Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಮಾತಾಪಿತರಲ್ಲಿ ಶೋಕದ ಕಣ್ಣೀರು ತರಿಸದಿರಿ :ಶಿವಶಾಂತವೀರಶ್ರೀ

ಎಸ್.ಎಂ.ಪಾಟೀಲ ಗಣಿಹಾರ ಬಹಿರಂಗ ಕ್ಷಮೆಯಾಚಿಸಲಿ

ಶರಣ ಸಾಹಿತ್ಯ ಎಂದು ಅಳಿಯದ ಅಮೂಲ್ಯ ಸಂಪತ್ತು

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಸಹಕಾರಿ ಕ್ಷೇತ್ರ ಪವಿತ್ರವಾದದ್ದು-ರಮೇಶ ಜಿಗಜಿಣಗಿ
(ರಾಜ್ಯ ) ಜಿಲ್ಲೆ

ಸಹಕಾರಿ ಕ್ಷೇತ್ರ ಪವಿತ್ರವಾದದ್ದು-ರಮೇಶ ಜಿಗಜಿಣಗಿ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಇಂಡಿ : ಸೌಹಾರ್ದ ಸಹಕಾರಿ ಕ್ಷೇತ್ರ ಪವಿತ್ರವಾದದ್ದು, ಅದು ಗ್ರಾಮೀಣ ಪ್ರದೇಶಗಳಲ್ಲಿ ಉದಯಿಸಿ ರೈತರಿಗೆ ಜನಸಾಮಾನ್ಯರಿಗೆ ಅತ್ಯುತ್ತಮ ಸೇವೆ ನೀಡಲಿ ಎಂದು ಸಂಸದ ರಮೇಶ ಜಿಗಜಿಣಿಗಿ ಹೇಳಿದರು.
ರವಿವಾರ ತಾಲ್ಲೂಕಿನ ಹಿರೇರೂಗಿ ಗ್ರಾಮದಲ್ಲಿ ಅಥರ್ಗಾ ಗ್ರಾಮೀಣ ಸೌಹಾರ್ದ ಸಹಕಾರಿಯ 3 ನೇ ಶಾಖೆ ಉದ್ಘಾಟಿಸಿ ಮಾತನಾಡಿದರು.
ಇಂದು ರಾಷ್ಟ್ರೀಯ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ ಪಡೆಯುವುದು ಸುಲಭದ ‌ಮಾತಲ್ಲ. ರೈತರು,ಕೂಲಿ ಕಾರ್ಮಿಕರು, ಜನಸಾಮಾನ್ಯರು ಅತ್ಯಂತ ಕಷ್ಟ ಪಡುತ್ತಿದ್ದಾರೆ. ಆದರೆ ಇಂತಹ ಸೌಹಾರ್ದ ಸಹಕಾರ ಸಂಘಗಳಿಂದ ತ್ವರಿತವಾಗಿ ಹಣ ದೊರೆಯುತ್ತದೆ. ನಿಮ್ಮ ಇಚ್ಚಿತ ಕೆಲಸ ಕಾರ್ಯಗಳು ಅತ್ಯಂತ ಬೇಗ ಮಾಡಿಕೊಳ್ಳಬಹುದು ಎಂದು ಹೇಳಿದರು.
ಇನ್ನೂ ಪರಸ್ಪರ ಸಹಕಾರ, ನಂಬಿಕೆ, ವಿಶ್ವಾಸಗಳಿಂದ ಸಹಕಾರಿ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ. ಆಡಳಿತ ಮಂಡಳಿ ಅತ್ಯಂತ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿದ್ದೇ ಆದಲ್ಲಿ, ಸಹಕಾರಿ ಸಂಘಗಳು ಯಶಸ್ಸು ಹೊಂದಲು ಸಾಧ್ಯ ಎಂದು ಹೇಳಿದರು.
