Author: editor.udayarashmi@gmail.com

ಗುಲಬರ್ಗಾ ವಿವಿ ಹಿಂದಿ ವಿಭಾಗಕ್ಕೆ ಪ್ರಥಮ ರ‍್ಯಾಂಕ್ | ರಾಜ್ಯಪಾಲರಿಂದ ಗೋಲ್ಡ್ ಮೆಡಲ್ ಪ್ರದಾನ – ಮಲಿಕ್ ಎಲ್. ಜಮಾದಾರವಿಜಯಪುರ: ಸಾಧನೆ ಸಾಧಕನ ಸ್ವತ್ತು. ನಿರಂತರ ಅಧ್ಯಯನ, ನಿರ್ದಿಷ್ಟ ಗುರಿಯಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಇದಕ್ಕೆ ಅನೀಲ ರಾಠೋಡ ಎಂಬ ಗ್ರಾಮೀಣ ಪ್ರತಿಭೆ ಸಾಕ್ಷಿಯಾಗಿದ್ದಾನೆ.ಜಿಲ್ಲೆಯಿಂದ ಉನ್ನತ ವ್ಯಾಸಂಗಕ್ಕೆಂದು ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯದೆಡೆಗೆ ಪಯಣ ಬೆಳೆಸಿದ ಅನೀಲ ರಾಠೋಡ ಸ್ನಾತಕೋತ್ತರ ಪದವಿ ಎಂ ಎ ಹಿಂದಿ ವಿಭಾಗ ಅಧ್ಯಯನಕ್ಕಾಗಿ ಗುಲಬರ್ಗಾ ವಿಶ್ವ ವಿದ್ಯಾಲಯದಲ್ಲಿ ಪ್ರಥಮ ರ‍್ಯಾಂಕ್ ಪಡೆದು ಗೋಲ್ಡ್ ಮೆಡಲ್ ತನ್ನ ಮುಡಿಗೇರಿಸಿಕೊಂಡಿದ್ದಾನೆ.ಇತ್ತೀಚೆಗೆ ಆ.೧೨ ರಂದು ಗುಲಬರ್ಗಾ ವಿಶ್ವವಿದ್ಯಾಲಯದ ಜ್ಞಾನಗಂಗಾ ಆವರಣದ ಡಾ.ಬಿ.ಆರ್.ಅಂಬೇಡ್ಕರ ಸಭಾವನದಲ್ಲಿ ಜರುಗಿದ ಗುಲಬರ್ಗಾ ವಿಶ್ವವಿದ್ಯಾಲಯದ ೪೨ ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ವಿಜಯಪುರ ಜಿಲ್ಲೆಯ ಟಕ್ಕಳಕಿ ಗ್ರಾಮದ ರೈತ ರಾಜು ರಾಠೋಡ್ ಮಗನಾದ ಅನಿಲ್ ರಾಠೋಡ ‘ಚಿನ್ನದ ಪದಕ’ ಮತ್ತು ಪ್ರಮಾಣಪತ್ರವನ್ನು ಘನವೆತ್ತ ರಾಜ್ಯಪಾಲ ಡಾ.ಥಾವರ್ ಚಂದ್ ಗೆಹ್ಲೋಟ್ ಅವರಿಂದ ಪಡೆದು ವಿಜಯಪುರ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾನೆ. ಮೂಲತಃ…

