Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದಿಂದಾಗಿ ನಮಗೆ ಸ್ವಾತಂತ್ರ್ಯ ಬಂದಿದ್ದು, ಅವರ ತತ್ವಾದರ್ಶಗಳು ನಮಗೆಲ್ಲರಿಗೂ ಪ್ರೇರಣೆಯಾಗಿವೆ ಎಂದು ಕರ್ನಲ್ ಸಂಗಪ್ಪ ಎಚ್. ವಿ. ಹೇಳಿದ್ದಾರೆ.ಗುರುವಾರ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಅವರು ಮಾತನಾಡಿದರು.ದೇಶಕ್ಕೆ ಸ್ವಾತಂತ್ತ್ರ್ಯ ದೊರಕಲು ನಮ್ಮ ಹಿರಿಯರು ಜೀವದ ಹಂಗು ತೊರೆದು ಹೋರಾಡಿದ್ದಾರೆ. ಅಂದು ಅವರು ನಡೆಸಿದ ಹೋರಾಟದ ಫಲವಾಗಿ ಭಾರತ ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ಮುನ್ನಡೆಯುತ್ತಿದೆ ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ಸುಮಾರು 500 ವಿದ್ಯಾರ್ಥಿಗಳು ಭಾರತ ನಕ್ಷೆಯ ರೂಪದಲ್ಲಿ ನಿಂತುಕೊಂಡ ದೃಶ್ಯ ರೋಮಾಂಚನ ಗೊಳಿಸಿತು. ಮಕ್ಕಳು ನಡೆಸಿಕೊಟ್ಟ ಸ್ವಾತಂತ್ರ್ಯ ಹೋರಾಟ ಮತ್ತು ದೇಶಭಕ್ತಿ ರೂಪಕಗಳು ಗಮನ ಸೆಳೆದವು. ಬ್ರಿಟೀಷರ ವಿರುದ್ಧ ಹೋರಾಡಿದ ಹಲಗಲಿಯ ಬೇಡರು, ನರಗುಂದ ರೈತರ ಬಂಡಾಯ ಘಟನೆಗಳಾಧಾರಿತ ರೂಪಕಗಳು ಮನಸೂರೆಗೊಂಡವು. ನರ್ಸರಿ ಮತ್ತು ಎಲ್. ಕೆ.ಜಿ, ಯುಕೆಜಿ ಮಕ್ಕಳು ಸ್ವಾತಂತ್ರ ಹೋರಾಟಗಾರರ ವೇಷ ಭೂಷಣ ತೊಟ್ಟು ಗಮನ ಸೆಳೆದರು.ಈ ಸಂದರ್ಭದಲ್ಲಿ ಶಾಲೆಯ…
ಇಂಡಿ: ತಾಲೂಕಿನ ಸರಕಾರಿ ಪ್ರೌಢಶಾಲೆ ಸಾತಲಗಾಂವದ ವಿದ್ಯಾರ್ಥಿನಿ ಕುಮಾರಿ ವಿಜಯಲಕ್ಷ್ಮೀ ಆಲಮೇಲ ಇವರಿಗೆ ಇಂಡಿಯ ಕ್ರೀಡಾಂಗಣದಲ್ಲಿ ನಡೆದ ೭೮ ನೆಯ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ರೂ.ಹತ್ತು ಸಾವಿರ ಚೆಕ್ ನ್ನು ಶಾಸಕ ಯಶವಂತರಾಯಗೌಡ ಪಾಟೀಲರು ನೀಡಿ ಗೌರವಿಸಿದರು.ವಿಜಯಲಕ್ಷ್ಮೀ ಆಲಮೇಲ ೨೦೨೪ ನೇ ಸಾಲಿನಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಇಂಡಿ ತಾಲೂಕಿನಲ್ಲಿ ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಅತೀ ಹೆಚ್ಚು ಅಂಕ ಪಡೆದಿದ್ದರು.ಇಂಡಿಯ ಶ್ರೀ ಶಾಂತೇಶ್ವರ ಶಾಲೆಯಲ್ಲಿ ೧೯೮೯- ೯೦ ರಲ್ಲಿ ಎಸ್ಸೆಸ್ಸೆಲ್ಸಿ ಓದಿದ ಗೆಳೆಯರ ಬಳಗದಿಂದ ದಿವಂಗತ ಶಿಕ್ಷಕ ಸುರೇಶ ಕೋಳೆಕರ ಅವರ ಹೆಸರಿನಲ್ಲಿ ಪ್ರತಿ ವರ್ಷ ನೀಡಲಾಗುತ್ತಿದೆ.ಈ ವರ್ಷ ಈ ಪ್ರಶಸ್ತಿಗೆ ವಿಜಯಲಕ್ಷ್ಮೀ ಆಯ್ಕೆಯಾಗಿ ರೂ. ಹತ್ತು ಸಾವಿರ ಪಡೆದಿದ್ದಾರೆ.ಇಂಡಿಯ ಎಸಿ ಅಬೀದ ಗದ್ಯಾಳ, ಗೆಳೆಯರ ಬಳಗದ ಶಿಕ್ಷಕ ದಶರಥ ಕೋರಿ, ತಹಸೀಲ್ದಾರ ಬಿ.ಎಸ್.ಕಡಕಬಾವಿ,ಕ್ಷೇತ್ರಶಿಕ್ಷಣಾಧಿಕಾರಿ ಟಿ.ಎಸ್.ಅಲಗೂರ ಮತ್ತಿತರಿದ್ದರು.
