ವಿಜಯಪುರ: ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ವಿಜಯಪುರ ಹಾಗೂ ಶ್ರೀ ಶಾಂತವೀರ ಪದವಿ ಪೂರ್ವ ಕಾಲೇಜು ಬಬಲೇಶ್ವರ ಸಹಯೋಗದಲ್ಲಿ ವಿಶ್ವ ಜಾನಪದ ದಿನಾಚರಣೆ ಕಾರ್ಯಕ್ರಮ ಬಬಲೇಶ್ವರ ಶಾಂತವೀರ ಪ ಪೂ ಕಾಲೇಜಿನಲ್ಲಿ ಆ.೨೪ರಂದು ಬೆಳಿಗ್ಗೆ ೧೧.೩೦ ಕ್ಕೆ “ವಿಶ್ವ ಜಾನಪದ ದಿನಾಚರಣೆ ೨೦೨೪ ” ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಬಾಪುಗೌಡ ಪಾಟೀಲ (ಶೇಗುಣಸಿ) ಉದ್ಘಾಟಿಸುವರು. ಪ್ರಾಚಾರ್ಯ ಪ್ರೊ ಲಕ್ಷ್ಮೀನರಸಯ್ಯ ಎನ್ ಅಧ್ಯಕ್ಷತೆ ವಹಿಸುವರು. ಜಾನಪದ ಸಾಹಿತಿ ಶಂಕರ ಬೈಚಬಾಳ ಉಪನ್ಯಾಸ ನೀಡುವರು. ಪರಿಷತ್ ಅಧ್ಯಕ್ಷ ಬಾಳನಗೌಡ ಪಾಟೀಲ ಪ್ರಾಸ್ತಾವಿಕ ನುಡಿ ಹೇಳುವರು. ಬಯಲಾಟ ಅಕಾಡೆಮಿ ಸದಸ್ಯೆ ಶ್ರೀಮತಿ ಅನಸುಬಾಯಿ ವಡ್ಡರ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ರವೀಂದ್ರ ಉಗಾರ, ಕೆಪಿಸಿಸಿ ಅಲ್ಪಸಂಖ್ಯಾತ ತಾಲೂಕಾ ಅಧ್ಯಕ್ಷ ಅಬ್ದುಲ್ ಗೋಕಾವಿ, ಪರಿಷತ್ ಪದಾಧಿಕಾರಿಗಳಾದ ಗೂಳಪ್ಪ ಯರನಾಳ, ಮೌಲಾಸಾಹೇಬ ಜಹಾಗೀರದಾರ ಆಗಮಿಸುವರು.
ಕಲಾವಿದರಾದ ಶ್ರೀಶೈಲ ಬಾಟಿ( ಕೊಲ್ಹಾರ) ಇದ್ರಾಬಾಯಿ ಪಡಗಾರ( ಬಬಲೇಶ್ವರ) ಇವರನ್ನು ಸನ್ಮಾನಿಸಲಾಗುವುದು.
ಕಾರ್ಯಕ್ರಮದಲ್ಲಿ ಹೆಜ್ಜೆಮೇಳ ಮತ್ತು ಚೌಡಕಿ ಪದ ಪ್ರದರ್ಶನ ನೀಡುವರು ಎಂದು ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಪಡಗಾನೂರ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

