Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಬಸವಾದಿ ಶರಣರು ಭೌತಿಕ, ಆಧ್ಯಾತ್ಮಿಕ, ಸತ್ಯ ತತ್ವಗಳನ್ನು ಸಾಮರಸ್ಯಗೊಳಿಸಿ ಸವಿದು ಅನುಭವಿಸಿ ನಿತ್ಯ, ಸತ್ಯ, ಬದುಕಿನ ಶಿವಪಥವನ್ನು ಲೋಕಕ್ಕೆ ನೀಡಿದ ಮಹಾಂತರವರು ಅಂತಹ ವಚನಕಾರರಲ್ಲಿ ವೈದ್ಯ ಸಂಗಣ್ಣ ಒಬ್ಬರು. ಅವರ ವಚನಗಳಲ್ಲಿ ಭಕ್ತಿನಿಷ್ಠೆ, ಜ್ಞಾನನಿಷ್ಠೆ, ವಿಶ್ವಾಸನಿಷ್ಠೆ, ಕಾಯಕ, ದಾಸೋಹ ಜೊತೆಗೆ ಶರಣರ ನಾಡಿಮಿಡಿತವನ್ನು ಕಂಡು ಹಿಡಿದು ಚಿಕಿತ್ಸೆ ನೀಡುತ್ತ ನೈಸರ್ಗಿಕವಾಗಿ ಬೆಳೆದ ತಪ್ಪಲು ತಂದು ಅದರ ರಸದಿಂದ ಔಷಧ ತಯಾರಿಸಿ ಚಿಕಿತ್ಸೆ ನೀಡುತ್ತಿದ್ದರು. ಕಾಯಕದ ಜೊತೆಗೆ ಪಂಚಾಕ್ಷರಿ ಮಂತ್ರ ಪಠಿಸುವುದರಿಂದ ರೋಗ ಹೋಗಲಾಡಿಸಬಹುದು ಎಂದು ಶರಣರಿಗೆ ಹೇಳುತ್ತ ವಿಶ್ವಾಸ, ಆತ್ಮಸ್ಥೈರ್ಯ ತುಂಬುತ್ತಿದ್ದರು. ಅವರು ರಚಿಸಿದ ವಚನಗಳು ಕೇವಲ ೨೪ ಮಾತ್ರ ಲಭ್ಯವಾಗಿವೆ. ಶರಣರಿಗೆ ಜೀವನಾಮೃತ ನೀಡಿದವರು ಅವರು ಎಂದು ಸಾಹಿತಿ ಮೋಹನ ಕಟ್ಟಿಮನಿ ಹೇಳಿದರು.ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯ ಜಿಲ್ಲಾ ಘಟಕದವರು ವೀರಶೈವ ಸಭಾಭವನದಲ್ಲಿ ಏರ್ಪಡಿಸಿದ ಮಾಸಿಕ ಶಿವಾನುಭವಗೋಷ್ಠಿಯಲ್ಲಿ ವಚನಕಾರ ವೈದ್ಯ ಸಂಗಣ್ಣ ಅನುಭಾವ ಕುರಿತು ಮಾತನಾಡಿದರು.ಶಿವಶರಣ ವೈದ್ಯ ಸಂಗಣ್ಣ ಅವರ ಕುರಿತು ಶಾರದಾ ಕೊಪ್ಪ (ಐಹೊಳ್ಳಿ) ಮಾತನಾಡುತ್ತ…
ಆಲಮಟ್ಟಿ ಜಲಾಶಯಕ್ಕೆ ಗಂಗಾಪೂಜೆ-ಬಾಗಿನ ಅರ್ಪಣೆ |ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಆಗ್ರಹ ವಿಜಯಪುರ: ಆಲಮಟ್ಟಿ ಜಲಾಶಯ ಎತ್ತರದಿಂದ ಬಾಧಿತವಾಗುವ ಪ್ರದೇಶದಲ್ಲಿ ಪುನರ್‌ವಸತಿ, ಪುನರ್‌ನಿರ್ಮಾಣಕ್ಕೆ ರಾಜ್ಯ ಸರ್ಕಾರ ಸಿದ್ಧವಿದ್ದು, ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಳಕ್ಕೆ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೇಳಿದರು.ಬುಧವಾರ ಜಿಲ್ಲೆಯ ಆಲಮಟ್ಟಿ ಆಣೆಕಟ್ಟೆಯಲ್ಲಿ ಕೃಷ್ಣೆಯ ಜಲಧಿಗೆ ಗಂಗಾಪೂಜೆ ಹಾಗೂ ಬಾಗಿನ ಅರ್ಪಣೆ ಮಾಡಿದ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೃಷ್ಣಾ ನ್ಯಾಯಾಧೀಕರಣ ೨ನೇ ತೀರ್ಪು ಬಂದಿದ್ದು, ತೀರ್ಪಿನನ್ವಯ ಆಲಮಟ್ಟಿ ಎತ್ತರ ಹೆಚ್ಚಳದಿಂದಾಗಿ ೧೩೦ ಟಿಎಂಸಿ ನೀರು ಹೆಚ್ಚುವರಿಯಾಗಿ ದೊರೆಯಲಿದೆ. ೧೩೦ ಟಿಎಂಸಿ ನೀರನ್ನು ಬಳಕೆ ಮಾಡಲು ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಳ ಮಾಡಬೇಕಾಗುತ್ತದೆ. ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದರೆ ಮಾತ್ರ ಆಲಮಟ್ಟಿ ಎತ್ತರ ಹೆಚ್ಚಿಸಲು ಸಾಧ್ಯವಾಗುತ್ತದೆ. ೫೧೯.೬ ರಿಂದ ೫೨೪.೨೫೬ ಮೀ. ಎತ್ತರಿಸಿದಾಗ ಮಾತ್ರ ೧೩೦ ಟಿಎಂಸಿ ನೀರು ದೊರೆಯಲಿದೆ. ಆಲಮಟ್ಟಿ ಎತ್ತರ ಹೆಚ್ಚಳದಿಂದ ೧೪.೬೮ ಲಕ್ಷ ಎಕರೆ ಜಮೀನು ನೀರಾವರಿಗೊಳಪಟ್ಟು…
ವಿಜಯಪುರ: ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿ ಯೋಜನೆಯಡಿಯಲ್ಲಿ ರಾಜ್ಯದ ಕ್ರೀಡಾ ಪೋಷಕರನ್ನು ಗುರುತಿಸಿ ಗೌರವಿಸಲು ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿಗೆ ಅರ್ಹ ಪೋಷಕರಿಂದ ಅರ್ಜಿ ಆಹ್ವಾನಿಸಲಾಗಿದೆ.ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿಜಯಪುರ ಕಚೇರಿಯಿಂದ ಮಾರ್ಗಸೂಚಿ ಹಾಗೂ ಅರ್ಜಿ ನಮೂನೆ ಪಡೆದುಕೊಂಡು ದಿನಾಂಕ : ೧೮-೦೯-೨೦೨೪ರೊಳಗಾಗಿ ಸಲ್ಲಿಸಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ : ೦೮೩೫೨-೨೫೧೦೮೫, ಮೊ: ೯೪೮೦೮೮೬೫೫೫ ಸಂಖ್ಯೆಗೆ ಸಂಪರ್ಕಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