ಇಂಡಿ: ತಾಲೂಕಿನ ಲಚ್ಯಾಣ ಗ್ರಾಮಕ್ಕೆ ಸಂಸದ ರಮೇಶ ಜಿಗಜಿಣಗಿ ರೈಲು ಅಧಿಕಾರಿಗಳು ಶುಕ್ರವಾವಾರದಂದು ಭೇಟಿ ನೀಡಿ ರೇಲ್ವೆ ಓವರ್ ಬ್ರಿಜ್ (ಆರ್‌ಓಬಿ) ಮತ್ತು ರೇಲ್ವೆ ಕೆಳ ಮಾರ್ಗದ ನಿರ್ಮಾಣ ಕುರಿತು ಯೋಜನೆ ರೂಪಿಸಲು ಸ್ಥಳ ಪರಿಶೀಲನೆ ನಡೆಸಿದರು.ಈ ಗ್ರಾಮದ ರೈಲು ನಿಲ್ದಾಣಕ್ಕೆ ಸಂಸದ ರಮೇಶ ಜಿಗಜಿಣಗಿ ರೈಲು ಅಧಿಕಾರಿಗಳು,ತಹಶೀಲ್ದಾರ್ ಗ್ರಾಮಸ್ಥರೊಂದಿಗೆ ಭೇಟಿ ಮಾಡಿ,ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸಮೀಪದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಸದಸ್ಯರ ಜೊತೆ ಇಲ್ಲಿನ ಶ್ರೀ ಸಿದ್ಧಲಿಂಗ ಮಹಾರಾಜರ ಕಮರಿಮಠದ ಸೇವಕರು, ತಹಶೀಲ್ದಾರರೊಂದಿಗೆ ಚರ್ಚಿಸಿದರು. ಬಳಿಕ ಮುಂಬರುವ ದಿನಗಳಲ್ಲಿ ಕೂಡಲೆ ಅಂತಿಮ ನಿರ್ಧಾರ ಕೈಗೊಂಡು ಯೋಜನೆ ರೂಪಿಸಿ, ಉತ್ತಮ ರೇಲ್ವೆ ಮೆಲ್ಸೆತುವೆ, ಕೆಳ ಮಾರ್ಗ ನಿರ್ಮಿಸಿ ಈ ಭಾಗದ ಜನರಿಗೆ ಸುಗಮ ಸಂಚಾರದ ವ್ಯವಸ್ಥೆ ಕಲ್ಪಿಸಲಾಗುವದು ಎಂದು ಜಿಗಜಿಣಗಿ ಸಾರ್ವಜನಿಕರಿಗೆ ತಿಳಿಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲಾವತಿ ಬಿರಾದಾರ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಶೋಕಗೌಡ ಪಾಟೀಲ, ಗ್ರಾಮದ ಗಣ್ಯರಾದ…
ಇಂಡಿ:ತಾಲ್ಲೂಕಿನ ಗೋರನಾಳ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಚುನಾವಣೆಯಲ್ಲಿ ಸಂಘದ ಮಾಜಿ ಅಧ್ಯಕ್ಷ ವೆಂಕಟರಾಯ ಪಾಟೀಲ ಅವರ ಬಣದ ೧೨ಜನ ಸದಸ್ಯರು ಆಯ್ಕೆ ಆಗಿದ್ದಾರೆ ಎಂದು ಚುನಾವಣೆ ಅಧಿಕಾರಿ ಕೆ.ಎಚ್.ವಡ್ಡರ ಮತ್ತು ವಿ.ಪಿ.ನಾಯಕ ತಿಳಿಸಿದ್ದಾರೆ.