Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ: ಜಿಲ್ಲೆಯಲ್ಲಿ ೨೦೨೪-೨೫ ಸಾಲಿನ ಶಾಲಾ ಶುಲ್ಕವನ್ನು ಅನುಧಾನಿತ ಖಾಸಗಿ ಶಿಕ್ಷಣ ಸಂಸ್ಥೆಗಳು ೩೦ರಿಂದ ೪೦ರಷ್ಟು ಹೆಚ್ಚಿಗೆ ಪಡೆಯುತ್ತಿವೆ. ಇನ್ನು ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘ(ಕುಸ್ಮ)ವು ತಮ್ಮ ಅಧಿನ ಶಾಲೆಗಳ ಶುಲ್ಕವನ್ನು ಮನಸೋ ಇಚ್ಚೆ ಹೆಚ್ಚಿಗೆ ಪಡೆಯುವಂತೆ ಪ್ರೆರೇಪಿಸಿದೆ. ಇದರಿಂದಾಗಿ ಮಧ್ಯಮ ಬಡ ಕೂಲಿ ಕಾರ್ಮಿಕ ವರ್ಗದ ಪಾಲಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಶಾಲಾ ಫೀ ತುಂಬಲಾಗದೇ ತಮ್ಮ ಮಕ್ಕಳನ್ನು ಕರೆದುಕೊಂಡು ಹೊರ ರಾಜ್ಯಕ್ಕೆ ಗುಳೆ ಹೋಗುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣವನ್ನು ವ್ಯಾಪಾರಿಕರಣಗೊಳಿಸಿದ್ದಾರೆ. “ಕರ್ನಾಟಕ ಶಿಕ್ಷಣ ಮಸೂದೆ ೧೯೮೩ ಅಧಿನಿಯಮಗಳ ಅಡಿಯಲ್ಲಿ ಹೆಚ್ಚಿಗೆ ಶುಲ್ಕ ಪಡಿಯುವ ಶಾಲೆಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ ಅವರು ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಪತ್ರ ನೀಡುವುದರ ಮೂಲಕ ಆಗ್ರಹಿಸಿದರು.ಇವರ ಜೊತೆಯಲ್ಲಿ ದೀಪಾ ಮನೂರ, ಗಣಪತಿ ರಾಠೋಡ, ಲಕ್ಷ್ಮಣ ಚಡಚಣ, ರಾಕೇಶ ಇಂಗಳಗಿ, ಪ್ರವೀಣ ಕನಸೇ,…
ದೇವರಹಿಪ್ಪರಗಿ: ಭಾರತ ಎಂದಿಗೂ ಯೋಗಿಗಳ ನಾಡು ಹೊರತೇ ರೋಗಿಗಳ ನಾಡಲ್ಲ. ಯೋಗ ವಿಶ್ವಕ್ಕೆ ಭಾರತದ ಕೊಡುಗೆಯಾಗಿದೆ ಎಂದು ಬಾಲಗಾಂವ ಗುರುದೇವಾಶ್ರಮದ ಅಮೃತಾನಂದ ಸ್ವಾಮೀಜಿ ಹೇಳಿದರು.ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಎ.ಬಿ.