ನಾನು ಯಾವ ಜಾತಿ, ಮತ, ಪಂಥ ಬೇದ ಮಾಡಿಲ್ಲ. ಸುಖಾ ಸುಮ್ನೆ ಸುಳ್ಳು ಹೇಳುವರ ಮಾತಿಗೆ ಕಿವಿಕೊಡಬೇಡಿ,ತಾಲ್ಲೂಕಿನ ಅಭಿವೃದ್ಧಿಗೆ ಎಂದೂ ಹಿಂದೇಟು ಹಾಕಿಲ್ಲ.‌ ಆ ಪ್ರಮೇಯವು ಬರುವುದಿಲ್ಲ. ರೂಗಿ, ಬೊಳೆಗಾಂವ, ತಡವಲಗಾ ಮಾರ್ಗದಲ್ಲಿ ಅತೀ ಹೆಚ್ಚು ತಿರುಗಾಟ ಮಾಡಿದ್ದೆನೆ.‌ ಅದಲ್ಲದೆ ಶೋಷಿತ ದಲಿತ ಸಮುದಾಯದ ವ್ಯಕ್ತಿ ಸುಮಾರು 50 ವರ್ಷ ರಾಜಕಾರಣ ಮಾಡುವುದು ಸುಲಭದ ಮಾತಲ್ಲ. ಅದಕ್ಕೆ ನೀವು ಕಾರಣ ಎಂದು ಹೇಳಿದರು. ಈ ಭಾಗದಲ್ಲಿ ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಯೋಜನೆ ಜಾರಿಗೊಂಡಿದ್ದು, ಎರಡು ವಾರದಲ್ಲಿ ಇಂಡಿ ಪಟ್ಟಣದಲ್ಲಿ ಭೂಮಿ ಪೂಜೆ ನೆರೆವರಿಸಿ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ನಾಗರಾಜ ಪಾಟೀಲ ಮಾತನಾಡಿ, ಗ್ರಾಮೀಣ ಭಾಗದ ಬಡವರ, ರೈತಾಪಿ ವರ್ಗದವರಿಗೆ ಬ್ಯಾಂಕಿನ ಸಕಲ ಸೌಲಭ್ಯಗಳು ‘ದಿನವಿಡೀ ಸೇವೆ ನೀಡುವ ಉದ್ದೇಶದಿಂದ ಇಲ್ಲಿ ಶಾಖೆ ತೆರೆದಿದ್ದೇವೆ’ ಎಂದು ಹೇಳಿದರು.
ಪ್ರಾಸ್ಥಾವಿಕವಾಗಿ ಶಿಕ್ಷಕ ರವಿ ಗಿಣ್ಣಿ ಹಾಗೂ ಅಣ್ಣಪ್ಪ ಸಾಹುಕಾರ್ ಎಸ್ ಖೈನೂರು ಮಾತನಾಡಿದರು.
ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ಮುರಗೇಂದ್ರ ಸ್ವಾಮೀಜಿ, ಪಾವನ ಸಾನಿಧ್ಯ ಅಭಿನವ ಪುಂಡಲಿಂಗೇಶ್ವರ ಶಿವಯೋಗಿ, ಮಾತೋಶ್ರಿ ಸುಗಲಾದೇವಿ ಅಮ್ಮನವರು, ಮಲ್ಲಪ್ಪ ಪೂಜಾರಿ, ಗ್ರಾ.ಪಂ ಅಧ್ಯಕ್ಷೆ ಸೋಮವ್ವ ಹೊಸಮನಿ, ಉಪಾಧ್ಯಕ್ಷ ಅಂಬವ್ವ ಕೊಟಗೊಂಡ, ಪಿಕೆಪಿಎಸ್ ಅಧ್ಯಕ್ಷ ಪರಶುರಾಮ ಹತ್ತರಕಿ, ಜೆಟ್ಟಪ್ಪ ಪೂಜಾರಿ, ಆರ್ ಎಮ್ ಬಣಗಾರ, ಎಸ್ ಎಮ್ ಬುರಕಲೆ ಇನ್ನೂ ಅನೇಕ ಪ್ರಮುಖರು ಉಪಸ್ಥಿತರಿದ್ದರು. ಸ್ವಾಗತ ಸುನಿಲ್ ರಬಶೆಟ್ಟಿ, ನಿರೂಪಣೆ ಹಾಗೂ ವಂದನಾರ್ಪಣೆ ದ್ಯಾವಪ್ಪ ಹಿರೇಕುರಬರ ನೇರವೇರಿಸಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಮಾತಾಪಿತರಲ್ಲಿ ಶೋಕದ ಕಣ್ಣೀರು ತರಿಸದಿರಿ :ಶಿವಶಾಂತವೀರಶ್ರೀ