ಚುನಾವಣೆ ಪತ್ರ ಪಡೆದ ನಂತರ ಸಂಘದ ಕಚೇರಿಯಲ್ಲಿ ವೆಂಕಟರಾಯ ಪಾಟೀಲ ಮಾತನಾಡಿ, ಸಂಘ ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲರಾದವರಿಗೆ ಆರ್ಥಿಕ ಸಹಾಯ ನೀಡುವ ಮೂಲಕ ಸಮಾಜಮುಖಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಇಂದು ಅನೇಕ ಸಹಕಾರಿ ಸಂಘಗಳು ಸಾರ್ವಜನಿಕರಿಗೆ ಸ್ಪಂದಿಸುವ ಮೂಲಕ ಸಮಾಜಮುಖಿಯಾಗಿ ಒಳ್ಳೆಯ ಸಹಕಾರ ನೀಡುತ್ತಿವೆ. ಸಂಘಗಳು ಕೇವಲ ಲಾಭದ ಉದ್ದೇಶ ಹೊಂದಿರದೇ ಸಾರ್ವಜನಿಕರಿಗೆ ಸಹಕಾರಿಯಾಗಿ ಬೆಳೆಯಬೇಕು. ಜನರ ಸೇವಕರು ಎಂಬ ಭಾವನೆ ರಾಜಕೀಯ ನಾಯಕರಲ್ಲಿರಬೇಕು. ಮತ ಹಾಕಿದವರೂ ನಮ್ಮವರೇ, ಹಾಕದವರೂ ನಮ್ಮವರೇ. ಚುನಾವಣೆ ನಡೆದಾಗ ಮಾತ್ರ ರಾಜಕೀಯ ಮಾಡೋಣ. ಉಳಿದ ದಿನಗಳಲ್ಲಿ ಜನರ ಅಭಿವೃದ್ಧಿ ಪರ ಕೆಲಸ ಮಾಡಬೇಕಾಗಿರುವುದು ನಮ್ಮ ಕರ್ತವ್ಯ. ದೇಶದ ಪ್ರತಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಸಹಕಾರಿ ಸಂಘಗಳ ಪಾತ್ರ ಹಿರಿದಾಗಿದೆ.…
ಚಡಚಣ: ಸಮೀಪದ ರೇವತಗಾಂವ ಗ್ರಾಮದಲ್ಲಿ ಶುಕ್ರವಾರದಂದು ವರಮಹಾಲಕ್ಷ್ಮೀ ವ್ರತವನ್ನು ಎಲ್ಲಾ ಮುತ್ತೈದೆಯರು ಭಕ್ತಿ ಶ್ರದ್ಧೆಯಿಂದ ಆಚರಿಸಿದರು.ಶುಕ್ರವಾರದಂದು ಮುಂಜಾನೆ ಮನೆಯನ್ನು ಶುಚಿಗೊಳಿಸಿ, ರಂಗೋಲಿ, ತಳಿರು ತೋರಣಗಳಿಂದ ಅಲಂಕರಿಸಿ, ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ತೊಟ್ಟು ಮಡಿಯಲ್ಲಿ ನೈವೇದ್ಯವನ್ನು ತಯಾರಿಸಿ, ಸಣ್ಣ ಉಕ್ಕಿನ ಬಿಂದಿಗೆ ಅಥವಾ ಬೆಳ್ಳಿಯ ಚೆಂಬನ್ನು ಕಲಶದ ರೂಪದಲ್ಲಿ ಇಟ್ಟು ಅದರಲ್ಲಿ ನೀರನ್ನು ತುಂಬಿಸಿ ಅದಕ್ಕೆ ಸ್ವಲ್ಪ ಖರ್ಜೂರ ಹಾಗೂ ದ್ರಾಕ್ಷಿಯನ್ನು ಹಾಕಿದರು. ಒಂದು ತಟ್ಟೆಯಲ್ಲಿ ಅಕ್ಕಿಯನ್ನು ಹರಡಿ ಅದರಲ್ಲಿ ಕಲಶವನ್ನು ಇಟ್ಟು, ಮಾವಿನ ಎಲೆ ಹಾಗೂ ವೀಳೈದೆಲೆಯನ್ನು ಕಲಶದ ಸುತ್ತ ಜೋಡಿಸಿ ಅದರ ಮೇಲೆ ಅರಿಶಿಣ ಹಚ್ಚಿದ ತೆಂಗಿನಕಾಯಿಯನ್ನು ಇಟ್ಟು ಅದಕ್ಕೆ ಶ್ವೇತವರ್ಣದ ಕೆಂಪು ಅಂಚಿನ ಸೀರೆಯನ್ನು ಉಡಿಸಿ ಅಲಂಕರಿಸಿ. ಜೊತೆ ಒಡವೆಗಳನ್ನು ಹಾಕಿ ಗ್ರಾಮದ ಅಶ್ವೀನಿ ಅಪ್ಪಾಸಾಬ ಅಡಕೆಯವರ ಮನೆಯಲ್ಲಿ ಸಿಂಗಾರಗೊಳಿಸಿದ್ದರು.