Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಕೆಂಭಾವಿ: ಪಟ್ಟಣದಲ್ಲಿ ಹೈಟೆಕ್ ಬಸ್ಸ್ ನಿಲ್ದಾಣ ನಿರ್ಮಾಣ ಮಾಡುವಂತೆ, ಟೀಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ಬುಧವಾರ ಸುರಪುರದಲ್ಲಿ ಜರುಗಿದ ತಾಲೂಕು ಜನಸ್ಪಂದನ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿತು.ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅಧ್ಯಕ್ಷ ಬಂದೇನವಾಜ್ ಆಯ್ ನಾಲತ್ತವಾಡ ಪುರಸಭೆ ಹಾಗೂ ಹೋಬಳಿ ಕೇಂದ್ರವಾಗಿದ್ದು, ಈಗಿರುವ ಬಸ್ಸ್ ನಿಲ್ದಾಣ ಚಿಕ್ಕದಾಗಿ, ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು , ಕುಳಿತುಕೊಳ್ಳಲು ಸರಿಯಾದ ಆಸನದ ವ್ಯವಸ್ಥೆ ಇಲ್ಲದಿರುವುದು, ವಯೋವೃದ್ಧರು, ಅಂಗವಿಕಲರ, ಮಹಿಳೆಯರು ಮಕ್ಕಳು ದಿನಂಪ್ರತಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸುಮಾರು 150 ಕ್ಕೂ ಹೆಚ್ಚು ಬಸ್ಸುಗಳು ಓಡಾಡುತ್ತವೆ. ಆದರೆ 10 ಬಸ್ಸುಗಳು ನಿಲ್ಲುವ ಸಾಮರ್ಥ್ಯ ಹೊಂದಿದ್ದು. ಕೂಡಲೇ ಸಾರಿಗೆ ಇಲಾಖೆ ಅಧಿಕಾರಿಗಳು ತಮ್ಮ ಸ್ವಾಧೀನದಲ್ಲಿರುವ ಸ್ಥಳದಲ್ಲಿ ಹೈಟೆಕ್ ಬಸ್ಸ್ ನಿಲ್ದಾಣ ನಿರ್ಮಾಣ ಮಾಡಲು ಆಗ್ರಹಿಸಿದರು.
ತಿಕೋಟಾ: ತಾಲೂಕಿನ ಲೋಹಗಾಂವ ಗ್ರಾಮ ಪಂಚಾಯತಿಗೆ ಬುಧವಾರ ಶ್ರೀಮತಿ ಶೋಭಕ್ಕ ಶಿಳೀನ, ಸಹಾಯಕ ನಿರ್ದೇಶಕರು (ಗ್ರಾ.ಉ & ಪಂ.ರಾ), ತಾಲೂಕು ಪಂಚಾಯತಿ ತಿಕೋಟಾ ಅವರು ಭೇಟಿ ನೀಡಿ, ನರೇಗಾ ಯೋಜನೆಯಡಿ ಪ್ರಗತಿಯಲ್ಲಿರುವ ಅಮೃತ ಸರೋವರ, ಗೋಮಾಳ & ಹೂಳೆತ್ತುವ ಕಾಮಗಾರಿಗಳನ್ನು ವೀಕ್ಷಣೆ ಮಾಡಿ ಕೂಲಿಕಾರರೊಡನೆ ಚರ್ಚೆ ನಡೆಸಿ “ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿರುವ ನೀವು ನಿಮ್ಮ ಗ್ರಾಮದ ಅಭಿವೃದ್ಧಿಯ ದೃಷ್ಠಿಯಿಂದ ಕೆಲಸ ಮಾಡುತ್ತಿದ್ದೀರಿ ಎಂಬ ಭಾವನೆ ಹೊಂದಬೇಕು. ಏಕೆಂದರೆ, ನೀವು ಮಾಡುವ ಈ ಕಾರ್ಯಗಳು ಕೇವಲ ಒಬ್ಬ ವ್ಯಕ್ತಿಗೆ ಲಾಭವಾಗುದಿಲ್ಲ, ಬದಲಾಗಿ ಇಡೀ ಗ್ರಾಮದ ಜನರಿಗೆ ಈ ಕಾಮಗಾರಿಯಿಂದ ಲಾಭವಿದೆ ಎಂದರು.ಅದಕ್ಕಾಗಿ ನಿಮ್ಮ ಸುತ್ತ-ಮುತ್ಲಿನ ಜನರಿಗೂ ಈ ಯೋಜನೆಯ ಕುರಿತು ಮಾಹಿತಿ ನೀಡಿ ಅವರನ್ನು ಸಹ ಈ ಯೋಜನೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದರು.ಬಳಿಕ ಲೋಹಗಾಂವ ಗ್ರಾಮದ ಮಾದರಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊನೆಯಲ್ಲಿ ಗ್ರಾಮ ಪಂಚಾಯತಿಯಲ್ಲಿ ನರೇಗಾ ಕಾಮಗಾರಿ ಕಡತಗಳ ಪರಿಶೀಲನೆ ಹಾಗೂ ನೀರಿನ…
ದೇವರಹಿಪ್ಪರಗಿ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಕುಡಿಯುವ ನೀರಿನ ಮೂಲಗಳ ಪರೀಕ್ಷೆ ಅತ್ಯಂತ ಅಗತ್ಯವಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಾನಂದ ಮೂಲಿಮನಿ(ಪಂಚಾಯತ್ ರಾಜ್) ಹೇಳಿದರು.ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿನ ಪ್ರವಾಸಿಮಂದಿರದಲ್ಲಿ ಬುಧವಾರ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ನೀರುಗಂಟಿ(ವಾಟರ್‌ಮ್ಯಾನ್), ಡಾಟಾಎಂಟ್ರಿ ಆಪರೇಟರ್‌ಗಳಿಗೆ ಏರ್ಪಡಿಸಲಾದ ಒಂದು ದಿನದ ತರಬೇತಿಯಲ್ಲಿ ಪಾಲ್ಗೊಂಡು ಮಾತನಾಡಿದರು. ಅಶುದ್ಧ ನೀರು ಜನ ಮತ್ತು ಜಾನುವಾರಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಜೀವಕ್ಕೆ ಕಂಟಕ ಆಗಲೂಬಹುದು. ಆದ್ದರಿಂದ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ತಳಹಂತದಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಾದ ನೀರುಗಂಟಿ, ಡಾಟಾ ಆಪರೇಟರ್‌ಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದರು.ಜಿಲ್ಲಾ ನೀರು ಪರೀಕ್ಷಾ ಕೇಂದ್ರದ ಸೋಮನಾಥ ಚನ್ನಗೌಡ ಮಾತನಾಡಿ, ನೀರುಗಂಟಿಗಳಿಗೆ ನೀರು ಪರೀಕ್ಷೆಯ ಕನಿಷ್ಟ ಜ್ಞಾನ ಅವಶ್ಯಕ. ಕಲುಷಿತ ನೀರು, ಅಶುದ್ಧ ನೀರು, ಕುಡಿಯಲು ಯೋಗ್ಯವಲ್ಲದ ನೀರು ಇವುಗಳ ಬಗ್ಗೆ ಎಚ್ಚರ ವಹಿಸಿ ಶುದ್ಧ ನೀರು ಒದಗಿಸಲು ನೀರು ಪರೀಕ್ಷೆ ಕಡ್ಡಾಯವಾಗಿದೆ ಮಾಡಿ ಪೂರೈಸಬೇಕು ಎಂದು ಹೇಳುತ್ತಾ, ಫಿಲ್ಡ್ ಟೆಸ್ಟ್ ಕಿಟ್…
ಇಂಡಿ: ರಾಜ್ಯ ಮಕ್ಕಳ ಆಯೋಗದ ಸದಸ್ಯ ಶಶಿಧರ ಕೊಸಂಬೆಯವರು ಇಂಡಿ ಪಟ್ಟಣಕ್ಕೆ ಭೇಟಿ ನೀಡಿ ಇಂಡಿಯ ಡಾ|| ಪ್ರೀತಿ ಕೋಳೆಕರ, ಡಾ|| ಭಾರತಿ ಗಜಾಕೋಶ, ಡಾ|| ಮಯೂರಿ ಧನಶೆಟ್ಟಿ ಆಸ್ಪತ್ರೆಗಳಿಗೆ ಭೇಟಿ ಗರ್ಭಪಾತ ನಡೆಸುವ ಸ್ಕ್ಯಾನಿಂಗ್ ಸೆಂಟರ್ ಕುರಿತು ತಪಾಸಣೆ ಮಾಡಿದರು.ಮತ್ತು ಪಿಸಿಪಿಎನ್‌ಡಿಟಿ ಸ್ಕ್ಯಾನಿಂಗ್ ಕಾಯ್ದೆ ಅನ್ವಯ ಸಂಬಂದಿತ ಪ್ರತಿಯೊಂದು ಆಸ್ಪತ್ರೆಯವರು ಪಾಲಿಸಬೇಕು. ಕಾಯ್ದೆ ಉಲ್ಲಂಘಿಸಿದವರಿಗೆ ಸಂಬಂದಿತ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ ಎಂದರು.ದವಾಖಾನೆಗಳ ರಿನ್ಯೂವಲ್ ಮಾಡಿಸಬೇಕು, ಆಸ್ಪತ್ರೆಯಲ್ಲಿ ಕಡ್ಡಾಯವಾಗಿ ಸಿ.ಸಿ.ಟಿ.ವಿ ಅಳವಡಿಸಬೇಕು ಎಂದು ಸಲಹೆ ನೀಡಿದರು.ಸ್ಕ್ಯಾನಿಂಗ್ ಮಾಡುವ ಮಶೀನು ಪರಿಶೀಲಿಸಿ ಅಲ್ಲಿ ಗರ್ಭಪಾತ ನಡೆಯುವದೇ ಎಂದು ಪರಿಶೀಲಿಸಿದರು. ಸ್ಕ್ಯಾನ್ ಮಾಡುವ ಮಶೀನು ಮತ್ತು ಪ್ರತಿದಿನ ಎಷ್ಟು ರೋಗಿಗಳು ಬರುತ್ತವೆ ಎಂಬುದನ್ನು ದಿನ ನಿತ್ಯದ ಡೈರಿ ಇಡಬೇಕು ಸೇರಿದಂತೆ ಇನ್ನಿತರ ಗರ್ಬಪಾತ ನಡೆಸದಂತೆ ಕುರಿತು ಪರಿಶೀಲನೆ ನಡೆಸಿದರು.ಪಟ್ಟಣದ ಡಿ.ದೇವರಾಜ ಅರಸು ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಯರಿಗೆ ತೊಂದರೆಗಳನ್ನು ಕೇಳಿದರು. ವಸತಿ ನಿಲಯದಲ್ಲಿ ನೀಡುವ ಊಟ, ಸ್ನಾನಗೃಹ, ಕುಡಿಯುವ ನೀರಿನ…
