Author: editor.udayarashmi@gmail.com

ವಿಜಯಪುರ: ಸಣ್ಣ ಮಕ್ಕಳಲ್ಲಿ ಹೆಚ್ಚುತ್ತಿರುವ ಕಣ್ಣಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಶಂಕರ ಕಣ್ಣಿನ ಆಸ್ಪತ್ರೆ ಮತ್ತು ಟೈಟಾನ ಕಂಪನಿಯು ದೃಷ್ಟಿ ದೋಷವುಳ್ಳ ಶಾಲಾ ಮಕ್ಕಳಿಗೆ “ನನ್ನಕಣ್ಣು” ಯೋಜನೆಯಡಿಯಲ್ಲಿ ಉಚಿತವಾಗಿ ಕನ್ನಡಕ ನೀಡಲು ಮುಂದಾಗಿದೆ . ಈ ಸೌಲಭ್ಯವನ್ನು ದೃಷ್ಟಿದೋಷ ಸವಾಲುಗಳುಳ್ಳ ಮಕ್ಕಳು ಇದರ ಸದೋಪಯೋಗ ಪಡೆದುಕೊಳ್ಳಬೇಕು ಎಂದು ಶಂಕರ ಆಸ್ಪತ್ರೆಯ ಆರ್.ಎಚ್.ಕಟಕದೊಂಡ ಹೇಳಿದರು.ಶುಕ್ರವಾರದಂದು ಕಳೆದ ವಾರದ ಹಿಂದೆ ವಿದ್ಯಾರ್ಥಿಗಳಿಗೆ ಉಚಿತ ನೇತ್ರತಪಾಸಣೆ ನಡೆಸಲಾಗಿತ್ತು. ಈ ಪೈಕಿ ದೃಷ್ಟಿದೋಷ ಕಾಣಿಸಿಕೊಂಡ ಶಾಲೆಯ ೧೫ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆಯಿಂದ ಕನ್ನಡಕ ವಿತರಣೆ ಮಾಡಲಾಯಿತು ಎಂದರು. ಮಾನವನ ಅಂಗಗಳಲ್ಲಿ ಕಣ್ಣು ಬಹಳ ಪ್ರಮುಖವಾದದ್ದು. ಕಣ್ಣಿನ ಆರೋಗ್ಯ ಕಾಯ್ದುಕೊಳ್ಳುವುದು ಅವಶ್ಯಕ ಎಂದು ಹೇಳಿದರು.ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರು ಇ.ಡಿ.ಲಮಾಣಿ ಮಾತನಾಡುತ್ತ, ಕಣ್ಣು ಮನುಷ್ಯನಿಗೆ ಅತ್ಯಮೂಲ್ಯ. ಕಣ್ಣು ಕಳೆದುಕೊಂಡರೆ ಜಗತ್ತೇ ಕತ್ತಲು ಮಯವಾಗುತ್ತದೆ. ಮಕ್ಕಳು ಮೊಬೈಲ್, ಟಿವಿಯನ್ನು ಅತೀ ಸಮೀಪದಿಂದ ವೀಕ್ಷಿಸುವುದರಿಂದ ಕಣ್ಣಿಗೆ ತೊಂದರೆ ಆಗುವ ಸಾಧ್ಯತೆ ಇರುತ್ತದೆ ಎಂದರು.ಈ ವೇಳೆ ಶಾಲೆಯ ಶಂಕರ ಆಸ್ಪತ್ರೆ ಸಿಬ್ಬಂದಿ…

