Author: editor.udayarashmi@gmail.com

ಅಫಜಲಪುರ: ೨ನೇ ಶ್ರೀಶೈಲ ಎಂದು ಖ್ಯಾತಿ ಪಡೆದಿರುವ ತಾಲೂಕಿನ ಸುಕ್ಷೇತ್ರ ಚಿನಮಳ್ಳಿಯ ಮಲ್ಲಿಕಾರ್ಜುನ ದೇವಾಲಯಕ್ಕೆ ಹೊಸದಾಗಿ ದ್ವಾರಬಾಗಿಲ ನಿರ್ಮಾಣವಾಗುತ್ತಿದ್ದು, ಚಿನ್ಮಯಗಿರಿಯ ವೀರ ಮಹಾಂತ ಶಿವಾಚಾರ್ಯರು, ಅಫಜಲಪುರದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ದ್ವಾರಬಾಗಿಲ ಕಾಮಗಾರಿಗೆ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ದೇವಸ್ಥಾನ ಕಮೀಟಿ ಅಧ್ಯಕ್ಷ ಕಲ್ಯಾಣರಾವ್ ಬಿರಾದಾರ ಹಸರಗುಂಡಗಿ, ಸದಸ್ಯರಾದ ಗುರುಲಿಂಗಯ್ಯ ಸ್ವಾಮಿ, ಮಲ್ಲಿನಾಥ ಬಿರಾದಾರ, ನಾಗರಾಜ ಮೇಳಕುಂದಿ, ಭೋಜರಾಯ ಪಾಟೀಲ, ಶ್ರೀಶೈಲ ಕೌದಿ, ಗುಂಡಪ್ಪ ಹೂಗಾರ, ಶರಣು ಗುಜ್ಜಾ, ನಿಂಗಣ್ಣ ವಳಕಟ್ಟಿ, ಶಾಮರಾವ್ ಪಾಟೀಲ, ಅಪ್ಪಾಸಾಬ ದೇವರಮನಿ, ಮಲ್ಲೇಶಿ ತಳವಾರ, ಸಿದ್ದು ಹೂಗಾರ, ಮಡಿವಾಳಪ್ಪ ಹೂಗಾರ, ಲಕ್ಷ್ಮಣಗೌಡ ಪಾಟೀಲ ಸಂಗಾಪುರ, ಶ್ರೀಮಂತ ಬೋಳಶೆಟ್ಟಿ, ಸಿದ್ದು ಮಾಹೂರ, ಹುಸೇನಸಾಬ ಮುಲ್ಲಾ, ಶೌಕತ ಅಲಿ ತಾಂಬೋಳಿ, ತಾಜುದ್ದಿನ್ ತಾಂಬೋಳಿ, ಶರಣು ತಳಕೇರಿ ಸೇರಿದಂತೆ ಅನೇಕರು ಇದ್ದರು.

Read More

ಢವಳಗಿ:ಗ್ರಾಮದ ಶ್ರೀ ಭೀರಲಿಂಗೇಶ್ವರ ಮತ್ತು ಜಟ್ಟಿಂಗೇಶ್ವರರ ನೂತನ ದೇವಸ್ಥಾನದ ಉದ್ಘಾಟನೆ ಅಂಗವಾಗಿ ಗ್ರಾಮದ ಶ್ರೀ ಭೀರಲಿಂಗೇಶ್ವರ ನೂತನ ಪಲ್ಲಕ್ಕಿ ಸೇರಿದಂತೆ ಪಂಚ ಪಲ್ಲಕ್ಕಿಯು ಗಂಗಾಸ್ನಾನ ಮಾಡಿಕೊಂಡು ಡೊಳ್ಳು ವಾಲಗದೊಂದಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ನಂತರ ಸಾಯಂಕಾಲ 5. ಗಂಟೆಗೆ ಕಳಸವು ಶಿಖರಕ್ಕೆ ಏರಿತು.ಮಹಿಳೆಯರು ಕುಂಭ ಕಳಸವನ್ನು ಹಿಡಿದು ಮೆರವಣಿಗೆಗೆ ಮೆರಗು ತಂದರು.ಪಲ್ಲಕ್ಕಿ ಮೆರವಣಿಗೆಯಲ್ಲಿ 12 ಕ್ವೀಂಟಲ್ ಭಂಡಾರವನ್ನು ಪಲ್ಲಕ್ಕಿ ಮತ್ತು ದೇವಸ್ಥಾನದ ಮೇಲೆ ಹಾರಿಸಲಾಯಿತು. ಇದೇ ವೇಳೆಯಲ್ಲಿ ಗ್ರಾಮದ ಹಿರಿಯರು, ಯುವಕರು ಮತ್ತು ಮಹಿಳೆಯರು ಪಾಲ್ಗೊಂಡಿದ್ದರು.

