ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಪ್ರೇರಣಾ ಉಪನ್ಯಾಸ ಮಾಲಿಕೆಯಲ್ಲಿ ಡಿ.ಎಸ್.ಕುಂಬಾರ ಹೇಳಿಕೆ
ಚಿಕ್ಕಪಡಸಲಗಿ: ಯುವಜನತೆಯ ಮನಸ್ಸುಗಳಿಂದು ಬಹುತೇಕ ಓದು, ಬರಹದ ಅಭಿರುಚಿ ಕಳೆದುಕೊಳ್ಳುತ್ತಲ್ಲಿದೆ. ಅವರಲ್ಲಿ ಅದ್ಯಯನಶೀಲತೆ ಮರೆಯಾಗುತ್ತಲ್ಲಿದೆ. ಅನಗತ್ಯ ದುಗುಡ, ದುಮ್ಮಾನು ಜೊತೆಗೆ ಕಲರಮಯ ಲೋಕದಲ್ಲಿ ಮುಳುಗಿ ಸ್ವಚ್ಛಂದವಾಗಿ ವಿಹರಿಸುತ್ತಿದೆ. ಇದರಿಂದ ಶೈಕ್ಷಣಿಕ ಪ್ರಗತಿ ಹಿನ್ನಡೆಯಾಗುತ್ತಿದೆ. ಸಮಾಜದಲ್ಲಿ ಹೆಚ್ಚು ಕಡಿಮೆ ಇಂಥ ಸ್ತರದ ಯುವ ಮನಗಳು ಚಂಚಲತೆಯ ಭಾವದಲ್ಲಿ ತೇಲಿಕೊಂಡು ತಮ್ಮ ಭವಿಷ್ಯ ಮಾರಕದೊಂದಿಗೆ ಮಂಕು ಮಾಡಿಕೊಳ್ಳುತ್ತಲ್ಲಿರುವುದು ತೀವ್ರ ನೋವಿನ ಸಂಗತಿ ಎಂದು ಜಮಖಂಡಿಯ ವಿಶ್ರಾಂತ ಶಿಕ್ಷಕ ಡಿ.ಎಸ್.ಕುಂಬಾರ ಹೇಳಿದರು.
ಇಲ್ಲಿನ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಮಂಗಳವಾರ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ವಾಷಿ೯ಕ ಪರೀಕ್ಷಾ ದೃಷ್ಟಿಯಿಂದ ಹಮ್ಮಿಕೊಂಡಿದ್ದ “ಪ್ರೇರಣಾ ಉಪನ್ಯಾಸ” ವಿಶೇಷ ಮಾಲಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು.ಪ್ರೌಢ ಹಂತದ ಮಕ್ಕಳ ಬಾಲ್ಯಾವಸ್ಥೆ ಈಗ ಕಳೆದು ಹೋಗಿದೆ. ಪ್ರೌಢಾವಸ್ಥೆಯ ವಯೋಮಾನ ಇದೀಗ ಬಂದೆರಗಿದೆ. ಕಾರಣ ಮಸ್ತಕದಲ್ಲಿ ಹೈಸ್ಕೂಲ್ ಪಠ್ಯದಲ್ಲಿನ ಪ್ರಫುಲ್ ತಾಜಾ ಜ್ಞಾನ ಬೆಳವಣಿಗೆ ಕರಗತ ಮಾಡಿಕೊಳ್ಳಲು ಮುಂದಾಗಬೇಕೆಂದರು.
ಅಕ್ಷರ ಮಾಲೆಗಳ ಸಂಪಾದನೆಗೆ ಏಕಾಗ್ರತೆಯಿಂದ ಪ್ರಯತ್ನಿಸಿ ತಮ್ಮ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಿಸಿಕೊಳ್ಳುವುದರ ಮೂಲಕ ಮುಂದಿನ ಶೈಕ್ಷಣಿಕ ಪಿಯುಸಿ ಭವಿಷ್ಯವನ್ನು ಉನ್ನತೀಕರಿಸಿಕೊಳ್ಳಬೇಕೆಂದು ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಸಲಹೆ ನೀಡಿದರು.