Read More

ಹಂದಿಗನೂರ ತಾಂಡಾದಲ್ಲಿ “ಹೆಣ್ಣು ಮಕ್ಕಳ ಶಿಕ್ಷಣದ ಮಹತ್ವ” ಕುರಿತು ಅರಿವು ಕಾರ್ಯಕ್ರಮ ವಿಜಯಪುರ: ಹೆಣ್ಣು ಮಕ್ಕಳು ಇಂದು ಎಲ್ಲ ರಂಗಗಳಲ್ಲೂ ಸಾಧನೆ ಮಾಡುತ್ತಿದ್ದು, ತಾವು ಅಬಲೆ ಅಲ್ಲ ಸಬಲೆ ಎಂಬುದನ್ನು ಸಾಬೀತುಪಡಿಸುತ್ತಲೇ ಇದ್ದಾರೆ. ಶಿಕ್ಷಣದ ಮೂಲಕ ಮಾತ್ರವೇ ಇಂತಹ ಸಾಧನೆ ಸಾಧ್ಯವಾಗಿದೆ ಎಂದು ಡಾ.ಸುರೇಖಾ ರಾಠೋಡ ಹೇಳಿದರು.ರವಿವಾರ ಸಮರ್ಥ ಸಂಸ್ಥೆ ವತಿಯಿಂದ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಹಂದಿಗನೂರ ತಾಂಡಾದಲ್ಲಿ “ಹೆಣ್ಣು ಮಕ್ಕಳ ಶಿಕ್ಷಣದ ಮಹತ್ವ” ವಿಷಯ ಕುರಿತು ಅರಿವು ಕಾರ್ಯದಲ್ಲಿ ಅವರು ಮಾತನಾಡಿದರು.ಗ್ರಾಮೀಣ ಭಾಗದ ಹೆಣ್ಣುಮಕ್ಕಳು ಉನ್ನತ ಶಿಕ್ಷಣದ ಮೂಲಕವೇ ಮಾತ್ರ ಆರ್ಥಿಕವಾಗಿ, ಸಾಮಾಜಿಕವಾಗಿ ಸಶಕ್ತರಾಗಲು ಸಾಧ್ಯವೆಂದು ನುಡಿದ ಡಾ.ಸುರೇಖಾ ರಾಠೋಡ ಅವರು, ಇತ್ತೀಚಿನ ದಿನಗಳಲ್ಲಿ ತಾಂಡಾ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದು, ಅದಕ್ಕೆ ಕಾರಣಗಳೇನು ಎಂಬುದರ ಕುರಿತು ವಿವರಿಸಿದರು.ಶ್ರೀಮತಿ ಸಂಗೀತಾ ನಾಯಕ ಮಾತನಾಡಿ, ಹೆಣ್ಣುಮಕ್ಕಳು ಇಂದಿನ ದಿನಗಳಲ್ಲಿ ಎಲ್ಲಾ ಕ್ಷೇತ್ರದಲ್ಲಿ ಮುಂದುವರೆಯುತ್ತಿದ್ದಾಗ ತಾಂಡಾದ ಹೆಣ್ಣು ಮಕ್ಕಳು ಹಿಂದೆ ಉಳಿದುಕೊಳ್ಳಬಾರದು ಎಂದು ಸಲಹೆ ನೀಡಿದರು.ತಾಂಡಾದ ಹಿರಿಯರಾದ ಪುಂಡಲೀಕ ರಾಠೋಡ, ಪಾಂಡು ರಾಠೋಡ,…

