ವಿಜಯಪುರ: ನಗರಸಭೆಯಿಂದ ಮಹಾನಗರ ಪಾಲಿಕೆಯಾಗಿ ಬಡ್ತಿ ಹೊಂದಿ ಸುಮಾರು ೭ ವರ್ಷಗಳು ಕಳೆಯುತ್ತಾ ಬಂದಿದ್ದರೂ ಸಹ ವಿಜಯಪುರ ನಗರದ ಕೆಲವೊಂದು ವಾರ್ಡಗಳಲ್ಲಿ ಅಭಿವೃದ್ದಿ ಎನ್ನುವದು ಮರಿಚಿಕ್ಕೆಯಾಗಿದೆ. ಇದಕ್ಕೆ ನಿರ್ದಶನ ಎಂಬಂತೆ ವಾರ್ಡ ನಂ. ೨೦ರ ಮುಬಾರಕ ಕಾಲನಿ, ಟಿಪ್ಪು ಸುಲ್ತಾನ ಮ್ಯಾರೇಜ್ ಹಾಲ್‌ಹತ್ತಿರ, ಜೆ.ಎಂ.ರೋಡದಲ್ಲಿ ಬರುವ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ಇನ್ನುವರೆಗೆ ಡಾಂಬರೀಕರಣ ರಸ್ತೆಯಾಗಲಿ, ಸಿ.ಸಿ. ರಸ್ತೆ ಆಗಿರುವದಿಲ್ಲ. ಇನ್ನು ಈ ರಸ್ತೆಯ ಮೂಲಕ ಇಕ್ರಾ ಶಾಲೆ, ಅಂಜುಮನ್ ಪದವಿ ಪೂರ್ವ ಕಾಲೇಜು, ಅಲ್‌ಹುದಾ ಶಾಲೆ, ಎ೧ ಶಾಲೆಗಳಿಗೆ ಹೋಗುವ ಚಿಕ್ಕ ಮಕ್ಕಳಿಗೆ ಹಾಗೂ ಶಾಲಾ ಕಾಲೇಜು ವಿದ್ಯಾರ್ತಿಗಳಿಗೆ ದಿನಂಪ್ರತಿ ಹಲವಾರು ಸಮಸ್ಯೆಗಳು ಎದುರಿಸುವ ಪರಿಪಾಠ ಬಂದಿದೆ. ಇನ್ನು ಮಳೆಗಾಲದಲ್ಲಿ ಎಲ್ಲೆಂದರಲ್ಲಿ ರೊಜ್ಜು, ಕೆಸರು ಹೆಚ್ಚಾಗುತ್ತದೆ. ಇದರಿಂದ ಚಿಕ್ಕ ಮಕ್ಕಳು ಕೆಸರಿನ ಗುಂಡಿಗಳಿಗೆ ಬಿದ್ದು, ಸಮಸ್ಯೆಗಳಿಗೆ ಈಡಾಗಿದ್ದಾರೆ. ಇನ್ನು ಈ ಬಡಾವಣೆಯಲ್ಲಿ ಸರಿಯಾದ ರಸ್ತೆ ದೀಪಗಳಿಲ್ಲ, ಡ್ರೈನೇಜ್, ಇನ್ನು ಹಲವಾರು ಸಮಸ್ಯೆಗಳು ಇದ್ದು,ಈ ಕುರಿತು ವಾರ್ಡ ಸದಸ್ಯರಿಗೆ ಮಹಾನಗರ ಪಾಲಿಕೆ ಮಹಾಪೌರರಿಗೆ ಹಾಗೂ ಆಯುಕ್ತರಿಗೆ ಈ ಕುರಿತು ಗಮನಕ್ಕೆ ತಂದರೂ ಸಹ ವಾರ್ಡ ನಂ. ೨೦ರ ಅಭಿವೃದ್ದಿ ಕೆಲಸಗಳಿಗೆ ಬಜೆಟ್ ಇಲ್ಲವೆಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಆದ್ದರಿಂದ ವಾರ್ಡ ನಂ. ೨೦ರ ಬಡಾವಣೆಯ ಜನರಿಗೆ ಅನುಕೂಲ ಆಗುವಂತೆ ಶೀಘ್ರದಲ್ಲಿ ರಸ್ತೆ, ವಿದ್ಯುತ್ ದೀಪ, ಒಳಚರಂಡಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಸಾರ್ವಜನಿಕರ ಕಷ್ಟಗಳಿಗೆ ಸ್ಪಂದಿಸಬೇಕೆಂದು ಮಾನವ ಹಕ್ಕುಗಳ ಕಲ್ಯಾಣ ಮಂಡಳಿ ಕಾರ್ಯದರ್ಶಿ ನಿಜಾಮುದ್ದೀನ ಹಿರಿಯಾಳ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

