ಇಂಡಿ: ತಾಲೂಕಿನ ಸರಕಾರಿ ಪ್ರೌಢಶಾಲೆ ಸಾತಲಗಾಂವದ ವಿದ್ಯಾರ್ಥಿನಿ ಕುಮಾರಿ ವಿಜಯಲಕ್ಷ್ಮೀ ಆಲಮೇಲ ಇವರಿಗೆ ಇಂಡಿಯ ಕ್ರೀಡಾಂಗಣದಲ್ಲಿ ನಡೆದ ೭೮ ನೆಯ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ರೂ.ಹತ್ತು ಸಾವಿರ ಚೆಕ್ ನ್ನು ಶಾಸಕ ಯಶವಂತರಾಯಗೌಡ ಪಾಟೀಲರು ನೀಡಿ ಗೌರವಿಸಿದರು.
ವಿಜಯಲಕ್ಷ್ಮೀ ಆಲಮೇಲ ೨೦೨೪ ನೇ ಸಾಲಿನಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಇಂಡಿ ತಾಲೂಕಿನಲ್ಲಿ ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಅತೀ ಹೆಚ್ಚು ಅಂಕ ಪಡೆದಿದ್ದರು.
ಇಂಡಿಯ ಶ್ರೀ ಶಾಂತೇಶ್ವರ ಶಾಲೆಯಲ್ಲಿ ೧೯೮೯- ೯೦ ರಲ್ಲಿ ಎಸ್ಸೆಸ್ಸೆಲ್ಸಿ ಓದಿದ ಗೆಳೆಯರ ಬಳಗದಿಂದ ದಿವಂಗತ ಶಿಕ್ಷಕ ಸುರೇಶ ಕೋಳೆಕರ ಅವರ ಹೆಸರಿನಲ್ಲಿ ಪ್ರತಿ ವರ್ಷ ನೀಡಲಾಗುತ್ತಿದೆ.
ಈ ವರ್ಷ ಈ ಪ್ರಶಸ್ತಿಗೆ ವಿಜಯಲಕ್ಷ್ಮೀ ಆಯ್ಕೆಯಾಗಿ ರೂ. ಹತ್ತು ಸಾವಿರ ಪಡೆದಿದ್ದಾರೆ.
ಇಂಡಿಯ ಎಸಿ ಅಬೀದ ಗದ್ಯಾಳ, ಗೆಳೆಯರ ಬಳಗದ ಶಿಕ್ಷಕ ದಶರಥ ಕೋರಿ, ತಹಸೀಲ್ದಾರ ಬಿ.ಎಸ್.ಕಡಕಬಾವಿ,
ಕ್ಷೇತ್ರಶಿಕ್ಷಣಾಧಿಕಾರಿ ಟಿ.ಎಸ್.ಅಲಗೂರ ಮತ್ತಿತರಿದ್ದರು.
Subscribe to Updates
Get the latest creative news from FooBar about art, design and business.
ಸ್ವಾತಂತ್ರ್ಯ ದಿನಾಚರಣೆ:ವಿಜಯಲಕ್ಷ್ಮೀ ಆಲಮೇಲಗೆ ರೂ. ಹತ್ತು ಸಾವಿರ ಬಹುಮಾನ
Related Posts
Add A Comment