Read More

ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆ | ಸರ್ಕಾರ ಅಭದ್ರಗೊಳಿಸುವ ಷಡ್ಯಂತ್ರ | ಸಿಎಂ ಸಿದ್ದರಾಮಯ್ಯ ಆರೋಪ ಬೆಂಗಳೂರು: ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, “ರಾಜ್ಯಪಾಲರ ನಿರ್ಣಯ ಸಂವಿಧಾನ ಬಾಹಿರ; ಕಾನೂನು ಹೋರಾಟ ಮಾಡಲಾಗುವುದು” ಎಂದು ಹೇಳಿದ್ದಾರೆ.ಶನಿವಾರ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಾಗಿದ್ದು, ನನ್ನ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಅವರ ನಿರ್ಣಯ ಚುನಾಯಿತ ಸರ್ಕಾರವನ್ನು ಅಭದ್ರಗೊಳಿಸುವ ಷಡ್ಯಂತ್ರವಾಗಿದೆ. ನಮ್ಮ ಸರ್ಕಾರವನ್ನು ಅಭದ್ರಗೊಳಿಸುವ ದೊಡ್ಡ ಷಡ್ಯಂತ್ರವನ್ನು ಮಾಡಲಾಗಿದೆ. ಬಿಜೆಪಿ, ಜೆಡಿಎಸ್ ಹಾಗೂ ರಾಜ್ಯದ ಕೆಲ ಮುಖಂಡರು ಈ ಷಡ್ಯಂತ್ರದ ಪಾಲುದಾರರು. ಉತ್ತರಾಖಂಡ, ಜಾರ್ಖಂಡ್, ನವದೆಹಲಿಯಲ್ಲಿ ಮಾಡಿದಂತೆ ಕರ್ನಾಟಕದಲ್ಲಿಯೂ ಷಡ್ಯಂತ್ರ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.“ಮೇಲ್ನೋಟಕ್ಕೆ ನನ್ನ ಮೇಲೆ ಯಾವುದೇ ಪ್ರಕರಣವಿಲ್ಲ, ರಾಜ್ಯಪಾಲರ ನಿರ್ಣಯ ಸಂವಿಧಾನ ಬಾಹಿರವಾಗಿದ್ದು, ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಕಾನೂನು ಹೋರಾಟ ಮಾಡಲಾಗುವುದು.ನನ್ನ ವಿರುದ್ಧ ದೂರು ಬಂದ ದಿನವೇ…

Read More

ತುಮಕೂರು ವಿವಿ ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಪ್ರಥಮ ರ‍್ಯಾಂಕ್ | ರಾಜ್ಯಪಾಲರಿಂದ ಗೋಲ್ಡ್ ಮೆಡಲ್ ಪ್ರದಾನ ಚಡಚಣ: ಗುಮ್ಮಟ ನಗರಿ ಜಿಲ್ಲೆಯಿಂದ ಕಲ್ಪತರು ನಾಡಿನ ಕಡೆ ಉನ್ನತ ವ್ಯಾಸಂಗಕ್ಕೆ ಪಯಣ ಬೆಳೆಸಿ, ಎಲೆಕ್ಟ್ರಾನಿಕ್ ಮೀಡಿಯಾ ಸ್ನಾತಕೋತ್ತರ ಪದವಿ ಅಧ್ಯಯನಕ್ಕಾಗಿ ತುಮಕೂರು ವಿಶ್ವ ವಿದ್ಯಾಲಯದಲ್ಲಿ ಪ್ರಥಮ ರ‍್ಯಾಂಕ್ ಪಡೆದು ಗೋಲ್ಡ್ ಮೆಡಲ್ ಮುಡಿಗೇರಿಸಿಕೊಂಡ ಯುವಕ ಸಂತೋಷ.ತುಮಕೂರು ವಿಶ್ವವಿದ್ಯಾಲಯದ 17 ನೇ ಘಟಿಕೋತ್ಸವ ಸಮಾರಂಭದಲ್ಲಿ ಚಡಚಣ ಪಟ್ಟಣದ ನಿವೃತ್ತ ಶಿಕ್ಷಕ ಮಲ್ಲಿಕಾರ್ಜುನ ಬಗಲಿಯವರ ತೃತೀಯ ಪುತ್ರ ಸಂತೋಷ ಬಗಲಿ ‘ಚಿನ್ನದ ಪದಕ’ವನ್ನು ರಾಜ್ಯಪಾಲ ಡಾ. ಥಾವರ್ ಚಂದ್ ಗೆಹ್ಲೋಟ್ ಅವರಿಂದ ಪಡೆದು ವಿಜಯಪುರ ಜಿಲ್ಲೆಯ ಕೀರ್ತಿ ಇಮ್ಮಡಿಗೊಳಿಸಿದ್ದಾನೆ.ಅಂದು ಊರಲ್ಲಿ ದಿನಪತ್ರಿಕೆಗಳನ್ನು ಮನೆ ಮನೆಗೆ ವಿತರಿಸುತ್ತಿದ್ದ ಯುವಕ ಸಂತೋಷ. ಪತ್ರಿಕೋದ್ಯಮ ಪದವಿ ಕಲಿಯಬೇಕೆಂದು ನಿರಂತರ ಅಧ್ಯಯನ ಮಾಡಿ, ಇಂದು ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ‍್ಯಾಂಕ್ ಪಡೆದುಕೊಂಡು ಚಿನ್ನದ ಬೇಟೆಯಾಡಿದ್ದಾನೆ.ಸದ್ಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆಯುತ್ತಿರುವ…