ಸಾಲಕ್ಕಿ ಕಾಲೇಜು ಆವರಣದಲ್ಲಿ ೧೦ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ಯ ಶುಕ್ರವಾರ ಜರುಗಿದ ವಿಶ್ವ ಯೋಗ ಉತ್ಸವದಲ್ಲಿ ಓಂಕಾರದ ಮೂಲಕ ಆರಂಭಿಸಿ, ೨೧ ಯೋಗಾಸನಗಳ ಕುರಿತು ಮಾಹಿತಿ ನೀಡಿ ಯೋಗಪಾಠ ಮಾಡಿದರು. ಭಾರತೀಯ ಪರಂಪರೆಯಲ್ಲಿ ಯೋಗಕ್ಕೆ ವಿಶೇಷ ಸ್ಥಾನವಿದೆ. ಇದು ಯಾವುದೇ ಧರ್ಮ, ಮತ, ಪಂಥಗಳಿಗೆ ಸೀಮಿತವಾಗಿಲ್ಲ. ಗುರುಕುಲದಿಂದ ಆರಂಭಗೊಂಡ ಯೋಗ ಇಂದು ವಿಶ್ವದ ೧೯೫ ದೇಶಗಳಲ್ಲಿ ಜನಪ್ರೀಯವಾಗಿದೆ. ಯೋಗ ನಮ್ಮ ಮಾನಸಿಕ, ದೈಹಿಕ, ಆಧ್ಯಾತ್ಮೀಕ ವಿಚಾರಗಳಿಗೆ ಪೂರಕವಾಗಿದೆ ಎಂದರು.ಶಾಸಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ), ಮಾಜಿಶಾಸಕ ಸೋಮನಗೌಡ ಪಾಟೀಲ (ಸಾಸನೂರ), ಕಾರ್ಯಕ್ರಮ ಸಂಘಟಕ ಹಾಗೂ ವಿಜಯಪುರ ಅನುಗ್ರಹ ಆಸ್ಪತ್ರೆಯ ನೇತ್ರತಜ್ಞ ಪ್ರಭುಗೌಡ ಬಿ.ಎಲ್.(ಚಬನೂರ) ಮಾತನಾಡಿದರು.ಯೋಗ ಉತ್ಸವದಲ್ಲಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಹಿರಿಯ ನಾಗರೀಕರು, ಶಿಕ್ಷಕಬಳಗ ಸೇರಿದಂತೆ…
ಚಡಚಣ: ಯೋಗ ಅಭ್ಯಾಸದಿಂದ ಮನಸ್ಸು ಮತ್ತು ದೇಹದ ಸಾಮರಸ್ಯ, ಆಲೋಚನೆ ಮತ್ತು ಕ್ರಿಯೆಯ ನಡುವಿನ ಸಮತೋಲನ, ಸಂಯಮ ಹಾಗು ಏಕತೆಯನ್ನು ಸಾಧಿಸಬಹುದು ಎಂದು ಖ್ಯಾತ ಸ್ತ್ರೀರೋಗ ತಜ್ಞ ಡಾ| ಅಕ್ಕಮಹಾದೇವಿ ಡೋಣಗಾಂವ ಹೇಳಿದರು.ಪಟ್ಟಣದ ಶ್ರೀ ಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ ೧೦ನೇ ಅಂತರರಾಷ್ಟ್ರೀಯ ಯೋಗದಿನ ದಿನಾಚರಣೆಯ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಯೋಗ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಮಗ್ರ ವಿಧಾನವನ್ನು