ಮುದ್ದೇಬಿಹಾಳ: ತಾಲೂಕಿನ ಬಿದರಕುಂದಿ ಗ್ರಾಮದ ಆದರ್ಶ ವಿದ್ಯಾಲಯದ ೭,೮,೯ ನೇ ತರಗತಿಗಳಿಗೆ ಪ್ರಸಕ್ತ ವರ್ಷದ ಪ್ರವೇಶಕ್ಕೆ ಅರ್ಜಿ ಆವ್ಹಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜೂ೨೬ ರವರೆಗೆ ಕಾಲಾವಕಾಶ ನೀಡಿದ್ದು ಜೂ೨೯ ರಂದು ಪರೀಕ್ಷೆಗಳನ್ನು ನಡೆಸಲಾಗುವದು. ಶಾಲೆಯಲ್ಲಿ ಅರ್ಜಿ ಪಡೆದು ವಿವರಗಳನ್ನು ಭರ್ತಿ ಮಾಡಿ ಕೊಡಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ. ಮೊ : ೯೬೩೨೩೭೮೦೫೮ ಮತ್ತು ೯೮೪೫೭೬೨೭೦೧
ಮುದ್ದೇಬಿಹಾಳ: ಪಟ್ಟಣದ ವಿಬಿಸಿ ಪ್ರೌಢ ಶಾಲೆಯ ಮುಂಭಾಗದಿಂದ ವಿದ್ಯಾನಗರಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಪುರಸಭೆ ಪೈಪ್‌ಲೈನ್ ದುರಸ್ತಿ ಕಾಮಗಾರಿಗಾಗಿ ಗುಂಡಿ ತೋಡಿದ್ದು ಹಲವು ದಿನಗಳು ಕಳೆದರೂ ಯಾವುದೇ ದುರಸ್ತಿ ಕೈಗೊಳ್ಳದ ಹಿನ್ನೆಲೆ ಇಲ್ಲಿನ ಸಾರ್ವಜನಿಕರು ಪುರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಷ ಹೊರಹಾಕಿದ್ದಾರೆ.ಕಳೆದ ಕೆಲವು ದಿನಗಳ ಹಿಂದೆ ದುರಸ್ತಿ ಕಾಮಗಾರಿಗಾಗಿ ಭೂಮಿಯನ್ನು ಅಗೆದು ಅರ್ಧಂಬರ್ಧ ಕಾಮಗಾರಿ ಮಾಡಿ ಹಾಗೆಯೇ ಬಿಟ್ಟಿದ್ದಾರೆ. ಅಲ್ಲದೇ ಇಲ್ಲಿ ಅಗೆದ ಮಣ್ಣನ್ನೆಲ್ಲ ರಸ್ತೆಯ ಮೇಲೆ ಹಾಕಿದ್ದು ಪ್ರತಿ ದಿನ ಈ ರಸ್ತೆ ಮಾರ್ಗವಾಗಿ ಓಡಾಡುವ ಸಾಕಷ್ಟು ವಾಹನಗಳಿಗೆ ತೊಂದರೆಯಾಗಿದೆ. ಕೂಡಲೇ ಈ ದುರಸ್ತಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಒತ್ತಾಯಿಸಿದ್ದಾರೆ.
