೆ 7-05 ನಿಮಿಷದಿಂದ 9-00 ಗಂಟೆವರೆಗೂ ಮಾಡಬಹುದು, ಹರಿದುಹೋದ, ಮಾಸಿಹೋದ ಧ್ವಜಗಳನ್ನು ಬಳಸಬಾರದು…

Read More

ಇಂಡಿ: ಇಲಾಖೆಗೆ ಚ್ಯುತಿ ತರುವ ಕೆಲಸ ಯಾರೂ ಮಾಡದೆ, ಗೌರವ ತರುವ ಕೆಲಸ ಮಾಡಬೇಕು. ಸಮಾಜದಲ್ಲಿರುವ ಕಟ್ಟಕಡೆಯ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಲಿ ಎಂಬ ಸದುದ್ದೇಶದಿಂದ ಸರ್ಕಾರ ವಸತಿ ನಿಲಯಗಳನ್ನು ಆರಂಭಿಸಿ ಮಕ್ಕಳಿಗೆ ವಸತಿ,ಊಟ,ಇತರೆ ಸೌಲಭ್ಯಗಳನ್ನು ಕಲ್ಪಿಸಿದೆ. ವಸತಿ ನಿಲಯದ ಎಲ್ಲ ನಿಲಯ ಪಾಲಕರು ವಸತಿ ನಿಲಯದಲ್ಲಿ ಪ್ರವೇಶ ಪಡೆದ ಮಕ್ಕಳಿಗೆ ಗುಣಮಟ್ಟದ ಊಟ ಹಾಗೂ ಸರ್ಕಾರದ ಇತರೆ ಸೌಲಭ್ಯಗಳು ನೀಡಬೇಕು ಎಂದು ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ ಲಮಾಣಿ ಹೇಳಿದರು.ಅವರು ತಾಲೂಕು ಸಮಾಜ ಕಲ್ಯಾಣ ಇಲಾಖೆಗೆ ಸಹಾಯಕ ನಿರ್ದೇಶಕರಾಗಿ ಆಗಮಿಸಿದ ಪ್ರಯುಕ್ತ ವಸತಿ ನಿಲಯದ ನಿಲಯ ಪಾಲಕರು ಹಾಗೂ ಸಿಬ್ಬಂದಿಯವರು ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವಿಕರಿಸಿ ಮಾತನಾಡಿದರು.ಸರ್ಕಾರಿ ನೌಕರಿ ಎಂದ ಮೇಲೆ ವರ್ಗಾವಣೆ ಹೊಂದುವುದು ಸಹಜ. ವರ್ಗಾವಣೆ ಹೊಂದಿದ ಸ್ಥಳದಲ್ಲಿ ಕರ್ತವ್ಯಕ್ಕೆ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸುವುದು ಮುಖ್ಯ. ಹೀಗಾಗಿ ವಸತಿ ನಿಲಯದ ನಿಲಯ ಪಾಲಕರು ಆಡಳಿತದಲ್ಲಿ ಸಹಕಾರ ನೀಡಿ ವಸತಿ ನಿಲಯಗಳ ಸುಧಾರಣೆಗೆ…