ಲಕ್ಷ್ಮೀಯ ಮುಂದೆ ಕಮಲದ ಹೂವು ಹಾಗೂ ಬಿಲ್ವಪತ್ರೆಯನ್ನು ಇಟ್ಟು ಪೂಜೆ ಮಾಡಿದರು. ಅಲ್ಲದೇ ಲಕ್ಷ್ಮೀಯ ಮುಂದೆ ಹಣ, ಚಿನ್ನ, ಬಳೆ, ಹಣ್ಣು, ಸ್ವೀಟ್, ಅರಿಶಿಣ, ಕುಂಕುಮ ಎಲ್ಲವನ್ನೂ…
ದೇವರಹಿಪ್ಪರಗಿ: ಪಟ್ಟಣದ ಶಾಲಾ, ಕಾಲೇಜು, ಸರ್ಕಾರಿ ಕಚೇರಿ, ಬ್ಯಾಂಕ್, ಸಹಕಾರಿ ಸಂಘಗಳು ಸೇರಿದಂತೆ ತಾಲ್ಲೂಕಿನ ವಿವಿಧೆಡೆಯಲ್ಲಿ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯ ದಿನಾಚರಣೆ ಯನ್ನು ಆಚರಿಸಲಾಯಿತು.ಸಮೃದ್ಧಿ ಸಹಕಾರ ಸಂಘ: ಧ್ವಜಾರೋಹಣವನ್ನು ಅಧ್ಯಕ್ಷೆ ಸಂಗೀತಾ ನಾಯಿಕ್ ಹಾಗೂ ಉಪಾಧ್ಯಕ್ಷ ರಿಯಾಜ್ ತಾಂಬೋಳಿ ನೆರವೇರಿಸಿದರು. ಗಣ್ಯರಾದ ಡಾ.ಆರ್.ಆರ್.ನಾಯಿಕ್, ನಿರ್ದೇಶಕರಾದ ಪಿ.ಜಿ.ಹಿರೇಮಠ, ಬಿ.ಎನ್.ಬಬಲೇಶ್ವರ, ವೆಂಕಟೇಶ ಕುಲಕರ್ಣಿ, ಎ.ಕೆ.ಹಿರೇಮಠ, ಕೆ.ಎಸ್.ಕೋರಿ, ಗುರು ಕರಭಂಟನಾಳ, ಮಂಜುನಾಥ ಒಂಟೆತ್ತಿನ, ಉಮೇಶ ಹಳಪಾಣಿ, ಸುಭಾಸ್ ಜಾಧವ, ಸಿಇಓ ಗುರುಬಸಯ್ಯ ಹಿರೇಮಟ್ಟ, ಸಿಬ್ಬಂದಿ ಇದ್ದರು.ಅಂಚೆ ಕಚೇರಿ: ಅಂಚೆಪಾಲಕ ಕೆ.ಕೆ.ಪೂಜಾರಿ ಧ್ವಜಾರೋಹಣ ನೆರವೇರಿಸಿದರು. ವೆಂಕಟೇಶ ಕುಲಕರ್ಣಿ, ರಾಮನಗೌಡ ಬಿರಾದಾರ, ಸಂಗಣ್ಣ ತಳವಾರ, ಸತ್ಯನಾರಾಯಣ ಜೋಷಿ, ಪ್ರವೀಣ ಮಾಳೆಗಾರ, ನಬಿಲಾಲ್ ನದಾಫ್, ರಂಜಿತ ತಳಕೇರಿ, ನಯನ ಯಡಹಳ್ಳಿ, ಬಸಯ್ಯ ಹಿರೇಮಠ, ಪಾರ್ವತಿ ಹಿರೇಮಠ, ಬಿ.ಟಿ.ಮಾದರ, ಭಾಗ್ಯ ಪುರವಂತರಮಠ ಇದ್ದರು.ಯಾಳವಾರ ಶ್ರೀಸೋಮೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜ: ಸಂಸ್ಥೆಯ ಅಧ್ಯಕ್ಷ ರಾಜುಗೌಡ ನಾಡಗೌಡ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಚನ್ನುಗೌಡ ನ್ಯಾಮಣ್ಣವರ, ಸಂಸ್ಥೆಯ ಬಿ.ಆರ್.ಪಾಟೀಲ, ಆರ್.ಎಸ್.ಪಾಟೀಲ, ಎ.ಡಿ.ನಾಗರಾಳ,…