ನೀಡುತ್ತದೆ. ಅಲ್ಲದೆ ನಮ್ಮ ಒತ್ತಡದ ಜೀವನಕ್ಕೆ ಶಾಂತಿಯನ್ನು ತರುತ್ತದೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಚಾರ್ಯ ಡಾ. ಎಸ್. ಬಿ. ರಾಠೋಡ, ಪ್ರಾಚೀನ ಭಾರತದಲ್ಲಿ ಹುಟ್ಟಿಕೊಂಡ ಯೋಗವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸವಾಗಿದೆ. ಇದರ ಮಹತ್ವವನ್ನರಿತ ವಿಶ್ವಸಂಸ್ಥೆ ೧೧ ಡಿಸೆಂಬರ್ ೨೦೧೪ ರಂದು ಜೂನ್ ೨೧ ಅನ್ನು ಅಂತರರಾಷ್ಟ್ರೀಯ ಯೋಗ ದಿನವೆಂದು ಘೋಷಿಸಿತು. ‘ಯೋಗ’ ಎಂಬ ಪದವು ಸಂಸ್ಕೃತದಿಂದ ಬಂದಿದೆ ಮತ್ತು ದೇಹ ಮತ್ತು ಪ್ರಜ್ಞೆಯ ಒಕ್ಕೂಟವನ್ನು ಸಂಕೇತಿಸುವದು ಅಥವಾ ಒಂದಾಗುವುದು ಎಂದರ್ಥ. ಈ ವರ್ಷ ‘ಸ್ವಯಂ…
ಆಲಮಟ್ಟಿಯಲ್ಲಿ ಪೊಲೀಸರ ಯೋಗ ದಿನಾಚರಣೆ ಆಲಮಟ್ಟಿ: ಇಲ್ಲಿನ ಆಲಮಟ್ಟಿ ಜಲಾಶಯದ ಬಲಭಾಗದಲ್ಲಿರುವ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಪೊಲೀಸರ ವಸಾಹತುವಿನಲ್ಲಿ ಶುಕ್ರವಾರ ಯೋಗ ದಿನಾಚರಣೆ ಆಚರಿಸಲಾಯಿತು.ಯೋಗ ಗುರು ಗಂಗಾಧರ ಹಿರೇಮಠ ೭೦ ಕ್ಕೂ ಪೊಲೀಸರಿಗೆ ಯೋಗದ ವಿವಿಧ ಆಸನಗಳನ್ನು ಸಂಗೀತದ ಲಯದೊಂದಿಗೆ ಮಾಡಿಸಿದರು.ಪ್ರತಿಯೊಂದು ಯೋಗವನ್ನು ಮಾಡಿಸಿ ಅದನ್ನು ಮಾಡುವ ಬಗೆ ಹಾಗೂ ಅದರಿಂದಾಗುವ ಆರೋಗ್ಯಕರ ಲಾಭದ ಬಗ್ಗೆ ವಿವರಿಸಿದರು. ದೈನಂದಿನ ಕಾರ್ಯದ ಒತ್ತಡವನ್ನು ತಡೆಗಟ್ಟಿ ಖುಷಿಯಿಂದ ಕಾರ್ಯನಿರ್ವಹಿಸಲು, ಒತ್ತಡ ನಿಯಂತ್ರಿಸಲು ಅಗತ್ಯ ವಿವಿಧ ಯೋಗಗಳ ಪ್ರಕಾರಗಳು ಹೇಳಿ ಪ್ರಾಣಾಯಾಮ ಮಾಡಿಸಿದರು.ಕೆಎಸ್‌ಐಎಸ್‌ಎಪ್ ನ ಅಸಿಸ್ಟೆಂಟ್ ಕಮಾಂಡೆಂಟ್ ಅರುಣ ಡಿ.