ವಿಜಯಪುರ: ೭೮ ನೇ ವರ್ಷದ ಸ್ವಾತಂತ್ರ‍್ಯೋತ್ಸವದ ದಿನಾಚರಣೆಯನ್ನು ನಗರದ ಮುದ್ರಣ ಕಾರ್ಮಿಕರ ಸಂಘದಿಂದ ಸಂಭ್ರಮ – ಸಡಗರದಿಂದ ಆಚರಿಸಲಾಯಿತು.
ಗುರುವಾರ ನಗರದ ಮುದ್ರಣ ಕಾರ್ಮಿಕರ ಸಂಘದ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿದಾನಂದ ವಾಲಿ ಮಾತನಾಡಿ, ಸ್ವಾತಂತ್ರ‍್ಯ ಸಿಕ್ಕು ಇಂದಿಗೆ ೭೭ ಗತಿಸಿ ೭೮ನೇ ಸಂಭ್ರಮದಲ್ಲಿ ನಾವೆಲ್ಲರೂ ಇದ್ದೇವೆ. ಆದರೆ ಇಂದಿನ ಯುವ ಪೀಳಿಗೆ ಸ್ವಾತಂತ್ರ‍್ಯದ ಮಹತ್ವ, ಸ್ವಾತಂತ್ರ‍್ಯಕ್ಕಾಗಿ ಜೀವತ್ಯಾಗ ಮಾಡಿದ ಮಹನೀಯರ ನೆನಪು ಸ್ಮರಣೆ ಮಾಡುತ್ತಿಲ್ಲ. ಯುವಕರು ಮೋಬೈಲಗೆ ಅಂಟಿಕೊಂಡು ತಮ್ಮತನವನ್ನು ಕಳೆದುಕೊಳ್ಳುತ್ತಿದ್ದಾರೆ. ತಮ್ಮ ಜವಾಬ್ದಾರಿ ಮರೆಯುತ್ತಿದ್ದಾರೆ ಎಂದು ವಿಷಾದಿಸಿದ ಅವರು, ಯುವಕರಿಗೆ ಸ್ವಾತಂತ್ರ‍್ಯದ ಮಹತ್ವ ತಿಳಿ ಹೇಳಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಖಜಾಂಚಿ ಹನೀಪ್ ಮುಲ್ಲಾ, ನಿರ್ದೇಶಕರಾದ ನಾಗರಾಜ ಬಿಸನಾಳ, ಮೃತ್ಯಂಜಯ ಶಾಸ್ತ್ರಿ, ಜಗದೀಶ ಶಹಾಪೂರ, ಮಂಜು ರೂಗಿ, ವೆಂಕಟೇಶ ಕಪಾಲಿ, ನಬಿ ಮಕಾಂದಾರ, ಉಮೇಶ ಶಿವಶರಣ, ದೀಪಕ ಜಾಧವ, ಶ್ರೀಮಂತ ಬೂದಿಹಾಳ, ಸಿದ್ದಲಿಂಗ ಸಿಂಪಗೇರಿ, ಭೀಮಾಶಂಕರ ಕುಮಟಗಿ, ರಾಜು ರೇಶ್ಮಿ, ಕುಮಾರ ಉಪ್ಪರಗಿ, ಆದರ್ಶ ವಾಲಿ ಮುಂತಾದವರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