Read More

ಅಫಜಲಪುರ: ಸರ್ಕಾರವನ್ನು ಅಸ್ಥಿರಗೊಳಿಸುವುದಕ್ಕಾಗಿ ಬಿಜೆಪಿ, ಜೆಡಿಎಸ್ ಪಕ್ಷದವರು ಸದಾ ಹೊಂಚು ಹಾಕುತ್ತಲೇ ಇದ್ದಾರೆ, ಈಗ ವಿರೋಧ ಪಕ್ಷದವರಿಗೆ ರಾಜ್ಯಪಾಲರು ಕೈ ಜೋಡಿಸಿದಂತೆ ಕಾಣುತ್ತಿದ್ದು ರಾಜ್ಯಪಾಲರು ಬಿಜೆಪಿಗರ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಜೆ.ಎಂ ಕೊರಬು ಆರೋಪಿಸಿದ್ದಾರೆ.ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಾಜ್ಯಪಾಲರು ಮುಖ್ಯಮಂತ್ರಿಗಳ ವಿರುದ್ದ ತನಿಖೆಗೆ ಪ್ರಾಸಿಕ್ಯೂಷನ್‌ಗಾಗಿ ಅನುಮತಿ ನೀಡಿದ್ದು ಕಾನೂನು ಬಾಹಿರವಾದ ಕ್ರಮವಾಗಿದೆ ಎಂದ ಅವರು ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರ ಮೇಲೆ ಸ್ವತಃ ಲೋಕಾಯುಕ್ತ ಸಂಸ್ಥೆಯೇ ಪ್ರಾಸಿಕ್ಯೂಷನ್‌ಗಾಗಿ ಅನುಮತಿ ಕೇಳಿ ೧೦ ತಿಂಗಳಾದರೂ ರಾಜ್ಯಪಾಲರು ಕ್ರಮ ಕೈಗೊಳ್ಳದೆ ಮೌನವಾಗಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ಮುರುಗೇಶ ನಿರಾಣಿ, ಶಶಿಕಲಾ ಜೊಲ್ಲೆ ಮೇಲಿನ ದೂರಿನ ಕಡತಗಳು ಧೂಳು ಹಿಡಿದಿವೆ. ಹೀಗಿರುವಾಗ ಸಿದ್ದರಾಮಯ್ಯ ಅವರ ತೇಜೋವಧೆ ಮಾಡುವುದಕ್ಕಾಗಿ ಕುತಂತ್ರ ನಡೆಸಿದ್ದು ನೋಡಿದರೆ ಇವರು ರಾಜ್ಯಪಾಲರೋ ಅಥವಾ ವಿರೋಧ ಪಕ್ಷಗಳ ಎಜೆಂಟರೋ ಎನ್ನುವ ಅನುಮಾನ ಮೂಡುವಂತಾಗಿದೆ ಎಂದರು.ಇನ್ನೂ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳು ರಾಜೀನಾಮೆ ನೀಡುವ…