ವಿ. ಹಾಗೂ ಆಲಮಟ್ಟಿ ಜಲಾಶಯದ ಭದ್ರತೆಯ ಮುಖ್ಯಸ್ಥ ಇನ್ಸಪೆಕ್ಟರ್ ಶಿವಲಿಂಗ ಕುರೆಣ್ಣವರ ಮಾತನಾಡಿ, ಯೋಗ್ಯವಾದ್ದನ್ನು ಗಮನದಲ್ಲಿಡುವುದೇ ಯೋಗ. ಮನಸ್ಸನ್ನು ಮೌನವಾಗಿಟ್ಟುಕೊಳ್ಳುವುದೇ ಯೋಗ, ದಿನನಿತ್ಯದ ಚೈತನ್ಯದಾಯಕ ಬದುಕು ಸಾಗಿಸಲು ನಿತ್ಯ ಕೆಲ ಸಮಯವಾದರೂ ಯೋಗ ಅಗತ್ಯವಿದೆ. ಪೊಲೀಸರಿಗೆ ಏಕತಾನತೆ ಹೋಗಿ, ಚೈತನ್ಯ ಮೂಡಿಸಲು ಯೋಗ ಶಿಬಿರ ಏರ್ಪಡಿಸಲಾಗಿದ್ದು, ಇದರ ಸದುಪಯೋಗ ಪಡೆಯಬೇಕೆಂದರು.ಪೊಲೀಸರು ತಾವಲ್ಲದೇ, ತಮ್ಮ…
ಸಿಂದಗಿ: ಪಟ್ಟಣದ ಸರಕಾರಿ ಆದರ್ಶ ವಿದ್ಯಾಲಯದಲ್ಲಿ ೨೦೨೪-೨೫ನೆಯ ಸಾಲಿನ ೭,೮,೯ ನೆಯ ತರಗತಿಯಲ್ಲಿ ಖಾಲಿ ಇರುವ ಸೀಟುಗಳಿಗೆ ವಿದ್ಯಾರ್ಥಿಗಳನ್ನು ಭರ್ತಿ ಮಾಡಿಕೊಳ್ಳಲು ರಾಜ್ಯ ಯೋಜನಾ ನಿರ್ದೇಶಕರು ಸಮಗ್ರ ಶಿಕ್ಷಣ ಇಲಾಖೆ ಕರ್ನಾಟಕ ಬೆಂಗಳೂರು ಅವರ ಸುತ್ತೋಲೆಯ ಮೇರೆಗೆ ತರಗತಿ ಮತ್ತು ರೊಸ್ಟರ್‌ವಾರು ಆಧಾರದ ಮೇಲೆ ಖಾಲಿ ಇರುವ ತರಗತಿವಾರು ಸೀಟುಗಳು ಈ ಕೆಳಗಿನಂತೆ ಇರುತ್ತವೆ. ೭ ನೇ ತರಗತಿಯಲ್ಲಿ ೧೧ ಸೀಟುಗಳು, ೮ ನೇ ತರಗತಿಯಲ್ಲಿ ೧೦ ಸೀಟುಗಳು, ೯ ನೇ ತರಗತಿಯಲ್ಲಿ ೦೭ ಸೀಟುಗಳು ಇರುತ್ತವೆ. ಆಸಕ್ತಿಯುಳ್ಳ ವಿದ್ಯಾರ್ಥಿಗಳು ಜೂ.೨೦ ರಿಂದ ೨೬ರವರೆಗೆ ಸಾಯಂಕಾಲ ೫ಗಂಟೆಯೊಳಗೆ ಸರಕಾರಿ ಆದರ್ಶ ವಿದ್ಯಾಲಯ (ಆರ್.ಎಮ್.ಎಸ್.ಎ) ಸಿಂದಗಿಯಲ್ಲಿ ಅರ್ಜಿ ಪಡೆದು ಭರ್ತಿ ಮಾಡಿಕೊಡಲು ಕ್ಷೇತ್ರ ಶಿಕ್ಷಣಾದಿಕಾರಿ ಆರೀಫ್ ಬಿರಾದಾರ ಹಾಗೂ ಮುಖ್ಯೋಪಾಧ್ಯಯ ಎಸ್.ಕೆ.ಬಿರಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಪರೀಕ್ಷೆಯನ್ನು ಜೂ.೨೯ ರಂದು ಬೆಳಗ್ಗೆ ೧೦:೩೦-೧:೦೦ರವರೆಗೆ ನಡೆಸಲಾಗುವುದು ಎಂದು ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ೯೯೦೦೩೬೪೦೬೩ ಸಂಪರ್ಕಿಸಬೇಕು ಎಂದು ತಿಳಿಸಿದ್ದಾರೆ.
