ಚಿಕ್ಕಪಡಸಲಗಿ: ಜಮಖಂಡಿ ತಾಲ್ಲೂಕಿನ ಚಿಕ್ಕಪಡಸಲಗಿ ಗ್ರಾಮದ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ವಾಷಿ೯ಕ ಪರೀಕ್ಷೆ ಹೇಗೆ ಎದುರಿಸಬೇಕು ಅದಕ್ಕೆ ಪೂರ್ವ ತಯಾರಿ ಯಾವ ರೀತಿಯಲ್ಲಿರಬೇಕೆಂಬ ಆತ್ಮಮನೋಬಲ ತುಂಬುವ ನಿಟ್ಟಿನಲ್ಲಿ ಮಂಗಳವಾರ ಪ್ರೇರಣಾದಾಯಕ ವಿಶೇಷ ಉಪನ್ಯಾಸ ನೀಡಿದ ಜಮಖಂಡಿಯ ವಿಶ್ರಾಂತ ಶಿಕ್ಷಕ ಹಿರಿಯ ಆಧ್ಯಾತ್ಮಿಕ ಜೀವ ಡಿ.ಎಸ್.ಕುಂಬಾರ ಅವರಿಗೆ ಶಾಲೆ,ಸಂಸ್ಥೆಯ ಪರವಾಗಿ ಮುಖ್ಯ ಶಿಕ್ಷಕ ಬಸವರಾಜ ಜಾಲೋಜಿ ಹಾಗೂ ಹಿರಿಯ ಮಾರ್ಗದಶಿ೯ ನಿವೃತ್ತ ಶಿಕ್ಷಕ ಬಸವರಾಜ ಅನಂತಪುರ ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಶಿಕ್ಷಕರಾದ ಈರಣ್ಣ ದೇಸಾಯಿ, ಸದಾಶಿವ ಸಿದ್ದಾಪುರ, ಲೋಹಿತ ಮಿಜಿ೯, ಜಿ.ಆರ್.ಜಾಧವ, ಗುರುಮಾತೆಯರಾದ ಕವಿತಾ ಅಂಬಿ, ಸಹನಾ ಹತ್ತಳ್ಳಿ, ಪ್ರಮೀಳಾ ತೇಲಸಂಗ, ಅಕ್ಷತಾ ಮೂತ್ತೂರ ಇತರರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