Read More

ಅಫಜಲಪುರ: ದೇಶದಲ್ಲಿ ಒಂದಿಲ್ಲೊಂದು ಸ್ಥಳದಲ್ಲಿ ಮಹಿಳಾ ಶೋಷಣೆಗಳು ನಡೆಯುತ್ತಲೇ ಇವೆ. ಅದರಲ್ಲೂ ಅತ್ಯಾಚಾರ, ಕೊಲೆ ಪ್ರಕರಣಗಳು ನಿತ್ಯ ನಡೆಯುತ್ತಿದ್ದು ಆತಂಕ ಹುಟ್ಟಿಸಿದೆ. ಹೀಗಾಗಿ ಅತ್ಯಾಚಾರಿಗಳಿಗೆ ಗಲ್ಲಿಗೇರಿಸುವ ಕಠಿಣ ಕಾನೂನು ಜಾರಿಗೆ ತರಬೇಕೆಂದು ಬಡದಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರತ್ನಶೀಲ ಒತ್ತಾಯಿಸಿದರು.ಅವರು ತಾಲೂಕಿನ ಬಡದಾಳ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಕೊಲ್ಕತ್ತದಲ್ಲಿ ವೈದ್ಯ ವಿದ್ಯಾರ್ಥಿನಿ ಮೇಲೆ ನಡೆದ ಪೈಶಾಚಿಕ ಕೃತ್ಯ ಖಂಡಿಸಿ ಒಪಿಡಿ ಬಂದ್ ಮಾಡಿ ಕೈಗಳಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟನೆ ನಡೆಸಿ ಮಾತನಾಡುತ್ತಾ ದೇಶದ ಮೂಲೆ ಮೂಲೆಗಳಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಮಹಿಳೆಯರ ಮೇಲೆ ಶೋಷಣೆ ನಡೆಯುತ್ತಿವೆ. ಅದರಲ್ಲೂ ಅತ್ಯಾಚಾರ ಮತ್ತು ಕೊಲೆಗಳಾದಾಗ ಅತ್ಯಾಚಾರಿಗಳು ಮತ್ತು ಕೊಲೆಪಾತಕರಿಗೆ ತ್ವರಿತವಾಗಿ ಕಠಿಣ ಶಿಕ್ಷೆಗೆ ಗುರಿಪಡಿಸುವ ಕೆಲಸ ನಡೆಯುತ್ತಿಲ್ಲ ಎನ್ನುವುದು ನೋವಿನ ಸಂಗತಿಯಾಗಿದೆ. ಕೊಲ್ಕತ್ತಾದ ವೈದ್ಯ ವಿದ್ಯಾರ್ಥಿನಿ ಮೇಲೆರಗಿದ ರಕ್ಕಸರನ್ನು ಸರ್ಕಾರ ಕ್ಷಮಿಸಬಾರದು. ಕಾನೂನು ವ್ಯವಸ್ಥೆಯಡಿ ಗಲ್ಲು ಶಿಕ್ಷೆಗೆ ಗುರಿಪಡಿಸಿ ಮಹಿಳೆಯರು ನಿರ್ಭೀತಿಯಿಂದ ಇರುವಂತೆ ವಾತಾವರಣ ನಿರ್ಮಿಸಬೇಕಾಗಿದೆ ಎಂದು ಸರ್ಕಾರವನ್ನು ಒತ್ತಾಯಿಸಿದರು.ಈ ಸಂದರ್ಭದಲ್ಲಿ…