Read More

ಚಡಚಣ ಓಂ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ ಚಡಚಣ: ಇಂದಿನ ಸ್ಪರ್ದಾತ್ಮಕ ಹಾಗೂ ಕಂಪ್ಯೂಟರ್‌ ಯುಗದಲ್ಲಿ ವಿದ್ಯಾರ್ಥಿಗಳಗೆ ದೇಶಾಭಿಮಾನ, ಹಿರಿಯಲ್ಲಿ ಗೌರವ ಹಾಗೂ ನಮ್ಮ ದೇಶದ, ನೆಲದ ಸಂಸ್ಕಾರ ನೀಡುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಎಸ್‌ ಜೆ ನಾಯಕ ಹೇಳಿದರು.ಪಟ್ಟಣದ ದೇವರ ನಿಂಬರಗಿ ಕ್ರಾಸ್‌ ಬಳಿಯಲ್ಲಿರುವ ಓಂ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಸಂರ್ವೋದಯ ಕೈಗಾರಿಕಾ ತರಬೇತಿ ಕೇಂದ್ರ, ಗೋಲ್ಡನ್‌ ಸೌಹಾರ್ದ ಸಂಘ ನಿಯಮಿತ ಹಾಗೂ ಜಿಪಿ ಕಾಲೇಜ ಆಫ್‌ ಫಾರ್ಮಸಿ ಸಹಯೋಗದಲ್ಲಿ ಆಯೋಜಿಸಲಾದ 78 ನೇ ಸ್ವಾತ್ರ್ಯ ದಿನಾಚರಣೆಯಲ್ಲಿ ಅವರು ಮಾತನಾಡಿದರು.ದಿವ್ಯ ಸಾನಿಧ್ಯ ವಹಿಸಿದ ವಿರಕ್ತ ಮಠದ ಷಡಕ್ಷರಿ ಸ್ವಾಮೀಜಿ ಮಾತನಾಡಿ, ಚಹಾ ಮಾಡುವ ಒಬ್ಬ ವ್ಯಕ್ತಿ ದೇಶದ ಚುಕ್ಕಾಣಿ ಹಿಡಿದಂತೆ ಇಲ್ಲಿಯ ವಿದ್ಯಾರ್ಥಿಗಳು ಮುಂದೆ ಯಾವ ಸ್ಥಾನಕ್ಕೇರುವರು ಎಂಬುದು ಗೊತ್ತಲ್ಲ. ಆದುದರಿಂದ ಇಲ್ಲಿರುವ ಶಿಕ್ಷಕರು ಉತ್ತಮ ಶಿಕ್ಷಣ ಹಾಗೂ ದೇಶಾಭಿಮಾನ ಬೆಳಸಬೇಕು ಎಂದರು.”ಓಂ” ಯುವಕ ಗಡಿನಾಡ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಸುಮಿತ್ರಾ ಹಾವಿನಾಳ ದ್ವಜಾರೋಹಣ…