Read More

ವಿಜಯಪುರ: ಲಾವಣಿಗಳ ಮೂಲಕ ಪ್ರಖ್ಯಾತರಾಗಿರುವ ಈ ನಾಡಿನ ಹೆಸರಾಂತ ಲೇಖಕ ಬಿ.ಆರ್.ಪೊಲೀಸ್ ಪಾಟೀಲ ಅವರು ಬರೆದ ಗದುಗಿನ ತೋಂಟದಾರ್ಯ ಮಠದ ಹಿಂದಿನ ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಜೀವನಾಧಾರಿತ ಕಾದಂಬರಿ ‘ಉರಿಯ ಗದ್ದುಗೆ’ ಎರಡನೇ ಆವೃತ್ತಿಯ ಲೋಕಾರ್ಪಣೆ ಸಮಾರಂಭ ಗುರುವಾರ ಸಂಜೆ ಇಲ್ಲಿನ ಮನಗೂಳಿ ರಸ್ತೆಯ ಗುರುಪಾದೇಶ್ವರ ನಗರ( ಇಬ್ರಾಹಿಂಪುರ ಪಕ್ಕದ ಬಡಾವಣೆ) ದ ತೋಂಟದಾರ್ಯ ಅನುಭವ ಮಂಟಪದಲ್ಲಿ ಜರುಗಿತು.ಶ್ರಾವಣ ಮಾಸದ ಪ್ರಯುಕ್ತ ತೋಂಟದಾರ್ಯ ಅನುಭವ ಮಂಟಪದಲ್ಲಿ ಕವಿ ಚಾಮರಸ ವಿರಚಿತ ಪ್ರಭುಲಿಂಗ ಲೀಲೆ ಪ್ರವಚನ ಹೇಳುತ್ತಿರುವ ಖ್ಯಾತ ಪ್ರವಚನಕಾರರು, ಶ್ರೇಷ್ಠ ಅನುಭಾವಿಗಳಾದ ಅಥಣಿ ತಾಲೂಕಿನ ಶೇಗುಣಸಿ ವಿರಕ್ತಮಠದ ಡಾ. ಮಹಾಂತಪ್ರಭು ಸ್ವಾಮಿಗಳು ಉರಿಯ ಗದ್ದುಗೆ ಎರಡನೇ ಆವೃತ್ತಿಯ ಪುಸ್ತಕ ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಮಹಾತ್ಮರ ಜೀವನಚರಿತ್ರೆಯ ಪುಸ್ತಕಗಳನ್ನು ಓದುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ಹೆಸರಾಂತ ಲೇಖಕರಾದ ಬಿ.ಆರ್. ಪೊಲೀಸ್ ಪಾಟೀಲ ಅವರು ಬೆಳಗಾವಿ ನಾಗನೂರ ಮಠದ ಶಿವಬಸವ ಸ್ವಾಮಿಗಳ ಜೀವನಾಧಾರಿತ ‘ಮಹಾವೃಕ್ಷ’ ಕಾದಂಬರಿ ಸೇರಿದಂತೆ ಹಲವಾರು ಕೃತಿಗಳನ್ನು…

Read More

ವಿಜಯಪುರ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ರಮೇಶ ಕಾ. ಗುಬ್ಬೇವಾಡ ಇವರ ನಿರ್ದೇಶನದ ಮೇರೆಗೆ ವಿಜಯಪುರ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಸಮಿತಿಯ ಕಾರ್ಯದರ್ಶಿಯಾಗಿ ಪರಶುರಾಮ ರ. ಪಾರಣ್ಣವರ ಇವರನ್ನು ಆಯ್ಕೆ ಮಾಡಲಾಗಿದೆ.ಕಾರಣ ತಾವು ಕೂಡಲೇ ಅಧಿಕಾರವನ್ನು ವಹಿಸಿಕೊಂಡು ಪಕ್ಷದ ಮುಖಂಡರ ಮಾರ್ಗದರ್ಶನದಲ್ಲಿ ಹಾಗೂ ಸ್ಥಳೀಯ ನಾಯಕರುಗಳ ಹಾಗೂ ಮುಖಂಡರ ಸಹಕಾರದೊಂಧಿಗೆ ತಮಗೆ ನೀಡಲಾಗಿರುವ ಜವಾಬ್ದಾರಿಯ್ನು ಯಶಸ್ವಿಯಾಗಿ ನಿರ್ವಹಿಸಿ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಸಂಘಟನೆಗೆ ಶ್ರಮಿಸುವಂತೆ ಈ ಆದೇಶ ಮಾಡಲಾಗಿದೆ.