Read More

ವಿಜಯಪುರ: ಭಾರತದಲ್ಲಿ ಸಹೋದರ-ಸಹೋದರಿಯ ನಡುವಿನ ಬಾಂಧವ್ಯವನ್ನು ಬಲಪಡಿಸುವ ಹಬ್ಬವೆಂದರೆ ರಕ್ಷಾ ಬಂಧನ. ಇದನ್ನು ದೇಶದಾದ್ಯಂತ ಬಹಳ ವೈಭವ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ. ‘ರಕ್ಷಾ ಬಂಧನ’ ಪದವುಸಂಸ್ಕೃತದಲ್ಲಿ ‘ರಕ್ಷಣೆಯ ಗಂಟು’ ಎಂದು ಅನುವಾದಿಸುತ್ತದೆ.ಇದು ಒಡಹುಟ್ಟಿದವರ ನಡುವಿನ ವಾತ್ಸಲ್ಯ ಮತ್ತು ಪ್ರೀತಿಯನ್ನು ಆಚರಿಸುವ ಹಬ್ಬವಾಗಿದೆ. ಈ ಪವಿತ್ರ ದಿನದಂದು, ತಮ್ಮ ಸಹೋದರನ ಹಣೆಗೆ ತಿಲಕವನ್ನು ಇಟ್ಟು ಆರತಿಯನ್ನು ಮಾಡಿ ಅವರ ಮಣಿಕಟ್ಟಿನ ಮೇಲೆ ಪವಿತ್ರ ದಾರವನ್ನು ಕಟ್ಟುತ್ತಾರೆ. ಅದು ಇಬ್ಬರ ನಡುವಿನ ಶುದ್ಧ, ಪವಿತ್ರ ಮತ್ತು ನಿರಂತರ ಪ್ರೀತಿಯ ಗುರುತು, ಜೊತೆಗೆ ಶಾಶ್ವತ ರಕ್ಷಣೆಗಾಗಿ ಮಂತ್ರದೊಂದಿಗೆ ಬೆರೆತಿದೆ. ಪರಸ್ಪರ ಉಡುಗೊರೆಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಈ ಹಬ್ಬವನ್ನು ಸಂತೋಷದಿಂದ ಆಚರಿಸುತ್ತಾರೆ.ಸೋಮವಾರ, ರಕ್ಷಾ ಬಂಧನದ ನಿಮಿತ್ತ ತಾಲೂಕಿನ ನಾಗಠಾಣ ಗ್ರಾಮದ ಶಿಕ್ಷಕ ಸಂತೋಷ ಬಂಡೆ ಅವರಿಗೆ ಸಹೋದರಿ ಸವಿತಾ ಕಳುಹಿಸಿದ ಪವಿತ್ರ ರಾಖಿಯನ್ನು ಮಕ್ಕಳಾದ ಅನುಶ್ರೀ-ಶ್ರೀನಿಧಿ ಅವರು ಕಟ್ಟುತ್ತಿರುವುದು.