Read More

ಮಹಾನಗರಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ನೇತೃತ್ವದಲ್ಲಿ ವಿವಿಧ ಬಡಾವಣೆಗಳಲ್ಲಿ ಗಿಡನೆಡುವ ಕಾರ್ಯ ಚುರುಕು ವಿಜಯಪುರ: ನಗರದ ಹಸರೀಕರಣಕ್ಕೆ ಹೆಚ್ಚಿನ ಒತ್ತು ನೀಡಿರುವ ವಿಜಯಪುರ ಮಹಾನಗರಪಾಲಿಕೆ, ಶಾಲಾ ಆವರಣ, ಸಮುದಾಯ ಭವನ, ಉದ್ಯಾನವನ ಹಾಗೂ ವಿವಿಧ ರಸ್ತೆಗಳಲ್ಲಿ ಗಿಡನೆಡುವ ಕಾರ್ಯ ಚುರುಕುಗೊಳಿಸಿದೆ.ಪ್ರಸಕ್ತ ಮಳೆಗಾಲದಲ್ಲಿ ಮಹಾನಗರಪಾಲಿಕೆ ನಗರದಲ್ಲಿ ಎಂಟು ಸಾವಿರ ಗಿಡಗಳನ್ನು ನೆಡುವ ಗುರಿ ಹೊಂದಿ ಈಗಾಗಲೇ ವಿವಿಧ ಬಡಾವಣೆಗಳಲ್ಲಿ ಸುಮಾರು ಆರು ಸಾವಿರ ಗಿಡಗಳನ್ನು ನೆಟ್ಟು ಸಾಧನೆ ಮಾಡಿದೆ.ಮಹಾನಗರಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಹಿರಿಯ ಅಧಿಕಾರಿ ಶಾಂತೇಶ ಪತ್ತಾರ ಅವರ ನೇತೃತ್ವ ಹಾಗೂ ಉಸ್ತುವಾರಿಯಲ್ಲಿ ಗಿಡನೆಡುವ ಕಾರ್ಯ ಭರದಿಂದ ಸಾಗಿದೆ.ನಗರದ ಕನಕದಾಸ ಬಡಾವಣೆ, ಗುರುಪಾದೇಶ್ವರ ನಗರ, ತ್ರಿಮೂರ್ತಿ ನಗರ, ರಾಮನಗರ, ರಾಜಾಜಿನಗರ, ಪೊಲೀಸ್ ಪರೇಡ್ ಮೈದಾನ ರಸ್ತೆ ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿ ಗಿಡಗಳನ್ನು ನೆಡಲಾಗಿದ್ದು, ಗಿಡನೆಡುವ ಕಾರ್ಯ ಇನ್ನೂ ಮುಂದುವರೆದಿದೆ.ಹಸರೀಕರಣದ ಮುಂದುವರೆದ ಭಾಗವಾಗಿ ಶನಿವಾರ ನಗರ ಹೊರವಲಯದಲ್ಲಿರುವ ಗಣೇಶನಗರದ ಶ್ರೀ ಸಿದ್ಧಿವಿನಾಯಕ ಹಾಗೂ ಶ್ರೀ ಸಾಕ್ಷಿ ಹನುಮಾನ ದೇವಸ್ಥಾನ (ಉದ್ಯಾನವನದ ಬಳಿ)…

Read More

ಕೆಂಭಾವಿ: ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ಶನಿವಾರ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಲು ಆಗಮಿಸಿದ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳು ಮತ್ತು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು ಶರಣಬಸಪ್ಪಗೌಡ ದರ್ಶನಪುರವರನ್ನು ವಲಯ ಕಸಾಪದ ನೂತನ ಅಧ್ಯಕ್ಷ ಮಡಿವಾಳಪ್ಪಗೌಡ ಪಾಟೀಲ್ ಹೆಗ್ಗನದೊಡ್ಡಿ ಹಾಗೂ ಪದಾಧಿಕಾರಿಗಳು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.ಇದೇ ವೇಳೆ ಮಾತನಾಡಿದ ಸಚಿವರು ವಲಯ ಸೇರಿದಂತೆ ತಾಲೂಕು, ಜಿಲ್ಲಾ ಮಟ್ಟದ ಸಾಹಿತಿಕ ಚಟುವಟಿಕೆಗಳು ನಿರಂತರವಾಗಿ ಸಾಗಲಿ ಎಂದವರು, ನಾಡು ನುಡಿ ಸಂರಕ್ಷಣೆಗೆ ಸರ್ಕಾರ ಸದಾ ಸಿದ್ಧವಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಖಾಸಗಿ ಕ್ಷೇತ್ರದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಜಾರಿಗೊಳಿಸಲು ಮುಂದಾಗಿದೆ ಎಂದು ತಿಳಿಸಿದರು.ಪ್ರಮುಖರಾದ ಮಾಜಿ ಜಿಪಂ ಉಪಾಧ್ಯಕ್ಷೆ ಶಂಕ್ರಣ್ಣ ವಣಿಕ್ಯಾಳ, ಸುಮಿತ್ರಪ್ಪ ಅಂಗಡಿ, ಹಿರಿಯ ಪತ್ರಕರ್ತ ಸಂಜೀವರಾವ್ ಕುಲ್ಕರ್ಣಿ, ಶಿವರಾಜ ಬುದೂರು, ಗುಂಡಭಟ್ಟ ಜೋಶಿ, ಪವನ ಕುಲ್ಕರ್ಣಿ, ಡಿ ಸಿ ಪಾಟೀಲ್, ರಂಗಪ್ಪ ವಡ್ಡರ್, ಸೂಗುರಯ್ಯ ಇಂಡಿ, ಬಿ ಗುಡಿ ಕಸಾಪ ಅಧ್ಯಕ್ಷ ಶರಣಬಸವ ಬಿರಾದಾರ, ತಿಪ್ಪಣ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Read More