೩ ವರ್ಷ ಜೈಲು ಶಿಕ್ಷೆ ಹಾಗೂ ೪೦ ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ಆದೇಶ ವಿಜಯಪುರ: ಸರ್ಕಾರಿ ಜಾಗೆಯ ಕಟ್ಟಡದ ಪುನರ್ ರಚನೆ ಪರವಾನಿಗೆ ಪತ್ರ ನೀಡಲು ೧೫ ಸಾವಿರ ರೂ. ಲಂಚದ ಹಣ ಬೇಡಿಕೆ ಇಟ್ಟು ಲೋಕಾಯುಕ್ತ ಪೊಲೀಸ್‌ರಿಗೆ ಸಿಕ್ಕಿಬಿದ್ದ ಮುದ್ದೇಬಿಹಾಳ ತಾಲೂಕಿನ ತುಂಬಗಿ ಗ್ರಾಮ ಪಂಚಾಯತಿಯ ಬಿಲ್ ಕಲೆಕ್ಟರ್ ಮಡಿವಾಳಯ್ಯ ಅಯ್ಯಣ್ಣಾ ಸಗರಮಠ ಆಪಾದಿತನನ್ನು ವಿಜಯಪುರ ಪ್ರಧಾನ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯ ೩ ವರ್ಷ ಜೈಲು ಶಿಕ್ಷೆ ಹಾಗೂ ೪೦ ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದೆ.ಮುದ್ದೇಬಿಹಾಳ ತಾಲೂಕಿನ ಫತ್ತೆಪುರ ಗ್ರಾಮದ ದಾವಲಸಾಬ ಸಗರ ಎಂಬುವರು ದಿನಾಂಕ : ೦೮-೦೨-೨೦೨೧೭ ರಂದು ವಿಜಯಪುರ ಎಸಿಬಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿ, ತನ್ನ ಪತ್ನಿಯ ಹೆಸರಿನಲ್ಲಿರುವ ಸರ್ಕಾರಿ ಜಾಗೆಯ ಕಟ್ಟಡ ಪರವಾನಿಗೆ ಪತ್ರ ಮಾಡಿಸಿ ಕೊಡಲು ೧೫೦೦೦ ರೂ. ಬೇಡಿಕೆ ಇಟ್ಟಿರುವ ಕುರಿತು ದೂರು ಸಲ್ಲಿಸಿದ್ದರು. ಈ ದೂರಿಯನ್ವಯ ಲೋಕಾಯುಕ್ತ ಪೊಲೀಸರು ದಾಳಿ…
ಆ.೨೮ರಂದು ಕರ್ನಾಟಕ ಸುವರ್ಣ ಸಂಭ್ರಮ-೫೦ ಕಾರ್ಯಕ್ರಮ ವಿಜಯಪುರ: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿಜಯಪುರ ಜಿಲ್ಲಾಡಳಿತದ ಸಹಯೋಗದಲ್ಲಿ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆ, ಜತ್ತ ತಾಲ್ಲೂಕಿನ ಗುಡ್ಡಾಪುರ ಶ್ರೀ ದಾನಮ್ಮ ದೇವಿ ಸುಕ್ಷೇತ್ರದಲ್ಲಿ ಹಮ್ಮಿಕೊಂಡ ಕರ್ನಾಟಕ ಸುವರ್ಣ ಸಂಭ್ರಮ ಹಾಗೂ ೨೦೨೪ನೇ ಸಾಲಿನ ಗಡಿ ಪ್ರಾಧಿಕಾರದಿಂದ ನೀಡುತ್ತಿರುವ ಗಡಿನಾಡ ಚೇತನ ಪ್ರಶಸ್ತಿ ಪ್ರದಾನ ಸಮಾರಂಭದ ಪೂರ್ವಭಾವಿ ಸಭೆಯನ್ನು ಜರುಗಿಸಲಾಯಿತು.ಸಂಖ ಗ್ರಾಮದಲ್ಲಿ ಆ.೨೧ರ ಬುಧವಾರದಂದು ಜರುಗಿದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆ, ವಸತಿ ಮತ್ತು ಊಟ, ಕಾರ್ಯಕ್ರಮದ ಜಾಗದ ಪರಿಶೀಲನೆ ಇತ್ಯಾದಿಗಳನ್ನು ನಡೆಸಿ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲು ತೀರ್ಮಾನಿಸಲಾಯಿತು.ಸಭೆಯಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ, ಕಾರ್ಯದರ್ಶಿ ಪ್ರಕಾಶ ಮತ್ತೀಹಳ್ಳಿ, ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ, ಶ್ರೀ ದಾನಮ್ಮ ದೇವಸ್ಥಾನದ ಟ್ರಸ್ಟ್ನ ಅಧ್ಯಕ್ಷರಾದ ವಿಜುಗೌಡ ಎಸ್ ಪಾಟೀಲ, ಟ್ರಸ್ಟ್ನ ಉಪಾಧ್ಯಕ್ಷ ಚಂದ್ರಶೇಖರ ಗೊಬ್ಬಿ, ಖಚಾಂಚಿ ವಿಠ್ಠಲ ಪೂಜಾರಿ, ಕನ್ನಡ ಮತ್ತು…
ಸದುಪಯೋಗಕ್ಕೆ ಜಿಲ್ಲಾ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಕರೆ ವಿಜಯಪುರ: ಕರ್ನಾಟಕದ ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಆ.೨೨ರಂದು ಬೆಳಿಗ್ಗೆ ೧೦ ರಿಂದ ೧-೩೦ರವರೆಗೆ ಹಾಗೂ ಮಧ್ಯಾಹ್ನ ೨-೩೦ರಿಂದ ೫ ಗಂಟೆಯವರೆಗೆ ನಗರದ ಸ್ಟೇಶನ್ ರಸ್ತೆಯ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಸಾರ್ವಜನಿಕರ ಕುಂದುಕೊರತೆಗಳ ಅಹವಾಲು ಸ್ವೀಕಾರ ವಿಚಾರಣೆ ನಡೆಸಲಿದ್ದು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ತಮ್ಮ ಸಮಸ್ಯೆ-ಅಹವಾಲುಗಳಿಗೆ ಪರಿಹಾರ ಪಡೆದುಕೊಳ್ಳುವಂತೆ ಕರ್ನಾಟಕ ಲೋಕಾಯುಕ್ತ ಪೊಲೀಸ್ ಅಧೀಕ್ಷಕರು ಕೋರಿದ್ದಾರೆ.ಸರ್ಕಾರಿ ಅಧಿಕಾರಿ-ನೌಕರರು ಕಾನೂನು ರಿತ್ಯ ಕಾರ್ಯ ಮಾಡಲು ವಿಳಂಬವಾಗುತ್ತಿದ್ದಲ್ಲಿ, ಅಥವಾ ಅಧಿಕಾರಿ-ನೌಕರರು ನ್ಯಾಯಯುತವಾಗಿ ಮಾಡಿಕೊಡಬೇಕಾದ ಕೆಲಸಗಳಲ್ಲಿ ವೃಥಾ ತೊಂದರೆ ಕೊಡುವುದು ಅಥವಾ ಇನ್ನಾವುದೇ ತರಹದ ದುರಾಡಳಿತದಲ್ಲಿ ತೊಡಗಿದ್ದಲ್ಲಿ ತೊಂದರೆಗೊಳಗಾದ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಲಿಖಿತ ರೂಪದಲ್ಲಿ ದಾಖಲೆ, ಸಾಕ್ಷಾಧಾರಗಳೊಂದಿಗೆ ಸಲ್ಲಿಸಿ ಬಗೆಹರಿಸಿಕೊಳ್ಳಬಹುದಾಗಿದೆ.ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ ತನಿಖೆ-ವಿಚಾರಣೆಗೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ದೂರುದಾರರು ಹಾಗೂ ಎದುರುದಾರರ ಸಮ್ಮುಖದಲ್ಲಿ ಕಾನೂನು ರಿತ್ಯ ಆ.೨೩ರಂದು ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೧-೩೦ರವರೆಗೆ ಮತ್ತು ಮಧ್ಯಾಹ್ನ ೨-೩೦ರಿಂದ ೫…
– ಜಯಶ್ರೀ.ಜೆ.ಅಬ್ಬಿಗೇರಿ,ಇಂಗ್ಲೀಷ್ ಉಪನ್ಯಾಸಕರು, ಬೆಳಗಾವಿ ಮೊ:೯೪೪೯೨೩೪೧೪೨ ನಿನ್ನೆ ಮೊನ್ನೆಯವರೆಗೂ ನಮ್ಮೊಂದಿಗೆ ಹಾಳು ಹರಟೆ ಹೊಡೆಯುತ್ತಿದ್ದವನು ನೋಡು ನೋಡುವುದರಲ್ಲಿ ಯಶಸ್ಸಿನ ಶಿಖರಕ್ಕೆ ತಲುಪಿದ್ದಾನೆ/ಳೆ ಅಂದರೆ ನಂಬಲು ಆಗುತ್ತಿಲ್ಲ. ಕೊನೆ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದವಳು ದೊಡ್ಡ ಅಧಿಕಾರಿ ಆಗಿದ್ದಾಳೆ. ಅದ್ಹೇಗೆ ಸಾಧ್ಯವಾಯಿತು? ನಾವೆಲ್ಲ ಅವಳಿಗಿಂತ ಓದಿನಲ್ಲಿ ಬಹಳ ಮುಂದೆ ಇದ್ದೆವು. ಕಂಪ್ಯೂಟರ್ ಪರದೆ ತೆರೆಯಲು ಬರದವನು ಈಗ ಹೈಟೆಕ್ ಜೀವನ ಸಾಗಿಸುತ್ತಿದ್ದಾನೆ. ಇಂಥ ವಿಚಿತ್ರಗಳನ್ನು ಪಟ್ಟಿ ಮಾಡುತ್ತ ಹೋದರೆ ಹನುಮನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ. ಹಾಗಾದರೆ ಮೊದಲು ಏನೂ ಇಲ್ಲದ ಪರಿಸ್ಥಿತಿಯಲ್ಲಿದ್ದವರು ನಂತರ ಏನೆಲ್ಲ ಪಡೆಯುವ ಸ್ಥಿತಿಗೆ ಹೇಗೆ ತಲುಪಿದರು ಎಂದು ಯೋಚಿಸಿದರೆ ನಮಗೆ ಉತ್ತರವಾಗಿ ಸಿಕ್ಕುವುದು ನಮ್ಮ ಆಯ್ಕೆಗಳು. ಹುಟ್ಟಿದಾಗ ನಾವೆಲ್ಲ ರಕ್ತ ಮಾಂಸದ ಮುದ್ದೆಗಳು ಬಿಟ್ಟರೆ ಮತ್ತೇನಿಲ್ಲ. ಕಣ್ಣು ಬಿಟ್ಟು ನೋಡುತ್ತ, ಕಿವಿಯಿಂದ ಆಲಿಸುತ್ತ, ಬಾಯಿಯಿಂದ ಆಸ್ವಾದಿಸುತ್ತ, ಮೂಗಿನಿಂದ ಆಘ್ರಾಣಿಸುತ್ತ, ಕೈಗಳಿಂದ ಸ್ಪರ್ಷಿಸುತ್ತ ತೇಟು ಪ್ರಾಣಿಯಂತೆ ಇರುತ್ತೇವೆ. ಹುಟ್ಟುವಾಗ ಎಲ್ಲರೂ ಒಂದೇ ಇದ್ದೆವು ಆದರೆ ನಮ್ಮೆಲ್ಲರ ಬದುಕು ಭಿನ್ನ ವಿಭಿನ್ನ ಹೇಗಾಯ್ತು? ಎನ್ನುವ…
ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪ್ರೇರಣಾ ಉಪನ್ಯಾಸ ಮಾಲಿಕೆಯಲ್ಲಿ ಡಿ.ಎಸ್.ಕುಂಬಾರ ಹೇಳಿಕೆ ಚಿಕ್ಕಪಡಸಲಗಿ: ಯುವಜನತೆಯ ಮನಸ್ಸುಗಳಿಂದು ಬಹುತೇಕ ಓದು, ಬರಹದ ಅಭಿರುಚಿ ಕಳೆದುಕೊಳ್ಳುತ್ತಲ್ಲಿದೆ. ಅವರಲ್ಲಿ ಅದ್ಯಯನಶೀಲತೆ ಮರೆಯಾಗುತ್ತಲ್ಲಿದೆ. ಅನಗತ್ಯ ದುಗುಡ, ದುಮ್ಮಾನು ಜೊತೆಗೆ ಕಲರಮಯ ಲೋಕದಲ್ಲಿ ಮುಳುಗಿ ಸ್ವಚ್ಛಂದವಾಗಿ ವಿಹರಿಸುತ್ತಿದೆ. ಇದರಿಂದ ಶೈಕ್ಷಣಿಕ ಪ್ರಗತಿ ಹಿನ್ನಡೆಯಾಗುತ್ತಿದೆ. ಸಮಾಜದಲ್ಲಿ ಹೆಚ್ಚು ಕಡಿಮೆ ಇಂಥ ಸ್ತರದ ಯುವ ಮನಗಳು ಚಂಚಲತೆಯ ಭಾವದಲ್ಲಿ ತೇಲಿಕೊಂಡು ತಮ್ಮ ಭವಿಷ್ಯ ಮಾರಕದೊಂದಿಗೆ ಮಂಕು ಮಾಡಿಕೊಳ್ಳುತ್ತಲ್ಲಿರುವುದು ತೀವ್ರ ನೋವಿನ ಸಂಗತಿ ಎಂದು ಜಮಖಂಡಿಯ ವಿಶ್ರಾಂತ ಶಿಕ್ಷಕ ಡಿ.ಎಸ್.ಕುಂಬಾರ ಹೇಳಿದರು.ಇಲ್ಲಿನ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಮಂಗಳವಾರ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ವಾಷಿ೯ಕ ಪರೀಕ್ಷಾ ದೃಷ್ಟಿಯಿಂದ ಹಮ್ಮಿಕೊಂಡಿದ್ದ “ಪ್ರೇರಣಾ ಉಪನ್ಯಾಸ” ವಿಶೇಷ ಮಾಲಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು.ಪ್ರೌಢ ಹಂತದ ಮಕ್ಕಳ ಬಾಲ್ಯಾವಸ್ಥೆ ಈಗ ಕಳೆದು ಹೋಗಿದೆ. ಪ್ರೌಢಾವಸ್ಥೆಯ ವಯೋಮಾನ ಇದೀಗ ಬಂದೆರಗಿದೆ. ಕಾರಣ ಮಸ್ತಕದಲ್ಲಿ ಹೈಸ್ಕೂಲ್ ಪಠ್ಯದಲ್ಲಿನ ಪ್ರಫುಲ್ ತಾಜಾ ಜ್ಞಾನ ಬೆಳವಣಿಗೆ ಕರಗತ ಮಾಡಿಕೊಳ್ಳಲು ಮುಂದಾಗಬೇಕೆಂದರು.ಅಕ್ಷರ ಮಾಲೆಗಳ ಸಂಪಾದನೆಗೆ ಏಕಾಗ್ರತೆಯಿಂದ ಪ್ರಯತ್ನಿಸಿ…
ಚಿಕ್ಕಪಡಸಲಗಿ: ಜಮಖಂಡಿ ತಾಲ್ಲೂಕಿನ ಚಿಕ್ಕಪಡಸಲಗಿ ಗ್ರಾಮದ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ವಾಷಿ೯ಕ ಪರೀಕ್ಷೆ ಹೇಗೆ ಎದುರಿಸಬೇಕು ಅದಕ್ಕೆ ಪೂರ್ವ ತಯಾರಿ ಯಾವ ರೀತಿಯಲ್ಲಿರಬೇಕೆಂಬ ಆತ್ಮಮನೋಬಲ ತುಂಬುವ ನಿಟ್ಟಿನಲ್ಲಿ ಮಂಗಳವಾರ ಪ್ರೇರಣಾದಾಯಕ ವಿಶೇಷ ಉಪನ್ಯಾಸ ನೀಡಿದ ಜಮಖಂಡಿಯ ವಿಶ್ರಾಂತ ಶಿಕ್ಷಕ ಹಿರಿಯ ಆಧ್ಯಾತ್ಮಿಕ ಜೀವ ಡಿ.