ಮುದ್ದೇಬಿಹಾಳ: ಪಟ್ಟಣದ ಕಿಲ್ಲಾ ಗಲ್ಲಿಯಲ್ಲಿರುವ ಶ್ರೀ ಬಲಮುರಿ ಗಣಪ, ಶ್ರೀ ಗುಗ್ಗಳ ಬಸವೇಶ್ವರ ಹಾಗೂ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಸೋಮುವಾರ ಬೆಳಿಗ್ಗೆ ೭ಗಂಟೆಗೆ ಶ್ರೀ ಕಾಳಿಕಾದೇವಿ ದೇವಸ್ಥಾನದಿಂದ ದೇವಿಯ ಉತ್ಸವ ಮೂರ್ತಿಯನ್ನು ದೇವಸ್ಥಾನಕ್ಕೆ ಕರೆತರಲಾಯಿತು. ಮಂಗಳವಾರ ಪ್ರಾಥಃಕಾಲ ೫ಗಂಟೆಗೆ ಶ್ರೀ ವೀರಭದ್ರೇಶ್ವರರ ಪಲ್ಲಕ್ಕಿ ಹಾಗೂ ಕಳಸವನ್ನು ತಂಗಡಗಿಯ ಕೃಷ್ಣಾ ನದಿಗೆ ಗಂಗಸ್ಥಳಕ್ಕೆ ಕರೆದೊಯ್ಯಲಾಯಿತು. ೬ಗಂಟೆಗೆ ದೇವಸ್ಥಾನದಲ್ಲಿನ ಮೂಲ ಮೂರ್ತಿಗೆ ರುದ್ರಾಭಿಷೇಕ ನೆರವೇರಿಸಲಾಯಿತು. ಅತ್ತ ಗಂಗಸ್ಥಳದಲ್ಲಿ ಸ್ನಾನಾಧಿಕಾರ್ಯಗಳ ಬಳಿಕ ೮ಗಂಟೆಗೆ ಶ್ರೀ ವೀರಭದ್ರೇಶ್ವರರ ಪಲ್ಲಕ್ಕಿ ಹಾಗೂ ಕಳಸವು ಪುರ ಪ್ರವೇಶಿಸಿದವು. ಪಿಲೇಕಮ್ಮ ದೇವಸ್ಥಾನದಿಂದ ಸಕಲ ವಾದ್ಯ ವೈಭವಗಳೊಂದಿಗೆ ಹಾಗೂ ಪುರವಂತರ ಸೇವೆಯೊಂದಿಗೆ ಶ್ರೀ ವೀರಭದ್ರೇಶ್ವರರ ಪಲ್ಲಕ್ಕಿ ಮಹಾ ಉತ್ಸವವು ಬಸವೇಶ್ವರ ವೃತ್ತ, ಮುಖ್ಯ ಬಜಾರ, ಸರಾಫ ಬಜಾರ ಮೂಲಕ ದೇವಸ್ಥಾನದವರೆಗೆ ಸಾಗಿದವು.
ಮಧ್ಯಾಹ್ನ ಲಿಂ|| ಗಿರಿಜಾಬಾಯಿ ಮತ್ತು ಲಿಂ|| ರಾಚಪ್ಪ ಕಲಬುರ್ಗಿ ಇವರ ಸ್ನರಣಾರ್ಥ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ ಇವರ ಭಕ್ತಿ ಸೇವೆಯಲ್ಲಿ ಅನ್ನಸಂತರ್ಪಣೆ ಜರುಗಿತು. ಸಂಜೆ ೪ಕ್ಕೆ ಕಳಸವನ್ನು ಶಿಕಕ್ಕೇರಿಸುವ ಮೂಲಕ ಜಾತ್ರೆಯು ಸಂಪನ್ನವಾಯಿತು.
ಪುರವಂತರಾದ ಅಪ್ಪಣ್ಣ ಸಿದ್ದಾಪೂರ, ಗುರಯ್ಯ ಮುದ್ನೂರಮಠ, ಶಶಿಕಾಂತ ಮುತ್ತಗಿ, ಆನಂದ ಪತ್ತಾರ, ಕಾಂತು ಹೆಬ್ಬಾಳ, ಮಹಾಂತೇಶ ಪ್ಯಾಟಿಗೌಡರ, ಪ್ರಮುಖರಾದ ಉದಯ ರಾಯಚೂರ, ಅಶೋಕ ಹುರಕಡ್ಲಿ, ರವಿ ಅಮರಣ್ಣವರ, ಬಸವರಾಜ ನಾಶಿ, ಆನಂದ ಚಳಗೇರ, ಹರೀಶ ಬೆವೂರ ಸೇರಿದಂತೆ ಮತ್ತೀತರರು ಭಾಗಿಯಾಗಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