ಚಿಮ್ಮಡ: ದೇಶಕ್ಕೆ ಸ್ವಾತಂತ್ರ್ಯವನ್ನು ಬ್ರಿಟಿಷರು ದಾನವಾಗಿ ನೀಡಿಲ್ಲ ವಿವಿಧ ಹೋರಾಟಗಳ ಮೂಲಕ ಅವರಿಂದ ನಾವು ಕಿತ್ತುಕೊಂಡಿದ್ದೆವೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು,ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಆಯೋಜಿಸಲಾಗಿದ್ದ ವೀರ ಯೋಧ ಬಸವರಾಜ ಸಿದ್ದಪ್ಪ ನಾವಿಯವರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಸ್ವಾತಂತ್ರ್ಯ ಪಡೆಯಲು ಹಲವಾರು ದೇಶಭಕ್ತರು ತಮ್ಮ ಬಲಿದಾನಗೈದಿದ್ದಾರೆ, ಹಲವು ಮಹಾತ್ಮರು ಕಠಿಣ ಜೈಲುವಾಸದೊಂದಿಗೆ ಚಿತ್ರಹಿಂಸೆ ಅನುಭವಿಸಿದ್ದಾರೆ. ಅಲ್ಲದೇ ಸಾವಿರಾರು ಜನ ಹೋರಾಟಗಾರರು ತಮ್ಮ ಆಸ್ತಿ-ಪಾಸ್ತಿ ಕಳೆದುಕೊಂಡಿದ್ದಾರೆ ಎಂದರು.ಕಾಂಗ್ರೆಸ್ ಧುರೀಣ ಸಿದ್ದು ಕೊಣ್ಣೂರ ಮಾತನಾಡಿ, ನಾವಿಲ್ಲಿ ಸುಖವಾಗಿ ನಿದ್ರೆ ಮಾಡಲು ಕಾರಣ ಯೋಧರು ನಿದ್ದೆಗೆಟ್ಟು ನಮಗಾಗಿ ಗಡಿ ಕಾಯುತ್ತಾರೆ, ದೇಶಸೇವೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ವೀರ ಸೇನಾನಿಗಳ ಕುಟುಂಬವನ್ನು ಕಾಯುವುದು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯಾಗಿದೆ ಎಂದರು.ಉಪನ್ಯಾಸಕರಾಗಿ ಪತ್ರಕರ್ತ ಶಿವಲಿಂಗ ಸಿದ್ನಾಳ ಮಾತನಾಡಿ, ಶಿಸ್ತು,ಗತ್ತು,ನಿಯತ್ತು, ತಾಕತ್ತು, ಹಾಗೂ ಸಂಪತ್ತು ಇವೆಲ್ಲವೂ ಸಿಗುವುದು ಸೈನಿಕ ಹುದ್ದೆಯಲ್ಲಿ ಮಾತ್ರ ಎಂದ ಅವರು ಸೈನಿಕರ ಪರ ಹಲವಾರು ನುಡಿಮುತ್ತುಗಳ…
ಮೋರಟಗಿ:ದೇಶದ ಸ್ವಾತಂತ್ರ್ಯಕ್ಕಾಗಿ, ಈ ನಾಡಿನ ಮಣ್ಣಿಗಾಗಿ, ಅನೇಕ ದೇಶಪ್ರೇಮಿಗಳು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ.ಅವರ ಆದರ್ಶ ಜೀವನದ ಬದುಕು ನಮ್ಮೆಲ್ಲರಿಗೆ ದಾರಿ ದೀಪ, ಯುವ ಪೀಳಿಗೆ ಇತಿಹಾಸ ಓದುವ ಮೂಲಕ ಮಹಾನ್ ವ್ಯಕ್ತಿಗಳ ದೇಶಪ್ರೇಮ ಮೈಗೂಡಿಸಿಕೊಳ್ಳಬೇಕು ಎಂದು ಅಂಜುಮನ್ ಸಮೀತಿ ಅಧ್ಯಕ್ಷ ಮೈಬೂಬಸಾಬ ಕಣ್ಣಿ ಹೇಳಿದರು.