Read More

ಇಂಡಿ : ಸೌಹಾರ್ದ ಸಹಕಾರಿ ಕ್ಷೇತ್ರ ಪವಿತ್ರವಾದದ್ದು, ಅದು ಗ್ರಾಮೀಣ ಪ್ರದೇಶಗಳಲ್ಲಿ ಉದಯಿಸಿ ರೈತರಿಗೆ ಜನಸಾಮಾನ್ಯರಿಗೆ ಅತ್ಯುತ್ತಮ ಸೇವೆ ನೀಡಲಿ ಎಂದು ಸಂಸದ ರಮೇಶ ಜಿಗಜಿಣಿಗಿ ಹೇಳಿದರು.ರವಿವಾರ ತಾಲ್ಲೂಕಿನ ಹಿರೇರೂಗಿ ಗ್ರಾಮದಲ್ಲಿ ಅಥರ್ಗಾ ಗ್ರಾಮೀಣ ಸೌಹಾರ್ದ ಸಹಕಾರಿಯ 3 ನೇ ಶಾಖೆ ಉದ್ಘಾಟಿಸಿ ಮಾತನಾಡಿದರು.ಇಂದು ರಾಷ್ಟ್ರೀಯ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ ಪಡೆಯುವುದು ಸುಲಭದ ‌ಮಾತಲ್ಲ. ರೈತರು,ಕೂಲಿ ಕಾರ್ಮಿಕರು, ಜನಸಾಮಾನ್ಯರು ಅತ್ಯಂತ ಕಷ್ಟ ಪಡುತ್ತಿದ್ದಾರೆ. ಆದರೆ ಇಂತಹ ಸೌಹಾರ್ದ ಸಹಕಾರ ಸಂಘಗಳಿಂದ ತ್ವರಿತವಾಗಿ ಹಣ ದೊರೆಯುತ್ತದೆ. ನಿಮ್ಮ ಇಚ್ಚಿತ ಕೆಲಸ ಕಾರ್ಯಗಳು ಅತ್ಯಂತ ಬೇಗ ಮಾಡಿಕೊಳ್ಳಬಹುದು ಎಂದು ಹೇಳಿದರು.ಇನ್ನೂ ಪರಸ್ಪರ ಸಹಕಾರ, ನಂಬಿಕೆ, ವಿಶ್ವಾಸಗಳಿಂದ ಸಹಕಾರಿ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ. ಆಡಳಿತ ಮಂಡಳಿ ಅತ್ಯಂತ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿದ್ದೇ ಆದಲ್ಲಿ, ಸಹಕಾರಿ ಸಂಘಗಳು ಯಶಸ್ಸು ಹೊಂದಲು ಸಾಧ್ಯ ಎಂದು ಹೇಳಿದರು.ನಾನು ಯಾವ ಜಾತಿ, ಮತ, ಪಂಥ ಬೇದ ಮಾಡಿಲ್ಲ. ಸುಖಾ ಸುಮ್ನೆ ಸುಳ್ಳು ಹೇಳುವರ ಮಾತಿಗೆ ಕಿವಿಕೊಡಬೇಡಿ,ತಾಲ್ಲೂಕಿನ ಅಭಿವೃದ್ಧಿಗೆ ಎಂದೂ ಹಿಂದೇಟು…

Read More

ಇಂಡಿ:ತಾಲೂಕಿನ ಚವಡಿಹಾಳ, ಚೋರಗಿ,ಬೂದಿಹಾಳ, ಅಂಜುಟಗಿ ಮತ್ತು ಚಿಕ್ಕಬೇವನೂರ ಗ್ರಾಮಸ್ಥರು ಇಂದು ಬೆಳಗ್ಗೆ ಕಾಲುವೆ ಸ್ವಚ್ಛ ಗೊಳಿಸುವ ಕಾರ್ಯಕೈಕೊಂಡರು.ಕಾಲುವೆಯಲ್ಲಿ ಮಣ್ಣು ತುಂಬಿ ಅಂತಹ ಪ್ರದೇಶಗಳಿಂದ ನೀರು ಮುಂದೆ ಹೋಗುತ್ತಿರಲಿಲ್ಲ. ಮತ್ತು ಅಲ್ಲಲ್ಲಿ ಮುಳ್ಳು ಕಂಟಿ,ಗಿಡಗಳು ಬೆಳೆದು ನೀರು ಸರಾಗವಾಗಿ ಹೋಗಲು ಆಗದೇ ನೀರು ಬೇರೆ ಕಡೆ ಪೋಲಾಗುತ್ತಿತ್ತು.ಇದನ್ನು ಗಮನಿಸಿ ರೈತರು ಎಲ್ಲೆಲ್ಲಿ ಮಣ್ಣು ತುಂಬಿದೆ ಆ ಕಾಲುವೆಗಳಲ್ಲಿಯ ಮಣ್ಣು ತೆಗೆದರು.ಇದಕ್ಕೆ ರೈತರು ತಾವೇ ಹಣ ಸಂಗ್ರಹಿಸಿ ಜೆಸಿಬಿ ಉಪಯೋಗಿಸಿ ಮಣ್ಣು ತೆಗೆದರು.ಮತ್ತು ನೂರಾರು ರೈತರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.