Read More

ವಿಜಯಪುರ: ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ವಿಜಯಪುರ ಹಾಗೂ ಶ್ರೀ ಶಾಂತವೀರ ಪದವಿ ಪೂರ್ವ ಕಾಲೇಜು ಬಬಲೇಶ್ವರ ಸಹಯೋಗದಲ್ಲಿ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮ ಬಬಲೇಶ್ವರ ಶಾಂತವೀರ ಪ ಪೂ ಕಾಲೇಜಿನಲ್ಲಿ ಆ.೨೪ರಂದು ಬೆಳಿಗ್ಗೆ ೧೧.೩೦ ಕ್ಕೆ “ವಿಶ್ವ ಜಾನಪದ ದಿನಾಚರಣೆ ೨೦೨೪ ” ಹಮ್ಮಿಕೊಳ್ಳಲಾಗಿದೆ.ಕರ್ನಾಟಕ ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಬಾಪುಗೌಡ ಪಾಟೀಲ (ಶೇಗುಣಸಿ) ಉದ್ಘಾಟಿಸುವರು. ಪ್ರಾಚಾರ್ಯ ಪ್ರೊ ಲಕ್ಷ್ಮೀನರಸಯ್ಯ ಎನ್ ಅಧ್ಯಕ್ಷತೆ ವಹಿಸುವರು. ಜಾನಪದ ಸಾಹಿತಿ ಶಂಕರ ಬೈಚಬಾಳ ಉಪನ್ಯಾಸ ನೀಡುವರು. ಪರಿಷತ್ ಅಧ್ಯಕ್ಷ ಬಾಳನಗೌಡ ಪಾಟೀಲ ಪ್ರಾಸ್ತಾವಿಕ ನುಡಿ ಹೇಳುವರು. ಬಯಲಾಟ ಅಕಾಡೆಮಿ ಸದಸ್ಯೆ ಶ್ರೀಮತಿ ಅನಸುಬಾಯಿ ವಡ್ಡರ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ರವೀಂದ್ರ ಉಗಾರ, ಕೆಪಿಸಿಸಿ ಅಲ್ಪಸಂಖ್ಯಾತ ತಾಲೂಕಾ ಅಧ್ಯಕ್ಷ ಅಬ್ದುಲ್ ಗೋಕಾವಿ, ಪರಿಷತ್ ಪದಾಧಿಕಾರಿಗಳಾದ ಗೂಳಪ್ಪ ಯರನಾಳ, ಮೌಲಾಸಾಹೇಬ ಜಹಾಗೀರದಾರ ಆಗಮಿಸುವರು.ಕಲಾವಿದರಾದ ಶ್ರೀಶೈಲ ಬಾಟಿ( ಕೊಲ್ಹಾರ) ಇದ್ರಾಬಾಯಿ ಪಡಗಾರ( ಬಬಲೇಶ್ವರ) ಇವರನ್ನು ಸನ್ಮಾನಿಸಲಾಗುವುದು.ಕಾರ್ಯಕ್ರಮದಲ್ಲಿ ಹೆಜ್ಜೆಮೇಳ ಮತ್ತು ಚೌಡಕಿ ಪದ ಪ್ರದರ್ಶನ…

Read More

ವಿಜಯಪುರ: ಗ್ರಾಮ ಪಂಚಾಯತಿಗಳಲ್ಲಿ ನಡೆಯುವ ಅವ್ಯವಹಾರ ಹಾಗೂ ಭ್ರಷ್ಟಾಚಾರಗಳನ್ನು ಹಾಗೂ ಅಭಿವೃದ್ದಿ ಕಾಮಗಾರಿಗಳನ್ನು ಅನುಷ್ಟಾನಗೊಳಿಸುವಂತೆ ಮತ್ತು ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುವಂತೆ ಆಗ್ರಹಿಸಿ ಜಯ ಕರ್ನಾಟಕ ಸಂಘಟನೆಯ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಸಂಗಮೇಶ ಎಸ್. ದಾಶ್ಯಾಳ ಮಾತನಾಡಿ, ಸರಕಾರವು ಗ್ರಾಮ ಪಂಚಾಯತಿಗಳಿಂದ ಗ್ರಾಮಗಳ ಅಭಿವೃದ್ದಿ ಆಗಲೆಂದು ನೈರ್ಮಲೀಕರಣ ಹಾಗೂ ನೀರು ನಿರ್ವಹಣೆ ಸೇರಿದಂತೆ ಸಾಕಷ್ಟು ಯೋಜನೆಗಳನ್ನು ರೂಪಗೊಳಿಸಿತು. ಆದರೆ ಯಾವುದೂ ಸರಿಯಾಗಿ ಅನುಷ್ಠಾನೊಂಡಿಲ್ಲ. ಹೆಚ್.ಕೆ.ಪಾಟೀಲ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ ರಾಜ್ಯ ಸಚಿವರಾಗಿದ್ದಾಗ ಅವರು ಪಂಚಾಯತಿಗಳಲ್ಲಿ ಭ್ರಷ್ಟಾಚಾರ ನಡೆಯಬಾರದು ಎಂಬ ನಿಟ್ಟಿನಲ್ಲಿ ಒಳ್ಳೆಯ ಯೋಜನೆಗಳನ್ನು ಬೆಳಕಿಗೆ ತಂದಿದ್ದರು. ಅದರೆ ಆ ಯೋಜನೆಗಳು ಪೈಲುಗಳಲ್ಲಿ ಹುದುಗಿಕೊಂಡು ಸರಕಾರದ ಪ್ರತಿ ನಿಧಿಗಳು, ಜನರಿಗೆ ಅನ್ಯಾಯ ಮಾಡಿದ್ದಾರೆ. ಇದಕ್ಕೆ ಉನ್ನತ ಶ್ರೇಣಿಯ ಅಧಿಕಾರಿಗಳು, ಜನಪ್ರತಿನಿಧಿಗಳು ತಲೆಕೆಡಿಸಿಕೊಂಡಿಲ್ಲ. ಈ ಮನವಿಗೆ ಜಿಲ್ಲಾಡಳಿತವು ಸ್ಪಂದಿಸದೇ ಹೋದಲ್ಲಿ ಕಾನೂನು ರಿತ್ಯ ಹೋರಾಟ ಕೈಗೊಳ್ಳಲಾಗುವದು ಎಂದು ಎಚ್ಚರಿಕೆ ನೀಡಿದರು.ಈ ಸಮಯದಲ್ಲಿ ಪಿಂಟು ಗೊಬ್ಬೂರ, ಮಕದಸ್ ಇನಾಮದಾರ, ರಿಯಾಜ…

