Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಎಸ್.ಎಂ.ಪಾಟೀಲ ಗಣಿಹಾರ ಬಹಿರಂಗ ಕ್ಷಮೆಯಾಚಿಸಲಿ

ಶರಣ ಸಾಹಿತ್ಯ ಎಂದು ಅಳಿಯದ ಅಮೂಲ್ಯ ಸಂಪತ್ತು

ಕೋಹಳ್ಳಿ ಸಹಕಾರ ಸಂಘಕ್ಕೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ದೇಶ ಕಟ್ಟುವಲ್ಲಿ ಯುವಕರ ಪಾತ್ರ ಬಹುಮುಖ್ಯ
(ರಾಜ್ಯ ) ಜಿಲ್ಲೆ

ದೇಶ ಕಟ್ಟುವಲ್ಲಿ ಯುವಕರ ಪಾತ್ರ ಬಹುಮುಖ್ಯ

By No Comments1 Min Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಇಂಡಿ: ಅಕ್ಷರ ಕಲಿತ ಮಕ್ಕಳು ಭ್ರಷ್ಟರಾಗಬಹುದು. ಆದರೆ ಸಂಸ್ಕಾರ ಕಲಿತ ಮಕ್ಕಳು ಎಂದಿಗೂ ಭ್ರಷ್ಟನಾಗಲು ಸಾಧ್ಯವಿಲ್ಲ ಎಂದು ಅಂಕಣಕಾರ, ಸಾಹಿತಿ, ಮಂಜುನಾಥ ಜುನಗೊಂಡ ಹೇಳಿದರು.
ಅವರು ಶನಿವಾರ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಬಿಎ, ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಸಾಂಸ್ಕೃತಿಕ ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ದೇಶ ಕಟ್ಟುವಲ್ಲಿ ಯುವ ವಿದ್ಯಾರ್ಥಿ ಸಮೂಹ ಎಡಬಲ ಆಲೋಚನೆಗಳಲ್ಲಿ ಮುಳುಗದೆ ಹೆಚ್ಚು ಸಕ್ರಿಯವಾಗಬೇಕಿದೆ. ಇಂದು ನಮ್ಮತನ ಬೆಳೆಸಿಕೊಳ್ಳಬೇಕಿದೆ. ಹಲಸಂಗಿ ಗೆಳೆಯರು ನಮ್ಮ ನೆಲದ ಅಸ್ಮಿತೆ. ಅಂತಹವರ ಬಗ್ಗೆ ಅರಿತುಕೊಳ್ಳಬೇಕಿದೆ, ನಮ್ಮವರ ಬಗ್ಗೆ ತಿಳಿದುಕೊಳ್ಳದೇ ಜಾಗತಿಕ ಸಂಗತಿಗಳನ್ನು ತಿಳಿದುಕೊಳ್ಳಲು ಹಂಬಲಿಸುತ್ತಿರುವ ಯುವ ಸಮೂಹದ ನಡೆ ನಿಜಕ್ಕೂ ವಿಷಾದಕರ ಸಂಗತಿಯಾಗಿದೆ ಎಂದರು.
ಪ್ರಾಚಾರ್ಯ ಪ್ರೊ. ಆರ್.ಎಚ್. ರಮೇಶ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಕಾಲೇಜು ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಉಷಾ ಯೋಜನೆಗೆ ಆಯ್ಕೆಯಾಗಿದ್ದು, ರೂ. ೫ಕೋಟಿ ಮಂಜೂರು ಮಾಡಿದೆ, ಅದನ್ನು ಅತ್ಯಂತ ಪಾರದರ್ಶಕವಾಗಿ ಬಳಕೆ ಮಾಡಿಕೊಂಡು ಕಾಲೇಜಿನ ಶೈಕ್ಷಣಿಕ ಮತ್ತು ಮೂಲಭೂತ ಸೌಕರ್ಯಗಳನ್ನು ವಿಸ್ತರಿಸಲು ಯೋಜಿಸಲಾಗಿದೆ ಎಂದರು.
ಸರಕಾರಿ ಪ್ರಥಮ ದರ್ಜೆ ಕಾಲೇಜು ಇಂಡಿ ತಾಲೂಕಿಗೆ ಮಾದರಿಯಾಗಿ ಮಾಡಲು ಎಲ್ಲ ರೀತಿಯಿಂದ ಪ್ರಯತ್ನಿಸಲು ಹಳೆಯ ವಿದ್ಯಾರ್ಥಿಗಳ ಸಹಕಾರವು ಅವಶ್ಯಕವಾಗಿ ಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಪದಕಗಳನ್ನು ವಿತರಿಸಲಾಯಿತು.ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಅಲ್ಲಾಭಕ್ಷ ವಾಲಿಕಾರ, ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥರಾದ ಪ್ರೊ.ಕಿರಣ ರೇವಣಕರ, ಐಕ್ಯೂಎಸಿ ಸಂಚಾಲಕರಾದ ಡಾ. ಶಿರೀನುಸುಲ್ತಾನ ಇನಾಂದಾರ, ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ವಿಜಯಮಹಾಂತೇಶ ದೇವರ, ಗ್ರಂಥಪಾಲಕರಾದ ಪ್ರೊ.ತಿಪ್ಪಣ್ಣ ವಾಗ್ದಾಳ, ಪ್ರೊ.ರಾಜಲಕ್ಷ್ಮಿ ಆರ್, ಎನ್.ಎಸ್.ಎಸ್ ಘಟಕದ ಸಂಯೋಜನಾಧಿಕಾರಿ ಪ್ರೊ. ಪರಸಪ್ಪ ದೇವರ, ಸತೀಶಕುಮಾರ ಚುಂಚೂರು, ಸೋಮಲಿಂಗ ಗಂಜಿ, ಡಾ. ಸುರೇಖಾ ವಾರದ, ಪ್ರೊ. ಕಾಶೀನಾಥ ಜಾಧವ ಮೊದಲಾದವರು ಉಪಸ್ಥಿತರಿದ್ದರು.
ವಾರ್ಷಿಕ ವರದಿ ವಾಚನವನ್ನು ಡಾ. ತ್ರಿವೇಣಿ ಬನಸೊಡೆ ಮಂಡಿಸಿದರು. ಪ್ರೊ. ಎಸ್. ಜೆ. ಮಾಡ್ಯಾಳ ಸ್ವಾಗತಿಸಿದರು. ಪ್ರೊ. ಕವೀಂದ್ರ ಚಾಬುಕಸವಾರ ನಿರೂಪಿಸಿದರು. ಪ್ರೊ. ಎಮ್.ಎಚ್. ಮೋಮಿನ್ ವಂದಿಸಿದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಎಸ್.ಎಂ.ಪಾಟೀಲ ಗಣಿಹಾರ ಬಹಿರಂಗ ಕ್ಷಮೆಯಾಚಿಸಲಿ