Read More

ಇಂಡಿ: ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರ ಅನುಮತಿ ನೀಡಿದ್ದಾರೆಂದು ರಾಜ್ಯಪಾಲರ ಈ ನಿರ್ಧಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದು ಆಗಿದೆ ಎಂದು ಇಂದು ಕಾಂಗ್ರೆಸ್ ಕಾರ್ಯಕರ್ತರು ವಿಜಯಪುರದಲ್ಲಿ ಪ್ರತಿಭಟನೆ ನಡೆಸುವರು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೇದ್ ಮೋಮಿನ್ ತಿಳಿಸಿದ್ದಾರೆ.ಪ್ರತಿಭಟನೆ ಬೆಳಗ್ಗೆ ೧೧ ಗಂಟೆಗೆ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಪ್ರಾರಂಭಗೊಳ್ಳುತ್ತದೆ.ಇಂಡಿಯ ಶಾಸಕ ಯಶವಂತರಾಯಗೌಡ ಪಾಟೀಲರ ನೇತೃತ್ವದಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಯಲ್ಲಿ ಇಂಡಿ ತಾಲೂಕಿನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಇಂಡಿ ಪುರಸಭೆ ಸದಸ್ಯರು,ಮಾಜಿ ಜಿ.ಪಂ, ತಾ.ಪಂ ಸದಸ್ಯರು, ಗ್ರಾ.ಪಂ ಸದಸ್ಯರು,ವಿವಿಧ ಅಂಗ ಘಟಕಗಳ ಪದಾಧಿಕಾರಿಗಳು, ಹಿರಿಯ ಮುಖಂಡರು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಜಾವೇದ ಮೋಮಿನ ಕೋರಿದ್ದಾರೆ.

Read More

ಇಂಡಿ: ಅಕ್ಷರ ಕಲಿತ ಮಕ್ಕಳು ಭ್ರಷ್ಟರಾಗಬಹುದು. ಆದರೆ ಸಂಸ್ಕಾರ ಕಲಿತ ಮಕ್ಕಳು ಎಂದಿಗೂ ಭ್ರಷ್ಟನಾಗಲು ಸಾಧ್ಯವಿಲ್ಲ ಎಂದು ಅಂಕಣಕಾರ, ಸಾಹಿತಿ, ಮಂಜುನಾಥ ಜುನಗೊಂಡ ಹೇಳಿದರು.ಅವರು ಶನಿವಾರ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಬಿಎ, ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಸಾಂಸ್ಕೃತಿಕ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ದೇಶ ಕಟ್ಟುವಲ್ಲಿ ಯುವ ವಿದ್ಯಾರ್ಥಿ ಸಮೂಹ ಎಡಬಲ ಆಲೋಚನೆಗಳಲ್ಲಿ ಮುಳುಗದೆ ಹೆಚ್ಚು ಸಕ್ರಿಯವಾಗಬೇಕಿದೆ. ಇಂದು ನಮ್ಮತನ ಬೆಳೆಸಿಕೊಳ್ಳಬೇಕಿದೆ. ಹಲಸಂಗಿ ಗೆಳೆಯರು ನಮ್ಮ ನೆಲದ ಅಸ್ಮಿತೆ. ಅಂತಹವರ ಬಗ್ಗೆ ಅರಿತುಕೊಳ್ಳಬೇಕಿದೆ, ನಮ್ಮವರ ಬಗ್ಗೆ ತಿಳಿದುಕೊಳ್ಳದೇ ಜಾಗತಿಕ ಸಂಗತಿಗಳನ್ನು ತಿಳಿದುಕೊಳ್ಳಲು ಹಂಬಲಿಸುತ್ತಿರುವ ಯುವ ಸಮೂಹದ ನಡೆ ನಿಜಕ್ಕೂ ವಿಷಾದಕರ ಸಂಗತಿಯಾಗಿದೆ ಎಂದರು.ಪ್ರಾಚಾರ್ಯ ಪ್ರೊ. ಆರ್.ಎಚ್. ರಮೇಶ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಕಾಲೇಜು ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಉಷಾ ಯೋಜನೆಗೆ ಆಯ್ಕೆಯಾಗಿದ್ದು, ರೂ. ೫ಕೋಟಿ ಮಂಜೂರು ಮಾಡಿದೆ, ಅದನ್ನು ಅತ್ಯಂತ ಪಾರದರ್ಶಕವಾಗಿ ಬಳಕೆ ಮಾಡಿಕೊಂಡು ಕಾಲೇಜಿನ ಶೈಕ್ಷಣಿಕ…