ಗ್ರಾಮದ ಹೊರ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡ ೭೮ನೇ ಸ್ವಾತಂತ್ರ‍್ಯ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಹಿರಿಯರ ತ್ಯಾಗ ಬಲಿದಾನದ ಮೂಲಕ ಸಂಪಾದಿಸಿರುವ ಸ್ವಾತಂತ್ರ‍್ಯ ಎಂದಿಗೂ ಮರೆಯಲಾಗದು, ನಮ್ಮೆಲ್ಲರಲ್ಲಿ ಆಗಸ್ಟ್ ೧೫ ಕ್ಕೆ ಮಾತ್ರ ದೇಶಾಭಿಮಾನ ಸೀಮಿತವಾಗಬಾರದು.ಪಾಲಕರು ಮಕ್ಕಳಿಗೆ ಬಾಲ್ಯದಲೇ ದೇಶಾಭಿಮಾನದ ಕಿಚ್ಚು ಹೆಚ್ಚಿಸಬೇಕು ಎಂದರು.ಗ್ರಾಮ ಪಂಚಾಯತಿ ಕಾರ್ಯಾಲಯ, ಕಲ್ಪವೃಕ್ಷ ಶಾಲೆ, ಸಿದ್ದರಾಮೇಶ್ವರ ಶಾಲೆ, ಸದ್ಭಾವನಾ ಶಾಲೆ, ಜ್ಞಾನಜ್ಯೋತಿ ಶಾಲೆ, ಐ ಡಿ ಎಲ್ ಆಂಗ್ಲ ಮಾಧ್ಯಮ ಶಾಲೆ ಸೇರಿದಂತೆ ವಿವಿಧ ಖಾಸಗಿ ಸರ್ಕಾರಿ ಇಲಾಖೆಗಳಲ್ಲಿ ಅಚ್ಚುಕಟ್ಟಾಗಿ ಧ್ವಜಾರೋಹಣ ನೆರವೇರಿತು ಪಂಚಾಯತಿ ಆವರಣದಲ್ಲಿ ಪ್ರಾಥಮಿಕ ಶಾಲೆಯ ಮಕ್ಕಳಿಂದ ವಿವಿಧ ರೀತಿಯ ಸ್ವತಂತ್ರ ಹೋರಾಟಗಾರರ ಕುರಿತು ರಸಮಂಜರಿ ಕಾರ್ಯಕ್ರಮ ವಿಶೇಷವಾಗಿತ್ತು.ಗ್ತಾಮ…
ಸಿಂದಗಿ: ಪಟ್ಟಣದ ಬಸವ ನಗರದ ಜ್ಞಾನ ಭಾರತಿ ವಿದ್ಯಾಮಂದಿರ ಶಾಲೆಯಲ್ಲಿ ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ (ಮಾಗಣಗೇರಾ) ಅವರು ಗುರುವಾರ 78ನೇಯ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ನೆರವೇರಿಸಿದರು.ಈ ವೇಳೆ ಮಾತನಾಡಿದ ಅವರು, ಲಕ್ಷಾಂತರ ಚಳುವಳಿಕಾರರ ತ್ಯಾಗ ಬಲಿದಾನಗಳಿಂದಾಗಿ ಬ್ರಿಟಿಷರ ದಾಸ್ಯದಿಂದ ಭಾರತ ಮುಕ್ತಗೊಂಡಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಮಹಾನ್ ಚೇತನಗಳನ್ನು ಸ್ಮರಿಸಿ, ಭವ್ಯ ಮತ್ತು ಬಲಿಷ್ಠ ಭಾರತದ ನಿರ್ಮಾಣಕ್ಕಾಗಿ ನಾವೆಲ್ಲರೂ ಶ್ರಮಿಸೋಣ ಎಂದು ಯುವಜನತೆಗೆ ಕರೆ ನೀಡಿದರು.ಶಾಲೆಯ ಗುರು ವೃಂದ, ಸಿಬ್ಬಂದಿ, ಪಾಲಕರು ಹಾಗೂ ವಿದ್ಯಾರ್ಥಿಗಳಿದ್ದರು.