Read More

“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ – ಗದಗ ಸುನೀತಾ ವಿಲಿಯಮ್ಸ್…. ಹೆಸರನ್ನು ಕೇಳಿದೊಡನೆ ಹೌದಲ್ವೇ! ಆಕೆ ಇನ್ನೂ ಬಾಹ್ಯಾಕಾಶದಿಂದ ಮರಳಿ ಬಂದಿಲ್ಲ ಎಂಬ ವಿಚಾರ ಥಟ್ಟನೆ ಮನಸ್ಸಿಗೆ ಬಂದು ಕೊಂಚ ಕಸಿವಿಸಿಯನ್ನು ಉಂಟುಮಾಡುತ್ತದೆ, ಮನ ಕೇಡನ್ನು ಶಂಕಿಸಿ ಗಾಬರಿಗೊಳ್ಳುತ್ತದೆ, ಎದೆ ಬಡಿತ ಹೆಚ್ಚಾಗುತ್ತದೆ. 2003 ಫೆಬ್ರುವರಿ ಒಂದರಂದು ಕೊಲಂಬಿಯಾ ಬಾಹ್ಯಾಕಾಶ ನೌಕೆಯಲ್ಲಿ ಭೂಮಿಗೆ ಮರಳುತ್ತಿದ್ದ ಸಂದರ್ಭದಲ್ಲಿ ನೌಕೆಯ ಉಷ್ಣ ನಿರೋಧಕ ಕವಚಕ್ಕೆ ಆದ ಹಾನಿಯಿಂದಾಗಿ ಭಾರತೀಯ ಮೂಲದ ಕಲ್ಪನಾ ಚಾವ್ಲಾ ಸೇರಿದಂತೆ ಏಳು ಜನ ಗಗನಯಾನಿಗಳು ಮೃತಪಟ್ಟದ್ದು ನೆನಪಾಗುತ್ತದೆ. ಅದರಲ್ಲೂ ಭಾರತೀಯ ಮೂಲದ ಕಲ್ಪನಾ ಚಾವ್ಲಾಳ ದುರಂತ ಅಂತ್ಯದ ನೆನಪಾಗಿ ಮನ ನಡುಗುತ್ತದೆ. ಮರುಕ್ಷಣವೇ ಸುನಿತಾ ವಿಲಿಯಮ್ಸ್ ಸುರಕ್ಷಿತವಾಗಿ ಮರಳಿ ಬರಲಿ ಎಂದು ಮನ ಹಾರೈಸುತ್ತದೆ.ಭಾರತೀಯ ಮೂಲದ ಸುನಿತಾ ವಿಲಿಯಮ್ಸ್ ಅವರ ತಂದೆ ಗುಜರಾತ್ ನ ಮೆಹಸಾನಾ ಜಿಲ್ಲೆಯವರು. ಅಮೆರಿಕಾದ ಒಹಾಯೋ ರಾಜ್ಯದಲ್ಲಿ ನೆಲೆಸಿರುವ ಅವರಿಗೆ 1965 ಸೆಪ್ಟೆಂಬರ್ 19 ರಂದು ಸುನೀತಾ ವಿಲಿಯಮ್ಸ್ ಜನಿಸಿದಳು. ತನ್ನ ಸಾಂಪ್ರದಾಯಿಕ…

