ಮುದ್ದೇಬಿಹಾಳ: ಪ್ರಧಾನಿ ನರೇಂದ್ರ ಮೋದಿಯವರ ಆದೇಶದಂತೆ ಹರ್‌ಘರ್ ತಿರಂಗ ಯಾತ್ರೆಯ ಪೂರ್ವಭಾವಿ ಸಭೆಯನ್ನು ಭಾಜಪಾ ಮಂಡಲದಿಂದ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಪಕ್ಷದ ಮಂಡಲ ಅದ್ಯಕ್ಷ ಜಗದೀಶ್ ಪಂಪಣ್ಣವರ ಪ್ರತಿ ಬೂತ್ ಮಟ್ಟದಲ್ಲಿ ಹರ್‌ಘರ್ ತಿರಂಗಾ ಹಮ್ಮಿಕೊಳ್ಳಬೇಕು ಎಂದು ಕರೆ ನೀಡಿದರು. ಜೊತೆಗೆ ಪ್ರತಿ ಜಿಲ್ಲಾ ಪಂಚಾಯತ ಮತ್ತು ತಾಲೂಕ ಪಂಚಾಯತ ಸಂಚಾಲಕ ಮತ್ತು ಸಹ ಸಂಚಾಲಕರನ್ನು ನೇಮಿಸಿ ರಾಷ್ಟ್ರ ದ್ವಜವನ್ನು ಎಲ್ಲ ಬೂತಿನ ಕಾರ್ಯಕರ್ತರಿಗೆ ತಲುಪಿಸಿದರು.
ಈ ವೇಳೆ ತಾಲೂಕು ಕಾರ್ಯದರ್ಶಿ ಸಂಜು ಬಾಗೇವಾಡಿ, ಮಹಿಳಾ ಮೋರ್ಚಾ ಅದ್ಯಕ್ಷೆ ಸಂಗಮ್ಮ ದೇವರಳ್ಳಿ, ಯುವ ಮೋರ್ಚಾ ಅದ್ಯಕ್ಷರು ಗಿರೀಶಗೌಡ ಪಾಟೀಲ, ಗೌರಮ್ಮ ಹುನಗುಂದ, ನಾಗರಾಜ ಕಮತರ, ಶಿವರಾಜ ರಾಠೋಡ, ಪವನ ಲಮಾಣಿ, ಪ್ರೀತಿ ಕಂಬಾರ, ಗಂಗಮ್ಮ ಚೌದರಿ, ಕಾವೇರಿ ಕಂಬಾರ, ವಿಠ್ಠಲ್ ಖಾನಗೌಡರ, ಬಿಳೆನಸಿದ್ದ ವಡಿಯರ, ಡಾ. ಈರಣ್ಣ ಬಡಿಗೇರ ಸೇರಿದಂತೆ ಮತ್ತಿತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

