ಇಂಡಿ: ತಾಲೂಕಿನ ಲಚ್ಯಾಣ ಗ್ರಾಮಕ್ಕೆ ಸಂಸದ ರಮೇಶ ಜಿಗಜಿಣಗಿ ರೈಲು ಅಧಿಕಾರಿಗಳು ಶುಕ್ರವಾವಾರದಂದು ಭೇಟಿ ನೀಡಿ ರೇಲ್ವೆ ಓವರ್ ಬ್ರಿಜ್ (ಆರ್‌ಓಬಿ) ಮತ್ತು ರೇಲ್ವೆ ಕೆಳ ಮಾರ್ಗದ ನಿರ್ಮಾಣ ಕುರಿತು ಯೋಜನೆ ರೂಪಿಸಲು ಸ್ಥಳ ಪರಿಶೀಲನೆ ನಡೆಸಿದರು.
ಈ ಗ್ರಾಮದ ರೈಲು ನಿಲ್ದಾಣಕ್ಕೆ ಸಂಸದ ರಮೇಶ ಜಿಗಜಿಣಗಿ ರೈಲು ಅಧಿಕಾರಿಗಳು,ತಹಶೀಲ್ದಾರ್ ಗ್ರಾಮಸ್ಥರೊಂದಿಗೆ ಭೇಟಿ ಮಾಡಿ,
ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸಮೀಪದ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಸದಸ್ಯರ ಜೊತೆ ಇಲ್ಲಿನ ಶ್ರೀ ಸಿದ್ಧಲಿಂಗ ಮಹಾರಾಜರ ಕಮರಿಮಠದ ಸೇವಕರು, ತಹಶೀಲ್ದಾರರೊಂದಿಗೆ ಚರ್ಚಿಸಿದರು. ಬಳಿಕ ಮುಂಬರುವ ದಿನಗಳಲ್ಲಿ ಕೂಡಲೆ ಅಂತಿಮ ನಿರ್ಧಾರ ಕೈಗೊಂಡು ಯೋಜನೆ ರೂಪಿಸಿ, ಉತ್ತಮ ರೇಲ್ವೆ ಮೆಲ್ಸೆತುವೆ, ಕೆಳ ಮಾರ್ಗ ನಿರ್ಮಿಸಿ ಈ ಭಾಗದ ಜನರಿಗೆ ಸುಗಮ ಸಂಚಾರದ ವ್ಯವಸ್ಥೆ ಕಲ್ಪಿಸಲಾಗುವದು ಎಂದು ಜಿಗಜಿಣಗಿ ಸಾರ್ವಜನಿಕರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲಾವತಿ ಬಿರಾದಾರ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಶೋಕಗೌಡ ಪಾಟೀಲ, ಗ್ರಾಮದ ಗಣ್ಯರಾದ ಡಿ.ಎಸ್. ಪಾಟೀಲ, ಎಂ.ಎಸ್. ಮುಜಗೊಂಡ, ವಿಠ್ಠಲ ಕರಾಳೆ, ಭೀಮರಾಯಗೌಡ ಪಾಟೀಲ, ಗೌರಿಶಂಕರ ಬಾಬುಳಗಿ, ಯುವ ದುರಿಣ ರಮೇಶ ದಾಯಗೊಡೆ, ಯಶವಂತರ ಬಿರಾದಾರ, ತಹಶೀಲ್ದಾರ ಬಿ.ಎಸ್. ಕಡಕಬಾವಿ, ಹುಬ್ಬಳ್ಳಿ ರೇಲ್ವೆ ವಿಭಾಗದ ಸಿನಿಯರ್ ಡಿಎಎನ್, ಗ್ರಾಮ ಪಂಚಾಯಿತಿ ಸಿಬ್ಬಂದಿ ಸೇರಿದಂತೆ ಸ್ಥಳಿಯ ಸುತ್ತಲ ಗ್ರಾಮಸ್ಥರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