ಮುದ್ದೇಬಿಹಾಳ: ತಾಲ್ಲೂಕಿನಲ್ಲಿ ಜನವರಿಯಿಂದ ಜೂನ ತಿಂಗಳ ಅಂತ್ಯದವರೆಗೆ ಸಾಮಾನ್ಯ ಮಳೆ ೧೭೪ ಮಿ. ಮಿ. ಇದ್ದು ಇದಕ್ಕೆ ೩೦೯.೨ ಮಿ.ಮಿ. ಮಳೆಯಾಗಿದೆ. ಈ ಬಾರಿ ಒಳ್ಳೆಯ ಮಳೆಯಾಗಿದ್ದರಿಂದ ತಾಲ್ಲೂಕಿನಲ್ಲಿ ಬಿತ್ತನೆ ಕಾರ್ಯ ಭರದಿಂದ ಸಾಗಿದೆ. ಮುಂಗಾರು ಹಂಗಾಮಿಗೆ ತಾಲೂಕಿಗೆ ೧೨೩೦೪೧ ಹೆಕ್ಟರ್ ಕ್ಷೇತ್ರದಲ್ಲಿ ಬಿತ್ತನೆಯ ಗುರಿ ಹಾಕಿಕೊಳ್ಳಲಾಗಿದ್ದು ಇದಕ್ಕನುಗುಣವಾಗಿ ಇಲ್ಲಿಯವರೆಗೆ ತೊಗರಿ ೩೯೦೬೨ ಹೆಕ್ಟರ್, ಸಜ್ಜೆ ೯೦೫ ಹೆಕ್ಟರ್, ಮುಸುಕಿನಜೋಳ ೫೮೭ ಹೆಕ್ಟರ್ ಬಿತ್ತನೆಯಾಗಿ ಒಟ್ಟು ೪೭೩೪೩ ಹೆ ಬಿತ್ತನೆಯಾಗಿದ್ದು ತೊಗರಿ ಬಿತ್ತನೆ ಕ್ಷೇತ್ರ ಇನ್ನೂ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಸಹಾಯಕ ಕೃಷಿ ನಿರ್ದೇಶಕ ಎಸ್.ಡಿ.ಭಾವಿಕಟ್ಟಿ ಹೇಳಿದರು.ಬಿದರಕುಂದಿ ಗ್ರಾಮದ ಜಮೀನೊಂದರಲ್ಲಿ ತೊಗರಿ ಬಿತ್ತನೆ ಕಾರ್ಯಕ್ಕೆ ಸಲಹೆ ನೀಡಿ ಮಾತನಾಡಿದ ಅವರು, ಈಗಾಗಲೆ ಪಟ್ಟಣದ ಸೇರಿದಂತೆ ತಾಲ್ಲೂಕಿನ ಢವಳಗಿ, ನಾಲತವಾಡ ಹಾಗೂ ತಾಳಿಕೋಟಿ ರೈತ ಸಂಪರ್ಕ ಕೇಂದ್ರಗಳಲ್ಲಿ ತೊಗರಿ ಖಿS೩-ಖ , ಉಖಉ- ೮೧೧, ಉಖಉ -೧೫೨ ತಳಿಗಳು , ಗೋವಿನ ಜೋಳ, ಸರ‍್ಯಕಾಂತಿ , ಸಜ್ಜೆ ರಿಯಾಯಿತಿ ದರದಲ್ಲಿ ರೈತರಿಗೆ…
ಮುದ್ದೇಬಿಹಾಳ: ತಾಲೂಕಿನ ನೆರಬೆಂಚಿ, ಕೇಸಾಪೂರ ಗ್ರಾಮಗಳಲ್ಲಿ ಮಧ್ಯ ಮಾರಾಟವನ್ನು ಸಂಪೂರ್ಣವಾಗಿ ತಡೆಗಟ್ಟಿ, ಮಧ್ಯ ಮುಕ್ತ ಗ್ರಾಮವನ್ನಾಗಿಸಬೇಕು ಎಂದು ಎರಡೂ ಗ್ರಾಮಗಳ ನಿವಾಸಿಗಳು ಬುಧವಾರ ಗ್ರಾಮಗಳಲ್ಲಿ ಪ್ರತಿಭಟನೆ ನಡೆಸುವ ಮೂಲಕ ತಹಶೀಲ್ದಾರರಿಗೆ ಮನವಿ ಮಾಡಿಕೊಂಡರು.ಈ ವೇಳೆ ನಿವೃತ್ತ ಶೀಕ್ಷಕ ವಾಯ್.ಬಿ.