ಎಸ್.ಎಂ.ಪಾಟೀಲ ಗಣಿಹಾರ ಬಹಿರಂಗ ಕ್ಷಮೆಯಾಚಿಸಲಿ

ಶರಣ ಸಾಹಿತ್ಯ ಎಂದು ಅಳಿಯದ ಅಮೂಲ್ಯ ಸಂಪತ್ತು

ಕೋಹಳ್ಳಿ ಸಹಕಾರ ಸಂಘಕ್ಕೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಮಾತಾಪಿತರಲ್ಲಿ ಶೋಕದ ಕಣ್ಣೀರು ತರಿಸದಿರಿ :ಶಿವಶಾಂತವೀರಶ್ರೀ
    In (ರಾಜ್ಯ ) ಜಿಲ್ಲೆ
  • ಎಸ್.ಎಂ.ಪಾಟೀಲ ಗಣಿಹಾರ ಬಹಿರಂಗ ಕ್ಷಮೆಯಾಚಿಸಲಿ
    In (ರಾಜ್ಯ ) ಜಿಲ್ಲೆ
  • ಶರಣ ಸಾಹಿತ್ಯ ಎಂದು ಅಳಿಯದ ಅಮೂಲ್ಯ ಸಂಪತ್ತು
    In (ರಾಜ್ಯ ) ಜಿಲ್ಲೆ
  • ಕೋಹಳ್ಳಿ ಸಹಕಾರ ಸಂಘಕ್ಕೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
    In ಇತರೆ
  • ವಿಜಯಪುರದಲ್ಲಿ ಗ್ರಂಥಾಲಯ ಪರಿಚಯ ಕಾರ್ಯಕ್ರಮ
    In (ರಾಜ್ಯ ) ಜಿಲ್ಲೆ
  • ಅಪಾಯಕ್ಕೆ ಆಹ್ವಾನ ನೀಡುವಂತಿರುವ ಮುರಿದ ವಿದ್ಯುತ್ ಕಂಬ
    In (ರಾಜ್ಯ ) ಜಿಲ್ಲೆ
  • ಅಭಿವೃದ್ಧಿ ಕಾಮಗಾರಿಗೆ ೪೭.೫೦ ಕೋಟಿ ರೂ. ಮಂಜೂರು
    In (ರಾಜ್ಯ ) ಜಿಲ್ಲೆ
  • ಇಂದಿನಿಂದ ಗೋಲಗೇರಿ ಗೊಲ್ಲಾಳೇಶ್ವರ ಪುರಾಣ ಪ್ರಾರಂಭ
    In (ರಾಜ್ಯ ) ಜಿಲ್ಲೆ
  • ಮತದಾರರ ಮ್ಯಾಪಿಂಗ್ ಶೇ.೭೭.೬೮ ಪೂರ್ಣ :ಮೆಕ್ಕಳಕಿ
    In (ರಾಜ್ಯ ) ಜಿಲ್ಲೆ
  • ರಾಜ್ಯ ಪ್ರ.ಕಾರ್ಯದರ್ಶಿಯಾಗಿ ಮೋಹನ ಕುಲಕರ್ಣಿ ನೇಮಕ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.