ಮುದ್ದೇಬಿಹಾಳ: ಮಾನವನ ದೇಹಕ್ಕೆ ಅಪಾಯಕಾರಿ ಅನೀಲವನ್ನು ಹೊರಸೂಸುವ ವಿಷಕಾರಿ ಸಸ್ಯವನ್ನು ಪಟ್ಟಣದ ಪ್ರಮುಖ ರಸ್ತೆಯ ಡಿವಾಯ್ಡರ್‌ಗಳಲ್ಲಿ ಮತ್ತು ಅಕ್ಕಪಕ್ಕದಲ್ಲಿ ನೆಡಲಾಗಿದೆ. ಈ ಸಸ್ಯಗಳನ್ನು ಕೂಡಲೇ ತೆರವುಗೊಳಿಸಲು ಸಂಬಂಧಿಸಿದ ಅಧಿಕಾರಿಗಳು ಮುಂದಾಗಬೇಕು ಎಂದು ಚಿಂತಕ ಬಿ.ಆರ್.ಚಪ್ಪರಬಂದ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋನೋ ಕಾರ್ಪಸ್ ಎಂಬ ಸಸ್ಯವನ್ನು ಅತೀ ಹೆಚ್ಚಾಗಿ ಪಟ್ಟಣದಲ್ಲಿ ನೆಡಲಾಗಿದೆ. ಇದರಿಂದ ಮಾನವನ ದೇಹದ ಮೇಲೆ ಮಾತ್ರವಲ್ಲದೇ ಭೂಮಿಯ ಒಳಗಿನ ಅಂತರ್ಜಲ ಮಟ್ಟದ ಮೇಲೂ ವ್ಯತಿರಿಕ್ತ ಪರಿಣಾಮಗಳು ಬೀರುತ್ತವೆ. ಈ ಸಸ್ಯವನ್ನು ಈಗಾಗಲೇ ಹಲವು ರಾಜ್ಯಗಳಲ್ಲಿ ನಿಷೇದಿಸಲಾಗಿದ್ದು, ನಮ್ಮಲ್ಲಿ ಮಾತ್ರ ಮುಖ್ಯ ಪ್ರದೇಶಗಳಲ್ಲಿ ನೆಡಲಾಗಿದೆ. ಈ ಕೂಡಲೇ ಇವುಗಳನ್ನು ತೆರವುಗೊಳಿಸದೇ ಹೋದಲ್ಲಿ ಬರುವ ದಿನಗಳಲ್ಲಿ ಸಾರ್ವಜನಿಕರ ಆರೋಗ್ಯ ಮೇಲೆ ಗಂಭೀರ ಪರಿಣಾಮಗಳು ಬೀರಲಿವೆ ಎಂದರು.
ಈ ಸಸ್ಯದ ಬಗ್ಗೆ ಅಧ್ಯಯನ ಮಾಡಲಾಗಿ ಅತೀ ವೇಗವಾಗಿ ಬೆಳೆಯುವ ಈ ಸಸ್ಯ ಹೆಚ್ಚಿನ ನೆರಳು ನೀಡುತ್ತದೆ. ಎಲೆಗಳು ಬೇಗನೇ ಬಾಡುವದಿಲ್ಲ. ಇದರಿಂದ ಎಲೆಗಳ ಉದುರುವಿಕೆ ಜಾಸ್ತಿಯಾಗುವದಿಲ್ಲ. ಇದರಿಂದ ಸ್ವಚ್ಛತೆ ಕಾಪಾಡಿದಂತಾಗುತ್ತದೆ ಎಂದು ಈ ಸಸ್ಯವನ್ನು ಹೆಚ್ಚಾಗಿ ನೆಡಲಾಗುತ್ತಿತ್ತು. ಆದರೆ ಈ ಸಸ್ಯದ ಬಗ್ಗೆ ಸಂಶೋಧನೆ ನಡೆಸಿದಾಗ ಈ ಸಸ್ಯದಿಂದ ಮಾನವ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀಳುವ ಬಗ್ಗೆ ತಿಳಿದು ಬಂದಿದೆ. ಈ ಸಸ್ಯ ಮೇಲೆ ಎಷ್ಟು ವೇಗವಾಗಿ ಬೆಳೆಯುತ್ತದೆಯೋ ಅಷ್ಟೇ ವೇಗವಾಗಿ ಇದರ ಬೇರುಗಳು ಭೂಮಿಯಲ್ಲಿ ಬೆಳೆಯುತ್ತವೆ. ಇದರಿಂದ ನೀರಿನ ಶೆಲೆಗಳು ಬಂದ್ ಆಗಿ ಅಂತರ್ಜಲ ಮಟ್ಟ ಕಡಿಮೆಯಾಗುವದರ ಜೊತೆಗೆ ಭೂಮಿಯ ಫಲವತ್ತತೆ ಕೂಡ ಕಡಿಮೆಯಾಗುತ್ತದೆ. ಅಲ್ಲದೇ ಈ ಸಸ್ಯ ಪ್ರೌಢಾವಸ್ತೆಗೆ ಬಂದಾಗ ಬಿಡುವ ಹೂವಿನಿಂದ ಹೊರ ಬರುವ ಹುಡಿ ಮನುಷ್ಯನ ಮೂಗಿನ ಮೂಲಕ ಶ್ವಾಸಕೋಶಕ್ಕೆ ಹೋದರೆ ಹಿಟ್‌ಮೈನ್ ಎನ್ನುವ ಅಂಶ ಬಿಡುಗಡೆಯಾಗಿ ಅಸ್ತಮಾ ಬರುವ ಸಾಧ್ಯತೆ ಜಾಸ್ತಿ ಇರುತ್ತದೆ. ಹಾಗಾಗಿ ಈ ಸಸ್ಯಗಳನ್ನು ವೇಗವಾಗಿ ಅಸ್ತಮಾ ಬಿಡುಗಡೆ ಮಾಡುವ ಸಸ್ಯಗಳೆಂತಲೂ ಕೂಡ ಕರೆಯುತ್ತಾರೆ. ಇನ್ನೂ ಇದರಿಂದ ಸಾರ್ವಜನಿಕರ ಮೇಲೆ ಹಲವಾರು ವ್ಯತಿರಿಕ್ತ ಪರಿಣಾಮಗಳು ಬೀರುತ್ತಿದ್ದು ಸಂಬಂಧಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಕೂಡಲೇ ಎಲ್ಲ ಸಸ್ಯಗಳನ್ನು ತೆರವುಗೊಳಿಸಿ ಆ ಸ್ಥಳಗಳಲ್ಲಿ ಅತಿಯಾದ ಆಮ್ಲಜನಕವನ್ನು ಉತ್ಪಾದಿಸುವ ಕಡಿಮೆ ಎತ್ತರದಲ್ಲಿ ಬೆಳೆಯುವ ಸಸ್ಯಗಳನ್ನು ನೆಟ್ಟು ಜನತೆಯ ಆರೋಗ್ಯವನ್ನು ಕಾಪಾಡಬೇಕು ಎಂದರು.
Subscribe to Updates
Get the latest creative news from FooBar about art, design and business.
ವಿಷಕಾರಿ ಸಸ್ಯಗಳನ್ನು ತೆರವುಗೊಳಿಸಲು ಚಿಂತಕ ಚಪ್ಪರಬಂದ ಆಗ್ರಹ
Related Posts
Add A Comment

