ತಾಳಿಕೋಟಿ: ತಾಲೂಕಿನ ಹಗರಗುಂಡ ಗ್ರಾಮದಲ್ಲಿ ಕೆಲವು ದುಷ್ಕರ್ಮಿಗಳು ಗ್ರಾಮದಲ್ಲಿರುವ ವೀರ ಸಂಗೊಳ್ಳಿ ರಾಯಣ್ಣನ ಭಾವಚಿತ್ರಕ್ಕೆ ಅಪಮಾನ ಎಸಗಿರುವ ಘಟನೆ ನಡೆದಿದೆ.
ಘಟನೆ ವಿವರ: ತಾಲೂಕಿನ ಹಗರಗುಂಡ ಗ್ರಾಮದಲ್ಲಿ ಆಗಸ್ಟ್ 19ರ ಮಧ್ಯರಾತ್ರಿಯಲ್ಲಿ ಗ್ರಾಮದ ಹನುಮಂತ ದೇವರ ದೇವಸ್ಥಾನದ ಹತ್ತಿರ ಇರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕಟ್ಟೆಯ ಮೇಲೆ ಭಾವಚಿತ್ರ ಇರುವ ಬ್ಯಾನರ್ಗೆ ಚಪ್ಪಲಿ ಹಾರ ಹಾಕಿ ಅದೇ ಬ್ಯಾನರ್ ಕೆಳಗೆ ಕಪ್ಪು ಬಣ್ಣದ ಗುರುತಿನಿಂದ ಟಿಪ್ಪು ಸುಲ್ತಾನ್ ಅಂತ ಬರೆದುಕೊಂಡಿದ್ದಾರೆ. ಈ ಘಟನೆಯ ಸುದ್ದಿ ಮುಂಜಾನೆ ಗ್ರಾಮದಲ್ಲಿ ಹರಡಿ ಕೆಲವು ಸಮಯದವರೆಗೆ ಉದ್ವಿಗ್ನ ವಾತಾವರಣ ಉಂಟಾಗಿತ್ತು. ಸ್ಥಳಕ್ಕೆ ಡಿವಾಯ್ಎಸ್ ಪಿ ನಂದಗಾಂವಿ ಅವರು ಭೇಟಿ ನೀಡಿ ಗ್ರಾಮಸ್ಥರಿಗೆ ತಿಳಿಹೇಳಿ ಪರಿಸ್ಥಿತಿ ಶಾಂತಗೊಳಿಸಿದರು. ಪ್ರಕರಣ ದಾಖಲು: ಘಟನೆಗೆ ಸಂಬಂಧಿಸಿದಂತೆ ತಾಳಿಕೋಟಿ ಪೊಲೀಸ್ ಠಾಣೆಯಲ್ಲಿ ಹಗರಗುಂಡ ಗ್ರಾಮದ ಸೋಮಪ್ಪ ತಂದೆ ಸಿದ್ದಪ್ಪ ಗಾಡಿ ಇವರು ಪಿರ್ಯಾದಿ ನೀಡಿದ್ದು ಕಲಂ ಗುನ್ನೆ ನಂಬರ149/2024 ಕಲಂ.298 ಭಾರತೀಯ ನ್ಯಾಯ ಸಂಹಿತೆ 2023ರ ಪ್ರಕಾರ ಪ್ರಕಾರ ದಾಖಲಿಸಿದ್ದು ಪೊಲೀಸರು ಕಿಡಿಗೇಡಿಗಳನ್ನು ಬಂಧಿಸಲು ತನಿಖೆ ಮುಂದುವರಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