ಸಿಂದಗಿ: ವಿಜಯಪುರ ಜಿಲ್ಲೆಗೆ ಭೋವಿ ಅಭಿವೃದ್ದಿ ನಿಗಮದಿಂದ ಹೆಚ್ಚು ಅನುದಾನ ಬಿಡುಗಡೆಗೊಳಿಸಬೇಕು. ಈ ಸಮುದಾಯದ ಜನ ಹೆಚ್ಚು ಆರ್ಥಿಕ ಸ್ಥಿತಿವಂತರಲ್ಲ ಎಂದು ಸಿಂದಗಿ ಭೋವಿ ಸಮುದಾಯದ ಮುಖಂಡೆ ಸುನಂದಾ ಯಂಪೂರೆ ಹೇಳಿದರು.ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಭೋವಿ ಸಮುದಾಯದ ಜನರಿಗೆ ಸರ್ಕಾರದಿಂದ ಸೂಕ್ತವಾದ ಯೋಜನೆಗಳನ್ನು ನಿರ್ಮಾಣ ಮಾಡಿ ಜನತೆಗೆ ಅನುಕೂಲ ಮಾಡಬೇಕು. ಮತ್ತು ಈ ಸಮುದಾಯದ ಮಹಿಳೆಯರಿಗೆ ಹೆಚ್ಚಿನ ಸಾಲ ಸೌಲಭ್ಯಗಳನ್ನು ನೀಡಿದ್ದಲ್ಲಿ ಅವರ ಕುಟುಂಬ ಹೆಚ್ಚು ಪ್ರಗತಿಯಾಗಲಿದೆ. ಪ್ರತಿ ೬ ತಿಂಗಳಿಗೊಮ್ಮೆ ಜಿಲ್ಲಾವಾರು ಸಭೆ ಮಾಡಿ ಸಮುದಾಯದ ಸಮಸ್ಯೆಗಳನ್ನು ಆಲಿಸಬೇಕು ಎಂದು ಮನವಿ ಮಾಡಿದರು.ಈ ವೇಳೆ ಮಹಾದೇವಿ ವಡ್ಡರ, ಮುದುಕು ಮಂಜ್ಯಾಳಕರ, ಭೀಮು ಶಿರಸಗಿ, ಹಣಮಂತ ಬಂಡಿವಡ್ಡರ, ಹಣಮಂತ ಬೆಳಗಲ್ಲ ಸೇರಿದಂತೆ ಅನೇಕರು ಇದ್ದರು.
ಸಿಂದಗಿ: ರಾಜ್ಯ ಸರ್ಕಾರದ ಜನ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ಪೇಟ್ರೋಲ್ ಡೀಸೆಲ್ ಬೆಲೆ ಏರಿಕೆ ಮಾಡಿದ್ದು ಎಲ್ಲ ಕ್ಷೇತ್ರಗಳ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ಮಾಜಿ ಶಾಸಕ ರಮೆಶ ಭೂಸನೂರ ಹೇಳಿದರು.ಗುರುವಾರದಂದು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಗುರುವಾರ ರಸ್ತೆ ತಡೆದು, ಟಾಯರ್‌ಗೆ ಬೆಂಕಿ ಹಚ್ಚಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಐದು ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರ ದೊಡ್ಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಗ್ಯಾರಂಟಿಗಳಿAದ ರಾಜ್ಯದ ಅಭಿವೃದ್ದಿ ಕಾರ್ಯಗಳು ಕುಂಠಿತಗೊAಡಿವೆ. ೫ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದಕ್ಕಾಗಿ ರಾಜ್ಯದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆಯನ್ನು ಏರಿಕೆ ಮಾಡುವ ಜೊತೆಗೆ ವಾಲ್ಮೀಕಿ ನಿಗಮದ ೧೭೫ಕೋಟಿ ರೂ. ಹಗರಣ ಮಾಡಿರುವುದನ್ನು ಖಂಡಿಸಿ ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಬಿಜೆಪಿ ಮಂಡಲ ತಾಲೂಕಾಧ್ಯಕ್ಷ ಸಂತೋಷ ಪಾಟೀಲ ಡಂಬಳ, ಅಶೋಕ ಅಲ್ಲಾಪೂರ, ಬಸವರಾಜ ಹೂಗಾರ, ಜೆಡಿಎಸ್ ತಾಲೂಕಾಧ್ಯಕ್ಷ ಎಮ್.