ಆಲಮಟ್ಟಿ: ಅಮೆರಿಕದ ಮೇರಿಲ್ಯಾಂಡ್ ರಾಜ್ಯದ ಗೇಥಸ್ಬರ್ಗ್ ನಲ್ಲಿರುವ ಜೆ ಎಸ್ ಎಸ್ ಆಧ್ಯಾತ್ಮಿಕ ಕೇಂದ್ರದಲ್ಲಿ ಆಲಮಟ್ಟಿಯ ಅನ್ನದಾನೇಶ್ವರ ಪುರವರ ಹಿರೇಮಠದ ರುದ್ರಮುನಿ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಿ, ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದರು.ಆಧ್ಯಾತ್ಮಿಕ ಕೇಂದ್ರದ ಸ್ವಯಂಸೇವಕರು ಹಾಗೂ ಸಿಬ್ಬಂದಿ ಇದ್ದರು

Read More

ಮುದ್ದೇಬಿಹಾಳ: ಮಾನವನ ದೇಹಕ್ಕೆ ಅಪಾಯಕಾರಿ ಅನೀಲವನ್ನು ಹೊರಸೂಸುವ ವಿಷಕಾರಿ ಸಸ್ಯವನ್ನು ಪಟ್ಟಣದ ಪ್ರಮುಖ ರಸ್ತೆಯ ಡಿವಾಯ್ಡರ್‌ಗಳಲ್ಲಿ ಮತ್ತು ಅಕ್ಕಪಕ್ಕದಲ್ಲಿ ನೆಡಲಾಗಿದೆ. ಈ ಸಸ್ಯಗಳನ್ನು ಕೂಡಲೇ ತೆರವುಗೊಳಿಸಲು ಸಂಬಂಧಿಸಿದ ಅಧಿಕಾರಿಗಳು ಮುಂದಾಗಬೇಕು ಎಂದು ಚಿಂತಕ ಬಿ.ಆರ್.ಚಪ್ಪರಬಂದ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋನೋ ಕಾರ್ಪಸ್ ಎಂಬ ಸಸ್ಯವನ್ನು ಅತೀ ಹೆಚ್ಚಾಗಿ ಪಟ್ಟಣದಲ್ಲಿ ನೆಡಲಾಗಿದೆ. ಇದರಿಂದ ಮಾನವನ ದೇಹದ ಮೇಲೆ ಮಾತ್ರವಲ್ಲದೇ ಭೂಮಿಯ ಒಳಗಿನ ಅಂತರ್ಜಲ ಮಟ್ಟದ ಮೇಲೂ ವ್ಯತಿರಿಕ್ತ ಪರಿಣಾಮಗಳು ಬೀರುತ್ತವೆ. ಈ ಸಸ್ಯವನ್ನು ಈಗಾಗಲೇ ಹಲವು ರಾಜ್ಯಗಳಲ್ಲಿ ನಿಷೇದಿಸಲಾಗಿದ್ದು, ನಮ್ಮಲ್ಲಿ ಮಾತ್ರ ಮುಖ್ಯ ಪ್ರದೇಶಗಳಲ್ಲಿ ನೆಡಲಾಗಿದೆ. ಈ ಕೂಡಲೇ ಇವುಗಳನ್ನು ತೆರವುಗೊಳಿಸದೇ ಹೋದಲ್ಲಿ ಬರುವ ದಿನಗಳಲ್ಲಿ ಸಾರ್ವಜನಿಕರ ಆರೋಗ್ಯ ಮೇಲೆ ಗಂಭೀರ ಪರಿಣಾಮಗಳು ಬೀರಲಿವೆ ಎಂದರು.ಈ ಸಸ್ಯದ ಬಗ್ಗೆ ಅಧ್ಯಯನ ಮಾಡಲಾಗಿ ಅತೀ ವೇಗವಾಗಿ ಬೆಳೆಯುವ ಈ ಸಸ್ಯ ಹೆಚ್ಚಿನ ನೆರಳು ನೀಡುತ್ತದೆ. ಎಲೆಗಳು ಬೇಗನೇ ಬಾಡುವದಿಲ್ಲ. ಇದರಿಂದ ಎಲೆಗಳ ಉದುರುವಿಕೆ ಜಾಸ್ತಿಯಾಗುವದಿಲ್ಲ. ಇದರಿಂದ ಸ್ವಚ್ಛತೆ ಕಾಪಾಡಿದಂತಾಗುತ್ತದೆ…

