ಸಿಂದಗಿ: ಶಿಕ್ಷಕರ ದಿನಾಚರಣೆ ಪ್ರಯುಕ್ತ ತಾಲೂಕಿನ ಬೋರಗಿ ಗ್ರಾಮದ ನಬಿರೋಶನ್ ಪ್ರಕಾಶನ ವತಿಯಿಂದ ಆದರ್ಶ ಶಿಕ್ಷಕ ಪ್ರಶಸ್ತಿ ಪ್ರದಾನ ಹಾಗೂ ಕವಿಗೋಷ್ಠಿ ಸಮಾರಂಭವನ್ನು ಸೆಪ್ಟೆಂಬರ್ ತಿಂಗಳಲ್ಲಿ ಆಯೋಜನೆ ಮಾಡಲು ನಿರ್ಧರಿಸಿದೆ. ಆಸಕ್ತ ಕವಿಗಳು ಶಿಕ್ಷಕರ ಕುರಿತಾದ ಎರಡು ಸ್ವರಚಿತ ತಮ್ಮ ಕವನಗಳನ್ನು ೯೭೪೨೮೪೯೬೬೩ ಈ ವಾಟ್ಸಪ್ ನಂಬರ್‌ಗೆ ಆ.೩೧ರ ಒಳಗಾಗಿ ಕಳುಹಿಸಲು ಕೋರಲಾಗಿದೆ. ದಿನಾಂಕ ಮತ್ತು ಸ್ಥಳದ ವಿವರವನ್ನು ಆಯ್ಕೆಯಾದ ಕವಿಗಳಿಗೆ ತಿಳಿಸಲಾಗುವುದು ಎಂದು ಆಯೋಜಕ ಮೌಲಾಲಿ ಆಲಗೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