Read More

ತಿಕೋಟಾ: ತಾಲೂಕು ವ್ಯಾಪ್ತಿಯ ಬಾಬಾನಗರ ಗ್ರಾಮದ ಸರಕಾರಿ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶೇಠ ತಾಪಿದಾಸ ತುಳಸಿದಾಸ ವಜ್ರದಾಸ್ ಚಾರಿಟೇಬಲ್ ಟ್ರಸ್ಟ್ ಮುಂಬಯಿ ಇವರು ಕೊಡಮಾಡಿದ ಸ್ಮಾರ್ಟಬೋರ್ಡ್ ಉದ್ಘಾಟನಾ ಸಮಾರಂಭ ಜರುಗಿತು.ವಿಶ್ವನಾಥ ಸಿಂದಗಿ ಅವರು ಸ್ಮಾರ್ಟಬೋರ್ಡ್ ಉದ್ಘಾಟನೆ ಮಾಡಿ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳು ನಗರ ಪ್ರದೇಶದ ಮಕ್ಕಳ ಹಾಗೇ ಅತ್ಯುತ್ತಮ ಶಿಕ್ಷಣ ಪಡೆಯಲು ಸ್ಮಾರ್ಟಬೋರ್ಡ್ ದೇಣಿಗೆಯಾಗಿ ನೀಡಿರುವುದು ಶ್ಲಾಘನೀಯ ಕಾರ್ಯ. ಇದರ ಸದುಪಯೋಗವನ್ನು ಸರಿಯಾಗಿ ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಶಾಲೆಯ ಮುಖ್ಯ ಗುರು ಎಸ್.ಐ.ಬಾಗಲಕೋಟೆ ಅವರು ಪ್ರಸ್ತಾವಿಕವಾಗಿ ಮಾತನಾಡಿದರು, ಎ.ಎಮ್.ಚಮಕೇರಿ ಶಿಕ್ಷಕರು ಗೌರವ ಸಮರ್ಪಣೆ ನಡೆಸಿಕೊಟ್ಟರು, ಜೆ.ಎನ್.ಬಾಗಲಕೋಟೆ ಅವರು ವಂದಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷ ಸಾಹಿರಾಬಾನು ಏಳಾಪುರ ಅವರು ವಹಿಸಿಕೊಂಡಿದ್ದರು.ವೇದಿಕೆಯ ಮೇಲೆ ಎಸ್.ಐ ರುದ್ರಗೌಡರ, ಎಸ್.ಬಿ.ಬಿರಾದಾರ, ಬಿ.ಎಸ್.ಕುಮಟಗಿ, ಸೇರಿದಂತೆ ಎಸ್.ಡಿ.ಎಂ.ಸಿ & ಗ್ರಾಮ ಪಂಚಾಯತಿ ಸದಸ್ಯರು, ಶಾಲಾ ಶಿಕ್ಷಕರು, ಮಕ್ಕಳು ಹಾಜರಿದ್ದರು.