Read More

ವಿಜಯಪುರ: ಪುಸ್ತಕದ ಮೌಲ್ಯ ಅರಿಯಲು ಗ್ರಂಥಾಲಯ ಅವಶ್ಯ.ಪುಸ್ತಕ ನಮ್ಮ ಜೀವನಕ್ಕೆ ಬೆಳಕು ಕೊಡುವಂತಹದು. ಹೆಚ್ಚೆಚ್ಚು ಸದಸ್ಯರನ್ನು ಮಾಡಿ ಗ್ರಂಥಾಲಯದ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.ಅವರು ತಾಲೂಕಿನ ನಾಗಠಾಣ ಗ್ರಾಮದ ಅರಿವು ಕೇಂದ್ರ ಗ್ರಂಥಾಲಯದಲ್ಲಿ ಹಮ್ಮಿಕೊಂಡ ಗ್ರಂಥಪಾಲಕರ ದಿನಾಚರಣೆಯ ನಿಮಿತ್ತ ‘ಸುಶಿಕ್ಷಿತ ಸಮಾಜ ನಿರ್ಮಾಣದಲ್ಲಿಗ್ರಂಥಾಲಯದ ಪಾತ್ರ’ಕುರಿತು ಮಾತನಾಡಿದರು.ಗ್ರಂಥಾಲಯವು ಜ್ಞಾನದ ಕಣಜವಾಗಿದ್ದು, ಓದುಗನಿಗೆ ಜ್ಞಾನವನ್ನು ಉಣಬಡಿಸುವ ಗ್ರಂಥಪಾಲಕರ ಶ್ರಮ ಬಹಳವಿದೆ. ಭಾರತದಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಬೆಳೆಯುವುದಕ್ಕೆ ಡಾ. ಎಸ್‌ ಆರ್‌ ರಂಗನಾಥನ್‌ ಪ್ರಮುಖ ಕಾರಣ. ಅವರು ನೀಡಿದ ಗ್ರಂಥಾಲಯದ ಪಂಚ ಸೂತ್ರಗಳು ಜಗನ್ಮಾನ್ಯತೆ ಗಳಿಸಿವೆ ಎಂದು ಹೇಳಿದರು.ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಸಾಯಬಣ್ಣ ಗೌಡೆನ್ನವರ ಮಾತನಾಡಿ, ದೇಹಕ್ಕೆ ಅನ್ನ, ನೀರು, ಗಾಳಿ, ಎಷ್ಟು ಮುಖ್ಯವೋ ಹಾಗೆಯೇ ಮಾನವನ ಮತ್ತು ಸಮಾಜದ ವಿಕಾಸಕ್ಕೆ ಪುಸ್ತಕಗಳು ಬಹು ಮುಖ್ಯ. ಪುಸ್ತಕಗಳು ಸದಾ ಒಳ್ಳೆಯ ಆಲೋಚನೆಗೆ ದಾರಿ ಮಾಡಿಕೊಟ್ಟು, ಸುಶಿಕ್ಷಿತ ಸಮಾಜ ನಿರ್ಮಿಸುವಲ್ಲಿ ನಿರ್ಣಾಯಕವಾಗಿವೆ ಎಂದು ಹೇಳಿದರು.ಗ್ರಂಥಪಾಲಕ ಮಂಜುನಾಥ ಗಂಗನಳ್ಳಿ ಅಧ್ಯಕ್ಷತೆ ವಹಿಸಿ…

Read More

ಸರ್ಕಾರಿ ಪ್ರೌಢ ಶಾಲೆಯ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ ನೀಡಿದ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ವಿಜಯಪುರ: ನಾವು ಜೀವನದಲ್ಲಿ ಯಶಸ್ವಿಯಾಗಬೇಕಾದರೆ ನಿರಂತರ ಓದು ಮತ್ತು ಕಠಿಣ ಪರಿಶ್ರಮ ಅತ್ಯವಶ್ಯಕವಾಗಿದ್ದು ವಿದ್ಯಾರ್ಥಿಗಳು ಅತ್ಯುತ್ತಮ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಆಗ ಮಾತ್ರ ನಾವು ಜೀವನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.ಅವರು ತಮ್ಮ ಸ್ವಗ್ರಾಮ ಬಬಲೇಶ್ವರ ತಾಲೂಕಿನ ಮಮದಾಪುರದ ತಾವು ಹೈಸ್ಕೂಲ ವಿದ್ಯಾಭ್ಯಾಸ ಮಾಡಿದ್ದ ಕರ್ನಾಟಕ ಪಬ್ಲಿಕ್ ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ “ಸಾಧಕರೊಂದಿಗೆ ಸಂವಾದ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಶಿಕ್ಷಣ ಪ್ರೇಮಿ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ ಪಾಟೀಲರ ಆಶಯದಂತೆ ಹಾರ ತುರಾಯಿ ಶಾಲು ಸನ್ಮಾನಗಳ ಬದಲಾಗಿ, ಸಂಗಮೇಶ ಬಬಲೇಶ್ವರ ಅವರು ಭೇಟಿ ನೀಡಿರುವ ಸರಕಾರಿ ಕಚೇರಿಗಳು ಹಾಗೂ ಹಾಸ್ಟೆಲ್ ಗಳಲ್ಲಿ, ಸಭೆ ಸಮಾರಂಭಗಳಲ್ಲಿ ತಮಗೆ ಉಡುಗೊರೆಯಾಗಿ ನೀಡಿರುವ ಉತ್ಕೃಷ್ಟ ಪುಸ್ತಕಗಳು ಹಾಗೂ ನೋಟ್ ಪುಸ್ತಕಗಳನ್ನು ತಾವು ಕಲಿತಿರುವ ಮಮದಾಪುರದ…

