ದೇವರಹಿಪ್ಪರಗಿ:ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ
(ಡಿ.ಜಿ.ಸಾಗರ ಬಣ) ತಾಲ್ಲೂಕು ಶಾಖೆಯಡಿ ಜರುಗಿದ ಸಭೆಯಲ್ಲಿ ೨೫ ನೂತನ ಗ್ರಾಮ ಶಾಖೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಸನ್ಮಾನಿಸಲಾಯಿತು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಜರುಗಿದ ಸಭೆಯಲ್ಲಿ ಜಿಲ್ಲಾ ಸಂಚಾಲಕ ಸಿದ್ದು ರಾಯಣ್ಣವರ ಅಧ್ಯಕ್ಷತೆ ವಹಿಸಿದ್ದರು. ಡಿಎಸ್‌ಎಫ್ ಜಿಲ್ಲಾ ಸಂಚಾಲಕ ವೈ.ಸಿ.ಮಯೂರ, ಜಿಲ್ಲಾ ಸಂಘಟನಾ ಸಂಚಾಲಕ ರಮೇಶ ಧರಣಾಕರ, ವಕೀಲ ಮಲ್ಲು ಬನಸೋಡೆ, ಮಹಾಂತೇಶ ಸಾಸಾಬಾಳ, ಪ್ರಥಮ ದರ್ಜೆ ಗುತ್ತಿಗೆದಾರ ಯಶವಂತರಾವ, ನಿವೃತ್ತ ಪೊಲೀಸ್ ಅಧಿಕಾರಿ ಪರಶುರಾಮ ಮಲ್ಲಾರಿ, ತಾಲ್ಲೂಕುಗಳ ಸಂಚಾಲಕರಾದ ಶರಣು ಚಲವಾದಿ(ಸಿಂದಗಿ), ರಮೇಶ ನಿಂಬಾಳ್ಕರ್(ಇಂಡಿ) ದೇವೇಂದ್ರ ಭಾವಿಮನಿ(ಬಬಲೇಶ್ವರ), ಜಾನು ಗುಡಿಮನಿ(ದೇ.ಹಿಪ್ಪರಗಿ) ನೇತೃತ್ವದಲ್ಲಿ ತಾಲ್ಲೂಕಿನ ೨೫ ಗ್ರಾಮಗಳ ಸಂಚಾಲಕರು ಹಾಗೂ ಸಂಘಟನಾ ಸಂಚಾಲಕರನ್ನಾಗಿ ನೇಮಕಗೊಳಿಸಲಾಯಿತು.
ದೇವರಹಿಪ್ಪರಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಶೀರ್‌ಅಹ್ಮದ್ ಬೇಪಾರಿ, ಅಲ್ಪಸಂಖ್ಯಾತರ ತಾಲ್ಲೂಕು ಘಟಕದ ಸಂಚಾಲಕ ಜಬ್ಬರ್ ಚೌಧರಿ, ರಾಘವೇಂದ್ರ ಗುಡಿಮನಿ, ಅಬ್ದುಲ್ಲಾ ಚೌಧರಿ, ಕಮಲಸಾಬ ಕಾಟಮನಹಳ್ಳಿ, ಶಿಕ್ಷಕ ಅರುಣ ಕೋರವಾರ, ವಿಲಾಸ ಕೊಟಗಿ, ದೇವೇಂದ್ರ ಬನಸೋಡೆ, ಮಹಾಂತೇಶ ಕೂಟನೂರ, ಪ್ರೀತಮ ಯಶವಂತ, ವಿಜಯಕುಮಾರ ಕಾಂಬ್ಳೆ, ಸುಭಾಷ ನಾಟೀಕಾರ, ಬಾಬು ಭಾವಿಮನಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