Read More

ಚಡಚಣ: ಜನಪದ ಸಂಸ್ಕೃತಿ ಅರಳುವುದು ಸಂದರ್ಭಾನುಸಾರ, ತರಬೇತಿಯಿಂದಲ್ಲ. ಒಬ್ಬ ವ್ಯಕ್ತಿ ಶಕ್ತಿವಂತನೊ, ಕಲಾವಿದನೋ, ಜಾಣನೋ, ಜನಸೇವಕನೋ ಎಂದು ಗೊತ್ತಾಗುವುದು ಅವನಿಗೆಂದೆ ನಿರ್ದಿಷ್ಟವಾಗಿರುವ ಸಂದರ್ಭದಲ್ಲಿ ಮಾತ್ರ. ಶಿಷ್ಟ ಸಮಾಜದಂತೆ ಜನಪದ ಸಮಾಜದಲ್ಲಿ ಕಲಾವಿದ, ಪೈಲ್‌ವಾನ್, ಸಮಾಜ ಸುಧಾರಕ ಎಂದು ಪ್ರತ್ಯೇಕ ಇರುವುದಿಲ್ಲ. ದಿನನಿತ್ಯದ ಅವನ ಕೆಲಸದ ಜೊತೆಯಲ್ಲೇ ಅವನ ವಿಶೇಷವೆಂಬ ನೈಪುಣ್ಯ ಇರುತ್ತದೆ. ಕಲಾವಿದನಂತೆಯೆ ಜನಪದ ವೈದ್ಯರೂ ಕೂಡಾ ಸಂದರ್ಭಾನುಸಾರವಾಗಿ ರೋಗಿಯನ್ನು ಉಪಚರಿಸುತ್ತಿದ್ದರು. ಅವರು ಪ್ರತ್ಯೇಕ ಕಾಣಿಸಿಕೊಳ್ಳುವಿಕೆಯಲ್ಲಿ ಸಿಗುವುದಿಲ್ಲ. ಜನಪದ ದೇವತೆಗಳ ಪೂಜಾರಿಗಳನ್ನು ಗಮನಿಸಿ. ಅವರು ಶಿಷ್ಟ ದೇವತೆಗಳ ಪೂಜಾರಿ ಅಥವಾ ಪುರೋಹಿತರ ಥರ ಕಾಣಿಸುವುದಿಲ್ಲ. ಇಂಥವರು ಸಮಾಜದ ಹೊರಗೆ ಇಲ್ಲ, ಹೊರೆಯೂ ಅಲ್ಲ ಎಂದು ಶ್ರೀ ಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಂ. ಎಸ್. ಮಾಗಣಗೇರಿ ಅಭಿಪ್ರಾಯಪಟ್ಟರು.ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾನಪದ ಸಂಸ್ಕೃತಿಯ ಪ್ರಮುಖ ಅಂಶವೆಂದರೆ ಮಾತನಾಡುವ ಪದ ಅಥವಾ ಭಾಷೆ, ಸಮಾಜದೊಳಗಿನ ಪ್ರಮುಖ…

Read More

ಬಸವನಬಾಗೇವಾಡಿ: ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಗುರುತಿಸಲು ಸರ್ಕಾರ ಪ್ರತಿಭಾ ಕಾರಂಜಿ ಎಂಬ ಕಾರ್ಯಕ್ರಮ ಜಾರಿಗೆ ತಂದಿದೆ. ಈ ಕಾರ್ಯಕ್ರಮದ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ತಾಲೂಕು, ಜಿಲ್ಲಾ, ರಾಜ್ಯ ಮಟ್ಟಕ್ಕೆ ಹೋಗುವಂತೆ ನಿರ್ಣಾಯಕರು ತಮ್ಮ ನಿರ್ಣಯ ನೀಡಬೇಕೆಂದು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಾನಂದ ಮಂಗಾನವರ ಹೇಳಿದರು.ತಾಲೂಕಿನ ಅಂಬಳೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಪಂಚಾಯತ, ಕ್ಷೇತ್ರಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಾಧಿಕಾರಿಗಳ ಕಾರ್ಯಾಲಯ ಮತ್ತು ನರಸಲಗಿ ಸಮೂಹ ಸಂಪನ್ಮೂಲ ಕೇಂದ್ರದ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನರಸಲಗಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಹೊರಹಾಕಲು ಶಿಕ್ಷಕ ಬಾಂಧವರು, ಪಾಲಕರು ಸೂಕ್ತ ಅವಕಾಶ,ಪ್ರೇರಣೆ ನೀಡುವದು ಅಗತ್ಯವಿದೆ ಎಂದ ಅವರು, ಸರ್ಕಾರ ಶಿಕ್ಷಣಕ್ಕೆ ಬಹಳ ಒತ್ತು ನೀಡುತ್ತಿದೆ.ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ,ಶೂ-ಸಾಕ್ಸ್, ಬಟ್ಟೆ , ಬಿಸಿಯೂಟ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಇದರ ಸದುಪಯೋಗವಾಗುವ ಮೂಲಕ…

Read More