ಶರಣ ಸಾಹಿತ್ಯ ಎಂದು ಅಳಿಯದ ಅಮೂಲ್ಯ ಸಂಪತ್ತು

ಕೋಹಳ್ಳಿ ಸಹಕಾರ ಸಂಘಕ್ಕೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

ವಿಜಯಪುರದಲ್ಲಿ ಗ್ರಂಥಾಲಯ ಪರಿಚಯ ಕಾರ್ಯಕ್ರಮ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಎಸ್.ಎಂ.ಪಾಟೀಲ ಗಣಿಹಾರ ಬಹಿರಂಗ ಕ್ಷಮೆಯಾಚಿಸಲಿ
    In (ರಾಜ್ಯ ) ಜಿಲ್ಲೆ
  • ಶರಣ ಸಾಹಿತ್ಯ ಎಂದು ಅಳಿಯದ ಅಮೂಲ್ಯ ಸಂಪತ್ತು
    In (ರಾಜ್ಯ ) ಜಿಲ್ಲೆ
  • ಕೋಹಳ್ಳಿ ಸಹಕಾರ ಸಂಘಕ್ಕೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
    In ಇತರೆ
  • ವಿಜಯಪುರದಲ್ಲಿ ಗ್ರಂಥಾಲಯ ಪರಿಚಯ ಕಾರ್ಯಕ್ರಮ
    In (ರಾಜ್ಯ ) ಜಿಲ್ಲೆ
  • ಅಪಾಯಕ್ಕೆ ಆಹ್ವಾನ ನೀಡುವಂತಿರುವ ಮುರಿದ ವಿದ್ಯುತ್ ಕಂಬ
    In (ರಾಜ್ಯ ) ಜಿಲ್ಲೆ
  • ಅಭಿವೃದ್ಧಿ ಕಾಮಗಾರಿಗೆ ೪೭.೫೦ ಕೋಟಿ ರೂ. ಮಂಜೂರು
    In (ರಾಜ್ಯ ) ಜಿಲ್ಲೆ
  • ಇಂದಿನಿಂದ ಗೋಲಗೇರಿ ಗೊಲ್ಲಾಳೇಶ್ವರ ಪುರಾಣ ಪ್ರಾರಂಭ
    In (ರಾಜ್ಯ ) ಜಿಲ್ಲೆ
  • ಮತದಾರರ ಮ್ಯಾಪಿಂಗ್ ಶೇ.೭೭.೬೮ ಪೂರ್ಣ :ಮೆಕ್ಕಳಕಿ
    In (ರಾಜ್ಯ ) ಜಿಲ್ಲೆ
  • ರಾಜ್ಯ ಪ್ರ.ಕಾರ್ಯದರ್ಶಿಯಾಗಿ ಮೋಹನ ಕುಲಕರ್ಣಿ ನೇಮಕ
    In (ರಾಜ್ಯ ) ಜಿಲ್ಲೆ
  • ಬಣಜಿಗ ಸಮಾಜಕ್ಕೆ ‘2ಎ’ ಮೀಸಲಾತಿಗೆ ಆಗ್ರಹಿಸಿ ಮನವಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.