Read More

ಗುಲಬರ್ಗಾ ವಿವಿ ಹಿಂದಿ ವಿಭಾಗಕ್ಕೆ ಪ್ರಥಮ ರ‍್ಯಾಂಕ್ | ರಾಜ್ಯಪಾಲರಿಂದ ಗೋಲ್ಡ್ ಮೆಡಲ್ ಪ್ರದಾನ – ಮಲಿಕ್ ಎಲ್. ಜಮಾದಾರವಿಜಯಪುರ: ಸಾಧನೆ ಸಾಧಕನ ಸ್ವತ್ತು. ನಿರಂತರ ಅಧ್ಯಯನ, ನಿರ್ದಿಷ್ಟ ಗುರಿಯಿದ್ದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಇದಕ್ಕೆ ಅನೀಲ ರಾಠೋಡ ಎಂಬ ಗ್ರಾಮೀಣ ಪ್ರತಿಭೆ ಸಾಕ್ಷಿಯಾಗಿದ್ದಾನೆ.ಜಿಲ್ಲೆಯಿಂದ ಉನ್ನತ ವ್ಯಾಸಂಗಕ್ಕೆಂದು ಕಲಬುರಗಿಯ ಗುಲಬರ್ಗಾ ವಿಶ್ವವಿದ್ಯಾಲಯದೆಡೆಗೆ ಪಯಣ ಬೆಳೆಸಿದ ಅನೀಲ ರಾಠೋಡ ಸ್ನಾತಕೋತ್ತರ ಪದವಿ ಎಂ ಎ ಹಿಂದಿ ವಿಭಾಗ ಅಧ್ಯಯನಕ್ಕಾಗಿ ಗುಲಬರ್ಗಾ ವಿಶ್ವ ವಿದ್ಯಾಲಯದಲ್ಲಿ ಪ್ರಥಮ ರ‍್ಯಾಂಕ್ ಪಡೆದು ಗೋಲ್ಡ್ ಮೆಡಲ್ ತನ್ನ ಮುಡಿಗೇರಿಸಿಕೊಂಡಿದ್ದಾನೆ.ಇತ್ತೀಚೆಗೆ ಆ.೧೨ ರಂದು ಗುಲಬರ್ಗಾ ವಿಶ್ವವಿದ್ಯಾಲಯದ ಜ್ಞಾನಗಂಗಾ ಆವರಣದ ಡಾ.ಬಿ.ಆರ್.ಅಂಬೇಡ್ಕರ ಸಭಾವನದಲ್ಲಿ ಜರುಗಿದ ಗುಲಬರ್ಗಾ ವಿಶ್ವವಿದ್ಯಾಲಯದ ೪೨ ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ವಿಜಯಪುರ ಜಿಲ್ಲೆಯ ಟಕ್ಕಳಕಿ ಗ್ರಾಮದ ರೈತ ರಾಜು ರಾಠೋಡ್ ಮಗನಾದ ಅನಿಲ್ ರಾಠೋಡ ‘ಚಿನ್ನದ ಪದಕ’ ಮತ್ತು ಪ್ರಮಾಣಪತ್ರವನ್ನು ಘನವೆತ್ತ ರಾಜ್ಯಪಾಲ ಡಾ.ಥಾವರ್ ಚಂದ್ ಗೆಹ್ಲೋಟ್ ಅವರಿಂದ ಪಡೆದು ವಿಜಯಪುರ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾನೆ. ಮೂಲತಃ…

Read More