ಮೋರಟಗಿ:ದೇಶದ ಸ್ವಾತಂತ್ರ್ಯಕ್ಕಾಗಿ, ಈ ನಾಡಿನ ಮಣ್ಣಿಗಾಗಿ, ಅನೇಕ ದೇಶಪ್ರೇಮಿಗಳು ತಮ್ಮ ಪ್ರಾಣ ತ್ಯಾಗ ಮಾಡಿದ್ದಾರೆ.ಅವರ ಆದರ್ಶ ಜೀವನದ ಬದುಕು ನಮ್ಮೆಲ್ಲರಿಗೆ ದಾರಿ ದೀಪ, ಯುವ ಪೀಳಿಗೆ ಇತಿಹಾಸ ಓದುವ ಮೂಲಕ ಮಹಾನ್ ವ್ಯಕ್ತಿಗಳ ದೇಶಪ್ರೇಮ ಮೈಗೂಡಿಸಿಕೊಳ್ಳಬೇಕು ಎಂದು ಅಂಜುಮನ್ ಸಮೀತಿ ಅಧ್ಯಕ್ಷ ಮೈಬೂಬಸಾಬ ಕಣ್ಣಿ ಹೇಳಿದರು.
ಗ್ರಾಮದ ಹೊರ ಪೊಲೀಸ್ ಠಾಣೆಯಲ್ಲಿ ಹಮ್ಮಿಕೊಂಡ ೭೮ನೇ ಸ್ವಾತಂತ್ರ‍್ಯ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಿರಿಯರ ತ್ಯಾಗ ಬಲಿದಾನದ ಮೂಲಕ ಸಂಪಾದಿಸಿರುವ ಸ್ವಾತಂತ್ರ‍್ಯ ಎಂದಿಗೂ ಮರೆಯಲಾಗದು, ನಮ್ಮೆಲ್ಲರಲ್ಲಿ ಆಗಸ್ಟ್ ೧೫ ಕ್ಕೆ ಮಾತ್ರ ದೇಶಾಭಿಮಾನ ಸೀಮಿತವಾಗಬಾರದು.ಪಾಲಕರು ಮಕ್ಕಳಿಗೆ ಬಾಲ್ಯದಲೇ ದೇಶಾಭಿಮಾನದ ಕಿಚ್ಚು ಹೆಚ್ಚಿಸಬೇಕು ಎಂದರು.
ಗ್ರಾಮ ಪಂಚಾಯತಿ ಕಾರ್ಯಾಲಯ, ಕಲ್ಪವೃಕ್ಷ ಶಾಲೆ, ಸಿದ್ದರಾಮೇಶ್ವರ ಶಾಲೆ, ಸದ್ಭಾವನಾ ಶಾಲೆ, ಜ್ಞಾನಜ್ಯೋತಿ ಶಾಲೆ, ಐ ಡಿ ಎಲ್ ಆಂಗ್ಲ ಮಾಧ್ಯಮ ಶಾಲೆ ಸೇರಿದಂತೆ ವಿವಿಧ ಖಾಸಗಿ ಸರ್ಕಾರಿ ಇಲಾಖೆಗಳಲ್ಲಿ ಅಚ್ಚುಕಟ್ಟಾಗಿ ಧ್ವಜಾರೋಹಣ ನೆರವೇರಿತು ಪಂಚಾಯತಿ ಆವರಣದಲ್ಲಿ ಪ್ರಾಥಮಿಕ ಶಾಲೆಯ ಮಕ್ಕಳಿಂದ ವಿವಿಧ ರೀತಿಯ ಸ್ವತಂತ್ರ ಹೋರಾಟಗಾರರ ಕುರಿತು ರಸಮಂಜರಿ ಕಾರ್ಯಕ್ರಮ ವಿಶೇಷವಾಗಿತ್ತು.
ಗ್ತಾಮ ಪಂಚಾಯತಿಯಲ್ಲಿ ಅಧ್ಯಕ್ಷ ಗೌರಮ್ಮ ನಡುವಿನಕೇರಿ ದ್ವಜಾರೋಹಣ ನೆರವೇರಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