Read More

ಸಿಂದಗಿ: ಪಟ್ಟಣದ ಓಂಕಾರ ಕರಿಯರ್ ಅಕಾಡೆಮಿ ವತಿಯಿಂದ ೭೮ನೆಯ ಸ್ವಾತಂತ್ರೋತ್ಸವದ ಅಂಗವಾಗಿ ರಾಜ್ಯ ಮಟ್ಟದ ಸಾಮಾನ್ಯ ಜ್ಞಾನ ಪರೀಕ್ಷೆಯನ್ನು ಆ.೧೮ರಂದು ಬೆಳಿಗ್ಗೆ ೧೦:೩೦ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಓಂಕಾರ ಕರಿಯರ್ ಅಕಾಡೆಮಿ ನಿರ್ದೇಶಕ ಶರಣಗೌಡ ಓಂಕಾರ ತಿಳಸಿದ್ದಾರೆ.ಸಾಮಾನ್ಯ ಜ್ಞಾನ ಪರೀಕ್ಷೇಯಲ್ಲಿ ಪ್ರಥಮ ೫೦೦೧, ದ್ವಿತೀಯ ೨೫೦೧, ತೃತೀಯ ೧೫೦೧ ಹಾಗೂ ೪ನೆಯ ಬಹುಮಾನವನ್ನು ೫ಜನ ವಿದ್ಯಾರ್ಥಿಗಳಿಗೆ ಸಮಾಧಾನಕರವಾದ ಬಹುಮಾನ ಪುಸ್ತಕಗಳನ್ನು ಆ.೧೯ರಂದು ಬೆಳಿಗ್ಗೆ ೧೦:೩೦ಗಂಟೆಗೆ ಬಹುಮಾನ ವಿತರಿಸಲಾಗುವುದು.ಹೆಚ್ಚಿನ ಮಾಹಿತಿಗಾಗಿ ಬಸವೇಶ್ವರ ವೃತ್ತದಲ್ಲಿರುವ ಓಂಕಾರ ಕರಿಯರ್ ಅಕಾಡೆಮಿ ಕಾರ್ಯಾಲಯದ ದೂರವಾಣಿಗೆ ೯೯೭೨೦೬೫೧೧೭, ೯೮೮೦೩೭೧೮೪೧, ೯೮೪೪೭೦೯೪೧೫ ಸಂಪರ್ಕಿಸಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಸಿದ್ದಾರೆ.

Read More