ಮೋರಟಗಿ:ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣ ಎಂಬುದು ಉಡುಗೊರೆಯಾಗಿ ದೊರೆತು ಯಶಸ್ಸಿನ ಜೀವನಕ್ಕೆ ಆಸರೆಯಾಗುತ್ತದೆ ಎಂದು ಜೇವರ್ಗಿ ಸರಕಾರಿ ಪ್ರಥಮದರ್ಜೆ ಕಾಲೇಜು ಪ್ರಾಧ್ಯಾಪಕ ಪ್ರೋ.ಗಿರೀಶ ಹೇಳಿದರು.
ಅವರು ಮೋರಟಗಿಯ ಕಲ್ಪವೃಕ್ಷ ಪದವಿ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಶುಭಕೋರುವ ಸಮಾರಂಭದಲ್ಲಿ ಜ್ಯೋತಿ ಬೆಳಗಿಸಿ ಮಾತನಾಡಿದರು.
ವಿದ್ಯಾರ್ಥಿಗಳು ನಿರಂತರ ಪರಿಶ್ರಮ ಪಟ್ಟರೆ ಮಾತ್ರ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ.ಸಾಧನೆಗೆ ಮುಂದಾದಾಗ ಸಾವಿರ ಸಮಸ್ಯೆಗಳು ಅಡ್ಡಗಾಲು ಹಾಕುತ್ತವೆ. ಅವುಗಳನ್ನೆಲ್ಲ ಮೆಟ್ಟಿ ನಿಂತು ನಿಮ್ಮ ಪಾಲಕರು ಕಂಡ ಕನಸು ನನಸು ಮಾಡಿದಾಗ ಮಾತ್ರ ನಿಮ್ಮ ತಾಯಿ ತಂದೆಗೆ ಮರು ಜನ್ಮ ಕೊಟ್ಟಂತೆ ಎಂದರು.
ಅಧ್ಯಕ್ಷತೆ ವಹಿಸಿದ ಸಂಸ್ಥಾಪಕ ಶಿವಶರಣಗೌಡ ಬಿರಾದಾರ ಮಾತನಾಡಿ,ವಿದ್ಯಾರ್ಥಿ ಜೀವನದಲ್ಲಿ ಮನಸ್ಸು ಕೇಂದ್ರಿಕೃತವಾದಾಗ ಮಾತ್ರ ಬಹುದೊಡ್ಡ ಸಾಧನೆಯ ಹಾದಿ ಸುಗಮವಾಗುತ್ತದೆ. ಮಕ್ಕಳ ಭವಿಷ್ಯ ಉಜ್ವಲವಾಗಲಿ,ನನ್ನ ಮಗು ಉನ್ನತ ಹುದ್ದೆಗೆರಲಿ ಎಂದು ತಮ್ಮ ಪಾಲಕರು ಹಗಲಿರುಳು ದುಡಿದು ಹಗಲು ಕನಸು ಕಾಣುತ್ತಾ ಹತ್ತಾರು ದೇವರಿಗೆ ಹರಕೆ ಹೊತ್ತು ಕಷ್ಟ ಪಡುತ್ತಾರೆ.ಪಾಲಕರ ಕನಸು ನನಸಾಗಿಸುವ ಕರ್ತವ್ಯ ತಮ್ಮದಾಗಿದೆ.ದುಶ್ಚಟಗಳಿಗೆ ಅಂಟಿಕೊಳ್ಳದೆ ಬೋಧಕರು ಹಾಕಿ ಕೊಟ್ಟ ಮಾರ್ಗದಲ್ಲಿ ವಿದ್ಯಾಭ್ಯಾಸ ಮಾಡಿ ಆದರ್ಶ ವಿದ್ಯಾರ್ಥಿಗಳಾಗಿ ಹೊರಹುಮ್ಮಬೇಕು ಎಂದು ಸಲಹೆ ನೀಡಿದರು.
ನಂತರ ವಿದ್ಯಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮ ಜರುಗಿದವು.
ಸಂಸ್ಥೆಯ ಆಢಳಿತಾಧಿಕಾರಿ ಎಸ್ ಎಚ್ ಧೂಳಬಾ ಮುಖ್ಯ ಅತಿಥಿ ಸ್ಥಾನ ವಹಿಸಿದ್ದರು.
ಪ್ರಾಂಶುಪಾಲ ಎ ಬಿ ಸಿಂದಗಿ, ಪ್ರಾಚಾರ್ಯ ಎಸ್ ಬಿ ಬಿರಾದಾರ, ಉಪನ್ಯಾಸಕ ಎಸ್ ಎಸ್ ನಿಗಡಿ, ಎಸ್ ಎಸ್ ಬಿರಾದಾರ, ಜಿ ಎಮ್ ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