ಎನ್.ಪಾಟೀಲ ಮಾತನಾಡಿ, ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಸಾರ್ವಜನಿಕರ ಯೋಗಕ್ಷೇಮದೆಡೆಗೆ ಗಮನ ಹರಿಸದೇ…
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಅಭಿಮತ ಸಿಂದಗಿ: ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಪರಿಸರ ಸಂರಕ್ಷಣಾ ಜಾಗೃತಿ ಮೂಡಿಸುವುದು ಅತ್ಯಗತ್ಯ. ಪರಿಸರವನ್ನು ಸಂರಕ್ಷಿಸುವ, ಪೋಷಣೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಆ ನಿಟ್ಟಿನಲ್ಲಿ ವಸತಿ ಶಾಲೆಯಲ್ಲಿ ಪರಿಸರ ಸಂರಕ್ಷಣೆ ಮಾಡಿದಕ್ಕೆ ಪ್ರಾಚಾರ್ಯರಿಗೂ ಹಾಗೂ ಸಿಬ್ಬಂದಿಗಳಿಗೂ ಪ್ರಸಂಶನೆಯನ್ನು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ವ್ಯಕ್ತಪಡಿಸಿದರು.ತಾಲೂಕಿನ ಗುಬ್ಬೆವಾಡ ಗ್ರಾಮದ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ನಡೆಯುತ್ತಿರುವ ಮೊರಾರ್ಜಿ ವಸತಿ ಶಾಲೆಯಲ್ಲಿ ಗುರುವಾರ ರಾತ್ರಿ ವಾಸ್ಥವ್ಯ ಹೂಡಿ ಮಕ್ಕಳ ಜೊತೆ ಊಟ ಮಾಡಿದ ಬಳಿಕ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಮೂರಾರ್ಜಿ ವಸತಿ ಶಾಲೆಗಳು ಪರಿಸರ ಸಂರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ. ವಸತಿ ನಿಲಯಗಳಲ್ಲಿ ಮಕ್ಕಳ ತಮ್ಮ ವಿಷಯಗಳನ್ನು ಹೇಳಲಿಕ್ಕೆ ಸಲಹಾ ಪೆಟ್ಟಿಗೆ ಅಳವಡಿಸಬೇಕು. ಊಟದ ಮೆನು ಮಕ್ಕಳ ಕಾಣುವ ರೀತಿಯಲ್ಲಿ ಹಾಕಬೇಕು. ಮೂರು ವರ್ಷವಾದರೂ ಸ್ಟಿಮ್ ಅಳವಡಿಕೆ ಅನುಸ್ಥಾಪನೆ ಮಾಡಿಲ್ಲ ಎಂದರೆ ಹೇಗೆ…
ವಿಜಯಪುರ: ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ ಅವರು ಜೂ.೨೪ರಿಂದ ೨೬ರವರೆಗೆ ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.ಜೂ.೨೪ರಂದು ಸಂಜೆ ೭ ಗಂಟೆಗೆ ವಿಜಯಪುರಕ್ಕೆ ಆಗಮಿಸಿ ವಿಜಯಪುರದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಜೂ.೨೫ರಂದು ಬೆಳಿಗ್ಗೆ ೧೧ ಗಂಟೆಗೆ ವಿಜಯಪುರದಿಂದ ಪ್ರಯಾಣ ಬೆಳೆಸಿ, ಮಧ್ಯಾಹ್ನ ೧೨ ಗಂಟೆಗೆ ಜತ್ತ ಮತ್ತು ಅಕ್ಕಲಕೋಟ ತಾಲೂಕುಗಳಲ್ಲಿ ಕನ್ನಡ ಶಿಕ್ಷಕರ ನೇಮಕವಾದ ಶಾಲೆಗಳಿಗೆ ಭೇಟಿ ನೀಡಿ, ತಾಲೂಕಿನ ಶಾಸಕರು, ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಕನ್ನಡಪರ ಹೋರಾಟಗಾರರು, ಶಿಕ್ಷಕರೊಂದಿಗೆ ಗಡಿ ಸಮಸ್ಯೆಗಳ ಸಮಾಲೊಚನಾ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ ೩ ಗಂಟೆಗೆ ಜತ್ತದಿಂದ ಹೊರಟು ೫-೩೦ಕ್ಕೆ ವಿಜಯಪುರಕ್ಕೆ ಆಗಮಿಸಿ ವಿಜಯಪುರದಲ್ಲಿ ವಾಸ್ತವ್ಯ ಮಾಡಲಿದ್ದಾರೆ.ಜೂ.೨೬ ರಂದು ಬೆಳಿಗ್ಗೆ ೮ ಗಂಟೆಗೆ ವಿಜಯಪುರದಿಂದ ಬೆಂಗಳೂರಿಗೆ ಮರು ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ
ವಿಜಯಪುರ: ಬಸವನಬಾಗೇವಾಡಿ ೨೨೦/೧೧೦/೧೧ ಕೆವ್ಹಿ ಸ್ವೀಕರಣಾ ಕೇಂದ್ರದಲ್ಲಿ ಜೂ.೨೪ ರಂದು ಮೊದಲನೇ ತ್ರೆöÊಮಾಸಿಕ ನಿರ್ವಹಣಾ ಕಾರ್ಯ ಮತ್ತು ಬಸ ಕಪ್ಲರ್ ನಿರ್ವಹಣಾ ಕಾರ್ಯ ಕೈಗೊಳ್ಳುವುದರಿಂದ ಸದರಿ ಸ್ವೀಕರಣಾ ಕೇಂದ್ರದ ಮೇಲೆ ಬರುವ ೧೧೦ ಕೆವ್ಹಿ ಮಾರ್ಗಗಳಿಗೆ ಅಂದು ಬೆಳಿಗ್ಗೆ ೮ ರಿಂದ ಸಂಜೆ ೪ ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.ಜೂ.೨೪ರಂದು ೧೧೦ ಕೆವ್ಹಿ ಮಾರ್ಗಗಳಲ್ಲಿ ಬರುವ ಮಮದಾಪುರ, ಬೆಳ್ಳುಬ್ಬಿ, ಶಿರಬೂರ, ದೇವರಗೆಣ್ಣೂರ, ಬಬಲೇಶ್ವರ, ಕಂಬಾಗಿ, ಮಟ್ಟಿಹಾಳ, ಮಲಘಾಣ, ರೋಣಿಹಾಳ, ಮುದ್ದೇಬಿಹಾಳ, ಹಿರೇಮುರಾಳ, ದೇವರಹಿಪ್ಪರಗಿ, ಉಕ್ಕಲಿ, ನಂದಿಹಾಳ, ಅಥರ್ಗಾ ಮತ್ತು ಹಿರೆಮಸಳಿ ೧೧೦ಕೆವ್ಹಿ ಉಪ ಕೇಂದ್ರಗಳಲ್ಲಿಯು ಮೊದಲನೇ ತ್ರೈಮಾಸಿಕ ನಿರ್ವಹಣಾ ಕಾರ್ಯ ಕೈಗೊಳ್ಳುವುದರಿಮದ ೩೩ ಕೆವ್ಹಿ ಮನಗೂಳಿ, ಮುತ್ತಗಿ, ಹೂವಿನಹಿಪ್ಪರಗಿ, ಢವಳಗಿ, ತಂಗಡಗಿ, ನಾತಲವಾಡ, ಕೋಲಾರ ನೀರು ಸರಬರಾಜು ಮಾರ್ಗ, ಕಾರಜೊಳ ಎಲ್.ಆಯ್.ಎಸ್. ದೇವರಗೆಣ್ಣೂರ, ಲಿಂಗದಳ್ಳಿ ಎಲ್‌ಆಯ್‌ಎಸ್, ಕೋರವಾರ ಹಾಗೂ ಕಡ್ಲೇವಾಡ ವಿದ್ಯುತ್ ಉಪ ಕೇಂದ್ರಗಳಿಗೆ ವಿದ್ಯುತ್ ಸರಬರಾಜುವಿನಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ವಿಜಯಪುರ ಹೆಸ್ಕಾಂ ಅಧಿಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ಕೋರಿದ್ದಾರೆ.