ತಳವಾರ ಮಾತನಾಡಿ ಕಳ್ಳಿಗಳ ಜನರು ಮಧ್ಯದ ಚಟಕ್ಕೆ ಅಂಟಿಕೊಂಡು ತಮ್ಮ ಆರೋಗ್ಯ ಮಾತ್ರವಲ್ಲದೇ ಕುಟುಂಬ ನಿರ್ವಹಣೆಯ ಜವಾಬ್ದಾರಿಯನ್ನು ಮರೆಯುತ್ತಿದ್ದಾರೆ. ಬಡವರ ದಿನ ನಿತ್ಯ ದುಡಿದು ಸಂಪಾದಿಸಿದ ಹಣ ಮಧ್ಯದ ಪಾಲಾಗುತ್ತಿದೆ. ಹಳ್ಳಿಗಳಲ್ಲಿ ಮಧ್ಯ ಮರಾಟ ಮಾಡದಂತೆ ಸಾಕಷ್ಟು ನಿಯಮಗಳಿದ್ದರೂ ಅದೆಲ್ಲವನ್ನು ಉಲ್ಲಂಘಿಸಿ ಚಹಾದ ಅಂಗಡಿ, ಬೀಡಾ ಅಂಗಡಿ ಸೇರಿದಂತೆ ಎಲ್ಲಂದರಲ್ಲಿ ಮಾರಾಟ ಮಾಡುತ್ತಿದ್ದು ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ. ಕೂಡಲೇ ಹಳ್ಳಿಗಳಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಈ ವೇಳೆ ಸಂಗನಗೌಡ ಪಾಟಿಲ, ಜಿ.ಜಿ.ಗೌಡರ, ದ್ಯಾವಣ್ಣ ಹಿರೇಕುರಬರ, ಸಂಗಪ್ಪ ಬೋವಿ, ನಾಗರಾಜ ಹಿರೇಕುರಬರ, ಅಶೋಕ ಹಗರಗುಂಡ, ಪರಸಪ್ಪ ಗೌಡರ, ಬಸವರಾಜ ಭಜಂತ್ರಿ ಬಸವರಾಜ ಬಡಿಗೇರ, ದೇವಕವ್ವ ನಾಲತವಾಡ,…
ಆಲಮಟ್ಟಿ: ವಲಯದ ಎಲ್ಲ ಕಾಲುವೆಗಳು, ವಿದ್ಯುತ್ ಕಾಮಗಾರಿಗಳ ಹಾಗೂ ಇತರೆ ಕೆಲಸಗಳ ದುರಸ್ತಿ ಮತ್ತು ನಿರ್ವಹಣೆಗೆ ಹಣಕಾಸಿನ ಮಂಜೂರಾತಿ ನೀಡಬೇಕು ಸೇರಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕೃಷ್ಣಾ ತೀರ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿ ಕೆಬಿಜೆನ್ನೆಲ್ ಮುಖ್ಯ ಅಭಿಯಂತರರ ಕಚೇರಿ ಆವರಣದಲ್ಲಿ ಅನಿರ್ದಿಷ್ಟ ಧರಣಿ ಆರಂಭಿಸಿದರು.ಸಂಘದ ಅಧ್ಯಕ್ಷ ಎಂ.ಎ.ಮೇಟಿ, ಗೌರವಾಧ್ಯಕ್ಷ ಜಿ.ಸಿ.ಮುತ್ತಲದಿನ್ನಿ, ಉಪಾಧ್ಯಕ್ಷ ಶಿವಗೊಂಡಪ್ಪ ಗದಿಗೆಪ್ಪಗೌಡರ, ಸಿ.ಜಿ.ವಿಜಯಕರ, ಬಸವರಾಜ ಬಾಗೇವಾಡಿ ಮಾತನಾಡಿ, ಕಳೆದ ಆರ್ಥಿಕ ವರ್ಷದಲ್ಲಿ ಕರೆಯಲಾದ ಎಲ್ಲ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿ ಕ್ರಮಕೈಗೊಂಡು ಕಾಮಗಾರಿಗಳ ಬಿಡ್‌ನಲ್ಲಿ ಭಾಗವಹಿಸಿದ ಗುತ್ತಿಗೆದಾರರ ಮಂಗಡ ಹಣ ಆಯಾ ಗುತ್ತಿಗೆದಾರರಿಗೆ ಮರಳಿಸಬೇಕು. ಆಲಮಟ್ಟಿ ವಲಯದ ೨೦೨೪-೨೫ನೇ ಆರ್ಥಿಕ ವರ್ಷದ ಕಾಮಗಾರಿಗಳ ಕ್ರಿಯಾಯೋಜನೆಗೆ ತಕ್ಷಣ ಮಂಜೂರಾತಿ ನೀಡಿ ಅನುದಾನ ನೀಡಬೇಕು ಎಂದು ಆಗ್ರಹಿಸಿದರು.