Read More

ಚಡಚಣ: ಪಟ್ಟಣದ ಶ್ರೀ ಸಂಗಮೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಮಹಾವಿದ್ಯಾಲಯ ಚಡಚಣ ಗ್ರಂಥಾಲಯ ವಿಭಾಗದ ವತಿಯಿಂದ ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲಿ ಎರಡು ಸಾವಿರದ ಮೂವತ್ತರ ಹೊತ್ತಿಗೆ ಗ್ರಂಥಾಲಯದ ಸ್ಥಿತಿ ವಿಷಯದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಿತು‌ಬೀದರ್ ವಿಶ್ವವಿದ್ಯಾಲಯ ಕುಲಪತಿಬಿ ಎಸ್ ಬಿರಾದಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಒಂದು ಕಾಲೇಜಿನ ಫಲಿತಾಂಶ ನಿರ್ಧಾರವಾಗುವುದು ಆ ಮಹಾವಿದ್ಯಾಲಯದ ಗ್ರಂಥಾಲಯ ಮತ್ತು ಪ್ರಾಧ್ಯಾಪಕ ಮಿತ್ರರನ್ನು ಅವಲಂಬಿಸಿರುತ್ತದೆ. ಇಂದಿನ ಆಧುನಿಕ ಯುಗದಲ್ಲಿ ಹೇಗೆ ಹೆಮ್ಮರವಾಗಿ ಮಾಹಿತಿ ತಂತ್ರಜ್ಞಾನ ಬೆಳೆಯುತ್ತಿದೆ ಹಾಗೆ ಶಿಕ್ಷಣ ವ್ಯವಸ್ಥೆಯ ಊದುಗಾರಿಕೆಯಲ್ಲಿ ಮಾಹಿತಿ ತಂತ್ರಜ್ಞಾನ ಬಳಸಿಕೊಳ್ಳಬೇಕು ಅಂದಾಗ ಮಾತ್ರ ಓದುಗರಿಗೆ ಪ್ರಚಲಿತ ವಿದ್ಯಮಾನಕ್ಕೆ ತಕ್ಕ ಮಾಹಿತಿ ಪಡೆದುಕೊಳ್ಳಲು ಸಾಧ್ಯ ಎಂದು ಹೇಳಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಪಿಜಿ ತಡಸದ ಮಾತನಾಡಿ, ಇಂದಿನ ದಿನಮಾನದಲ್ಲಿ ವಿಜ್ಞಾನ ತಂತ್ರಜ್ಞಾನ ಯಥೇಚ್ಛವಾಗಿ ಬೆಳೆಯುತ್ತಿದ್ದು ಹಾಗಾಗಿ ಗ್ರಂಥಾಲಯದಲ್ಲಿ ಕೇವಲ ಮುದ್ರತ ಪುಸ್ತಕಕ್ಕಿಂತ ಇಂದಿನ ದಿನಮಾನಕ್ಕೆ ತಕ್ಕಂತೆ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಜೊತೆಗೆ ಓದುಗರಲ್ಲಿ ತಾಂತ್ರಿಕ…

Read More

ಮುದ್ದೇಬಿಹಾಳ: ಪಟ್ಟಣದ ಹುಡ್ಕೋ ಬಡಾವಣೆಯ ೧೦ ನೇ ಅಡ್ಡ ರಸ್ತೆಯ ಉದ್ಯಾನವನದ ಬಳಿ ಇರುವ ನೂತನ ವರಮಾರುತೇಶ್ವರ ದೇವಸ್ಥಾನದ ಉದ್ಘಾಟನೆ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು.ಪಟ್ಟಣದ ಕಿಲ್ಲಾ ಗಲ್ಲಿಯಲ್ಲಿರುವ ಲಕ್ಷ್ಮೀ ಭಾವಿಯಲ್ಲಿ ವರಮಾರುತೇಶ್ವರರ ಮೂರ್ತಿಗೆ ಗಂಗಾ ಸ್ನಾನ ನೆರವೇರಿಸಿ, ವಿಶೇಶ ಪೂಜೆ ಸಲ್ಲಿಸಿ ಅಲ್ಲಿಂದ ಸರಾಫ್ ಬಜಾರ, ದ್ಯಾಮವ್ವ ದೇವಿ ದೇವಸ್ಥಾನ, ಬಸವೇಶ್ವರ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ ಮಾರ್ಗವಾಗಿ ದೇವಸ್ಥಾನದವರೆಗೆ ಅದ್ಧೂರಿ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯ ಉದ್ದಕ್ಕೂ ಕುಂಭ ಹೊತ್ತು ಮಹಿಳೆಯರು ಸಾಗಿದರೆ ಡಿಜೆ ಹಾಡಿಗೆ ಯುವಕರು ಸೇರಿದಂತೆ ಪುರುಷರು ಕುಣಿದು ಕುಪ್ಪಳಿಸುತ್ತ ಸಾಗಿದರು. ಮೆರವಣಿಗೆ ದೇವಸ್ಥಾನಕ್ಕೆ ತಲುಪಿದ ಬಳಿಕ ೨೫೦ ಮುತೈದೆಯರಿಗೆ ಭಾರತಿ ಮಲ್ಲಿಕಾರ್ಜುನ ತೆಗ್ಗಿನಮಠ ಕುಟುಂಬದವರು ಉಡಿ ತುಂಬಿದರು. ನಂತರ ಮೂರ್ತಿಯನ್ನು ಜಲಾಧೀವಾಸ, ಧಾನ್ಯಾಧೀವಾಸ, ಪುಷ್ಪಾಧೀವಾಸ, ಶಯನಾಧೀವಾಸದಲ್ಲಿರಿಸಿಲಾಯಿತು.ಶನಿವಾರ ಬೆಳಿಗ್ಗೆ ಭ್ರಾಹ್ಮೀ ಮಹೂರ್ತದಲ್ಲಿ ಗಣಹೋಮ, ರುದ್ರಹೋಮ, ವಾಸ್ತುಹೋಮ, ರುದ್ರಾಭಿಷೇಕದ ಜೊತೆಗೆ ವಿಶೇಶ ಪೂಜಾ ಕೈಂಕರ್ಯವನ್ನು ಲೊಟಗೇರಿಯ ಗುರುಮೂರ್ತಿ ದೇವರು, ವಿವೇಕಾನಂದ ಶಾಸ್ತಿç ಮತ್ತು…

