ದೇವರಹಿಪ್ಪರಗಿ: ಗ್ರಾಮದಲ್ಲಿ ಸುರಿದ ಮಳೆ ಶಾಲಾ ಆವರಣ ಹಾಗೂ ಕೊಠಡಿಗಳಲ್ಲಿ ನಿಂತು ಮಕ್ಕಳ ಆಟಪಾಠ ಸೇರಿದಂತೆ ಎಲ್ಲ ಚಟುವಟಿಕೆಗಳಿಗೆ ಅಡ್ಡಿಯಾಯಿತು.
ತಾಲ್ಲೂಕಿನ ಕಡ್ಲೇವಾಡ ಪಿಸಿಎಚ್‌ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ಆವರಣ ಬುಧವಾರ ಸುರಿದ ಮಳೆಯ ನೀರಿನಿಂದ ತುಂಬಿದ್ದು, ಮಕ್ಕಳ ಶಾಲಾ ಪ್ರವೇಶ, ಪ್ರಾರ್ಥನೆ ಹಾಗೂ ತರಗತಿಗಳಿಗೆ ತೊಂದರೆಯಾಯಿತು. ಮಳೆ ನೀರು ಆವರಣದಲ್ಲಿ ನಿಂತ ಪರಿಣಾಮ ಮಕ್ಕಳು ಶಾಲಾ ಕೋಣೆಗಳಿಗೆ ಪ್ರವೇಶಿಸದಂತಾಗಿತ್ತು. ಜೊತೆಗೆ ಬೆಳಿಗ್ಗೆ ಆರಂಭದಲ್ಲಿ ಮಕ್ಕಳು ಪ್ರಾರ್ಥನೆ ಹಾಗೂ ರಾಷ್ಟ್ರಗೀತೆ ಹೇಳಲು ಅವಕಾಶ ಇಲ್ಲದಂತಾಯಿತು. ಇನ್ನೂ ನಾಲ್ಕು ಕೊಠಡಿಗಳು ಸಹ ಮಳೆ ನೀರಿನಿಂದ ಸೋರಿಕೆಯಾಗಿ ಪಾಠಗಳು ನಡೆಯದಂತಾದವು. ಇದರಿಂದ ಶಿಕ್ಷಕರು ಸಹ ಅಸಹಾಯಕರಾಗಿ ಮಕ್ಕಳೊಂದಿಗೆ ಸೇರಿ ಆವರಣದ ನೀರು ಖಾಲಿಮಾಡಲು ಹರಸಾಹಸ ಪಟ್ಟರು.
ಶಾಲಾ ಆವರಣದಲ್ಲಿ ಮಳೆ ನೀರು ನಿಲ್ಲವುದು ಹಾಗೂ ಕೋಣೆಗಳ ಸೋರುವಿಕೆ ಕುರಿತಂತೆ ಗ್ರಾಮ ಪಂಚಾಯಿತಿಗೆ ಹಲವು ಬಾರಿ ಮನವಿ ಮಾಡಿದ್ದರು ಸಹ ಗ್ರಾಮವನ್ನು ಪ್ರತಿನಿಧಿಸುವ ಐವರು ಗ್ರಾಮ ಪಂಚಾಯಿತಿ ಸದಸ್ಯರು ಯಾವುದೇ ಕ್ರಮಕ್ಕೆ ಮುಂದಾಗದೇ ಇರುವುದು ಪ್ರತಿವರ್ಷ ಮಳೆಗಾಲದಲ್ಲಿ ಮಕ್ಕಳು ಈ ಪರಿಸ್ಥಿತಿ ಎದುರಿಸುವಂತಾಗಿದೆ ಎಂದು ಮಕ್ಕಳ ಪಾಲಕರು ವಾಸ್ತವ ಅಂಶ ಬಿಚ್ಚಿಟ್ಟರು.
ಸ್ಥಳೀಯ ಆಡಳಿತ ಶಾಲಾ ಆವರಣದಲ್ಲಿ ಮಳೆನೀರು ನಿಲ್ಲದಂತೆ ಕೂಡಲೇ ಅಗತ್ಯ ಕ್ರಮ ಕೈಗೊಂಡು ಕೊಠಡಿಗಳ ಸೋರುವಿಕೆಗೆ ಕಡಿವಾಣ ಹಾಕಿ ಮಕ್ಕಳ ಕಲಿಕೆಗೆ ಸಹಕಾರ ನೀಡಬೇಕು ಎಂದು ಪಾಲಕರಾದ ಸಾಯಿಕುಮಾರ ಬಿಸನಾಳ, ವಿಠ್ಠಲ ದೇಗಿನಾಳ, ಅಶೊಕ ಸೂಳಿಭಾವಿ, ಮಲ್ಲು ಸವುಳಿ, ಶಿವಪ್ಪ ಉತ್ನಾಳ, ಗುರುನಾಥ ಗೌಂಡಿ, ದಸ್ತಗೀರಸಾಬ್ ಮುಲ್ಲಾ, ಕಾಂತು ಕನ್ನೊಳ್ಳಿ ಆಗ್ರಹಿಸಿದರು.
Subscribe to Updates
Get the latest creative news from FooBar about art, design and business.
ಶಾಲಾ ಆವರಣದಲ್ಲಿ ಮಳೆ ನೀರು ಸಂಗ್ರಹ :ಮಕ್ಕಳ ಪ್ರವೇಶಕ್ಕೆ ಅಡ್ಡಿ
Related Posts
Add A Comment