ಮಕ್ಕಳಿಗೆ ವ್ಯಯಕ್ತಿಕ ನಿಧಿ೯ಷ್ಟ ಗುರಿ, ಆತ್ಮವಿಶ್ವಾಸ, ನಿರಂತರ ಪ್ರಯತ್ನ, ಏಕಾಗ್ರತೆ ಇರಬೇಕು.ಪಾಠ ಬೋಧನೆ ಪ್ರವಚನ ಆಸಕ್ತಿಯಿಂದ ಆಲಿಸುವ ಕೂತುಹಲಬೇಕು.ತಾಳ್ಮೆ, ಸಂಯಮತೆಯ ಸಾಮರ್ಥ್ಯ ಸೂತ್ರಗಳನ್ನಿರಿಸಿಕೊಂಡು ಗುರಿ ಛಲ ಸಾಧನೆಗೆ ಮುಂದಾಗಬೇಕು. ಓದುವ ಕ್ರಮಬದ್ಧತೆ, ಓದುವ ರೀತಿ ಹಾಗೂ ಆಹಾರ ಪದ್ದತಿ ಸೂತ್ರಗಳನ್ನು ಅಳವಡಿಸಿಕೊಂಡು ಓದು,ಬರಹದ ಬೌದ್ಧಿಕ ಸ್ವತ್ತು ಹೆಚ್ಚಿಸಿಕೊಳ್ಳಬೇಕು. ಆ ದಿಸೆಯಲ್ಲಿ ಮನಸ್ಸು ಹತೋಟೆಯಲ್ಲಿ ನಿಯಂತ್ರಿಸಿಕೊಂಡು ಓದಲೇಬೇಕು, ಏನಾದರೂ ಸಾಧಿಸಲೇ ಬೇಕು ಎಂಬ ಹಠಭಾವ ಅರಳಿಸಿಕೊಳ್ಳಬೇಕು. ಸ್ಪಷ್ಟ ,ಶುದ್ಧ ಬರವಣಿಗೆ ವ್ಯಾಕರಣ ಛಂದಸ್ಸಿನೊಂದಿಗೆ ಸಾಗಬೇಕು. ಅಭ್ಯಾಸದ ಹಸಿವು ಹೆಚ್ಚಿಸಿಕೊಂಡು ಕಠಿಣ ಎನಿಸುವ ವಿಷಯಗಳನ್ನು ಹೆಚ್ಚು ಅಭ್ಯಸಿಸಲು ಪ್ರಯತ್ನಿಸಬೇಕು. ತಮ್ಮದೇ ಕೌಶಲ್ಯ, ಸಾಮಥ್ರ್ಯದಿಂದ ಸಾಧನೆ ಸಾಫಲ್ಯ ಕಂಡುಕೊಂಡು ಮೇಲೆ ಬರಬೇಕು. ಕಷ್ಟಗಳನ್ನು ಮೆಟ್ಟಿನಿಂತು ಶೈಕ್ಷಣಿಕ ಜೀವನ ಸಾಕಾರಗೊಳಿಸಿಕೊಳ್ಳಬೇಕು ಎಂದವರು ಮಕ್ಕಳಿಗೆ ಕಿವಿಮಾತು ಹೇಳಿದರು.