ಕಾಲುವೆಗಳ ದುರಸ್ತಿ ಮತ್ತು ನೂತನ ಮುಖ್ಯ ಕಾಲುವೆ, ವಿತರಣಾ ಕಾಲುವೆ, ಸೀಳು ಕಾಲುವೆ,ಉಪಕಾಲುವೆಗಳ ನಿರ್ಮಾಣ ಕಾಮಗಾರಿಗಳನ್ನು ಪ್ಯಾಕೇಜ್ ಪದ್ಧತಿಗೆ ಒಳಪಡಿಸದೆ ವಿಂಗಡಣೆಮಾಡಿ ಟೆಂಡರ್ ಕರೆಯಬೇಕು. ಒಂದು ಕೋಟಿ ರೂ.ಮೊತ್ತದ…
ಸಿಂದಗಿ: ದೇವರನಾವದಗಿ, ಕುಳೆಕುಮಟಗಿ, ಕುಮಸಗಿ, ದೇವಣಗಾವ ಮಾರ್ಗಗಳಿಗೆ ಸುಮಾರು ೧೦-೨೦ ವರ್ಷಗಳಿಂದ ಈ ಮಾರ್ಗಗಳಿಗೆ ಸಾರಿಗೆ ಸಂಪರ್ಕದ ವ್ಯವಸ್ಥೆ ಇರಲಿಲ್ಲ. ನಾನು ಶಾಸಕನಾದ ಮೇಲೆ ಈ ಕಾರ್ಯ ಮಾಡಿದ್ದೇನೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಕೇಂದ್ರ ಬಸ್ ನಿಲ್ದಾಣದಲ್ಲಿ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ವತಿಯಿಂದ ಹಮ್ಮಿಕೊಂಡ ನೂತನ ಮಾರ್ಗಗಳ ಬಸ್ ಸಂಚಾರಕ್ಕೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಮೋರಟಗಿ, ಕುಮಸಗಿ, ಹವಳಗಿ, ದೇವರನಾವದಗಿ, ದೇವಣಗಾವ, ಮಲಘಾಣ ಗ್ರಾಮಗಳ ಜನರ ಬಹುದಿನಗಳ ಬೇಡಿಕೆಯಾದ್ದ ಬಸ್ ಸಂಚಾರಕ್ಕೆ ಇಂದು ಚಾಲನೆ ದೊರಕಿದ್ದು ಜನರಲ್ಲಿ ಸಂತಸ ತಂದಿದೆ. ಚುನಾವಣಾ ಪೂರ್ವದಲ್ಲಿ ಈ ಭಾಗದ ಜನರಿಗೆ ಈ ಮಾರ್ಗಗಳ ಮೂಲಕ ಬಸ್ಸಿನ ಸೌಲಭ್ಯವನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದ್ದೆ. ಆ ಕೊಟ್ಟ ಮಾತಿನಂತೆ ಇಂದು ಈ ಮಾರ್ಗಗಳ ಮೂಲಕ ಬಸ್ ಸಂಚಾರದ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟು ನುಡಿದಂತೆ ನಡೆದಿದ್ದೇನೆ. ಶಕ್ತಿ ಯೋಜನೆ ಬಂದ ಮೇಲೆ ಸಿಂದಗಿ ಮತಕ್ಷೇತ್ರದಲ್ಲಿ ಇಲ್ಲಿಯವರೆಗೂ ೬೫ಲಕ್ಷಕ್ಕೂ ಅಧಿಕ…