ವಿಜಯಪುರ: ೭೮ ನೇ ವರ್ಷದ ಸ್ವಾತಂತ್ರ‍್ಯೋತ್ಸವದ ದಿನಾಚರಣೆಯನ್ನು ನಗರದ ಮುದ್ರಣ ಕಾರ್ಮಿಕರ ಸಂಘದಿಂದ ಸಂಭ್ರಮ – ಸಡಗರದಿಂದ ಆಚರಿಸಲಾಯಿತು.ಗುರುವಾರ ನಗರದ ಮುದ್ರಣ ಕಾರ್ಮಿಕರ ಸಂಘದ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿದಾನಂದ ವಾಲಿ ಮಾತನಾಡಿ, ಸ್ವಾತಂತ್ರ‍್ಯ ಸಿಕ್ಕು ಇಂದಿಗೆ ೭೭ ಗತಿಸಿ ೭೮ನೇ ಸಂಭ್ರಮದಲ್ಲಿ ನಾವೆಲ್ಲರೂ ಇದ್ದೇವೆ. ಆದರೆ ಇಂದಿನ ಯುವ ಪೀಳಿಗೆ ಸ್ವಾತಂತ್ರ‍್ಯದ ಮಹತ್ವ, ಸ್ವಾತಂತ್ರ‍್ಯಕ್ಕಾಗಿ ಜೀವತ್ಯಾಗ ಮಾಡಿದ ಮಹನೀಯರ ನೆನಪು ಸ್ಮರಣೆ ಮಾಡುತ್ತಿಲ್ಲ. ಯುವಕರು ಮೋಬೈಲಗೆ ಅಂಟಿಕೊಂಡು ತಮ್ಮತನವನ್ನು ಕಳೆದುಕೊಳ್ಳುತ್ತಿದ್ದಾರೆ. ತಮ್ಮ ಜವಾಬ್ದಾರಿ ಮರೆಯುತ್ತಿದ್ದಾರೆ ಎಂದು ವಿಷಾದಿಸಿದ ಅವರು, ಯುವಕರಿಗೆ ಸ್ವಾತಂತ್ರ‍್ಯದ ಮಹತ್ವ ತಿಳಿ ಹೇಳಬೇಕಾಗಿದೆ ಎಂದರು.ಈ ಸಂದರ್ಭದಲ್ಲಿ ಸಂಘದ ಖಜಾಂಚಿ ಹನೀಪ್ ಮುಲ್ಲಾ, ನಿರ್ದೇಶಕರಾದ ನಾಗರಾಜ ಬಿಸನಾಳ, ಮೃತ್ಯಂಜಯ ಶಾಸ್ತ್ರಿ, ಜಗದೀಶ ಶಹಾಪೂರ, ಮಂಜು ರೂಗಿ, ವೆಂಕಟೇಶ ಕಪಾಲಿ, ನಬಿ ಮಕಾಂದಾರ, ಉಮೇಶ ಶಿವಶರಣ, ದೀಪಕ ಜಾಧವ, ಶ್ರೀಮಂತ ಬೂದಿಹಾಳ, ಸಿದ್ದಲಿಂಗ ಸಿಂಪಗೇರಿ, ಭೀಮಾಶಂಕರ ಕುಮಟಗಿ, ರಾಜು ರೇಶ್ಮಿ, ಕುಮಾರ ಉಪ್ಪರಗಿ, ಆದರ್ಶ ವಾಲಿ ಮುಂತಾದವರು ಇದ್ದರು.
