ದೇವರಹಿಪ್ಪರಗಿ: ಪಟ್ಟಣದ ಶಾಲಾ, ಕಾಲೇಜು, ಸರ್ಕಾರಿ ಕಚೇರಿ, ಬ್ಯಾಂಕ್, ಸಹಕಾರಿ ಸಂಘಗಳು ಸೇರಿದಂತೆ ತಾಲ್ಲೂಕಿನ ವಿವಿಧೆಡೆಯಲ್ಲಿ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯ ದಿನಾಚರಣೆ ಯನ್ನು ಆಚರಿಸಲಾಯಿತು.
ಸಮೃದ್ಧಿ ಸಹಕಾರ ಸಂಘ: ಧ್ವಜಾರೋಹಣವನ್ನು ಅಧ್ಯಕ್ಷೆ ಸಂಗೀತಾ ನಾಯಿಕ್ ಹಾಗೂ ಉಪಾಧ್ಯಕ್ಷ ರಿಯಾಜ್ ತಾಂಬೋಳಿ ನೆರವೇರಿಸಿದರು. ಗಣ್ಯರಾದ ಡಾ.ಆರ್.ಆರ್.ನಾಯಿಕ್, ನಿರ್ದೇಶಕರಾದ ಪಿ.ಜಿ.ಹಿರೇಮಠ, ಬಿ.ಎನ್.ಬಬಲೇಶ್ವರ, ವೆಂಕಟೇಶ ಕುಲಕರ್ಣಿ, ಎ.ಕೆ.ಹಿರೇಮಠ, ಕೆ.ಎಸ್.ಕೋರಿ, ಗುರು ಕರಭಂಟನಾಳ, ಮಂಜುನಾಥ ಒಂಟೆತ್ತಿನ, ಉಮೇಶ ಹಳಪಾಣಿ, ಸುಭಾಸ್ ಜಾಧವ, ಸಿಇಓ ಗುರುಬಸಯ್ಯ ಹಿರೇಮಟ್ಟ, ಸಿಬ್ಬಂದಿ ಇದ್ದರು.
ಅಂಚೆ ಕಚೇರಿ: ಅಂಚೆಪಾಲಕ ಕೆ.ಕೆ.ಪೂಜಾರಿ ಧ್ವಜಾರೋಹಣ ನೆರವೇರಿಸಿದರು. ವೆಂಕಟೇಶ ಕುಲಕರ್ಣಿ, ರಾಮನಗೌಡ ಬಿರಾದಾರ, ಸಂಗಣ್ಣ ತಳವಾರ, ಸತ್ಯನಾರಾಯಣ ಜೋಷಿ, ಪ್ರವೀಣ ಮಾಳೆಗಾರ, ನಬಿಲಾಲ್ ನದಾಫ್, ರಂಜಿತ ತಳಕೇರಿ, ನಯನ ಯಡಹಳ್ಳಿ, ಬಸಯ್ಯ ಹಿರೇಮಠ, ಪಾರ್ವತಿ ಹಿರೇಮಠ, ಬಿ.ಟಿ.ಮಾದರ, ಭಾಗ್ಯ ಪುರವಂತರಮಠ ಇದ್ದರು.
ಯಾಳವಾರ ಶ್ರೀಸೋಮೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜ: ಸಂಸ್ಥೆಯ ಅಧ್ಯಕ್ಷ ರಾಜುಗೌಡ ನಾಡಗೌಡ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಚನ್ನುಗೌಡ ನ್ಯಾಮಣ್ಣವರ, ಸಂಸ್ಥೆಯ ಬಿ.ಆರ್.ಪಾಟೀಲ, ಆರ್.ಎಸ್.ಪಾಟೀಲ, ಎ.ಡಿ.ನಾಗರಾಳ, ಪ್ರಾಚಾರ್ಯ ಜಿ.ಎಸ್.ನಾಡಗೌಡ, ಕೆ.ಆಯ್.ಹೊಸಮನಿ, ಪಿ.ಎಸ್.ಬ್ಯಾಕೋಡ, ಬಿ.ವೈ.ಭಂಟನೂರ, ಶಿವರಾಜ ನಾಗರಳ್ಳಿ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
ಕೋರವಾರ ರೈತಸಂಘ ಹಾಗೂ ಹಸಿರುಸೇನೆೆ: ರೈತಸಂಘದ ಅಧ್ಯಕ್ಷ ಈರಪ್ಪ ಕುಳೇಕುಮಟಗಿ, ಗೌರವಾಧ್ಯಕ್ಷ ಶಿವಾನಂದಯ್ಯ ಹಿರೇಮಠ, ಸಂಗಮೇಶ ಹುಣಸಗಿ ಇದ್ದರು.
ವೀರಭದ್ರೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘ: ಸಂಸ್ಥಾಪಕ ಸಿದ್ದು ಆನಂದಿ, ಉಪಾಧ್ಯಕ್ಷ ಹುಸೇನ್ ಗೌಂಡಿ ಸೇರಿದಂತೆ ಮಕ್ಕಳು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿದ್ದರು.
ವ್ಹಿಡಿಸಿಸಿ ಬ್ಯಾಂಕ್: ವ್ಯವಸ್ಥಾಪಕ ಸುಭಾಸ್ ಬಡಾನವರ ಧ್ವಜಾರೋಹಣ ನೆರವೇರಿಸಿದರು. ಮಡಿವಾಳಪ್ಪ ಕೋರಿ, ಕುಮಾರ ಜೋಗೂರ, ಅಮೀತ ಖಂಡೇಕರ, ಕೃಷ್ಣಾ ವಾಲೀಕಾರ, ಮಂಜುಳಾ ಬಿರಾದಾರ, ರಾಜೇಶ್ವರಿ ಬಡಿಗೇರ, ಬಸವರಾಜ ಪೋತದಾರ, ವಿನೋದ ಮಿಂಚನಾಳ, ವಿಕಾಸ ಇಟ್ಟಂಗಿಹಾಳ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

