ಇಂಡಿ:ತಾಲೂಕಿನ ಚವಡಿಹಾಳ, ಚೋರಗಿ,ಬೂದಿಹಾಳ, ಅಂಜುಟಗಿ ಮತ್ತು ಚಿಕ್ಕಬೇವನೂರ ಗ್ರಾಮಸ್ಥರು ಇಂದು ಬೆಳಗ್ಗೆ ಕಾಲುವೆ ಸ್ವಚ್ಛ ಗೊಳಿಸುವ ಕಾರ್ಯಕೈಕೊಂಡರು.
ಕಾಲುವೆಯಲ್ಲಿ ಮಣ್ಣು ತುಂಬಿ ಅಂತಹ ಪ್ರದೇಶಗಳಿಂದ ನೀರು ಮುಂದೆ ಹೋಗುತ್ತಿರಲಿಲ್ಲ. ಮತ್ತು ಅಲ್ಲಲ್ಲಿ ಮುಳ್ಳು ಕಂಟಿ,ಗಿಡಗಳು ಬೆಳೆದು ನೀರು ಸರಾಗವಾಗಿ ಹೋಗಲು ಆಗದೇ ನೀರು ಬೇರೆ ಕಡೆ ಪೋಲಾಗುತ್ತಿತ್ತು.
ಇದನ್ನು ಗಮನಿಸಿ ರೈತರು ಎಲ್ಲೆಲ್ಲಿ ಮಣ್ಣು ತುಂಬಿದೆ ಆ ಕಾಲುವೆಗಳಲ್ಲಿಯ ಮಣ್ಣು ತೆಗೆದರು.
ಇದಕ್ಕೆ ರೈತರು ತಾವೇ ಹಣ ಸಂಗ್ರಹಿಸಿ ಜೆಸಿಬಿ ಉಪಯೋಗಿಸಿ ಮಣ್ಣು ತೆಗೆದರು.
ಮತ್ತು ನೂರಾರು ರೈತರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.
Subscribe to Updates
Get the latest creative news from FooBar about art, design and business.
Related Posts
Add A Comment