ಎಸ್.ಕುಂಬಾರ ಅವರಿಗೆ ಶಾಲೆ,ಸಂಸ್ಥೆಯ ಪರವಾಗಿ ಮುಖ್ಯ ಶಿಕ್ಷಕ ಬಸವರಾಜ ಜಾಲೋಜಿ ಹಾಗೂ ಹಿರಿಯ ಮಾರ್ಗದಶಿ೯ ನಿವೃತ್ತ ಶಿಕ್ಷಕ ಬಸವರಾಜ ಅನಂತಪುರ ಸನ್ಮಾನಿಸಿ ಗೌರವಿಸಿದರು.ಈ ವೇಳೆ ಶಿಕ್ಷಕರಾದ ಈರಣ್ಣ ದೇಸಾಯಿ, ಸದಾಶಿವ ಸಿದ್ದಾಪುರ, ಲೋಹಿತ ಮಿಜಿ೯, ಜಿ.ಆರ್.ಜಾಧವ, ಗುರುಮಾತೆಯರಾದ ಕವಿತಾ ಅಂಬಿ, ಸಹನಾ ಹತ್ತಳ್ಳಿ, ಪ್ರಮೀಳಾ ತೇಲಸಂಗ, ಅಕ್ಷತಾ ಮೂತ್ತೂರ ಇತರರಿದ್ದರು.
ಇಂಡಿ: ಇಂದಿನ ಪಠ್ಯಕ್ರಮದಲ್ಲಿ ನೈತಿಕ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಶಿಕ್ಷಣದಲ್ಲಿ ಮೌಲ್ಯಗಳಿದ್ದರೆ ಮಾತ್ರ ವಿದ್ಯಾರ್ಥಿಯ ಪರಿಪೂರ್ಣ ವ್ಯಕ್ತಿತ್ವ ವಿಕಸನಗೊಳ್ಳುವದು ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.ಪಟ್ಟಣ ಕರ್ನಾಟಕ ಟಿಚರ್ಸ ಬಿ ಈಡ್ ಕಾಲೇಜು ಹಾಗು ವಿದ್ಯಾಚೇತನ ಪ್ರಕಾಶನ ಸಿಂದಗಿ ಇವರ ಸಂಯುಕ್ತ ಆಶ್ರಯದಲ್ಲಿ ಮೌಲ್ಯಾಧಾರಿತ ಶಿಕ್ಷಣ ಕುರಿತು ಶೈಕ್ಷಣಿಕ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಆಧುನಿಕತೆಯ ಭರಾಟೆಯಲ್ಲಿ ಮೌಲ್ಯಗಳು ಕುಸಿತಗೊಂಡಿವೆ. ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿ, ರವೀಂದ್ರನಾಥ ಠಾಗೋರ, ಡಾ ಸರ್ವಪಲ್ಲಿ ರಾಧಾಕೃಷ್ಣ ಮುಂತಾದ ದಾರ್ಶನಿಕರು ಮೌಲ್ಯಗಳಿಲ್ಲದ ಶಿಕ್ಷಣನಿರುಪಯುಕ್ತ.ಮಾನವೀಯ ಮೌಲ್ಯ ಮಕ್ಕಳಿಗೆ ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಹಂತದಲ್ಲಿ ಬೋಧನೆ ಮಾಡುವ ಮೂಲಕ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವದು ಅತ್ಯವಶ್ಯ ಎಂದರುಡಾ ವಿ ಡಿ ಐಹೊಳ್ಳಿ, ಸಂಸ್ಥೆಯ ಉಪಾಧ್ಯಕ್ಷ ಸಂಗಣ್ಣ ಈರಾಬಟ್ಟಿ ,ಪ್ರಾಚಾರ್ಯ ಡಾ ಸುಧಾ ಸುಣಗಾರ ಹ ಮ ಪೂಜಾರಿ ಮಾತನಾಡಿದರು.ಬಿ ಕೆ ಉಕುಮನಾಳ, ಡಿ ಎಸ್ ಮಠಪತಿ, ಸಂಗೀತಾ ಉಟಗಿ, ಬಿ ಪಿ ಹುನ್ನೂರ,…