Read More

ಮುದ್ದೇಬಿಹಾಳ: ಪ್ರಧಾನಿ ನರೇಂದ್ರ ಮೋದಿಯವರ ಆದೇಶದಂತೆ ಹರ್‌ಘರ್ ತಿರಂಗ ಯಾತ್ರೆಯ ಪೂರ್ವಭಾವಿ ಸಭೆಯನ್ನು ಭಾಜಪಾ ಮಂಡಲದಿಂದ ಹಮ್ಮಿಕೊಳ್ಳಲಾಗಿತ್ತು.ಈ ವೇಳೆ ಪಕ್ಷದ ಮಂಡಲ ಅದ್ಯಕ್ಷ ಜಗದೀಶ್ ಪಂಪಣ್ಣವರ ಪ್ರತಿ ಬೂತ್ ಮಟ್ಟದಲ್ಲಿ ಹರ್‌ಘರ್ ತಿರಂಗಾ ಹಮ್ಮಿಕೊಳ್ಳಬೇಕು ಎಂದು ಕರೆ ನೀಡಿದರು. ಜೊತೆಗೆ ಪ್ರತಿ ಜಿಲ್ಲಾ ಪಂಚಾಯತ ಮತ್ತು ತಾಲೂಕ ಪಂಚಾಯತ ಸಂಚಾಲಕ ಮತ್ತು ಸಹ ಸಂಚಾಲಕರನ್ನು ನೇಮಿಸಿ ರಾಷ್ಟ್ರ ದ್ವಜವನ್ನು ಎಲ್ಲ ಬೂತಿನ ಕಾರ್ಯಕರ್ತರಿಗೆ ತಲುಪಿಸಿದರು.ಈ ವೇಳೆ ತಾಲೂಕು ಕಾರ್ಯದರ್ಶಿ ಸಂಜು ಬಾಗೇವಾಡಿ, ಮಹಿಳಾ ಮೋರ್ಚಾ ಅದ್ಯಕ್ಷೆ ಸಂಗಮ್ಮ ದೇವರಳ್ಳಿ, ಯುವ ಮೋರ್ಚಾ ಅದ್ಯಕ್ಷರು ಗಿರೀಶಗೌಡ ಪಾಟೀಲ, ಗೌರಮ್ಮ ಹುನಗುಂದ, ನಾಗರಾಜ ಕಮತರ, ಶಿವರಾಜ ರಾಠೋಡ, ಪವನ ಲಮಾಣಿ, ಪ್ರೀತಿ ಕಂಬಾರ, ಗಂಗಮ್ಮ ಚೌದರಿ, ಕಾವೇರಿ ಕಂಬಾರ, ವಿಠ್ಠಲ್ ಖಾನಗೌಡರ, ಬಿಳೆನಸಿದ್ದ ವಡಿಯರ, ಡಾ. ಈರಣ್ಣ ಬಡಿಗೇರ ಸೇರಿದಂತೆ ಮತ್ತಿತರರು ಇದ್ದರು.

Read More