ಸಾಧ್ಯವಾದಷ್ಟು ಗುಂಪು ಓದಿಗಿಂತ ಏಕಾಂಗಿಯಾಗಿ ಓದುವದೇ ಲೇಸು. ಅದು ಸೈಲೆಂಟ್ ರೀಡಿಂಗ್ ಆಗಿರಲಿ. ಮೌನವಾಗಿ ನಗು ಮೊಗದೊಂದಿಗೆ ಸಾಗುವ ಓದು,ವಾಚನ ಉತ್ತಮ. ಅದರಲ್ಲೂ ಮೊಬೈಲ್ ಮಾಯೆಯಿಂದ ದೂರುಳಿಯುವ ಜಾಗರೂಕತೆ ಆವಶ್ಯಕತೆಯಿದೆ. ಮೊಬೈಲ್ ಬಿಟ್ಟರೆ ಬಾಳು ಬಹಳ ಬಂಗಾರ. ಅದರಲ್ಲಿ ಶೇ 10 ರಷ್ಟು ಒಳ್ಳೆಯದಿದ್ದರೆ ಶೇ 99 ರಷ್ಟು ಕೆಡಕುಗಳಿವೆ.ಅದು ಯುವಕರ ಜೀವನ ಹಾಳುಗೆಡುವುತ್ತಲ್ಲಿದೆ. ಇದರಿಂದ ಸಮಾಜದ ಸ್ವಾಸ್ಥ್ಯ ಹದಗೆಡುತ್ತಲ್ಲಿದೆ. ಊಹೆಗೂ ನಿಲುಕದಂಥ ಘಟನಾವಳಿಗಳಿಗೆ ಕಾರಣವಾಗುತ್ತಲ್ಲಿದೆ. ದುರಂತಗಳ ಕೆಟ್ಟ ಕಾಲ ಒದಗಿ ಬರುತ್ತಿವೆ. ಇಂಥದರಲ್ಲಿ ಎಲ್ಲವೂ ಸಹಿಸಿಕೊಂಡು ಬದುಕನ್ನು ಕಂಡುಕೊಳ್ಳುವ ದಯನೀಯ ಪರಸ್ಥಿತಿ ಎದುರಾಗುತ್ತಿರುವುದನ್ನು ಸೂಕ್ಷ್ಮವಾಗಿ ಇಂದಿನ ಯುವಪೀಳಿಗೆ ಗಂಭೀರವಾಗಿ ಅವಲೋಕಿಸಬೇಕಿದೆ. ಮೊಬೈಲ್ ದ ತೀವ್ರ ಚಟ, ವ್ಯಾಮೋಹ, ವ್ಯಸನದಿಂದ ಹೊರಬಂದು ಆರೋಗ್ಯಕರ ಅಭ್ಯಾಸಗಳೊಂದಿಗೆ ಬದುಕಿನ ಚರಿತ್ರೆಯನ್ನು ಒಳಿತಿನೆಡೆಗೆ ಕೊಂಡೊಯ್ಯಲು ದಿಟ್ಟ ಸಂಕಲ್ಪ ಮಾಡಬೇಕಾಗಿರುವುದು ಇಂದು ಅತ್ಯಗತ್ಯವಾಗಿದೆ ಎಂದರು .
ಇದೇ ವೇಳೆ ಡಿ.ಎಸ್.ಕುಂಬಾರ ಅವರನ್ನು ಶಾಲೆ, ಸಂಸ್ಥೆಯ ಪರವಾಗಿ ಸತ್ಕರಿಸಿ ಗೌರವಿಸಲಾಯಿತು.
ಪ್ರಭಾರಿ ಮುಖ್ಯೋಪಾಧ್ಯಾಯ ಬಸವರಾಜ ಜಾಲೋಜಿ, ವಿಶ್ರಾಂತ ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಅನಂತಪುರ, ಶಿಕ್ಷಕ ಈರಣ್ಣ ದೇಸಾಯಿ, ಲೋಹಿತ ಮಿಜಿ೯, ಸದಾಶಿವ ಸಿದ್ದಾಪುರ, ಜಿ.ಆರ್.ಜಾಧವ, ಶಿಕ್ಷಕಿ ಕವಿತಾ ಅಂಬಿ.ಸಹನಾ ಹತ್ತಳ್ಳಿ, ಪ್ರಮೀಳಾ ತೇಲಸಂಗ, ಅಕ್ಷತಾ ಮೂತ್ತೂರ ಸೇರಿದಂತೆ ಹಲವರಿದ್ದರು.

